ಕಲಬುರ್ಗಿ: ಸಚಿವ ಡಿ.ಕೆ.ಶಿವಕುಮಾರ್ಗೆ ಅವನತಿ ಕಾಲ ಬಂದಿದೆ. ಡಿ.ಕೆ ಶಿವಕುಮಾರ್ಗೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸಚಿವ ಡಿಕೆ ಶಿವಕುಮಾರ್ ನಿನ್ನೆ ಕ್ಷಮೆಯಾಚಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯಲ್ಲಿ ಮಾತನಾಡಿರುವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಚಿವ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದಲ್ಲಿ ಎಷ್ಟು ಕಾಂಗ್ರೆಸ್ಗೆ ವೋಟ್ ತಂದಿದ್ದಾರೆ ಎಂಬುದನ್ನ ತಿಳಿದುಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ 60 …
Read More »ಕಳೆದ ಒಂದೇ ವರ್ಷದಲ್ಲಿ ಭಾರತದಲ್ಲಿ 7,300ಕ್ಕೂ ಹೊಸ.. ಕೋಟ್ಯಧೀಶರ ಸೃಷ್ಟಿ..
ನವದೆಹಲಿ: ದೇಶದಲ್ಲಿ ಅರ್ಥಿಕ ಅಸಮಾನತೆ ಇದೆ ಅನ್ನೋ ಕೂಗಿನ ಮಧ್ಯೆಯೂ ಒಂದೇ ವರ್ಷದಲ್ಲಿ ಬರೋಬ್ಬರಿ 7300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ ಅಂತಾ ಇನ್ವೆಸ್ಟ್ಮೆಂಟ್ ಬ್ಯಾಕಿಂಗ್ ಕಂಪೆನಿ Credit Suisse ವರದಿ ಮಾಡಿದೆ. ವರದಿ ಪ್ರಕಾರ, 12 ತಿಂಗಳ ಅವಧಿಯಲ್ಲಿ ಒಟ್ಟು 7,300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಈ ಮೂಲಕ ದೇಶದಲ್ಲಿ 3.43 ಲಕ್ಷ ಮಂದಿ ಕೋಟ್ಯಾಧಿಪತಿಗಳು ಇದ್ದು, ಅವರ ಒಟ್ಟ ಮೌಲ್ಯ 6 ಟ್ರಿಲಿಯನ್ ಅಮೆರಿಕನ್ ಡಾಲರ್ (₹ 44,18,70,00,00,00,000.06) …
Read More »ಅಮೆರಿಕಾದಲ್ಲಿರುವ ಭಾರತೀಯರಿಗೆ ಮತ್ತೆ ಹೆಚ್1ಬಿ ಸಂಕಷ್ಟ.?
ನವದೆಹಲಿ: ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಅಲ್ಲಿರುವ ಭಾರತೀಯ ನಿವಾಸಿಗಳಿಗೆ ಢವಢವ ಶುರುವಾಗಿದೆ. ಇದಕ್ಕೆ ಕಾರಣ ಟ್ರಂಪ್ ಸರ್ಕಾರ, ಹೆಚ್1ಬಿ ವೀಸಾ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿರೋದು. ಇಷ್ಟು ದಿನಗಳ ಕಾಲ ವೀಸಾ ನಿಯಮದಲ್ಲಿ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ರೂ, ಹೆಚ್ಚಿನ ಬದಲಾವಣೆ ಆಗಿರಲಿಲ್ಲ.ಆದ್ರೀಗ ಹೆಚ್1ಬಿ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕೆಲಸ ಶುರು ಮಾಡಿದೆ. ಹೀಗಾಗಿ ನಾವು ಕೂಡ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ …
Read More »ಖಾಸಗಿ ಶಾಲೆಯ ಮುಖ್ಯಸ್ಥನಿಗೆ ಬಂತು ಬಾಂಬ್ ಗಿಫ್ಟ್
ಗುಜರಾತ್: ರಾಜ್ಕೋಟ್ ಜಿಲ್ಲೆಯಲ್ಲಿರುವ ಖಾಸಗಿ ಶಾಲೆಯ ಮುಖ್ಯಸ್ಥನೊಬ್ಬನಿಗೆ ಅನಾಮಧೇಯ ವಿಳಾಸದಿಂದ ಗಿಫ್ಟ್ ಬಾಕ್ಸೊಂದು ಬಂದಿತ್ತು. ಅದನ್ನು ತೆರೆದಾಗ ಆ ವ್ಯಕ್ತಿ ಬೆಚ್ಚಿ ಬಿದ್ದಿದ್ದರು.ಅಷ್ಟಕ್ಕೂ ಆ ಬಾಕ್ಸ್ನಲ್ಲಿ ಗಿಫ್ಟ್ ಆಗಿ ಬಂದಿದ್ದು ಬಾಂಬ್..! ಶ್ರೀಕೃಷ್ಣಾ ಶಾಲೆಯ ಮುಖ್ಯಸ್ಥ ವಿಠಲ್ ದೊಬಾರಿಯಾ ಅವರಿಗೆ ಜಿಲೆಟಿನ್ ಕಡ್ಡಿಗಳಿಂದ ತಯಾರಿಸಲಾಗಿದ್ದ ಬಾಂಬ್ ಬಂದಿತ್ತು. ಇದನ್ನು ಕಂಡು ಶಾಕ್ ಆದ ವಿಠಲ್ ದೊಬಾರಿಯಾ, ತಕ್ಷಣವೇ ಬಾಂಬ್ ನಿಷ್ಕ್ರಿಯ ದಳಕ್ಕೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು …
Read More »50 ಕೋಟಿ ಮೊಬೈಲ್ ನಂಬರ್ ಬಂದ್ ಆಗುವ ಸಾಧ್ಯತೆ, JIO ಗ್ರಾಹಕರಿಗೆ ಹೆಚ್ಚಿನ ಅಪಾಯ
ನವ ದೆಹಲಿ: ದೇಶಾದ್ಯಂತ 50 ಕೋಟಿ ಮೊಬೈಲ್ ನಂಬರ್ ಬಂದ್ ಆಗುವ ಸಾಧ್ಯತೆಯಿದೆ. ಸಿಮ್ ಸಂಪರ್ಕವನ್ನು ತೆಗೆದುಕೊಳ್ಳುವಾಗ ಆಧಾರ್ ಕಾರ್ಡ್ ಹೊರತುಪಡಿಸಿ ಬೇರೆ ಯಾವುದಾದರೂ ಗುರುತಿನ ಕಾರ್ಡ್ ಅನ್ನು ನೀಡದ ಮೊಬೈಲ್ ಗ್ರಾಹಕರು ಈ ಅಪಾಯವನ್ನು ಎದುರಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ, ಆಧಾರ್ ಕಾರ್ಡ್ ನೀಡುವ ಮೂಲಕ ಮೊಬೈಲ್ ಸಂಪರ್ಕಗಳನ್ನು ತೆಗೆದುಕೊಳ್ಳುವವರು ಮಾತ್ರ ಹೊಸ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಆಧಾರ್ ಪರಿಶೀಲನೆ ಮೂಲಕ ತೆಗೆದುಕೊಂಡ ಈ ಸಿಮ್ ಕಾರ್ಡುಗಳು ಯಾವುದೇ ಇತರ …
Read More »ಶಬರಿಮಲೆ ಪ್ರವೇಶ ವಿವಾದ: ಇಂದು ಕೇರಳ ಬಂದ್, ಹಲವೆಡೆ ನಿಷೇಧಾಜ್ಞೆ ಜಾರಿ
ನಿಳಕ್ಕಲ್, ಪಂಪಾ ನದಿ ತೀರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, ನಿನ್ನೆಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ. ನಿಳಕ್ಕಲ್: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿಸಿದ ನಂತರ ಇದೇ ಮೊದಲ ಬಾರಿಗೆ ವಾರ್ಷಿಕ ಪೂಜಾ ಕೈಂಕರ್ಯಗಳಿಗಾಗಿ ಬುದವಾರ ಅಯ್ಯಪ್ಪನ ದೇಗುಲದ ದ್ವಾರ ತೆರೆದಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶ ಅವಕಾಶದ ವಿರುದ್ಧ ಕೇರಳದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಹಲವಾರು ಹಿಂದೂ ಸಂಘಟನೆಗಳು ಇಂದು ಕೇರಳ …
Read More »ಸಚಿವ ಅಕ್ಬರ್ ವಿರುದ್ಧ ಸಿಡಿದೆದ್ದ 17..
ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು #MeToo ಅಭಿಯಾನದ ಮೂಲಕ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರೋದು ಗೊತ್ತೇ ಇದೆ.ಪ್ರಿಯಾ ರಮಣಿ ಆರೋಪದ ಬೆನ್ನಲ್ಲೇ ಹಲವು ಮಹಿಳೆಯರು ಸಹ ಸಚಿವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಆರೋಪಕ್ಕೆ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದ ಸಚಿವ ಅಕ್ಬರ್, ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಾನು ಪ್ರಕರಣವನ್ನು ಎದುರಿಸಲು …
Read More »ಬಿಎಸ್ಪಿ ಮುಖಂಡನ ಪುತ್ರ ತಪ್ಪಿಸಿಕೊಳ್ಳೋ ಚಾನ್ಸ್: ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ.
