ಜಮಖಂಡಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಭಾರೀ ಅಂತರದಿಂದ ಜಯಗಳಿಸಿದ್ದಾರೆ. ಮೊದಲ ಹಂತದ ಮತ ಎಣಿಕೆಯಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಆನಂದ ನ್ಯಾಮಗೌಡ ಎಲ್ಲರ ನಿರೀಕ್ಷೆಯಂತೆ ಜಯಭೇರಿ ಬಾರಿಸಿದ್ದಾರೆ.ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಆನಂದ್ ನ್ಯಾಮಗೌಡ 96,968 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರು 57,492 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.ಈ ಮೂಲಕ ಕಳೆದ ಐದು …
Read More »ಉಪ ಚುನಾವಣೆ: ಎಲ್ಲಿ ಯಾರಿಗೆ ಮುನ್ನಡೆ…?
ಬೆಂಗಳೂರು: ಕರ್ನಾಟಕದಲ್ಲಿ ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಚುನಾವಣೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರೀ ಮುನ್ನಡೆ ಸಾಧಿಸಿದ್ದಾರೆ. ಆರನೇ ಸುತ್ತಿನ ಮತ ಎಣಿಕೆ ಬಳಿಕವೂ ಒಂದು ಲಕ್ಷ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜೆ.ಶಾಂತ ಹಿನ್ನಡೆ ಸಾಧಿಸಿದ್ದಾರೆ.ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಎರಡು ಲಕ್ಷ ಮತಗಳನ್ನು ಪಡೆದು ಮುನ್ನಡೆ …
Read More »ಭಾರತಕ್ಕೆ ಅಮೆರಿಕಾದಿಂದ ದೀಪಾವಳಿ ಗಿಫ್ಟ್…
ವಿಶ್ವದ ದೊಡ್ಡಣ್ಣ ಅಮೆರಿಕಾ, ಭಾರತಕ್ಕೆ ಗುಡ್ ನ್ಯೂಸ್ ನೀಡಿದೆ. ಇರಾನ್ನಿಂದ ತೈಲ ಆಮದು ಮಾಡಿಕೊಳ್ಳದಂತೆ ಹೇರಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಗೊಳಿಸಿದೆ. ಭಾರತವಲ್ಲದೆ, ನಿರ್ಬಂಧದಿಂದ ತೆರವುಗೊಳಿಸಿರುವ ಒಟ್ಟು 8 ರಾಷ್ಟ್ರಗಳ ಪಟ್ಟಿಯನ್ನು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪ್ಯಾಂಪೊ ಬಿಡುಗಡೆಗೊಳಿಸಿದ್ದಾರೆ. ಚೀನಾ, ಜಪಾನ್, ಇಟಲಿ, ಗ್ರೀಸ್, ಸೌಥ್ ಕೊರಿಯಾ, ಟರ್ಕಿ ಪಟ್ಟಿಯಲ್ಲಿ ಸೇರಿವೆ. ಈ ಕುರಿತು ಮಾತನಾಡಿರುವ ಪ್ಯಾಂಟೊ, ಇರಾನ್ ಆಡಳಿತದ ನಡವಳಿಕೆಯನ್ನು ಬದಲಿಸುವ ಉದ್ದೇಶದಿಂದ ಯುಎಸ್ ಈ ರೀತಿಯ ಕಠಿಣವಾದ …
Read More »ಫಲಿತಾಂಶಕ್ಕೂ ಮುನ್ನವೇ ಸಿದ್ಧವಾಯ್ತು ಜಯಭೇರಿ ಬ್ಯಾನರ್!
ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಗೆಲುವು ಖಚಿತವಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಜಯಭೇರಿ ಬ್ಯಾನರ್ ಸಿದ್ಧವಾಗಿಸಿಕೊಂಡಿದ್ದಾರೆ.ಮೊದಲನೇ ಸುತ್ತಿನಿಂದಲೂ ಮುನ್ನಡೆ ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಲ್ಕನೇ ಸುತ್ತಿನ ಮತಎಣಿಕೆಯಲ್ಲಿ 20 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಗೆಲುವು ಬಹುತೇಕ ಖಚಿತವಾಗಿದೆ.ಅನಿತಾ ಕುಮಾರಸ್ವಾಮಿ ಅವರಿಗೆ ಪ್ರಮುಖ ಸ್ಪರ್ಧಿಯಾಗಿದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್.ಚಂದ್ರಶೇಖರ್ ಅವರು, ಮತದಾನ ಇನ್ನೇನು ಎರಡೇ ದಿನಗಳಿರುವಾಗ ಚುನಾವಣಾ ಕಣದಿಂದ …
Read More »ಶೆಟ್ರೇ.. ಇಂದಿರಾ ಕ್ಯಾಂಟೀನ್ ಶುರು ಮಾಡೋಕೆ ನಿಮ್ಗೇನ್ ಧಾಡಿ- ಕೈ ಕಾರ್ಯಕರ್ತರ ಆಕ್ರೋಶದ ನುಡಿ
ಹುಬ್ಬಳ್ಳಿ..ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ.ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ.ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟಿನ್.ವಿಧಾನ ಸಭಾ ಚುನಾವಣೆಯ ಪೂರ್ವದಲ್ಲೇ ನಿರ್ಮಾಣಗೊಂಡಿರುವ ಕ್ಯಾಂಟಿನ್.ಚುನಾವಣಾ ನೀತಿ ಸಂಹಿತಿ ಹಿನ್ನಲೆಯಲ್ಲಿ ಕ್ಯಾಂಟಿನ್ ಕಾರ್ಯ ಆರಂಭಿಸಿರಲಿಲ್ಲ.ಚುನಾವಣೆ ಮುಗಿದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದರೂ ಇನ್ನೂ ಆರಂಭವಾದ ಹಿನ್ನಲೆ..ಸಾರ್ವಜನಿಕರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಸಮಾಧಾನ.ಶೀಘ್ರವೇ ಇಂಧಿರಾ ಕ್ಯಾಂಟಿನ್ ಆರಂಭಿಸುವಂತೆ ಪ್ರತಿಭಟನೆ.ನೂರಾರು ಸಂಖ್ಯೆಯಲ್ಲಿ ಕ್ಯಾಂಟಿನ್ ಮುಂದೆ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು.ಗೋಕುಲ …
Read More »ನಾಲ್ಕು ರೈಲ್ವೆ ನೌಕರರ ಮೇಲೆ ಹರಿದ ಎಕ್ಸ್ಪ್ರೆಸ್ ಟ್ರೈನ್ ದುರ್ಮರಣ
ಸಂಡೀಲಾ(ಹಾರ್ದೋಯ್): ಕಾರ್ಯನಿರತ ರೈಲ್ವೆ ನೌಕರರ ಮೇಲೆ ರೈಲು ಹರಿದು ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಾರ್ದೋಯ್ನಲ್ಲಿ ನಡೆದಿದೆ. ಸಂಡೀಲಾ ಮತ್ತು ಉಮರ್ಥಲಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.ನಾಲ್ಕು ಗ್ಯಾಂಗ್ಮನ್ಗಳ ದುರ್ಮರಣಇಂದು ಬೆಳಗ್ಗೆ ಸುಮಾರು 11:55 ಸುಮಾರಿಗೆ ಚಲಿಸುತ್ತಿದ್ದ ಕೋಲ್ಕತಾ-ಅಮೃತಸರ ಅಕಾಲ್ ತಖ್ತ್ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.
