Breaking News

admin

ಸಿದ್ದರಾಮಯ್ಯಗೆ ಎದರೇಟು ನೀಡಿದ ಶ್ರೀರಾಮುಲು

ಮಂಗಳೂರು:ಬಿಜೆಪಿ ಸರಕಾರವನ್ನು ಕಿತ್ತೆಸೆಯರಿ ಎಂದು ಕಾಂಗ್ರೆಸ್‌ ಪಕ್ಷದ ನಾಯಕರಾದ ಸಿದ್ದ ರಾಮಯ್ಯನವರು ಹೇಳುತ್ತಿದ್ದಾರೆ. ಹಾಗೆ ಕಿತ್ತೂಸೆಯಲು ಇದೇನು ಕೊತ್ತಂಬರಿ ಸೊಪ್ಪಾ? ಎಂದು ಸಾರಿಗೆ ಸಚಿವ ಹಾಗೂ ಬಿಜೆಪಿ ರಾಜ್ಯ ಕೋರ್‌ ಕಮಿಟಿ ಸದಸ್ಯ ಶ್ರೀರಾಮುಲು ಅವರು ಸಿದ್ದರಾಮಯ್ಯನವರಿಗೆ ಎದರೇಟು ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಕೋರ್‌ ಕಮಿಟಿ ಹಾಗೂ ಜಿಲ್ಲಾ ಪ್ರಮುಖರ ಸಭೆಯ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇತ್ತೀಚೆಗೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.ಅವರ …

Read More »

ಚಾಕುವಿನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ : ಕೌಟುಂಬಿಕ ಕಲಹಕ್ಕೆ ಬೇಸತ್ತು ಮನನೊಂದು ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹಾನಗಲ್ಲ ಮೂಲದ ಯುವಕನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಸಲೀಂ ಎಂಬಾತ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಯತ್ನಿಸಿದ ಯುವಕ, ಮನೆಯಲ್ಲಿನ ಸಮಸ್ಯೆಗೆ ನೊಂದು ಮನೆಯಲ್ಲಿಯೇ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿಕೊಂಡು ತೀವ್ರವಾಗಿ ಗಾಯಗೊಂಡಿದ್ದನು. ಇದರಿಂದ ಗಂಭೀರವಾಗಿ ಗಾಯಗೊಂಡ ಸಲೀಂನನ್ನು ಕಿಮ್ಸ್‌ಗೆ ದಾಖಲಿಸಲಾಗಿದ್ದು , ತೀವ್ರವಾಗಿ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿದ್ದರಿಂದ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Read More »

ಲಾರಿ ಕಾರ್ ನಡುವೆ ಡಿಕ್ಕಿ: ಒರ್ವ ವೃದ್ದೆ ಸ್ಥಳದಲ್ಲೆ ಸಾವು

ಹುಬ್ಬಳ್ಳಿ: ಲಾರಿ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ವೃದ್ದೆಯೋಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ಕಾರವಾರ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಕಾರ್ ಹುಬ್ಬಳ್ಳಿಯಿಂದ ಕಾರವಾರ ಕಡೆಗೆ ಹೋಗುತ್ತಿದ್ದು, ಲಾರಿ ಹುಬ್ಬಳ್ಳಿ ಕಡೆ ಬರುತ್ತಿದ್ದು, ಮುಖಾಮುಖಿ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ನಾಲ್ಕು ಜನರು ಪ್ರಯಾಣ ಬೆಳಸುತ್ತಿದ್ದು, ವೃದ್ಧೆ ಒಬ್ಬರು ಸಾವನ್ನಪ್ಪಿದ್ದು, ಇನ್ನೂಳಿದಮೂವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Read More »

ವಿವಿಧ ಬೇಡಿಕೆ ಈಡೇರಿಸುವ ಕುರಿತ ಪ್ರತಿಭಟನೆ

ಹುಬ್ಬಳ್ಳಿ: ಹಿರಿಯ ಕಾರ್ಮಿಕರಿಗೆ ಪಿಂಚಣಿ ಯೋಜನೆಯಲ್ಲಿನ ದ್ವಂದ್ವ ನೀತಿಯನ್ನು ಕೈಬಿಟ್ಟು ಅನಿಯಮಿತ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಹುಬ್ಬಳ್ಳಿಯಲ್ಲಿಂದು ಪ್ರತಿಭಟನೆ ನಡೆಸಿತು. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಕಾರ್ಮಿಕ ಭವನ ಚಲೋ ನಡೆಸಿದ ಪ್ರತಿಭಟನಾಕಾರರು ಕಾರ್ಮಿಕರ ಭವನ ಮುಂದೆ ರಾಜ್ಯ ಸರ್ಕಾರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ …

Read More »

ಆಶ್ರಯ ಮನೆಗಳಿಗಾಗಿ ಶಾಸಕ ಅರವಿಂದ್ ಬೆಲದ ಮನೆ ಮುಂದೆ ಪ್ರತಿಭಟನೆ

ಹುಬ್ಬಳ್ಳಿ : ಆಶ್ರಯ ಮನೆಗಳಿಗಾಗಿ ಶಾಸಕ ಅರವಿಂದ್ ಬೆಲದ ಮನೆ ಮುಂದೆಯೇ ಸಾರ್ವಜನಿಕರು ಪ್ರತಿಭಟನೆ ಮಾಡಿದರು. .ಶಾಸಕ ಅರವಿಂದ ಬೆಲ್ಲದ ಮನೆ ಮುಂದುಗಡೆ ಜಗದೀಶನಗರದ ನಿವಾಸಿಗಳು ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನಲ್ಲಿರುವ ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಮನೆಗಳನ್ನು ಹಸ್ತಾಂತರಿಸಿ, ಹಕ್ಕುಪತ್ರ ನೀಡುವಂತೆ ಪ್ರತಿಭಟನೆ ನಡೆಸುತ್ತಿರುವ ಜಗದೀಶ ನಗರ ನಿವಾಸಿಗಳು ಈ ಹಿಂದೆ ಸುಮಾರು ಸಾರಿ ಮನವಿ ಮಾಡಿದರು ಕ್ಯಾರೆ ಎನ್ನದ ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೂ …

Read More »

ಸ್ಟೇಟ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್: 3 ಬೆಳ್ಳಿ ಪದಕ ಗೆದ್ದ ಹುಬ್ಬಳ್ಳಿ ಪೋರಿಯರು

ಬೆಂಗಳೂರು : ನಗರದಲ್ಲಿ ನಡೆದ ಕರ್ನಾಟಕ ಸ್ಟೇಟ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್ಶಿಪ 2022 ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಅಮೇಚರ್ ಬಾಕ್ಸಿಂಗ್ ಅಸೋಸಿಯೇಷನ್ ಕ್ಲಾಸಿನ ವಿದ್ಯಾರ್ಥಿಗಳು 3 ಬೆಳ್ಳಿ ಬಪದಕ ಗೆದ್ದು ಅವಕಾಶ ಹಾಗೂ ಪ್ರೋತ್ಸಾಹ ನೀಡಿದರೆ ಹೆಣ್ಣು ಮಕ್ಕಳು ಯಾರಿಗೂ ಕಮ್ಮಿ ಇಲ್ಲವೆಂದು ತೋರಿಸಿ ಕೊಟ್ಟಿದ್ದಾರೆ. ಇವರಿಗೆ ಹುಬ್ಬಳ್ಳಿಯ ಯೋಗೇಶ್ ಸಾಲಿಯಾನ್ ಕೋಚ್ ನೀಡುವ ಮೂಲಕ ತಮ್ಮಹುಬ್ಬಳ್ಳಿ ಧಾರವಾಡಕ್ಕೆ 3 ಸಿಲ್ವರ್ ಮೇಡಲ್ ಪಡೆಯುವಂತೆ ಮಾಡಿದ್ದಾರೆ…ಧಾರವಾಡ ಜಿಲ್ಲೆಯಲ್ಲಿ ಬಾಕ್ಸಿಂಗ್ ಗೆ ಹೆಚ್ಚು …

Read More »

ಶೋಭಾಯಾತ್ರೆಗೆ ಚಾಲನೆ

ಹುಬ್ಬಳ್ಳಿ: ರಾಮನವಮಿ ಅಂಗವಾಗಿ ಹುಬ್ಬಳ್ಳಿ ಕಮರಿಪೇಟೆಯಲ್ಲಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಮೂರುಸಾವಿರಮಠದ ಜಗದ್ಗುರು ಗುರುಸಿದ್ದರಾಜ ಯೋಗೀಂದ್ರ ಮಹಾಸ್ವಾಮೀಜಿ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. ಪಾಲಿಕೆ ಸದಸ್ಯ ಸುನೀತಾ ಬುರಬುರೆ , ಮುಖಂಡ ರಾದ ಪ್ರಕಾಶ ಬುರಬುರೆ , ವಿಠಲ ಲದ್ವಾ , ಹನುಮಂತ ಸುನೀಲ ವಾಲ್ವೇಕರ , ಜಿ.ಲಕ್ಷ್ಮೀಪತಿ , ವಿನಾಯಕ ಮೆಹರವಾಡೆ , ನಿರಂಜನ , ವನಜಾಕಿ ಪಾಟೀಲ , ಇತರರು ಇದರು .

