ಕೂಡ್ಲಿಗಿ: ಶ್ರಾವಣವೆಂದರೆ ಹಬ್ಬಗಳ ಸರಮಾಲೆ ಧಾಮಿ೯ಕ ಶ್ರದ್ಧಾ ಚಟುವಟುಕೆಗಳು ಗರಿಗೆದರುತ್ತವೆ.ನಾಡಿನ ಬಹುದೊಡ್ಡ ಹಬ್ಬಗಳಲ್ಲಿ ನಾಗರಪಂಚಮಿಯೂ ಒಂದು ನಾಗರ ಅಮವಾಸೆಯಿಂದ ಗಣೇಶನ ಹಬ್ಬದ ಸಂದಭ೯ವರೆಗೂ ಕೂಡ ನಿರಂತರ ನಾಗಾರಾಧನೆ ಚಾಲ್ತಿಯಲ್ಲಿರುತ್ತದೆ.ಕೆಲವೆಡೆಗಳಲ್ಲಿ ಚೌತಿಯಂದೇ ಹಾಲೆರದರೆ. ಕೆಲವೆಡೆ ಪಂಚಮಿಯಂದು ಇನ್ನು ಕೆಲವೆಡೆಗಳಲ್ಲಿ ಶ್ರಾವಣ ಮಾಸದಲ್ಲಿಯ ತಮಗನುಕೂಲವಾದ ವಾರಗಳಲ್ಲಿ ವಿಷೇಶವಾಗಿ ಸೋಮವಾರದಿನದಂದು ನಾಗಾರಾಧನೆಗೆ ಒತ್ತುಕೊಟ್ಟು ಹಾಲೆರೆಯೋ ಹಬ್ಬ ಆಚರಿಸುದು ರೂಡಿಯಲ್ಲಿದೆ. ಹಾಲೆರೆದು ಹೊಸ ವಸ್ತ್ರಗಳನ್ನು ಧರಿಸುವ ಸಂಪ್ರದಾಯವೂ ಇದೆ.ವಿಷೇಶ ಖಾಧ್ಯಗಳನ್ನು ನಾಗದೇವತೆಗೆ ಎಡೆಯಿಡಿಯೋ ಮೂಲಕ ದೇವರ ಕೃಪೆಗೆ ಪಾತ್ರ ರಾಗುವುದು ವಾಡಿಕೆಯಾಗಿದೆ.ನಾಗರಾಧನೆಗೆ ಪುರಾಣಗಳಲ್ಲಿ ಮಹತ್ತರವಾದ ಸ್ಥಾನವಿದೆಯಾದರೂ ವೈಜ್ನಾನಿಕ ಹಿನ್ನಲೆಯೂ ಅಷ್ಟೇ ಮಹತ್ವದ್ದಾಗಿದೆ.ರಾಷ್ಟ್ರದ ಕೆಲರಾಜ್ಯಗಳಲ್ಲಿ ನಾಗಾರಾಧನೆ ಚಾಲ್ತಿಯಲ್ಲಿದೆ.ಶ್ರಾವಣ ಮಾಸ ಪ್ರಾರಂಭವಾದಾಗಿನಿಂದ ಕೊನೆಯ ದಿನಗಳವರೆಗೂ ಮಾಂಮ್ಸವನ್ನೇ ಮುಟ್ಟದ ಮಾಂಮ್ಸಹಾರಿಗಳು ನಮ್ಮನಾಡಿನಲ್ಲಿದ್ದಾರೆ.ಬಹುತೇಕ ಹಿಂದುಗಳು ಶ್ರಾವಣ ಮಾಸದಲ್ಲಿ ಮಾಂಮ್ಸ ಬಳಕೆ ನಿಶಿದ್ಧವಾಗಿರುತ್ತೆ.ಆದ್ರೆ ದೇಶದ ಕೆಲವು ರಾಜ್ಯಗಳಲ್ಲಿ ಮಾಂಮ್ಸ ವನ್ನೇಬಳಸಿದ ಖಾಧ್ಯಗಳನ್ನೂ ವಿಷೇಶ ದಿನಗಳಲ್ಲಿಪೂಜೆಗೆ.ಹಬ್ಬಗಳಲ್ಲಿ ನಾಗದೇವತೆಗೆ ನೈವಿಧ್ಯ ಅಪಿ೯ಸುವ ಪದ್ದತಿಯಿದೆ. ನಮ್ಮ ನಾಡಿನಲ್ಲಿಬಹು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತೆ. ಆಷಾಡ ಕಳೆದು ತವರಿನಿಂದ ಗಂಡನಮನೆಗೆ ತೆರಳುವ ನವ ವಧು.