Breaking News

Shaikh BIG TV NEWS, Hubballi

ವರನಟ ಡಾ.ರಾಜ್ ಕುಮಾರ್ ಅಪಹರಣ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

ಈರೋಡು: ವರನಟ ಡಾ.ರಾಜ್‌ ಕುಮಾರ್‌ ಅವರ ಅಪಹರಣ ಪ್ರಕರಣದಲ್ಲಿ ಎಲ್ಲಾ 9 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಈರೋಡ್‌ನ‌  ಜಿಲ್ಲಾ ಕೋರ್ಟ್‌ ಮಂಗಳವಾರ ತೀರ್ಪು ಪ್ರಕಟಿಸಿದೆ. ಜುಲೈ 30, 2000 ದಲ್ಲಿ , ಕುಖ್ಯಾತ ದಂತಚೋರ, ನರಹಂತಕ, ಕಾಡುಗಳ್ಳ ವೀರಪ್ಪನ್‌  ಡಾ.ರಾಜ್ ಅವರನ್ನು  ಗಾಜನೂರಿನಲ್ಲಿನ  ತೋಟದ ಮನೆಯಿಂದ ಅಪಹರಿಸಿದ್ದ. ಡಾ.ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾಗಿದ್ದರು.  108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.  …

Read More »

ಜವಾಹರಲಾಲ್ ನೆಹರು ಸ್ಮಾರಕ ನಿಧಿಗೆ ಕೇಂದ್ರದ ನೋಟೀಸ್.

ನವದೆಹಲಿ: ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ತೀನ್ ಮೂರ್ತಿ ಭವನ್ ಆವರಣದಿಂದ ತೆರವುಗೊಳಿಸಲು ಜವಾಹರಲಾಲ್ ನೆಹರು ಸ್ಮಾರಕ ನಿಧಿಗೆ (ಜೆಎನ್ಎಂಎಫ್) ನೋಟಿಸ್ ಕಳುಹಿಸಿದೆ. ಆದರೆ ಈ ಆಸ್ತಿಯ ಮೇಲೆ ಕಾನೂನುಬಾಹಿರ ಹತೋಟಿ ಹಕ್ಕು ಎಂದು ಸ್ಮಾರಕ ನಿಧಿ ನಿರಾಕರಿಸಿತು. ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ನಿರ್ದೇಶಕ ಶಕ್ತಿ ಸಿನ್ಹಾ ಅವರ ಪತ್ರವನ್ನು ಬರೆದ ನಂತರ ಈ ಸೂಚನೆ ನೀಡಲಾಗಿದೆ. ಗ್ರಂಥಾಲಯದ ವಿಸ್ತರಣೆಗಾಗಿ ಸಿನ್ಹಾ ಹೆಚ್ಚಿನ ಸ್ಥಳವನ್ನು ಕೋರಿದ್ದಾರೆ. ಅನಾಮಧೇಯತೆಯ …

Read More »

ಅನಿಲ್ ಅಂಬಾನಿ ಕಂಪನಿ ಸಾಲದಲ್ಲಿದ್ದರೂ ರಫೇಲ್ ಒಪ್ಪಂದಕ್ಕೆ ಆಯ್ಕೆ ಮಾಡಿಕೊಂಡಿದ್ದೇಕೆ..

ನವದೆಹಲಿ: ಈಗ ಭಾರತದಲ್ಲಿ ರಫೇಲ್ ಹಗರಣ ವಿಚಾರ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲಾಂಡ್ ನೀಡಿದ ಹೇಳಿಕೆಯಿಂದ ಭಾರಿ ಸುದ್ದಿ ಮಾಡಿದೆ. ಮಿಡಿಯಾ ಪಾರ್ಟ್ ಗೆ ಅವರು ನೀಡಿದ ಸಂದರ್ಶನದಲ್ಲಿ ಪ್ರಸಕ್ತ ಮೋದಿ ಸರ್ಕಾರವು ಅನಿಲ್ ಅಂಬಾನಿ ರಿಲಯನ್ಸ್ ಕಂಪನಿಯನ್ನು ದಸಾಲ್ಟ್ ಗೆ ರಫೇಲ್ ಯುದ್ದ ವಿಮಾನ ಉತ್ಪಾದನೆಯಲ್ಲಿ ಭಾರತದ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿತ್ತು. ಇದರಿಂದ ಫ್ರಾನ್ಸ್ ಸರ್ಕಾರಕ್ಕೆ ಯಾವುದೇ ಆಯ್ಕೆ ಇಲ್ಲದೆ ರಿಲಯನ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು …

Read More »

ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ಮಳೆರಾಯ..