Read More »ಕುಮಾರಸ್ವಾಮಿಯವ್ರೇ, ಟಿಪ್ಪು ಜಯಂತಿ ಆಚರಿಸಿ ಸಿದ್ದರಾಮಯ್ಯ ಅಧಿಕಾರ ಕಳೆದ್ಕೊಂಡರು’
ಮೈಸೂರು: ಟಿಪ್ಪು ಜಯಂತಿಯನ್ನ ಆಚರಣೆ ಮಾಡದಿರಲು ಈ ಹಿಂದೆ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೆ. ಆದ್ರೆ ಅವರು ಟಿಪ್ಪು ಜಯಂತಿಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಆಚರಣೆ ಮಾಡಿ ಅಧಿಕಾರ ಕಳೆದುಕೊಂಡರು. ಈಗಲೂ ಕಾಲ ಮಿಂಚಿಲ್ಲ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಎಚ್ಚೆತ್ತುಕೊಂಡು ಆಚರಣೆ ನಿಲ್ಲಿಸುತ್ತಾರೆ ಅಂತ ಅಂದ್ಕೊಂಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ನನ್ನ …
Read More »ಯಡಿಯೂರಪ್ಪಗೆ ಮನಸುಗಳನ್ನು ಕಟ್ಟಲು ಆಗೋಲ್ಲ’ ರಾಜ್ಯ ಬಿಜೆಪಿ ಉಪಾಧ್ಯಕ್ಷ
ಶಿವಮೊಗ್ಗ: ಯಡಿಯೂರಪ್ಪ ಅವರು ಸರ್ಕಾರ ಉಳಿಸಬಹುದು ಹಾಗೆಯೇ ಕೆಡವಬಹುದು. ಆದ್ರೆ, ಮನಸುಗಳನ್ನು ಕಟ್ಟಲು ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹೇಳಿದ್ದಾರೆ.ಶಿವಮೊಗ್ಗ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹಾಗೂ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಂ.ಬಿ. ಭಾನುಪ್ರಕಾಶ್, ನಾನು ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಇಂದಿಗೂ ಒಪ್ಪಿಕೊಂಡಿಲ್ಲ. ಇದ್ದಕ್ಕಿದ್ದಂತೆ ಒಂದೂವರೆ …
Read More »ಸಾಲ ರೈತರಿಗೆ ಬ್ಯಾಂಕಿನಿಂದ ಅರೆಸ್ಟ್ ವಾರೆಂಟ್; ಪ್ರತಿಭಟನೆ
ಬೆಳಗಾವಿಯ ಸವದತ್ತಿ ರೈತರಿಗೆ ಕೋಲ್ಕತ್ತಾ ಕೋರ್ಟ್ ವಾರೆಂಟ್ ಜಾರಿಗೊಳಿಸಿದ್ದು, ಫೆ.18, 2019 ರ ವೇಳೆಗೆ ಕೋರ್ಟ್ ಎದುರು ಹಾಜರುಪಡಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದೆ.ಬೆಳಗಾವಿ: ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸದ ರೈತರಿಗೆ ಆಕ್ಸಿಸ್ ಬ್ಯಾಂಕ್ ಕೋರ್ಟ್ ಮೂಲಕ ಅರೆಸ್ಟ್ ವಾರೆಂಟ್ ಜಾರಿಮಾಡಿರುವುದನ್ನು ವಿರೋಧಿಸಿ ಬೈಲಹೊಂಗಲದ ಆಕ್ಸಿಸ್ ಬ್ಯಾಂಕ್ ಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು.ಈಗಾಗಲೇ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದರೂ, ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ …
Read More »ಕೇವಲ 59 ನಿಮಿಷಗಳಲ್ಲಿ 1 ಕೋಟಿ ರೂ. ನಿಮ್ಮದಾಗಿಸಿಕೊಳ್ಳಬೇಕಾ? ಇಲ್ಲಿದೆ ಹೊಸ ಮಾರ್ಗ…
ನವದೆಹಲಿ: ಯಾವುದಾದರೂ ಬಿಸಿನೆಸ್ ಮಾಡ್ಬೇಕು, ಆದ್ರೆ ಸಾಲ ಪಡೆಯಲು ಬ್ಯಾಂಕ್ ಗಳಿಗೆ ಅಲೆದು, ಅಲೆದು ಸಾಕಾಗಿದೆಯೇ? ಆದರೆ ಅದಕ್ಕೆಲ್ಲ ಕೇಂದ್ರ ಸರ್ಕಾರ ಪೂರ್ಣ ವಿರಾಮ ಹಾಕಲು ಮುಂದಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ.ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು 12 ನೀತಿಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ, ಇದರಲ್ಲಿ 59 ನಿಮಿಷಗಳಲ್ಲಿ 1 ಕೋಟಿ ರೂಪಾಯಿ ತನಕ ಸಾಲ ನೀಡುವ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