ಆಷಾಡವನ್ನು ತವರಿನಲ್ಲಿ ಕಳೆದು ಗಂಡನ ಮನೆಗೆ ಬಂದಿರುವ ಸುಮಂಗಲೆಯರು ಈ ಸಂದಭ೯ದಲ್ಲಿ ನಾಗಾರಾಧನೆ ಮಾಡಿ ಶುಭಕೋರಿ ನಾಗಾರಾಧನೆ ಮೂಲಕ ನಾಗದೇವತೆಗೆ ಕೃಪೆಗೆ ಪಾತ್ರ ರಾಗೋ ಸುಸಂದಭ೯ವಿದು. ನಾಗದೇವತೆಗೆ ಪೂಜೆಮಾಡುವ ವೇಳೆ ಹಾಕಿದ ಹೊಸ ನೂಲನ್ನು ಮನೆ ಮಂದಿಯಲ್ಲಾ ಶ್ರದ್ಧಾ ಭಕ್ತಿಯಿಂದ ಕಟ್ಟಿಕೊಳ್ಳೋ ಸಂದಭ೯ಎಂತಹವರಲ್ಲಿಯೂ ರೋಮಾಂಚನ ಮೂಡುಸುತ್ತದೆ.ನಾನಾತರಹದ ಉಂಡೆಗಳನ್ನು ಹಾಗೂ ಹಲವು ಬಗೆಯ ಸಿಹಿ ಖಾಧ್ಯಗಳನ್ನು ಸವಿಯೋ ಹಬ್ಬವಿದು.ಜೋಕಾಲಿ.ನಿಂಬೆಹಣ್ಣು ಎಸೆಯುವುದು ಇತರ ಕ್ರೀಡೆಗಳು ಮನೋರಂಜನೆಗೆ ಮಾತ್ರ ಚಾಲ್ತಿಯಲ್ಲಿರಬೇಕೆ ಹೊರತು ಜೂಜು ಅಡ್ಡೆಗೆ ದಾರಿಯಾಗಬಾರದು.ಒಟ್ಟಾರೆಯಾಗಿ ನಾಡಿನ ಶ್ರಾವಣ ಮಾಸದ ಬಹುದೊಡ್ಡ ಸಾಂಪ್ರದಾಯಿಕ ಹಬ್ಬ ನಾಗರ ಪಂಚಮಿವಹಬ್ಬವಾಗಿದೆ.ಕೆಲವು ಕೋಮಿನವರು ಕೆಲ ಹಿರಿಯರ ಸೂಚನೆಯ ಮೇರೆಗೆ ಹಬ್ಬವನ್ನು ಆಚರಿಸದೇ ಇದ್ದು ಅವರನ್ನು ಆಚರಿಸುವ ಆತ್ಮೀಯರು ಸತ್ಕರಿಸಿ ಹಬ್ಬಕ್ಕೆ ಪಾಲ್ಗೊಳ್ಳಲು ಅನುವುಬಮಾಡುವ ಸಂಪ್ರದಾಯವೂ ಇದೆ ಇದು ಭಾಂಧವ್ಯವನ್ನು ಬೆಸೆಯುವ ಹಬ್ಬವೆನ್ನಬಹುದು.ಅನ್ನದಾರ ಸಾಂಪ್ರದಾಯಿಕ ಹಬ್ಬವೂ ಎಂದೂ ಕರೆಯಲಾಗುತ್ತೆ ಗ್ರಾಮೀಣ ಕ್ರೀಡೆಗಳಿಗೆ ಜೀವಕಳೆ ನೀಡೋ ಮೂಲಕ ಸಾಂಸ್ಕೃತಿಕ ಹಬ್ಬವಾಗಿ ಗುರುತಿಸಿಕೊಂಡಿದೆ. *ನಾಗದೇವತಾರಾಧನೆ ಹೀಗೂ ಮಾಡಬಹುದು* ದೇವರು ಭಕ್ತಿಗೆ ಒಲಿಯುತ್ತಾನೆ ಹೊರತು ಡಂಬಾಚಾರಕ್ಕಲ್ಲ ಎನ್ನುತ್ತಾರೆ ಹಿರಿಯರು. ನಾಗಾರಾಧನೆಯನ್ನು ಮಂತ್ರಪಠಣೆ.