ಜೀವನದ ಜಿಗುಪ್ಸೆಯಿಂದ ಸೆಲ್ಪಿ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದ ಕರವರ್ತಿ ಗ್ರಾಮದಲ್ಲಿ ನಡೆದಿದೆ. ಪವನ್ ಕುಮಾರ್ (19).ಮೃತ ಯುವಕ. ನನಗೆ ಈ ಜೀವನ ಬೇಡ, ನನ್ನ ನಂಬಿಕೆ ನನಗೆ ದ್ರೋಹ ಮಾಡಿದೆ ಎಂದು ವಿಡಿಯೋ ಮಾಡಿ ಸ್ಟೇಟಸ್ ಹಾಕಿದ್ದ ಯುವಕ ಹೊಂಡದಲ್ಲಿ ಹಾರಿ ಮೃತಪಟ್ಟಿದ್ದಾನೆ. ಕಳೆದ ಎರಡು ವರ್ಷದಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದ ಪವನ್ ಹಾಲಿನ ಪಾಯಿಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದ್ರೇ ಮೃತನ ಮೂಲ …
Read More »ಮಳೆಗಾಗಿ ಮೂಢನಂಬಿಕೆಗೆ ಜಾರಿದ ಗ್ರಾಮಸ್ಥರು
ಚಿಕ್ಕೋಡಿ : ರಾಜ್ಯದಲ್ಲಿ ಮೂಢ ನಂಬಿಕೆ ನಿಷೇಧ ಕಾಯಿದೆ ಜಾರಿ ಇದ್ದರೂ ಪವಾಡಕ್ಕೆ ಸ್ವಾಮೀಜಿಯೊಬ್ಬರು ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಹೊರವಲಯದಲ್ಲಿಬಾಬಾಸಾಬ್ ಪಾಟೀಲ ಎಂಬುವರ ಜಮೀನಿನಲ್ಲಿ ಮುಳ್ಳುಕಂಟಿಯ ಮೇಲೆ ಮಲಗಿದ ಸ್ವಾಮೀಜಿ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋದರು. ಅಥಣಿ ತಾಲ್ಲುಕಿನ ಜಂಬಗಿ ಗ್ರಾಮದ ಸುರೇಶ್ ಮಹರಾಜ್ ಎಂಬುವರಿಂದ ಪವಾಡ ಮಾಡಿದ್ದಾರೆ. ಈ ದೃಶ್ಯಗಳನ್ನು ನೋಡಲುಸ್ಥಳದಲ್ಲಿ ಅಪಾರ ಜನಸ್ಥೋಮ ನೆರೆದಿದ್ದರು.
Read More »ಕೊಟ್ಟ ಮಾತು ಉಳಿಸಿಕೊಳ್ಳುವುದು, ಋಣ ತೀರಿಸುವುದು ನನ್ನ ಕರ್ತವ್ಯ: ಸಚಿವ ಡಿಕೆಶಿ
ಹುಬ್ಬಳ್ಳಿ:ಕುಂದಗೋಳದ ಎಲ್ಲ ವರ್ಗದ ಜನರು ನಮಗೆ ಆಶೀರ್ವಾದ ಮಾಡಿ ಕೆಲಸ ಮಾಡಲು ಶಕ್ತಿ ನೀಡಿದ್ದಾರೆ. ಅವರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ಹಾಗೂ ಅವರ ಋಣವನ್ನು ತೀರಿಸುವುದು ನನ್ನ ಕರ್ತವ್ಯ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಕುಂದಗೋಳ ತಾಲೂಕು ವಿವಿಧ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಕ್ಕೆ ಆಗಮಿಸಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಕುಂದಗೋಳ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ …
Read More »ಸರ್ಕಾರ ಗಟ್ಟಿಯಾಗಿದೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂಬ ದೇವೇಗೌಡರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿಕೆ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ ನಮ್ಮ ಸರ್ಕಾರ ಸುಭದ್ರ ಸರ್ಕಾರ. ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು ಐದು ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಲು ತೀರ್ಮಾನಿಸಿ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರು ನಮ್ಮ ಸರ್ಕಾರವನ್ನು ತೆಗೆಯಲು ಪಾಪ ಬಹಳ ಪ್ರಯತ್ನ ಪಡುತ್ತಿದ್ದಾರೆ. ಈಗ ಇತ್ತೀಚೆಗೆ ಯಡಿಯೂರಪ್ಪನವರು ನಾವು ಸರ್ಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ …
Read More »ನೀರು ವಿನಿಮಯ ಕುರಿತು ಮಹಾರಾಷ್ಟ್ರ ಸಚಿವರ ಜತೆ ಚರ್ಚೆಗೂ ಮುನ್ನ ಪರಿಸ್ಥಿತಿ ಖುದ್ದು ಅಧ್ಯಯನ: ಸಚಿವ ಡಿಕೆಶಿ
ಹುಬ್ಬಳ್ಳಿ : ‘ನೀರಿಗೆ ನೀರು’ ಎಂಬ ಷರತ್ತು ಮುಂದಿಟ್ಟಿರುವ ಮಹಾರಾಷ್ಟ್ರ ಸಚಿವರ ಜತರ ಚರ್ಚಿಸುವ ಮೊದಲು ವಸ್ತುಸ್ಥಿತಿಯನ್ನು ನಾಳೆ ತಾವೇ ಖುದ್ದು ಅಧ್ಯಯನ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಉಭಯ ರಾಜ್ಯಗಳ ಜಲ ಸಂಪನ್ಮೂಲ ಸಚಿವರು ಚರ್ಚೆ ನಡೆಸಬೇಕು ಎನ್ನುವುದು ಮಹಾರಾಷ್ಟ್ರ ಸಿಎಂ ಸಲಹೆ. ಜತೆಗೆ ಕರ್ನಾಟಕ ಈಗಾಗಲೇ ಕುಡಿಯುವ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ನೀರು ತಲುಪಿಲ್ಲ ಎನ್ನುವುದು ಅದರ ದೂರು. ಹೀಗಾಗಿ ಖುದ್ದು ಸ್ಥಳ ಪರಿಶೀಲನೆ …
Read More »ನಗರಸಭೆ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ಚಾಮರಾಜನಗರದ ನಗರಸಭೆ ನಿರ್ಲಕ್ಷ್ಯವನ್ನು ಖಂಡಿಸಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ತಮಟೆ ಚಳುವಳಿ ನಡೆಸಿದ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಶ್ರೀನಿವಾಸಗೌಡ, ಪಟ್ಟಣದಲ್ಲಿ ಹಲವಾರು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನಸಾಮಾನ್ಯರು ಹಾಗೂ ವಾಹನ ಸವಾರರು ಓಡಾಟ ನಡೆಸಲು ತೊಂದರೆಯಾಗುತ್ತಿದೆ. ಅಲ್ಲದೇ ಒಳಚರಂಡಿ ಕಾಮಗಾರಿ ಸರಿಯಾದ ರೀತಿಯಲ್ಲಿ ಆಗದೇ ಅಲ್ಲಲ್ಲಿ ಗುಂಡಿಗಳು ಬಾಯಿ ತೆರೆದು ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದೆ …
Read More »ಕಚೇರಿಯಲ್ಲಿ ಚಂದ್ರಕಾಂತ್ ನುಡಿಸಿದ ಗಾಯನವನ್ನು ಕೇಳಿ ಖುಷಿಪಟ್ಟ ADGP
ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುವ ಪೋಲೀಸ್ ಹೆಡ್ ಕಾನ್ಸ್ ಟೇಬಲ್ಚಂದ್ರಕಾಂತ್ ಹುಟ್ಗಿ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ADGP ಭಾಸ್ಕರ್ ರಾವ್ ಕರೆಸಿಕೊಂಡು ಅವರಕಚೇರಿಯಲ್ಲಿ ಚಂದ್ರಕಾಂತ್ ನುಡಿಸಿದ ಗಾಯನವನ್ನು ಕೇಳಿ ಖುಷಿಪಟ್ಟರು. ಅಷ್ಟಕ್ಕೂ ಈ ರೀತಿ ಗಾಯನ ನುಡಿಸಲು ಆರಂಭಿಸಿದ್ದದು, ಅದು ಚುನಾವಣಾ ಕರ್ತವ್ಯಕ್ಕೆಂದು ಚಿಕ್ಕಮಗಳೂರಿನ ಪ್ರಸಿದ್ಧ ತಾಣಗಳಲ್ಲಿ ಒಂದಾದ ದತ್ತಪೀಠಕ್ಕೆ ಭದ್ರತೆಗೆ ತೆರಳಬೇಕಿತ್ತು. ಕರ್ತವ್ಯದಲ್ಲಿದ್ದಾಗ ನಾಲ್ಕೈದು ಗಂಟೆ ಒಂದೇ ಕಡೆ ಕುಳಿತುಕೊಳ್ಳಬೇಕಿತ್ತು. ಆಗ ಸುಮ್ಮನೆ ಕುಳಿತುಕೊಳ್ಳಲು ಚಂದ್ರಕಾಂತ …
