Breaking News

admin

ಸರಕಾರಿ ಜಾಗ ಕಬಳಿಸಲು ಹುನ್ನಾರ ಯೇಸು ದೇವಾಲಯ ಕಟ್ಟಿ ಜಾಗ ಕಬಳಿಸಲು ಯತ್ನ

ಚಿತ್ರದುರ್ಗ: ಸರಕಾರಿ ಜಾಗದಲ್ಲಿ ಅನಧಿಕೃತ ಚರ್ಚ್ ಕಟ್ಟಲು ಮುಂದಾದ ಜನರಿಗೆ ಜಿಲ್ಲಾಡಳಿತ ತಡೆ ಒಡ್ಡಿದೆ. ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಸ್ಥಾನದ ಪಕ್ಕದ ಜಾಗದಲ್ಲಿ ಸಾರ್ವಜನಿಕರು ಯೇಸು ದೇವಾಲಯ ಕಟ್ಟಲು ಹುನ್ನಾರ ನಡೆಸಿದ್ದರು. ಇದನ್ನು ವಿರೋಧಿಸಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಜಿಲ್ಲಾ ಬಜಂಗದಳದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದೆ.

Read More »

ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ

ಮಂಡ್ಯ: ಜಿಲ್ಲೆಯ ಮದ್ದೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ 16 ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಮಾಜಿ ಸಚಿವರು, ಹಾಲಿ ಶಾಸಕರಾದ ಡಿ ಸಿ ತಮ್ಮಣ್ಣ ನವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ಚಾಮಲಾಪುರ ತಾಲೂಕು ಅಧ್ಯಕ್ಷ ಶ್ರೀ ಹರ್ಷ, ಅಪೂರ್ವ ಚಂದ್ರು,ಸುನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More »

ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್ ನಿರ್ಧಾರ

ಬೆಂಗಳೂರು:ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ವಾತಾವರಣ ಕಂಡುಬಂದಿದೆ. ಮಧ್ಯಂತರ ಚುನಾವಣೆ ಎದುರಾದರೂ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಜೆಡಿಎಸ್ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಪಕ್ಷದ ನಾಯಕರ ಸಭೆ ನಡೆದಿದ್ದು, ವಿಧಾನಸಭೆಯಲ್ಲಿ ಸಮರ್ಥ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ಜೆಡಿಎಸ್ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಎಲ್ಲಾ ನಾಯಕರು ಶ್ರಮಿಸಬೇಕು ಎಂದು ಸೂಚನೆ ನೀಡಲಾಗಿದೆ.ಇನ್ನು ಸರ್ಕಾರ ಪತನಗೊಂಡು ಅನಿಶ್ಚಿತ ವಾತಾವರಣ ನಿರ್ಮಾಣವಾಗಿರುವುದರಿಂದ …

Read More »

5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಜೈನಹಳ್ಳಿ ಸತ್ಯನಾರಾಯಣಗೌಡ ಆಯ್ಕೆ

ಮಂಡ್ಯ: ಅಕ್ಕಿಹೆಬ್ಬಾಳು ಗ್ರಾಮದಲ್ಲಿ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜುಲೈ-31ರಂದು ನಡೆಸಲು ನಿರ್ಧರಿಸಲಾಗಿದ್ದು, ಸಮ್ಮೇಳನಾಧ್ಯಕ್ಷರಾಗಿ ಪ್ರಗತಿಪರ ಚಿಂತಕ, ಸಾಂಸ್ಕೃತಿಕ ಸಂಘಟಕ ಜೈನಹಳ್ಳಿ ಸತ್ಯನಾರಾಯಣಗೌಡ ಆಯ್ಕೆಯಾಗಿದ್ದಾರೆ ಎಂದು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ತಿಳಿಸಿದ್ದಾರೆ. ಈ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡದ ನುಡಿ ಹಬ್ಬವನ್ನು ಅರ್ಥಪೂರ್ಣವಾಗಿ ನಡೆಸುವ ಸಂಬಂಧ ಕನ್ನಡದ ಎಲ್ಲಾ ಮನಸುಗಳು ಒಂದಾಗಿ ಕೆಲಸ ಮಾಡಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಪೂರ್ಣಚಂದ್ರ ತೇಜಸ್ವಿ …

