Breaking News

Shaikh BIG TV NEWS, Hubballi

ಎಸ್‌ಸಿಪಿ/ಟಿಎಸ್‌ಪಿ ಅಡಿ 29 ಸಾವಿರ ಕೋಟಿ ರೂ. ಅನುದಾನ; ಸಿಎಂ ಕುಮಾರಸ್ವಾಮಿ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ  ಕಾರ್ಯಗಳಿಗೆ ಈ ಸಾಲಿಗೆ ನಿಗದಿಯಾಗಿರುವ 29 ಸಾವಿರ  ಕೋಟಿ ರೂ.ಗಳ ಅನುದಾನವನ್ನು  ಇದೇ ವರ್ಷದಲ್ಲಿ ಸಂಪೂರ್ಣವಾಗಿ ಖರ್ಚು ಮಾಡಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಯೋಜನೆಗಳ ಅನುಷ್ಠಾನಗೊಳ್ಳದಿದ್ದರೆ  ಆಯಾ ಇಲಾಖಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಲಾಗುವುದು. ಹಾಗಾಗಿ ಅಧಿಕಾರಿಗಳು ಶಿಕ್ಷೆಗೆ ಒಳಪಡದೆ, ಯೋಜನೆಗಳ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.  ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ …

Read More »

ಏಳನೇ ವೇತನ ಆಯೋಗ: ಈ ನೌಕರರಿಗೆ ಕಡಿತವಾಗಲಿದೆ ವೇತನ.

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು 18 ಸಾವಿರ ರೂ.ಗಳಿಂದ 26 ಸಾವಿರ ರೂ.ಗಳಿಗೆ ಏರಿಕೆ ಮಾಡಬೇಕು ಎಂಬ ಬೇಡಿಕೆಯ ನಡುವೆಯೇ ಈ ರಾಜ್ಯದ ಶಿಕ್ಷಕರಿಗೆ ಬೇಸರದ ಸಂಗತಿ ಕಾದಿದೆ. ಒಡಿಶಾದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ಶಿಕ್ಷಕರಿಗೆ ರಾಜ್ಯ ಸರಕಾರ ಒಂದು ನಿಯಮ ಜಾರಿ ಮಾಡುವ ಸಾಧ್ಯತೆ ಇದೆ.  ಕೆಲಸದಲ್ಲಿ ಪಾಲ್ಗೊಳ್ಳದೆ ಧರಣಿ, ಪ್ರತಿಭಟನೆಗಳಲ್ಲಿ ನಿರತರಾಗುವ ಶಿಕ್ಷಕರಿಗೆ ‘ನೋ ಪೇ …

Read More »

ರೈಲ್ವೆ ಇಲಾಖೆಯ 10 ದೊಡ್ಡ ಬದಲಾವಣೆ, ನೀವೂ ರೈಲ್ವೆ ಪ್ರಯಾಣಿಕರಾಗಿದ್ದಲ್ಲಿ ಇದು ನಿಮಗೆ ತಿಳಿದಿರಲಿ.

ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರೈಲ್ವೆ ಸಮಯದ ವಿಷಯದಲ್ಲಿ ಪ್ರಮುಖ ಬದಲಾವಣೆಯನ್ನು ತಂದಿದೆ. ರೈಲ್ವೆಗಳು ಕಳೆದ ಎರಡು ವರ್ಷಗಳಲ್ಲಿ ಹಲವು ಹೊಸ ಸುಧಾರಣೆಗಳನ್ನು ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇಸ್ 10 ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪ್ರಯಾಣಿಕರಿಂದ ನಿರಂತರವಾಗಿ ಸ್ವೀಕರಿಸುತ್ತಿದ್ದ ದೂರಿನ ಮೇರೆಗೆ ರೈಲ್ವೆ ಇಲಾಖೆ ಈ ಬದಲಾವಣೆಗಳನ್ನು ತಂದಿದೆ. ನೀವು ರೈಲ್ವೇ ಸೇವೆಯನ್ನು ಬಳಸುತ್ತಿದ್ದರೆ ಅಥವಾ ಪ್ರಯಾಣದ ಸಮಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿದ್ದರೆ, ಈ ಬದಲಾವಣೆಗಳ ಬಗ್ಗೆ ನೀವು …

Read More »