Read More »

ನುಗ್ಗಿಕೇರಿಯಲ್ಲಿ ನಡೆದ ಅಹಿತಕರ ಘಟನೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು : ಕುಮಟಾಕರ್

ಧಾರವಾಡ: ಸುಮಾರು 15 ವರ್ಷಗಳಿಂದ ಧಾರವಾಡದ ನುಗ್ಗಿಕೆರಿ ಶ್ರೀ ಹನುಮಂತ ದೇವಸ್ಥಾನ ಸುತ್ತ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಅಂಗಡಿಗಳನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ದಬ್ಬಾಳಿಕೆ ಮಾಡಿ ಅಂಗಡಿಯಲ್ಲಿ ಇದ್ದ ಕಲ್ಲಂಗಡಿ ಹಣ್ಣುನ್ನು ನಡು ರಸ್ತೆಯಲ್ಲಿ ಒಡೆದು ಮುಸ್ಲಿಂ ಅಂಗಡಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯವನ್ನು ಮಾಡಿರುವುದು ಖಂಡನೀಯವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಅಶಾಕ್ ಕುಮಟಾಕರ್ ಹೇಳಿದರು . ಅಲ್ಲದೇ ಕೂಡಲೇ ಸರ್ಕಾರ ಹಾಗೂ ಜಿಲ್ಲಾ ಆಡಳಿತ ತಪ್ಪಿತಸ್ಥರ ಮೇಲೆ ಕಾನೂನು …

Read More »

ನುಗ್ಗಿಕೇರಿಯಲ್ಲಿ ನಡೆದ ಘಟನೆಯ ಆರೋಪಿಗಳನ್ನು ಶಿಕ್ಷಿಸುವಂತೆ ಮನವಿ ಸಲ್ಲಿಕೆ

ಧಾರವಾಡ: ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿ ಅಂಗಡಿ ಧ್ವಂಸಗೊಳಿಸಿದ ಆರೋಪಿಗಳನ್ನು ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿ ಜಾತ್ಯತೀತ ಜನತಾದಳ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷರಾದ ಬಿ.ಬಿ.ಗಂಗಾಧರಮಠ , ಗುರುರಾಜ ಹುಣಶಿಮರದ , ಮುಖಂಡ ರಾದದೇವರಾಜ ಕಂಬಳಿ , ಶಾಂತವೀರಬೆಟಗೇರಿ , ಗಂಗಾಧರ ಪೆರೂರ , ಸಾಧಿಕ ಹಕೀಮ್ , ಪರ್ವೆಜ್ ಕಟ್ಟಿಮನಿ , ಇಮತಿಹಾಜ್ ತಡಕೋಡ ಇದ್ದರು .

Read More »

ಶಿರೂರು ಬ್ರಿಡ್ಜ್ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕಿ

ಶಿರೂರು : ಇಂದು ಶಾಸಕಿ ಕುಸುಮಾವತಿ ಶಿವಳ್ಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಶಿರೂರು ಬ್ರಿಡ್ಜ್ ಕಾಮಗಾರಿ ವೀಕ್ಷಣೆ ಮಾಡಿಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ನಡೆದ ಹುಬ್ಬಳ್ಳಿ – ಲಕ್ಷ್ಮೀಶ್ವರ ಮಾರ್ಗ ಮಧ್ಯದ ಶಿರೂರು ಬ್ರಿಡ್ಜ್ ಕಾಮಗಾರಿಗೆ ನಾಳೆ ತಾರ್ಕಿಕ ಅಂತ್ಯಸಿಗಲಿದ್ದು ಲಘು ವಾಹನಗಳ ಓಡಾಟಕ್ಕೆ ಅವಕಾಶ ಸಿಗಲಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದ್ದಾರೆ. ಕಳೆದ ಹಲವಾರು ದಿನಗಳ ಹಿಂದೆ ನೆಲಕ್ಕೆ ಅಪ್ಪಳಿಸಿದ್ದ ಶಿರೂರು ಬ್ರಿಡ್ಜ್ ಕಾಮಗಾರಿ …

Read More »