Read More »

ಕಾರ್ ನ ಟೈರ್ ಸ್ಫೋಟ ಗೊಂಡು ಕಾರ್ ಪಲ್ಟಿ ಮಹಿಳೆ ಸಾವು

ಆನೇಕಲ್: ಕಾರ್ ನ ಟೈರ್ ಸ್ಪೋಟಗೊಂಡು ಕಾರ್ ಕೆರೆಗೆ ಪಲ್ಟಿಯಾಗಿರುವಂತಹ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಕೆರೆಯ ಬಳಿಯಲ್ಲಿ ನಡೆದಿದೆ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮಮತಾ ಮೃತ ದುರ್ದೈವಿಯಾಗಿದ್ದು ಆನೇಕಲ್ ತಾಲ್ಲೂಕಿನ ಜಿಗಣಿ ಕೆರೆ ಕಟ್ಟೆಯ ಮೇಲೆ ಮಮತಾ ಹಾಗು ಅವರ ಪತಿ ಆನಂದ್ ಸಾಂಟ್ರೋ ಕಾರಿನಲ್ಲಿ ಬರುತ್ತಿದ್ದಾಗ ಹಟಾತ್ ಕಾರ್ ನ ಟೈರ್ ಸ್ಪೋಟಗೊಂಡಿದೆ … ನಂತರ ಏಕಾಏಕಿ ಕಾರ್ ಪಲ್ಟಿ …

Read More »

ವರುಣ ದೇವನ ಮುನಿಸಿಗೆ ತತ್ತರಿಸುತ್ತಿರುವ ಜನತೆ

ಚಾಮರಾಜನಗರ: ವರುಣ ದೇವನ ಮುನಿಸಿನಿಂದ ಸಕಾಲಕ್ಕೆ ಮಳೆ ಬಾರದೆ ರಾಜ್ಯ ಬರದಿಂದ ತತ್ತರಿಸಿದೆ. ಕೆರೆ-ಕಟ್ಟೆ, ಜಲಾಶಯಗಳು ಬರಿದಾಗಿ ಬಣಗುಡುತ್ತಿವೆ, ಜನ ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ಇತ್ತಾ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಜೀವನಾಡಿ ಎಂದೇ ಕರೆಯುವ ಸುವರ್ಣಾವತಿ-ಚಿಕ್ಕಹೊಳೆ ಜಲಾಶಯಗಳು ನೀರಿಲ್ಲದೆ ಸೊರಗಿವೆ. ನಿಧಾನಗತಿಯಲ್ಲಿ ಆರಂಭವಾಗಿರುವ ಮುಂಗಾರಿನ ನಡುವೆ ಜಲಾಶಯಗಳು ಬತ್ತುತ್ತಿರುವುದೇಕೆ? ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಒಂದು ಕಾಲಕ್ಕೆ ಚಾಮರಾಜನಗರ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿದ್ದ ಜಿಲ್ಲೆಯ ಜೀವನಾಡಿ ಎಂದೇ …

Read More »

ಹಿರಿಯ ಮುಖಂಡರಾದ ಅದಾನಿಗೌಡ ನಿಧನ

ಮಂಡ್ಯ: ಜಿಲ್ಲೆಯ ಕಸಬಾ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಹಿರಿಯ ಮುಖಂಡರಾದ ಅಂದಾನಿಗೌಡ(85) ಅವರು ಇಂದು ನಿಧನ ಹೊಂದಿದ್ದಾರೆ.ಮೃತರು ಪತ್ನಿ ಜಯಮ್ಮ, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಣ್ಣ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಜುಲೈ 26ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರ ನಿಧನಕ್ಕೆ ತಾಲೂಕಿನ ವಿವಿಧ ಗಣ್ಯರು ತಮ್ಮ …

Read More »