Read More »ಕೃಷ್ಣಾ ನದಿ ನೀರು ಹರಿಸಲು ಆಗ್ರಹಿಸಿ ಮುಳ್ಳು ಕಂಟಿ ಏರಿದ ಭೂಪ
ಕಳೆದ ಮೂರು ತಿಂಗಳಿಂದ ಬತ್ತಿ ಹೊದ ಕೃಷ್ಣಾ ನದಿ… ಇನ್ನೊಂದು ಕಡೆ ಜನಿ ನೀರಿಗೂ ತತ್ವಾರ… ನೀರಿಗಾಗಿ ಅಲೆಯುತ್ತಿರುವ ಜನ ಮತ್ತು ಜಾನುವಾರು…ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆ ಗಳು…ಇವುಗಳ ನಡುವೆಕೃಷ್ಣಾ ನದಿಗೆ ಕೂಡಲೇ ನೀರು ಹರಿಸಲು ಆಗ್ರಹಿಸಿ ಸ್ವಯಮ್ ಘೋಷಿತ ಸ್ವಾಮೀಜಿ ಒಬ್ಬರು ಮುಳ್ಳಿನ ಮರ ಏರಿದ್ದಾರೆ ಅರೆ ಅದೆಲ್ಲಿ ಅಂತಿರಾ ಈ ಸ್ಟೋರಿ ನೋಡಿ…..ಹೀಗೆ ತಂಡೋಪ ತಂಡವಾಗಿ ನಿಬ್ಬೆರಗಾಗಿ ನೋಡುತ್ತ ನೀಮತಿರುವ ಜನ… ಇನ್ನೊಂದು ಕಡೆ ಮುಳ್ಳಿನ ಮರ ಏರಿ …
Read More »ರೈತನೋರ್ವ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ
ರಾಯಚೂರು:. ಸಾಲಬಾಧೆ ತಾಳಲಾರದೆ ರೈತ ಸಾವಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾಮದಲ್ಲಿ ನಡೆದಿದೆ.ಬಸವರಾಜ ಜಾವೂರ (35) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ನಾಗರಗಾಳ ಪಿಕೆಜಿಬಿ ಬ್ಯಾಂಕ್ನಲ್ಲಿ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ರೈತ ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದು, ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.ಈ ಸಂಬಂಧ ಲಿಂಗಸೂಗೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ …
Read More »ಜಿಲ್ಲೆಗೆ ವಿಶೇಷವಾದ ಅನುದಾನ ಮತ್ತು ಒಂದು ಪ್ಯಾಕೇಜ್ ನೀಡಬೇಕು
ಚಾಮರಾಜನಗರ ಜಿಲ್ಲೆಯಾಗಲು ನನ್ನ ಶ್ರಮ ಅಪಾರ ಇದು ಹಿಂದುಳಿದ ಗಡಿಪ್ರದೇಶವಾಗಿದ್ದು, ಇನ್ನೂ ಸಾಕಷ್ಟು ಅಭಿವೃದ್ದಿ ಕಾಣಬೇಕಾಗಿದೆ ಅದಕ್ಕಾಗಿ ಜಿಲ್ಲೆಗೆ ವಿಶೇಷವಾದ ಅನುದಾನ ಮತ್ತು ಒಂದು ಪ್ಯಾಕೇಜ್ ನೀಡಬೇಕು ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಇಂದಿಲ್ಲಿ ಆಗ್ರಹಿಸಿದರು.ಚಾಮರಾಜನಗರಕ್ಕೆ ನೀರು ತರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವಾಗ ಭೀಕರ ಬರಗಾಲ ಉಂಟಾಗಿದ್ದು ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪಟ್ಟಣಕ್ಕೆ ಪ್ರತಿನಿತ್ಯ ಕುಡಿಯುವ ನೀರು, ಜಾನುವಾರುಗಳಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