ನವದೆಹಲಿ: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ಮಧ್ಯೆ ನಡೆದ ಗಲಾಟೆಗೆ ಸಂಬಂಧಿಸಿ ಯುವತಿಯೊಬ್ಬಳಿಗೆ ಗನ್ ತೋರಿಸಿ ಬೆದರಿಕೆ ಒಡ್ಡಿದ ಬಿಎಸ್ಪಿಯ ಮಾಜಿ ಸಂಸದರ ಪುತ್ರನ ಹುಡುಕಾಟದಲ್ಲಿ ತೊಡಗಿರುವ ಪೊಲೀಸರು ಲಖನೌದಲ್ಲಿ ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆ ಎಲ್ಲಾ ವಿಮಾನ ನಿಲ್ದಾಣಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ.ಕಳೆದ ಭಾನುವಾರ ದೆಹಲಿಯ ಪಂಚತಾರಾ ಹೋಟೆಲ್ನಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಾಗದ ಹಿನ್ನೆಲೆ ಕೃತ್ಯದ ಕುರಿತು ನಿರ್ಲಕ್ಷ್ಯ …
Read More »_ಬಂಗಾಳಿ ಆಹಾರ ಸವಿಯೋದಕ್ಕೆ ಅದ್ಭುತ ಅವಕಾಶ- ಅಕ್ಟೋಬರ್ ೧೯-೨೮ರವರೆಗೆ ಫುಡ್ ಫೆಸ್ಟಿವಲ್
ಹುಬ್ಬಳ್ಳಿ ಮಹಾನಗರ ಜನತೆಯ ಸೇವೆಗೆ ಸಮರ್ಪಣೆಗೊಂಡಿರುವ ಕ್ಲಾರ್ಕ್ಸ್ ಇನ್ ಹೋಟೆಲನಲ್ಲಿ ಹೊಸ ಅಭಿರುಚಿಯ ಖಾದ್ಯ ಪದಾರ್ಥಗಳನ್ನು ಸವಿಯಲು ಇದೇ 19 ರಿಂದ 28ರ ವರೆಗೆ ಬಂಗಾಳಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಟೇಲ್ ವ್ಯವಸ್ಥಾಪಕ ಆರ್.ಕೆ.ಮಹಾರಾಣಾ ತಿಳಿಸಿದರು.ನಗರದಲ್ಲಿಂದು ಕ್ಲಾರ್ಕ್ಸ್ ಇನ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಭಾರಿ ಹಮ್ಮಿಕೊಳ್ಳಲಾಗಿರುವ ಬಂಗಾಳಿ ಆಹಾರ ಮೇಳದಲ್ಲಿ ಸೂಪ, ತರಕಾರಿ ಸಲಾಡ್ಸ್, ಉಪ್ಪು, ಖಾರಾ, ಹುಳಿಯ ಚಾರ್ಟ್ಸ್, ಮೇದಿನಾ ಪುರೇನಾ, ಚಿಂಗಡಿ …
Read More »ಕಡಿಮೆಯಾಗುತ್ತಾ ಪೆಟ್ರೋಲ್ ದರ? ಪೆಟ್ರೋಲ್ ಬೆಲೆ 4 ರೂ. ಇಳಿಸಲು ಮೋದಿ ಸರ್ಕಾರದ ಚಿಂತನೆ
ನವದೆಹಲಿ: ತೈಲ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ 2.50 ರೂ. ಇಳಿಕೆ ಮಾಡಿತ್ತು. ಆದರೆ, ಮತ್ತೆ ವೇಗವಾಗಿ ಏರಿಕೆಯಾದ ತೈಲ ಬೆಲೆಯಿಂದಾಗಿ ದೇಶದ ಜನರಿಗೆ ಯಾವುದೇ ಪರಿಹಾರ ಸಿಗಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪೆಟ್ರೋಲ್ ದರವನ್ನು ಲೀಟರ್ಗೆ 3 ರಿಂದ 4 ರೂಪಾಯಿಗೆ ಇಳಿಸಲು ಚಿಂತನೆ ನಡೆಸಿದೆ. ವಾಸ್ತವವಾಗಿ ಸರ್ಕಾರದ ಯೋಜನೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