ಅವಧಿ ಮುಗಿಯುವವರೆಗೂ ಮೂರು ಶಾಸಕರು ಅನರ್ಹರು. ಉಳಿದವರ ಕುರಿತು ಕೆಲವೇ ದಿನಗಳಲ್ಲಿ ತೀರ್ಮಾನ

ಬೆಂಗಳೂರು: ಮೂವರು ಶಾಸಕರು ವಿಧಾನಸಭೆಯ ಈ ಅವಧಿ ಮುಗಿಯುವವರೆಗೂ ಅನರ್ಹರು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ಸರ್ಕಾರ ಬಿದ್ದು ಹೋಗುತ್ತದೆ ಎಂಬುದು ಸ್ಪಷ್ವವಾದ ಕ್ಷಣದಿಂದ ಇದ್ದ ಕುತೂಹಲಗಳು ಎರಡು. ಒಂದು, ಸ್ಪೀಕರ್ ಅವರ ನಡೆ ಏನಾಗಿರುತ್ತದೆ ಎಂಬುದು, ಅಂದರೆ ಯಾವ್ಯಾವ ಶಾಸಕರನ್ನು ಅನರ್ಹಗೊಳಿಸುತ್ತಾರೆ ಎಂಬ ವಿಚಾರ. ಎರಡನೆಯದ್ದು ಯಡಿಯೂರಪ್ಪನವರು ಕೂಡಲೇ ಮುಖ್ಯಮಂತ್ರಿಯಾಗುತ್ತಾರಾ ಇಲ್ಲವಾ ಎಂಬುದುಇದೀಗ ಮೊದಲನೆಯ ವಿಚಾರಕ್ಕೆ ಪಾಕ್ಷಿಕವಾಗಿ ತೆರೆ ಬಿದ್ದಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು …

Read More »

ಹಠಮಾರಿತನದಿಂದ ಗೆದ್ದು ಸೋಲನ್ನು ಅನುಭವಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ: ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡೂ ದಶಕಗಳಿಂದ ಬೇರುಮಟ್ಟದಲ್ಲಿ ಕಾಂಗ್ರೆಸ್ ಬೆಳೆಸಿ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೇವಲ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ಸಲುವಾಗಿ ತನ್ನ ಹಠಮಾರಿತನದಿಂದ ಸರಕಾರ ಪತನಗೊಳಿಸಿ ಗೆಲವು ಸಾಧಿಸಿದರೂ ಕೊನೆ ಗಳಿಯಲ್ಲಿ ಸೋಲುವಂತಾಯಿತು.ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿ ಬುನಾದಿ ಹಾಕಿಕೊಟ್ಟ ಶ್ರೇಯ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ. ದಶಕಗಳಿಂದಲೂ ಬೆಳಗಾವಿ …

Read More »

ಇಂದಿನ ದಿನ ಭವಿಷ್ಯ.. ಯಾವ ರಾಶಿಗೆ ಯಾವ ಫಲ

ಮೇಷ: ಇಂದು ಅಲೆಯ ಹರಿವಿನೊಂದಿಗೆ ಮುನ್ನಡೆಯಿರಿ. ಇದು ನಿಮ್ಮ ಬಾಂಧವ್ಯಗಳಿಗೆ ಪೂರಕವಾದ ಸಲಹೆ. ಸಾಮಾನ್ಯ ನಿಯಮದಂತೆ ನೀವು ನಿಶ್ಚಯಾತ್ಮಕವಾಗಿರುತ್ತೀರಿ. ಈ ದಿನ ಉದಾರವಾಗಿರುವ ಮತ್ತು ನಿಮ್ಮ ಪ್ರೀತಿಪಾತ್ರರ ಬಯಕೆಗಳನ್ನು ಒಪ್ಪಿಕೊಳ್ಳುವ ದಿನ. ನೀವು ಆತ/ಆಕೆಗೆ ಪ್ರಪೋಸ್ ಮಾಡುವ ಸಾಧ್ಯತೆ ಇದೆ.ವೃಷಭ: ನಿಮಗೆ ಇಂದು ಕೊಂಚ ಆಕ್ರಮಣಶೀಲ ಮತ್ತು ಪ್ರಭಾವಿಯಾಗಿರುವ ಅಗತ್ಯವಿದೆ. ಆದರೆ, ನಿಮ್ಮ ಆಕ್ರಮಣಶೀಲತೆಯನ್ನು ಸತತವಾಗಿ ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಭೇಟಿಯಾಗುವ ಜನರೊಂದಿಗೆ ಸೌಹಾರ್ದತೆಯಿಂದಿರಿ. ಇಂದು ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳದೇ …

Read More »