Breaking News

Shaikh BIG TV NEWS, Hubballi

ಜನರು-ಮೊಸಳೆಗಳು ಒಟ್ಟಿಗೆ ವಾಸಿಸುವ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು…

ಆನಂದ್: ಜಗತ್ತಿನಲ್ಲಿ ಮಾನವರು ಮತ್ತು ಮೊಸಳೆಗಳು ಒಟ್ಟಿಗೆ ವಾಸಿಸುವ ಕಡಿಮೆ ಸ್ಥಳಗಳಿವೆ. ಆದರೆ ಗುಜರಾತ್ನಲ್ಲಿ ಈ ಅದ್ಭುತ ದೃಶ್ಯವನ್ನು ಕಾಣಬಹುದು. ಆನಂದ್ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಮೊಸಳೆಗಳು ಮತ್ತು ಜನರು ಒಟ್ಟಾಗಿ ವಾಸಿಸುತ್ತಾರೆ. ಇಲ್ಲಿ ಮೊಸಳೆಗಳಿಂದ ಮಾನವರಿಗೆ/ಮಾನವರಿಂದ ಮೊಸಳೆಗಳಿಗೆ ಯಾವುದೇ ತೊಂದರೆಗೊಳಗಾಗಿಲ್ಲ.ಕಳೆದ 6 ವರ್ಷಗಳಿಂದ ವಿದ್ಯಾನಗರ ಮೂಲದ ನೇಚರ್ ಫೌಂಡೇಶನ್ನಿಂದ ಮೊಸಳೆಗಳ ಎಣಿಕೆ ಮಾಡುತ್ತಿದೆ ಮತ್ತು ಮೊಸಳೆಯು ಎಣಿಕೆಯ ಸಂಖ್ಯೆ ಇನ್ನೂ ನಡೆಯುತ್ತಿದೆ. ಸಾಮಾನ್ಯವಾಗಿ ಹೇಳುವುದಾದರೆ, ಮೊಸಳೆ ದಾಳಿಯ ಸುದ್ದಿ …

Read More »

ಮೋದಿ ಸರ್ಕಾರಕ್ಕೆ ಭಾರೀ ಹಿನ್ನಡೆ : ಸಿಬಿಐಗೆ ಅಲೋಕ್​ ವರ್ಮಾ ವಾಪಸ್..​

ನವದೆಹಲಿ: ಅಲೋಕ್​ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಮರುನೇಮಕ ಮಾಡಿ ಸುಪ್ರೀಂ ಕೋರ್ಟ್​​ ಆದೇಶ ನೀಡಿದೆ. ತನ್ನನ್ನು ಸುದೀರ್ಘ ರಜೆ ಮೇಲೆ ಕಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ​ಅಲೋಕ್​ ವರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವರ್ಮಾ ಅವರ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಈಗ ತೀರ್ಪು ಪ್ರಕಟಿಸಿರೋ ಕೋರ್ಟ್​, ಅಲೋಕ್​ ವರ್ಮಾ ಅವರನ್ನ ಮರುನೇಮಕ ಮಾಡಿದ್ದು, ಮೋದಿ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಇನ್ನು ಅಲೋಕ್​ …

Read More »

ಭಾರತ ಬಂದ್; ನಾಳೆ ಒಂದು ದಿನ ಧಾರವಾಡದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ

ಧಾರವಾಡ: ವಿವಿಧ ಸಂಘಟನೆಗಳು ಭಾರತ ಬಂದ್​​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ನಾಳೆ (ಜ.8) ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.ಜನರ ಪ್ರತಿಕ್ರಿಯೆ ನೋಡಿಕೊಂಡು ನಾಡಿದ್ದು (ಜ.9) ರಂದು ರಜೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಈ ರಜೆಯನ್ನು ಸರಿದೂಗಿಸಲು ಬರುವ ಶನಿವಾರ ಹಾಗೂ ಭಾನುವಾರ ದಂದು ಪೂರ್ಣದಿನ ಕಾರ್ಯನಿರ್ವಹಿಸಲು ಶಾಲೆ, ಕಾಲೇಜುಗಳಿಗೆ ಸೂಚಿಸಿದ್ದಾರೆ.