ಆಸ್ಪತ್ರೆಯಿಂದ ಸ್ಟಾರ್ ದರ್ಶನ್ ಡಿಸ್ಚಾರ್ಜ್

ಮೈಸೂರು: ಇತ್ತೀಚೆಗೆ ಕಾರು ಅಪಘಾತದಿಂದಾಗಿ ಗಾಯಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಆರೋಗ್ಯವಾಗಿದ್ದೇನೆ. ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಡಾಕ್ಟರ್ ತಿಳಿಸಿದ್ದಾರೆ. ಒಂದು ವರ್ಷ ವಿಶ್ರಾಂತಿಯಲ್ಲಿರುವ ಅಗತ್ಯವಿಲ್ಲ, ಕೆಲ ದಿನಗಳ ನಂತರ ಎಂದಿನಂತೆ ನಿತ್ಯ ಚಟುವಟಿಕೆಗಳಲ್ಲಿ ತೊಡಗಬಹುದು. ಉಳಿದಂತೆ ಇನ್ಯಾವುದೇ ಸಮಸ್ಯೆಯಿಲ್ಲ ಎಂದರು.  ಇದೇ ಸಂದರ್ಭದಲ್ಲಿ ಕಾರಿನಲ್ಲಿ ಎಷ್ಟು ಮಂದಿ ಇದ್ದರು …

Read More »

ಮಂಡ್ಯ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಶೀರಚ್ಚೆದ.

ಬೆಂಗಳೂರು: ವ್ಯಕ್ತಿಗಳಿಬ್ಬರ ನಡುವಿನ ಜಗಳ  ಹಿಂಸಸೆ ತಿರುಗಿ ಕೊನೆಗೆ ಶಿರಚ್ಛೇದನ ಮಾಡಿರುವ ಘಟನೆ  ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಆ ಮೂಲಕ ಈ ತಿಂಗಳಿನಲ್ಲಿ ಮೂರನೇ ಶಿರಚ್ಛೇದನದ ಘಟನೆಯಾಗಿದೆ. ಶನಿವಾರದಂದು ಪಶುಪತಿ ಎನ್ನುವ ವ್ಯಕ್ತಿಯು (24) ಗಿರೀಶ್ (28) ಎನ್ನುವವನ ಶೀರಚ್ಚೆದ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ತನ್ನ ತಾಯಿ ವಿರುದ್ದ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಈ ವ್ಯಕ್ತಿ ರೊಚ್ಚಿಗೆದ್ದು ಈ ಕ್ರಮಕ್ಕೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಕ್ಷುಲ್ಲಕ ಕಾರಣಕ್ಕಾಗಿ ಪಶುಪತಿ ಎನ್ನುವ ವ್ಯಕ್ತಿ …

Read More »

ರಫೇಲ್ ವಿವಾದ: ಪ್ರತಿಭಟನೆ

ನವದೆಹಲಿ: ರಫೇಲ್ ಯುದ್ದ ವಿಮಾನ ಖರೀಧಿ ಹಗರಣದ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಉತ್ತರಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ನಿರ್ಮಲಾ ಸೀತಾರಾಮನ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಕರ್ನಾಟಕದ ಯೂತ್ ಕಾಂಗ್ರೆಸ್ ಮೂಲಕ ನಡೆದ ಪ್ರತಿಭಟನೆಯಲ್ಲಿ ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದವನ್ನು ಬಹಿರಂಗ ಪಡಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.  ಪ್ರತಿಭಟನೆಯಲ್ಲಿ  ಯೂತ್ ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ  ಶ್ರೀನಿವಾಸ್ ಭಾಗವಹಿಸಿ ಮಾತಾನಾಡುತ್ತಾ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ’.ರಾಜ್ಯಸಭೆಗೆ …

Read More »

ಈ ಬಾಲಿವುಡ್ ನಟಿಗೆ ಬಟ್ಟೆ ಕಳಚಿ ಡ್ಯಾನ್ಸ್ ಮಾಡೆಂದ ನಿರ್ದೇಶಕ ಯಾರು ಗೊತ್ತಾ?

ನವದೆಹಲಿ: ನಾನಾ  ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವ ತನುಶ್ರೀ ದತ್ತಾ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈಗ, ಪ್ರಮುಖ ದೈನಿಕವೊಂದಕ್ಕೆ ಸಂದರ್ಶನವೊಂದರಲ್ಲಿ ತನುಶ್ರೀ ಚಿತ್ರದ ಸಮಯದಲ್ಲಿ ಚಾಕೊಲೇಟ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ನಾನು ನನ್ನ ವೇಷದ ಜೊತೆಗೆ ಒಂದು ಟವಲ್ ಧರಿಸಿ ಕ್ಯಾಮರಾ ಹಿಂಬಾಲಿಸುತ್ತಿದ್ದೆ, ಈ ವ್ಯಕ್ತಿ (ವಿವೇಕ್ ಅಗ್ನಿಹೋತ್ರಿ) ನಟ (ಇರ್ಫಾನ್) ಗೆ ಸೂಚನೆಗಳನ್ನು ನೀಡಲು ಬಯಸಿದ್ದರು.ಇದು …