ಧ್ಯಾನ.ಜಪತಪ ಭಜನೆ ನಾಮಸ್ಮರಣೆ ಮಾಡೋ ಮೂಲಕ ಮನಸ್ಸುತೃಪ್ತಿಮಾಡಿಕೊಳ್ಳಬೇಕಿದೆ.ನಾಗರ ಹಾವಿಗೆ ಹಾಲೆರದರೆ ಉಪಯೋಗವಿಲ್ಲ ಬದಲಿಗೆ ಪ್ರತಿಯೊಬ್ಬರೂ ಜಿವಂತ ಹಾವುಗಳನ್ನು ಸಾಯಿಸುವುದಿಲ್ಲ ಉರಗ ತಜ್ನರನ್ನ ಅಥವಾ ಅರಣ್ಯ ಇಲಾಖೆಯವರನ್ನು ಸಂಪಕಿ೯ಸಿ ಸಂರಕಕ್ಷಿಸುತ್ತೇವೆಂದು ದೇವರ ಸಾನಿಧ್ಯದಲ್ಲಿ ಪ್ರತಿಜ್ನೆ ಮಾಡಬೇಕಿದೆ. ಹಾಲನ್ನು ದೇವರ ಮೂತಿ೯ ಅಥವಾ ಹುತ್ತಕ್ಕೆ ಹಾಕುವಬದಲಿಗೆ ನಾಗದೇವತೆಯನ್ನು ಮನದಲ್ಲಿಯೇ ನೆನೆದು ಬಡಮಕ್ಕಳಿಗೆ ಕುಡಿಯಲು ಕೊಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಿದೆ.ದೇವರಿಗೆ ಅಪಿ೯ಸಲು ಸಂಕಲ್ಪದ ಖಾಧ್ಯಗಳನ್ನು.ವಸ್ತ್ರಗಳನ್ನು ಪದಾಥ೯ಗಳನ್ನು ಭಿಕ್ಷುಕರಿಗೋ ಅನಾಥ ದೀನ ದಲಿತರಿಗೆ ಹತ್ತಿರದ ಅನಾಥಾಶ್ರಮಕ್ಕೋ ನೀಡೋ ಮೂಲಕ ಧಾಮಿ೯ಕ ಕಟ್ಟುಪಾಡುಗಳಿಂದ ಹೊರಬಂದು ಅಥ೯ಪೂಣ೯ವಾಗಿ ಹಬ್ಬವನ್ನು ಅಚರಿಸಬಹುದಾಗಿದೆ.ಇದರಿಂದಾಗಿ ನಾಗದೇವತೆಗಳ ಮನಸ್ಸೂ ಸಂತುಷ್ಟವಾಗುತ್ತೆ ಮತ್ತು ಬಾಂಧವ್ಯ ಇಮ್ಮಡಿಯಾಗುತ್ತೆ.ಮನಸ್ಸು ಮಾಡಿ ಸವ೯ರೂ ಬದಲಾಗಬೇಕಿದೆ ಹಬ್ಬ ಮೌಡ್ಯತೆಯ ಪ್ರತೀಕವಾಗದೇ ಮಾನವೀಯ ಮೌಲ್ಯಗಳನ್ನು ಸಾರೋ ಉತ್ಸವ ವಾಗಬೇಕಿದೆ.ಜನ ಜಾಗೃತಿಯಾದಲ್ಲಿ ಇದು ಸಾಧ್ಯ. ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428.*
bigtvnews | Hubli Dharwad News | Kannada News | Karnataka News Hubli News | News In Hubli | Local news





