ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದಿದೆ.ಕಾರಿನಲ್ಲಿದ್ದ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೋಲೂರು ಮುದುಗೆರೆ ನಿವಾಸಿ ಮಂಜುಳಾ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟರು. ಇನ್ನು ಗಂಭೀರ ಗಾಯಗೊಂಡಿದ್ದ ಸೋಮಣ್ಣ ಮತ್ತು ನಾಗೇಂದ್ರ ಎಂಬುವವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಳ್ಯ ಸಮೀಪದ ಅರಂಬೂರು ಬಳಿ ರಿಕ್ಷಾವನ್ನು ಹಿಂದಿಕ್ಕುವ ಯತ್ನದಲ್ಲಿದ್ದ ಕಾರು ಹಾಗೂ ಬಸ್ಸು ಢಿಕ್ಕಿಯಾಗಿದೆ. ಮಂಗಳೂರಿನಿಂದ ಮಡಿಕೇರಿ …
Read More »ವಿವೋ ಕಂಪನಿ ಮೊಬೈಲ್ ಸ್ಪೋಟಗೊಂಡು ಯುವಕ ಅಸ್ವಸ್ಥ
ಆನೇಕಲ್: ಯುವಕನೊಬ್ಬ ಮೊಬೈಲ್ ನಲ್ಲಿ ಮಾತನಾಡುವಾಗ ಮೊಬೈಲ್ ಸ್ಪೋಟಗೊಂಡು ಯುವಕ ಗಾಯಗೊಂಡಿರುವ ಘಟನೆ ಆನೇಕಲ್ ಗಡಿಗೆ ಹೊಂದಿಕೊಂಡಿರುವ ಕುರುಬರಪಲ್ಲಿ ಸಮೀಪ ನಡೆದಿದೆ. ಆರ್ಮುಗ ಗಾಯಾಗೊಂಡ ಯುವಕ. ಸಂಬಂದಿ ಮನೆಗೆ ಹೋಗುವಾಗ ಅಡ್ರೆಸ್ ತಿಳಿಯಲು ಕಾಲ್ ಮಾಡಿ ಮಾತಾಡುವಾಗ ವಿವೋ ಕಂಪನಿ ಮೊಬೈಲ್ ಸ್ಪೋಟಗೊಂಡಿದೆ. ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
Read More »ಟೆಂಪಲ್ ರನ್ ಮಾಡುತ್ತಿರುವ ಸಚಿವ ಎಚ್.ಡಿ. ರೇವಣ್ಣ
ಮಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರದ ಭವಿಷ್ಯ ತೂಗುಯ್ಯಲೆಯಲ್ಲಿದೆ .ಈ ಮದ್ಯೆ ಸಚಿವ ಎಚ್ ಡಿ ರೇವಣ್ಣನವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ .ಇಂದು ರಾತ್ರಿ ಕಟೀಲ್ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಧರ್ಮಸ್ಥಳ ದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.ಕಟೀಲ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಪರವಾಗಿ ಕಟೀಲ್ ಅನಂತ್ ಅಸ್ರಣ್ಣ ಹಾಗೂ ಹರಿ ನಾರಾಯಣ ಅಸ್ರಣ್ಣ ಸ್ವಾಗತಿಸಿದರು .ಸರಕಾರದ ಉಳಿವಿಗಾಗಿ ಎಚ್ ಡಿ ರೇವಣ್ಣ ಉಡುಪಿ ಹಾಗೂ …
Read More »ಶ್ರೀ ರಾಮಮಂದಿರ ಉದ್ಘಾಟನೆ
ಮಂಡ್ಯ: ಜಿಲ್ಲೆ ಕುಪ್ಪಹಳ್ಳಿ ಗ್ರಾಮದಲ್ಲಿಂದು ಶ್ರೀರಾಮತಾರಕ ಹೋಮ ಯಶಸ್ವಿಯಾಗಿ ನಡೆಯಿತು. ಸೀತಾರಾಮಕಲ್ಯಾಣ, ಶ್ರೀ ರಾಮೋತ್ಸವ, ಶ್ರೀರಾಮತಾರಕ ಹೋಮ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು…ಶ್ರೀ ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ ದಾನಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ 65ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತವಾದ ಶ್ರೀ ರಾಮಮಂದಿರವನ್ನು ನಿರ್ಮಿಸಿದ್ದೇವೆ. ನಾಲ್ಕು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲು ಸಹಕರಿಸಿದ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಅರ್ಪಿಸಿದರುಕಾರ್ಯಕ್ರಮದಲ್ಲಿ ಮುಖ್ಯ …
Read More »ಬಿಹಾರಿ ಜನಾಂಗಕ್ಕೆ ಮಹಾನಗರ ಪಾಲಿಕೆ ಟೆಂಡರ್ ನೀಡದಂತೆ ಆಗ್ರಹಿಸಿ ಪ್ರತಿಭಟನೆ
ಹುಬ್ಬಳ್ಳಿ: ಬಿಹಾರಿ ಮೂಲದ ಜನರಿಗೆ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಟೆಂಡರ್ಗಳನ್ನು ನೀಡಬಾರದು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸೇನೆ ವತಿಯಿಂದ ಅಧ್ಯಕ್ಷರಾದ ಗಂಗಾಧರ ಪೆರೂರ ನೇತೃತ್ವದಲ್ಲಿಂದು ನಗರದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಬಳಿಕ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶೌಚಾಲಯ ನಿರ್ವಹಣೆ ಟೆಂಡರ್ ಕರೆದಿದ್ದು, 1-2 ಟೆಂಡರ್ನಲ್ಲಿ ಸ್ಥಳೀಯ ಹೆಸರನ್ನು ಕಿತ್ತು ಹಾಕಿ ಹಣದ ಆಮಿಷಕ್ಕೆ …
Read More »ರೈತ ವಿಜ್ಞಾನಿ ಮಂಜೇಗೌಡಗೆ ಹೃದಯಸ್ಪರ್ಶಿ ಬಿಳ್ಕೊಡುಗೆ
ಮಂಡ್ಯ: ನವದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನಾ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ ಮಂಡ್ಯ ಪಟ್ಟಣದ ರೈತವಿಜ್ಞಾನಿ ರೋಬೋ ಮಂಜೇಗೌಡ ಅವರಿಗೆ ಇಂದು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನವದೆಹಲಿಯಲ್ಲಿ ಜುಲೈ17, 18,ಮತ್ತು 19ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಸಂಶೋಧಕರ ಸಮ್ಮೇಳನದಲ್ಲಿ ಭಾಗವಹಿಸಲು ಕೃಷ್ಣರಾಜಪೇಟೆ ತಾಲ್ಲೂಕಿನಿಂದ ಹೊರಡುತ್ತಿರುವ ರೈತ ವಿಜ್ಞಾನಿ ರೋಬೋ ಮಂಜೇಗೌಡರನ್ನು ಹಿತೈಷಿಗಳು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು… ಮೂರು ದಿನಗಳ …
Read More »ಮಂಡ್ಯ ಶಾಸಕರ ಅಂತ್ಯಕ್ರಿಯೆ ನಡೆಸಿ ಪ್ರತಿಭಟನೆ
