Breaking News

admin

ಮನೆ ತೆರವು ಆದೇಶ ಹಿಂಪಡೆಯಲು ಜೋಶಿಗೆ ಗ್ರಾಮಸ್ಥರ ಮನವಿ

ಹುಬ್ಬಳ್ಳಿ: ಅರಣ್ಯ ಭೂಮಿಯಲ್ಲಿ ವಾಸವಿರುವ ಮನೆಗಳನ್ನು ತೆರವುಗೊಳಿಸುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಧಾರವಾಡ ತಾಲೂಕಿನ ಲಾಳಗಟ್ಟಿ ಹಾಗೂ ದೇವಗಿರಿ ಗ್ರಾಮಸ್ಥರು ಇಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿಯವರಿಗೆ ಮನವಿ ಸಲ್ಲಿಸಿದರು.ಗ್ರಾಮದ ಸರ್ವೆ ನಂಬರ್ 97 ಮತ್ತು 82 ರಲ್ಲಿ ಬರುವ ಅರಣ್ಯ ಭೂಮಿಯಲ್ಲಿ ಸುಮಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸುವಿದ್ದು, ಇಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಆದ್ರೆ, ಈಗ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸುವಂತೆ ಆದೇಶಿಸಿರುವುದು ಖಂಡನೀಯ. …

Read More »

ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ್ ಠಾಣೆಯ ಪೋಲಿಸರು ಯಶಸ್ವಿ.

ಹುಬ್ಬಳ್ಳಿ:ದುರ್ಗದಬೈಲ್ ಎಂಬಲ್ಲಿ ನಡೆದ ಬೆಳ್ಳಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧ ಇಬ್ಬರು ಅಂತರರಾಜ್ಯ ಕಳ್ಳರನ್ನು ಶಹರ್ ಠಾಣೆಯ ಪೋಲಿಸರು ಅರೆಸ್ಟ್ ಮಾಡಿದ್ದಾರೆ.ಹುಬ್ಬಳ್ಳಿಯ ದುರ್ಗದಬೈಲ್ ನ ನಾರಾಯಣ ಇಳಕಲ್ ಎಂಬುವವರ ಅಂಗಡಿಯಲ್ಲಿ ಸುಮಾರು 3 ಲಕ್ಷ 50 ಸಾವಿರ ನಗದು, 39 ಕೆಜಿ ಬೆಳ್ಳಿ ಆಭರಣ ಕಳ್ಳತನ ಪ್ರಕರಣ ನಡೆದಿತ್ತು. ಈ ಸಂಬಂಧ ನಗರದ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನಟ್ಟಿದ ಪೋಲಿಸರು ಹುಬ್ಬಳ್ಳಿಯ ಗಬ್ಬರೂ ಬಳಿ ಕಳ್ಳರನ್ನು …

Read More »

ಆರ್ ಟಿ ಓ ಅಧಿಕಾರಿಗಳಿಗೆ ಡಿಸಿ ಚೋಳನ ಎಚ್ಚರಿಕೆ

ಹುಬ್ಬಳ್ಳಿ: ಆರ್​ಟಿಒ ಕಚೇರಿಯಲ್ಲಿ ಏಜೆಂಟ್​ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ನೇರವಾಗಿ ಸರ್ಕಾರಿ ಸೇವೆಗಳನ್ನು ಪಡೆಯಲು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್​, ಗಬ್ಬೂರು ಆರ್​ಟಿಒ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆರ್​ಟಿಒ ಅಧಿಕಾರಿಗಳು ಹಣದ ಆಸೆಗೆ ಬಲಿಯಾಗದೇ ಸಾರ್ವಜನಿಕರಿಗೆ ಶೀಘ್ರವಾಗಿ ಸೇವೆಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್​ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಆರ್​ಟಿಒ ಕಚೇರಿ ಆವರಣದಲ್ಲಿದ್ದ ಏಜೆಂಟ್ ಬಳಿಯಿದ್ದ ದಾಖಲೆಗಳನ್ನೂ ಪರಿಶೀಲನೆ ಮಾಡಿದ್ರು. …

Read More »

ಜನಪ್ರಿಯ ಶಾಸಕ ಡಾ.ನಾರಾಯಣಗೌಡರ 57ನೇ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ.