Read More »

ಮಮತಾ ಬ್ಯಾನರ್ಜಿಗೆ ದೇಶದ ಪ್ರಧಾನಿ ಆಗುವ ಅವಕಾಶವಿದೆ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ

ಮಮತಾ ಬ್ಯಾನರ್ಜಿಗೆ ದೇಶದ ಪ್ರಧಾನಿ ಆಗುವ ಅವಕಾಶವಿದೆ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷಪಶ್ಚಿಮ ಬಂಗಾಳದಿಂದ ಮೊದಲ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಆಯ್ಕೆಯಾಗಿದ್ದರು. ಈಗ ಪ್ರಧಾನ ಮಂತ್ರಿ ಸರದಿ… ಹಾಗಾಗಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆ ಇದೆ” ಎಂದು ದಿಲೀಪ್ ಘೋಷ್ ಹೇಳಿದ್ದಾರೆ.ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ದೇಶದ ಮೊದಲ ಬಂಗಾಳಿ ಪ್ರಧಾನಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ …

Read More »

ಹೊಸ ವರ್ಷದ ಸಂಭ್ರಮಕ್ಕೆ ತಂದೆ ಹಾರಿಸಿದ ಗುಂಡು, ಮಗನ ಪ್ರಾಣವನ್ನೆ ತೆಗೆಯಿತು..

ನವದೆಹಲಿ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ತಂದೆಯೇ ಆಕಸ್ಮಿಕವಾಗಿ ಮಗನಿಗೆ ಗುಂಡು ಹಾರಿಸಿ ಕೊಂದಿರುವ ಘಟನೆ ನವದೆಹಲಿಯ ಉಸ್ಮಾನ್​ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್​ 31 ರ ತಡರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.42 ವರ್ಷದ ವ್ಯಕ್ತಿಯೋರ್ವ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಖುಷಿಯಲ್ಲಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುತ್ತಿದ್ದ. ಆದರೆ ಆಕಸ್ಮಿಕವಾಗಿ ಒಂದು ಗುಂಡು ಆತನ ಜೊತೆಯಲ್ಲೇ ಸಂಭ್ರಮಿಸುತ್ತಿದ್ದ …

Read More »

ನೆಟ್‌ ಬ್ಯಾಂಕಿಂಗ್‌ 4 ಲಕ್ಷ ರೂ ವಂಚನೆ, ತನಿಖೆಯಲ್ಲಿ ಸೈಬರ್ ಕ್ರೈಂ ಪೊಲೀಸರ ನಿರ್ಲಕ್ಷ್ಯ..

ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಇಂಟರ್ ನೆಟ್‌ ಬ್ಯಾಂಕಿಂಗ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೆ ವೇಗವಾಗಿ ಸೈಬರ್ ಖದೀಮರ ಕಾಟವು ಹೆಚ್ಚುತ್ತಿದೆ. ಈ ಹಿಂದೆ ಬ್ಯಾಂಕ್‌ ಖಾತೆಗೆ ಕನ್ನ ಹಾಕುವವರ ಪ್ರಕರಣಗಳು ಸಾಕಷ್ಟು ನೋಡಿದ್ದೇವೆ. ಈಗ ಅಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿ ಗಿರೀಶ್ ಇವರ ಅಕೌಂಟ್ ನಲ್ಲಿದ್ದ ₹4 ಲಕ್ಷ ಹಣವನ್ನು ಹ್ಯಾಕರ್ಸ್ ಖಾಲಿ ಮಾಡಿದ್ದಾರೆ.ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿಯಾಗಿರುವ ಗಿರೀಶ್, ಸದ್ಯ …

Read More »

ಇಂದು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: ಬಿಎಸ್‌ವೈಗೆ ಸನ್ಮಾನ ಕಾರ್ಯಕ್ರಮ..

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಕೊನೆಯ ದಿನ. ಈ ಹಿನ್ನೆಲೆಯಲ್ಲಿ ಇಂದು ಮಾಜಿ‌ ಸಿಎಂ ಯಡಿಯೂರಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಯಡಿಯೂರಪ್ಪ ಅವರಿಗೆ ಸನ್ಮಾನಿಸಲಾಗುತ್ತದೆ. ಮೂರನೇ ದಿನವಾದ ಇಂದು ಸಮ್ಮೇಳನಾಧ್ಯಕ್ಷರ ಸಂವಾದ ಕಾರ್ಯಕ್ರಮ ಸೇರಿದಂತೆ ವಿವಿಧ ಗೋಷ್ಠಿ ಕಾರ್ಯಕ್ರಮಗಳು ನಡೆಯಲಿವೆ. ಸಾಯಂಕಾಲ ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ …

Read More »

ಇಂದು ವರ್ಷದ ಮೊದಲ ಸೂರ್ಯಗ್ರಹಣ; ಭಾರತಕ್ಕಿಲ್ಲ ಆತಂಕ

ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಮೊದಲ ಸೂರ್ಯಗ್ರಹಣ ಸಂಭವಿಸಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 5 ರಿಂದ 9:18 ರವರೆಗೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಲಿದ್ದು, ಇದನ್ನು ಭಾರತೀಯರು ನೋಡಲು ಸಾಧ್ಯವಿಲ್ಲ. ತಜ್ಞರು ಪ್ರಕಾರ ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸಲ್ಲ, ಹೀಗಾಗಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಭಾಗಶಃ ಸೌರ ಗ್ರಹಣವು ಈಶಾನ್ಯ ಏಷ್ಯಾದ ಸೈಬೀರಿಯಾ, ಮಂಗೋಲಿಯಾ, ಉತ್ತರ ಪೆಸಿಫಿಕ್, ಚೀನಾ, ಕೊರಿಯಾ, ಜಪಾನ್​ ರಾಷ್ಟ್ರಗಳಲ್ಲಿ ಗೋಚರಿಸಲಿದೆ ಅಂತ ಹೇಳಿದ್ದಾರೆ. ಸೂರ್ಯನ …

Read More »

ನರೇಂದ್ರ ಮೋದಿ ನೀತಿಗೆಟ್ಟ ಪ್ರಧಾನಿ’ ಏಕವಚನದಲ್ಲೇ ದಿನೇಶ್ ಗುಂಡೂರಾವ್ ವಾಗ್ದಾಳಿ..

ಬೆಂಗಳೂರು: ನರೇಂದ್ರ ಮೋದಿ ನೀತಿಗೆಟ್ಟ ಪ್ರಧಾನಿ. ಸುಳ್ಳಿನ ಸರದಾರ ಅಂದ್ರೆ ಪ್ರಧಾನಿ ಮೋದಿ. ಈ ಹಿಂದೆ ಕೊಟ್ಟಿರುವ ಯಾವುದೇ ಭರವಸೆಯನ್ನ ಈಡೇರಿಸಿಲ್ಲ. ಬರೀ ಸುಳ್ಳು ಹೇಳಿಕೊಂಡೇ ತಿರುಗಾಡುತ್ತಿದ್ದಾರೆ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ರೈತರ ಸಾಲಮನ್ನಾ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯ ವಿಚಾರವಾಗಿ ಮಾತನಾಡಿ ಅವರು, ನಮ್ಮ ರಾಜ್ಯದ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ. ಈಗಾಗಲೇ ಸಾಲಮನ್ನಾ ಬಗ್ಗೆ ಘೋಷಣೆ ಮಾಡಿದ್ದೇವೆ. ಕೆಲ …

Read More »

ಯಶ್​ ಮನೆಯಲ್ಲೇ ಐಟಿ ಅಧಿಕಾರಿಗಳಿಗೆ ಊಟದ ವ್ಯವಸ್ಥೆ

ಸ್ಯಾಂಡಲ್​ವುಡ್​​​ ಸ್ಟಾರ್​​​ಗಳ​​​ ಮನೆಯಲ್ಲಿ ಐಟಿ ಅಧಿಕಾರಿಗಳು ಸತತ ಎರಡನೇ ದಿನವೂ ಪರಿಶೀಲನೆ ಮುಂದುವರಿಸಿದ್ದಾರೆ. ಇಂದು ಸಹ ನಟ ಯಶ್​​ ಮನೆಯಲ್ಲಿ ಐಟಿ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು. ಬಳಿಕ ಯಶ್​​​ ಮನೆಯಿಂದ ವಿವಿಧ ದಾಖಲೆಗಳ ಮೂರು ಬ್ಯಾಗ್​​​ಗಳನ್ನು ಐಟಿ ಅಧಿಕಾರಿಗಳು ಹೊತ್ತೊಯ್ದಿದ್ದಾರೆ. ಇನ್ನು ಐಟಿ ಅಧಿಕಾರಿಗಳಿ ಯಶ್​​​ ಮನೆಯಲ್ಲೇ ಊಟದ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

Read More »