ಮಂಡ್ಯ: ಕಳೆದ ಕೆಲ ದಿನಗಳಿಂದ ರಾಜಕೀಯದಲ್ಲಿ ರಾಜೀನಾಮೆಯ ಹೈಡ್ರಾಮಾ ನಡೆದ ಹಿನ್ನೆಲೆಯಲ್ಲಿಮಂಡ್ಯ ಜಿಲ್ಲೆ ಶಾಸಕ ನಾರಾಯಣಗೌಡರ ವಿರುದ್ಧ ನಾರಾಯಣಗೌಡರ ಅಣಕು ಶವಯಾತ್ರೆ ನಡೆಸಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.ನಾರಾಯಣಗೌಡ ಅವರ ಪ್ರತಿಕೃತಿ ಸುಟ್ಟು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು .ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಮುಖಂಡ ಬಸ್ ಕೃಷ್ಣೇಗೌಡ, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಬಿ.ಎಲ್.ದೇವರಾಜು, ಎಪಿಎಂಸಿ ಅಧ್ಯಕ್ಷ ನಾಗರಾಜೇಗೌಡ, ಎಂ.ಪಿ.ಲೋಕೇಶ್, ಅಂಬಿಗರಹಳ್ಳಿ ಶಿವರಾಮು, ಪುರಸಭೆಯ ಸದಸ್ಯ ಸಂತೋಷ್ ಕುಮಾರ್ …
Read More »ವಿದ್ಯುತ್ ತಂತಿ ತಗುಲಿ ರೈತ ಸಾವು
ಚಿಕ್ಕೋಡಿ; ವಿದ್ಯುತ್ ತಂತಿ ತಗುಲಿ ರೈತ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮುರಾರಿ ಬನ್ನೆ 60 ಮೃತ ದುರ್ದೈವಿ ರೈತ.ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಸಾವು ಸಂಭವಿಸಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಏತ ನೀರಾವರಿ ಅನುಮೋದನೆಗೆ ಒತ್ತಾಯಿಸಿ ಪ್ರತಿಭಟನೆ
ಚಿತ್ರದುರ್ಗ:ಸಾಸ್ವೆಹಳ್ಳಿ ಏತ ನೀರಾವರಿ 2ನೇ ಹಂತ ಅನುಮೋದನೆಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿಂದು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಹೊಳಲ್ಕೆರೆ, ಚಿತ್ರದುರ್ಗ ತಾಲೂಕಿನ ನೂರಾರು ರೈತರು ಕನಕ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು. ನಗರದ ಗಾಂಧಿ ವೃತ್ತದಲ್ಲಿ ನೀರಿಗಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುವ ಮೂಲಕ ಸರ್ಕಾರದ ವಿರುದ್ದ ರೈತರು ಆಕ್ರೋಶ ಹೊರಹಾಕಿದರು.
Read More »ರಾಜೀನಾಮೆ ನೀಡಿದ ಶಾಸಕರಿಗೆ ಛೀ… ತೂ..
ದಾವಣಗೆರೆ: ರಾಜ್ಯ ಮೈತ್ರಿ ಕೂಟಕ್ಕೆ ರಾಜೀನಾಮೆ ನೀಡಿದ ಶಾಸಕರಿಗೆ ದಾವಣಗೆರೆಯಲ್ಲಿ ರೈತ ಸಂಘ ವತಿಯಿಂದ ಛೀಮಾರಿ ಹಾಕಲಾಯಿತು.ದಾವಣಗೆರೆ ಬಸ್ ನಿಲ್ದಾಣದ ಬಳಿ ರಾಜೀನಾಮೆ ನೀಡಿದ ೧೫ ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು. ಅಲ್ಲದೇ ಕಾರ್ಯಕರ್ತರು ಎಲೆ ಅಡಿಕೆ ತಿಂದು ಶಾಸಕರ ಭಾವಚಿತ್ರಕ್ಕೆ ಉಗುಳಿದರು.ಶಾಸಕರು ತಮ್ಮ ಸ್ವಾರ್ಥಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಗೆ ಜನರ ಕೆಲಸಗಳ ಬಗ್ಗೆ ಕಾಳಜಿ ಇಲ್ಲ. ಕೆಲಸ ಮಾಡುವುದನ್ನು ಬಿಟ್ಟು ರಾಜೀನಾಮೆ ಕೊಟ್ಟಿದ್ದಕ್ಕೆ ಆಕ್ರೋಶ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