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಜನಪ್ರಿಯ ಶಾಸಕರು, ಜನಪರ ಹೋರಾಟಗಾರರು, ಆತ್ಮೀಯ ಬಂಧುಗಳಾದ, ಡಾ.ಕೆ.ಸಿ.ನಾರಾಯಣಗೌಡ ಅವರ 57ನೇ ಹುಟ್ಟು ಹಬ್ಬದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ನಾರಾಯಣಗೌಡ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಹಾಗೂ ಶಾಸಕರ ನಿವಾಸದ ಆವರಣದಲ್ಲಿ ಅಭಿಮಾನಿಗಳಿಂದ ಹುಟ್ಟು ಹಬ್ಬದ ಕೇಕ್ ಕತ್ತರಿಸಿ ವಿತರಿಸುವ ಕಾರ್ಯಕ್ರಮವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು …

Read More »

ಒಂದೇ ದಿನಕ್ಕೆ ಸ್ವಚ್ಚವಾದ ಪುಷ್ಕರಣಿ.

ಚಿತ್ರದುರ್ಗ: ಜಿಲ್ಲಾಡಳಿತ ನಗರಸಭೆ ಮತ್ತು ಕೆಲ ಸಂಸ್ಥೆಗಳ ಸಹಯೋಗದಲ್ಲಿ ಚಿತ್ರದುರ್ಗದ ಕೆಂಚಮಲ್ಲಪ್ಪನ ಬಾವಿಯನ್ನು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯವನ್ನು ನೆರವೇರಿಸಲಾಯಿತು.ಯುವಜನತೆ ಉತ್ಸಾಹದಿಂದ ಬಾವಿಯ ಸ್ವಚ್ಚತೆಯಲ್ಲಿ ತೊಡಗಿದ್ದರ ಫಲವಾಗಿ ಇಂದು ಬಾವಿ ಕಳೆ ತುಂಬಿದೆ.ಅಕ್ಕಪಕ್ಕದಲ್ಲಿ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದವರು ಇಂದು ಯಾವುದೇ ತೊಂದರೆ ಇಲ್ಲದೆ ಓಡಾಡುವಂತಾಗಿದೆ.ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಷುಷ್ಕರ್ಣಿಯು ಕಳೆತುಂಬಲಿದೆ.

Read More »

ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಪ್ರಾಂಶುಪಾಲ ಹಾಗೂ ಉಪನ್ಯಾಸಕ

ಮಂಡ್ಯ: ಜಿಲ್ಲೆಯ ಶೀಳನೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗುರುಲಿಂಗೇಗೌಡ ಮತ್ತು ಉಪನ್ಯಾಸಕ ಕತ್ತರಘಟ್ಟ ವಾಸು ಅವರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಹಾಗೂ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ವಿಂಗಡಿಸಿ ಬೇಧಭಾವ ಮಾಡಿ ಮಾನಸಿಕ ಕಿರುಕುಳ ನೀಡುತ್ತಾ ಹಿಂಸೆ ನೀಡುತ್ತಿರುವ ಪ್ರಾಂಶುಪಾಲ ಮತ್ತು ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದಾರೆ. ಬಡವರು ಶ್ರೀಮಂತರು ಮತ್ತು ಪ್ರಭಾವಿಗಳ ಮಕ್ಕಳೆಂದು ತಾರತಮ್ಯ ಮಾಡುವ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ಕೈಗೊಂಡು …

Read More »

ಅಭಿಮಾನಿಗಳಿಂದ ಅರ್ಥಪೂರ್ಣವಾಗಿ ಶಾಸಕ ಡಾ.ನಾರಾಯಣಗೌಡರ ಜನ್ಮದಿನ ಆಚರಣೆ

ಮಂಡ್ಯ: ಶಾಸಕ ಡಾ. ನಾರಾಯಣಗೌಡ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳುಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಂಭ್ರಮಿಸಿದರು.ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ನೇತೃತ್ವದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶಾಸಕರ ಮನೆಯ ಮುಂಭಾಗದಲ್ಲಿ ಕೇಕ್ ಕತ್ತರಿಸಿ ಶಾಸಕರಿಗೆ ಶುಭಕೋರಿದರು. ಮೆಚ್ಚಿನ ಶಾಸಕನ ಹುಟ್ಟು ಹಬ್ಬದ ಕಾರಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ …

Read More »

