Breaking News

admin

ಹಿರಿಯ ಗಾಯಕ ರಾಜಶೇಖರ ಮನಸೂರ ನಿಧನ

ಧಾರವಾಡ: ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ (79) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಪಂ. ಮಲ್ಲಿಕಾರ್ಜುನ ಮನಸೂರ ಅವರ ಪುತ್ರ ಡಾ. ರಾಜಶೇಖರ ಮನಸೂರ ಅವರು ಜೈಪುರ ಅತ್ರೌಲಿ ಘರಾಣೆ ಸಂಗೀತದ ಮೇರು ಗಾಯಕರಾಗಿದ್ದರು.

Read More »

ಫೇಲಾಗುವ ನಿರೀಕ್ಷೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಧಾರವಾಡ : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೋರ್ವಳು ತಾನು ಫೇಲಾಗುತ್ತೇನೆ ಎಂಬ ಭಯದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ . ಪ್ರಿಯಾಂಕಾ ತಳವಾರ ( 19 ) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳು.ಮೊನ್ನೆಯಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಪ್ರಿಯಾಂಕಾ ಪರೀಕ್ಷೆಯಲ್ಲಿ ಫೇಲಾಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ .

Read More »

ಮಕ್ಕಳಿಗೆ ಆಹಾರದ ಧಾನ್ಯದ ಕಿಟ್ ವಿತರಣೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬೇಸಿಗೆ ರಜಾ ಆಹಾರದ ಧಾನ್ಯದ ಕಿಟ್ ಗಳನ್ನು ಶನಿವಾರ ಸಂಜೆ ವಿತರಿಸಲಾಯಿತು . ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸರಬರಾಜಾದ ಮಕ್ಕಳ ಬೆಳವಣಿಗೆ ಪೌಷ್ಟಿಕ ಆಹಾರವನ್ನು ಅಂಗನವಾಡಿ ಸಲಹಾ ಸಮಿತಿ ಸದಸ್ಯರಾದ ಬಸವರಾಜ ಯೋಗಪ್ಪನವರ ವಿತರಿಸಿದರು . ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಾದ ನಾಗರತ್ನ ದಾನನ್ನವರ , ಎಲ್ಲವ್ವ ಹುಲಿಕಟ್ಟಿ , ಶೋಭಾ ಯೋಗಪ್ಪನವರ , ದೇವಕ್ಕ …

Read More »

ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ 50 ಲಕ್ಷ ರೂ.ವಂಚನೆ

ಹುಬ್ಬಳ್ಳಿ : ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ನಿವೃತ್ತ ವೈದ್ಯಾಧಿಕಾರಿಗೆ 50 ಲಕ್ಷ ರೂ.ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ . ಇಲ್ಲಿನ ಗೋಕುಲ ರುದ್ರಗಂಗಾ ಲೈಔಟ್ ನಿವಾಸಿ ಶೈಲಾ ಪಾಟೀಲ ಎಂಬುರಿಗೆ ವಂಚನೆಗೆ ಒಳಗಾದವರು . ಇವರು ವೈದ್ಯರಾಗಿದ್ದರು . ನಿವೃತ್ತಿಯ ನಂತರ ಬಂದ ಹಣವನ್ನು ಸಂಗ್ರಹ ಮಾಡಿ ಇಡಲು ಯೋಚಿಸಿ ತಮ್ಮಸ್ನೇಹಿರಿಗೆ ತಿಳಿಸಿದ್ದರು.ಅವರ ಸ್ನೇಹಿತರು , ಇಲ್ಲಿನ ವಿದ್ಯಾನಗರದ ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಹಣ …

Read More »

ಖಾನಾಪೂರ ಜಂಗಲ್ ನಲ್ಲಿ ನಡೆಯಿತು ಪವಾಡ,ಮೂರು ವರ್ಷದ ಬಾಲಕಿ ಪತ್ತೆ

ಖಾನಾಪೂರ : ತಾಲ್ಲೂಕಿನ ಜಾಂಬೋಟಿ ಅರಣ್ಯಪ್ರದೇಶದಲ್ಲಿ ಪವಾಡವೇ ನಡೆದಿದೆ,ಅಜ್ಜಿ ಮನೆಗೆ ಹೋಗಿದ್ದ ಮೂರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು ಆದ್ರೆ ಇವತ್ತು ಅರಣ್ಯ ಅಧಿಕಾರಿಗಳ ಶೋಧ ಕಾರ್ಯಾಚರಣೆಯ ಫಲವಾಗಿ ಬಾಲಕಿ ಪತ್ತೆಯಾಗಿದ್ದು, ಇದಿಂದು ಪವಾಡ ಅಂತೀದಾರೆ ಖಾನಾಪೂರ ತಾಲ್ಲೂಕಿನ ಜನ ಬೆಳಗಾವಿ- ಖಾನಾಪೂರ ತಾಲೂಕಿನ ಜಾಂಬೋಟಿ ಹೋಬಳಿಯ ಚಿರೇಖಾನಿ ಗ್ರಾಮದ ತನ್ನ ಅಜ್ಜಿಯ ಮನೆಯ ಬಳಿ ಆಟವಾಡುವಾಗ ನಾಪತ್ತೆಯಾಗಿದ್ದ 3 ವರ್ಷದ ಹೆಣ್ಣು ಮಗು ನಾಲ್ಕು ದಿನಗಳ ಬಳಿಕ ಶನಿವಾರ ಸಂಜೆ …