Read More »

ಈ ಶೂ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ…

ಈ ಶೂಗಳ ಬೆಲೆ ಬರೋಬ್ಬರಿ ₹123 ಕೋಟಿ. ದುಬೈನ ಬುರ್ಜ್​ ಅಲ್​ ಅರಬ್​ ಹೋಟೆಲ್​ನಲ್ಲಿ ಈ ಶೂಗಳನ್ನು ಮಾರಾಟ ಮಾಡಲಾಗಿದೆ. ಯಾಕಪ್ಪ ಈ ಶೂ ಗಳ ಬೆಲೆ ಇಷ್ಟೊಂದು ಅಂತಾ ಯೋಚ್ನೆ ಮಾಡ್ತಾ ಇದೀರಾ.. ಈ ಶೂಗಳನ್ನು ಬಂಗಾರ ಹಾಗೂ ಡೈ ಮಂಡ್​ಗಳಿಂದ ಮಾಡಲಾಗಿದೆ. ಈ ಶೂಗಳನ್ನು ವಿನ್ಯಾಸ ಮಾಡಲು ಬರೋಬ್ಬರಿ 9 ತಿಂಗಳು ಬೇಕಾಗಿದೆ. 15 ಕ್ಯಾರೆಟ್​ನ ಚಿನ್ನ, ಬರೋಬ್ಬರಿ 236 ಡೈಮಂಡ್​ಗಳೊಂದಿಗೆ ಈ ಶೂ ಡಿಸೈನ್​ ಮಾಡಲಾಗಿದೆ. …

Read More »

ಇ-ಫಾರ್ಮಸಿಗೆ ವಿರೋಧ; ಇಂದು ದೇಶಾದ್ಯಂತ ಮೆಡಿಕಲ್​ ಶಾಪ್​ಗಳು ಬಂದ್.

ಬೆಂಗಳೂರು:  ಇ-ಫಾರ್ಮಸಿಗೆ ಅನುಮತಿ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಮೆಡಿಕಲ್ ಶಾಪ್​ ಸಂಘಟನೆಗಳು ಇಂದು ದೇಶಾದ್ಯಂತ ಬಂದ್​ಗೆ ಕರೆ ನೀಡಿದ್ದಾರೆ.   ಇನ್ನು ಮೆಡಿಕಲ್ ಶಾಪ್​ಗಳಲ್ಲೇ ಬಂದ್​ ಬಗ್ಗೆ ಭಿನ್ನಾಭಿಪಾಯ್ರವಿದ್ದು ಕೆಲ ಅಸೋಸಿಯೇಶನ್​ಗಳು ಬಂದ್​ನಿಂದ ಹಿಂದೆ ಸರಿದಿದೆ. ಒಂದೆಡೆ ಅಖಿಲ ಭಾರತ ಔಷಧಿ ಮಾರಾಟ ವ್ಯಾಪಾರಿಗಳ ಸಂಘ(ಎಐಒಸಿಡಿ) ಬಂದ್​ಗೆ ಬೆಂಬಲ ಕೊಟ್ರೆ, ಇತ್ತ ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಬಂದ್​ಗೆ ವಿರೋಧ ವ್ಯಕ್ತಪಡಿಸಿದೆ. ಸರ್ಕಾರಕ್ಕೆ ಕಾಲಾವಕಾಶವೇ …

Read More »

ದಸರಾ ರಜೆಯಲ್ಲಿ ಕಡಿತವಿಲ್ಲ: ಸಚಿವ ಯು.ಟಿ. ಖಾದರ್‌..

ಮಂಗಳೂರು: ರಾಜ್ಯದ ಇತರೆಡೆಗಳಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಕ್ಟೋಬರ್ 7 ರಿಂದ 21ರವರೆಗೆ ದಸರಾ ರಜೆ ಇರಲಿದೆ ಎಂದು ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಸಚಿವ ಯು.ಟಿ. ಖಾದರ್‌, ರಜೆ ಕಡಿತ ಮಾಡಿ ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗುವುದು. ದಸರಾ ರಜೆಗಾಗಿ ಹಲವರು ಪ್ರವಾಸ, ಕೌಟುಂಬಿಕ ಕಾರ್ಯಕ್ರಮಗಳನ್ನು ನಿಗದಿ ಮಾಡಿರುತ್ತಾರೆ. ಕಡಿತಗೊಳಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಎಂದಿನಂತೆಯೇ ದಸರಾ ರಜೆ ನೀಡಲಾಗುವುದು ಎಂದರು. ಇನ್ನು …

Read More »