ಅಧಿಕಾರಕ್ಕಾಗಿ ಬಿಜೆಪಿ ಶಾಸಕರ ಟೆಂಪಲ್ ರನ್

ಕೋಲಾರ: ಸೋಮವಾರ ವಿಶ್ವಾಸ ಮತ ಯಾಚನೆ ಬಳಿಕ ರಾಜ್ಯ ರಾಜಕೀಯ ಭವಿಷ್ಯ ನಿರ್ಧಾರವಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಶಾಸಕರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.-ಕೋಲಾರದ ಕುರುಡುಮಲೆಯ ವಿನಾಯಕನ ದೇವಸ್ಥಾನಕ್ಕೆ ಬಿಜೆಪಿಯ ಈಶ್ವರಪ್ಪ ಅವರ ನೇತೃತ್ವದಲ್ಲಿ ಶಾಸಕರು ಹಾಗೂ ಸಂಸದರು ಭೇಟಿ ನೀಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿದರು.ಇದೇ ವೇಳೆ ಬಿಜೆಪಿ ಹೆಸರಲ್ಲಿ ದೇವರಿಗೆ ಅರ್ಚನೆ ಮಾಡಿಸಲಾಯಿತು. ‌

Read More »

ಮೈತ್ರಿ ಸರ್ಕಾರದ ಪತನ ನಿಶ್ಚಿತ: ಈಶ್ವರಪ್ಪ ವಿಶ್ವಾಸ

ಕೋಲಾರ: ಮೈತ್ರಿ ಸರ್ಕಾರ ಸೋಮವಾರಕ್ಕೆ ಕೊನೆಯಾಗಲಿದೆ. ಹಾಗೂ ಬಿಜೆಪಿ ವಿಶ್ವಾಸ ಮತ ಯಾಚನೆ ಗೆಲ್ಲುವ ನಂಬಿಕೆಯಿದೆ ಎಂದು ಬಿಜೆಪಿ ಮುಖಂಡ ಕೆಎಸ್.ಈಶ್ವರಪ್ಪ ಹೇಳಿದರು.ಕೋಲಾರದಲ್ಲಿಂದು ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕುರುಡುಮಲೆಯ ಗಣಪತಿಯ ಆಶೀರ್ವಾದ ಬಿಜೆಪಿ ಮೇಲಿದೆ ಎಂದರು.‌ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಸಿಟಿ.ರವಿ ಅವರು, ರಾಜ್ಯದಲ್ಲಿರುವುದು ದೋಸ್ತಿ ಸರ್ಕಾರವಲ್ಲ, ದುಶ್ಮನ್ ಗಳ ಸರ್ಕಾರ. ದೋಸ್ತಿಗಳು ಪರಸ್ಪರ ಮುಗಿಸಲು ಹೊರಟಿರುವುದು ಸ್ಪಷ್ಟ.ಈಗಿನದು ಆಪರೇಷನ್ ಕಮಲವಲ್ಲ, ರಾಜಕೀಯ …

Read More »

ಭಾವಸಾರ ಕ್ಷತ್ರಿಯ ನೂತನ ಪದಾಧಿಕಾರಿಗಳ ಆಯ್ಕೆ

ಯಾದಗಿರಿ:ಗುರುಮಠಕಲ್ ದ ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಪದಾಧಿಕಾರಿಗಳು ನೂತನವಾಗಿ ಮುಖೇಶ ಪತಂಗೆ ಅವರನ್ನು ಅಧ್ಯಕ್ಷರಾಗಿ ಮಾಡಿದರು.ನಂತರ ಪತಂಗೆ ಅವರ ಮನೆಯಲ್ಲಿ ಮಾತನಾಡಿದರು, ಭಾವಸಾರ ಕ್ಷೇತ್ರಿಯ ಸಮಾಜ ಬಂಧುಗಳು ಇಂದು ಸಂಘಟಿತರಾಗಿ ಸಂಘಟನೆಯ ಶಕ್ತಿ ತುಂಬುವ ಮೂಲಕ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟನಲ್ಲಿ ಸಮಾಜದಲ್ಲಿ ಮುಖ್ಯವಾಹಿನಿ ಬರಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುಶಾಂತ ಢಗೆ, ಕಾರ್ಯದರ್ಶಿ ಸತೀಶ ಢಗೆ, ಸಂಘಟನೆ ಕಾರ್ಯದರ್ಶಿ ನಾಗೇಶ ಮಾಳದಕರ್ ಕೋಟಗೇರ, ಖಜಂಚಿ ರಾಜು ಬೋಡಕೆ, …

Read More »