Read More »

ಡಿಕೆಶಿ ಹೇಳಿಕೆಗೆ ತಿರಿಗೇಟು ನೀಡಿದ ಸಿಎಂ

ನವದೆಹಲಿ: ಬಸವರಾಜ ಬೊಮ್ಮಾಯಿ‌ ವೀಕೆಸ್ಟ್ ಮುಖ್ಯಮಂತ್ರಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು, ‘ನನ್ನ ಆಡಳಿತದಲ್ಲಿ ಅವರಿಗೆ (ಡಿ.ಕೆ. ಶಿವಕುಮಾರ್) ತೊಂದರೆ ಆಗಿದೆ. ಅವರು ಏನೆನೋ ಪ್ರಯತ್ನ ಮಾಡಿದರೂ ಯಶಸ್ವಿ ಆಗಿಲ್ಲ. ನಾನು ಸರಳವಾಗಿ ಆಡಳಿತ ಮಾಡಿಯೇ ಅವರಿಗೆ ತೊಂದರೆ ಆಗಿದೆ. ಇನ್ನು ಸ್ಟ್ರಾಂಗ್ ಆಗಿ ಆಡಳಿತ ಮಾಡಿದರೆ ಅವರಿಗೆ ತಡೆದುಕೊಳ್ಳೊಕೆ ಆಗುವುದಿಲ್ಲ’ ಎಂದು ತಿರುಗೇಟು ನೀಡಿದರು. ಹಿಟ್ …

Read More »

ಪಿಎಸ್‌ಐ ನೇಮಕಾತಿ ಅಕ್ರಮ : 12 ಅಭ್ಯರ್ಥಿಗಳ ಬಂಧನ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ 12 ಅಭ್ಯರ್ಥಿಗಳನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಡಿಎಸ್​ಪಿ ನೀಡಿದ ದೂರಿನನ್ವಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಕೋರಮಂಗಲದ ನಿವಾಸಕ್ಕೆ ಹಾಜರುಪಡಿಸಿ, 10 ದಿನ ವಶಕ್ಕೆ ಪಡೆದರು. ಬಂಧಿತರು 2020-21ನೇ ಸಾಲಿನಲ್ಲಿ ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ತನಿಖೆಯ ವೇಳೆ ಅಭ್ಯರ್ಥಿಗಳ ಒಎಂಆರ್​​ ಶೀಟ್‌ನ ಕಾರ್ಬನ್ ಪ್ರತಿ ಪಡೆಯಲಾಗಿತ್ತು. ಈ ಪೈಕಿ 22 ಅಭ್ಯರ್ಥಿಗಳ …

Read More »

ಪಿಡಿಒ ರವಿ ಆತ್ಮಹತ್ಯೆಗೆ ಶರಣು

ರಾಮನಗರ: ಕೆಲಸದಿಂದ ಅಮಾನತುಗೊಂಡ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಕ್ರಮವಾಗಿ ಇ-ಖಾತೆ ಮಾಡಿದ ಆರೋಪ ಪಿಡಿಒ ರವಿ ವಿರುದ್ಧ ಕೇಳಿಬಂದಿತ್ತು. ಯಲಹಂಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಹಿನ್ನೆಲೆ ರವಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರು ಕೆಲಸದಿಂದ ಅಮಾನತು ಮಾಡಿದ್ದರು. ಇದರಿಂದ ಮನನೊಂದ ರವಿ ಹಾರೋಹಳ್ಳಿಯ ಕೊಳ್ಳಗಂಡನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದ ಕೃಷಿ ಸಚಿವ

ಬೆಂಗಳೂರು: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚಿಗೆ ರಸಗೊಬ್ಬರ ದರದ ಮೇಲಿನ ರಿಯಾಯ್ತಿ ಹೆಚ್ಚಿಸೋ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅದರಂತೆ, ಇದೀಗ ರಸಗೊಬ್ಬರದ ಮೇಲಿನ ರಿಯಾಯ್ತಿ ದರ ಹೆಚ್ಚಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ 2022-23ನೇ ಸಾಲಿನ ಆರಂಭದಲ್ಲಿಯೇ ಕೇಂದ್ರ ಸರ್ಕಾರ ರಸಗೊಬ್ಬರಗಳಿಗೆ ರಿಯಾಯ್ತಿ ದರ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.

Read More »

ನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ಸನ್ಮಾನ

ಹುಬ್ಬಳ್ಳಿ : ಹು ಧಾ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಇಂದು ನಿವೃತ್ತಿ ಹೊಂದಿರುವ ಗಾಳೆಮ್ಮನವರ ಸಹಾಯಕ ಆಯುಕ್ತರು, ಮೆಣಸಿನಕಾಯಿ ಹಿರಿಯ ಅರೋಗ್ಯ ನಿರೀಕ್ಷಕರು, ಹಾಲಪ್ಪನವರು ಕಚೇರಿ ವ್ಯವಸ್ಥಾಪಕರು,ಚಂಡಕೆ , ಶ ಮರಿಯಮ್ಮ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

Read More »