ಬೆಂಗಳೂರು: ಸೋಮವಾರ ರಾತ್ರಿಯಿಂದಲೂ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ  ಭಾರೀ ಮಳೆಯಾಗುತ್ತಿದ್ದು, ಮುಂದಿನ ಕೆಲ ಗಂಟೆಗಳು ಮಳೆ ಇನ್ನೂ ತೀವ್ರಗೊಳ್ಳಲಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ನೀಡಿದೆ.  ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ಹಳೇ ಮೈಸೂರು ಭಾಗದಲ್ಲಿ ಮಳೆ ಅಬ್ಬರಿಸಿದ್ದು, ಸಾಕಷ್ಟು ಹಾನಿ ಉಂಟು ಮಾಡಿದೆ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ …

Read More »

2019 ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪ್ರಧಾನಿ ಮೋದಿ ಹೆಸರು ಸೂಚನೆ

ಚೆನ್ನೈ: ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಅವರು 2019 ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಸೂಚಿಸಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ರಕ್ಷಣೆ ಕಾರ್ಯಕ್ರಮ ಆಯುಷ್ಮಾನ್ ಭಾರತ’ವನ್ನು ಆರಂಭಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರ ಹೆಸರನ್ನು 2019 ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿರುವುದಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿರುವ  ತಮಿಳಿಸೈ ಸೌಂದರರಾಜನ್ ನಿನ್ನೆ ತಿಳಿಸಿದ್ದಾರೆ. ತಮಿಳಿಸೈ ಸೌಂದರರಾಜನ್ ಪತಿ ಡಾ. ಪಿ. …

Read More »

ಮಂಡ್ಯದ ಜನರ ಮನಸು ಸಕ್ಕರೆಯಷ್ಟೇ ಸಿಹಿ- ಮಾಜಿ ಸಿಎಂ ಸಿದ್ದರಾಮಯ್ಯ ಬಣ್ಣನೆ

ಮಂಡ್ಯ  ಮಂಡ್ಯ ಜನ್ರ ಹೃದಯವಂತಿಕೆ ಕೊಂಡಾಡಿದ ಮಾಜಿ ಸಿ.ಎಂ. ಸಿದ್ರಾಮಯ್ಯ.‌.. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ  ಮಾಜಿ ಸಿ.ಎಂ‌ ರಿಂದ  ಮಂಡ್ಯ ಜನ್ರು ಹೃದಯವಂತಿಕೆ ಹೊಗಳಿಕೆ…… ಸೆ-೨೩ ರಂದು ಮಂಡ್ಯಕ್ಕೆ ಬಂದಾಗ ಮಾಜಿ ಸಿ.ಎಂ‌.ಗೆ ಸ್ವಾಗತಕೋರಿದ ಬಗ್ಗೆ ಸಿದ್ರಾಮಯ್ಯ ಫುಲ್ ಫಿಧಾ…… ಮಂಡ್ಯ ಜನ್ರ ಮನಸ್ಸು ಸಕ್ಕರೆಯಂತೆ  ಸಿಹಿಯೆಂದು ಹೊಗಳಿಕೆ.. ಸೆ-೨೩ ರಂದು ಮಂಡ್ಯದ ಕನಕ ಉದ್ಘಾಟನೆಗೆ ಬಂದಿದ್ದ ಮಾಜಿ ಸಿ.ಎಂ. …Check out @siddaramaiah’s Tweet: https://twitter.com/siddaramaiah/status/1044112356895145984?s=09

Read More »

ನೀವೇ ಬಿಸಿ ಮಾಡ್ತೀರಿ ನೀವೇ ತಣ್ಣಗೇ ಮಾಡ್ತೀರಿ, ನಮ್ದೇನೂ ಇಲ್ಲ- ಮಾಜಿ ಸಿಎಂ ಜಗದೀಶ ಶೆಟ್ಟರಗ ಕಾರ್ಮಿಕ ಮಾತು

ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ. ನಾವು ಯಾವಾಗಲು ಆಪರೇಷನ್ ಕಮಲ ಮಾಡುತ್ತೇವೆ ಅಂತಾ ಹೇಳಿಲ್ಲಾ. ಅವರಾಗಿ ಅವರೇ ಸರ್ಕಾರವನ್ನು ಬಿಳಿಸುತ್ತಾರೆ ಅಂತಾ ಹೇಳ್ತಾ ಬಂದಿದ್ದೇವೆ… ಸಮ್ಮಿಶ್ರ ಸರ್ಕಾರವನ್ನ ಬಿಸಿ ಮಾಡೊದು ನೀವೆ  ತಣ್ಣಗ ಮಾಡೊದು  ಮಾದ್ಯಮದವರ ಕೈಲಿದೆ. ನಾವು ಏನು ಮಾಡಿಲ್ಲ ನಮ್ಮಷ್ಟಕ್ ನಾವಿದೆ ಸಮ್ಮಿಶ್ರ ಸರಕಾರ ಬಿಳ್ಳೊದು ಅವರಿಂದಲೆ. ಹುಬ್ಬಳ್ಳಿಯಲ್ಲಿ  ಮಾಜಿ ಸಿಮ್ ಸಮ್ಮಿಶ್ರ ಸರ್ಕಾರ ಕ್ಕೆ ಚಾಟಿ ಬಿಸಿದ್ದಾರೆ..

Read More »

ಎಸಿಬಿ‌ ರದ್ದು ಮಾಡಿ, ಲೋಕಾಯುಕ್ತ ಬಲಪಡಿಸಿ- ಸಿಎಂಗೆ ಎಸ್.ಆರ್ ಹಿರೇಮಠ ಆಗ್ರಹ

ಹುಬ್ಬಳ್ಳಿ ಆ್ಯಂಕರ್’:- ಪ್ರಸ್ತುತವಾಗಿ ಜಾರಿಯಲ್ಲಿರುವ ಭ್ರಷ್ಟಾಚಾರ ನಿಗ್ರಹದಳವನ್ನು ತೆಗೆದುಹಾಕಿ ಲೋಕಾಯುಕ್ತವನ್ನು ಬಲಪಡಿಸಬೇಕು ಅಲ್ಲದೇ ಆಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಜಾರಿಗೊಳಿಸಬೇಕೆಂದು ಸಮಾಜಿಕ ಪರಿವರ್ತನಾ ಸಮಿತಿಯ ಮುಖ್ಯಸ್ಥ ಎಸ್ ಆರ್ ಹೀರೆಮಠ ಸರಕಾರಕ್ಕೆ ಒತ್ತಾಯಿಸಿದರು… ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಾಗಿ ಬೇರು ಬಿಟ್ಟಿದ್ದ  ಗಣಿಗಾರಿಕೆ ಹಾಗೂ ಇನ್ನಿತರ ಹಗರಣಗಳನ್ನು ಮಟ್ಟ ಹಾಕುವ ಉದ್ದೇಶದಿಂದ  ಎಸಿಬಿ ತೆಗೆದು ಹಾಕಿ ಲೋಕಾಯುಕ್ತ ಬಲ ಪಡಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, …

Read More »

ಭದ್ರಾ ಜಲಾಶಯ ಪ್ರವಾಸಿ ತಾಣವಾಗಿ ಪರಿವರ್ತಿಸಲು ₹ 13 ಕೋಟಿ ಅನುದಾನ

ಶಿವಮೊಗ್ಗ: ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಗಡಿ ಭಾಗದಲ್ಲಿರುವ ಭದ್ರಾ ಜಲಾಶಯದ ಸುತ್ತಮುತ್ತಲ ಪ್ರದೇಶವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಸರ್ಕಾರ ₹ 13 ಕೋಟಿ ಮಂಜೂರು ಮಾಡಿದೆ ಅಂತಾ ಪ್ರವಾಸೋದ್ಯಮ, ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಭದ್ರಾ ಜಲಾಶಯ ಹಾಗೂ ಜಿಲ್ಲೆಯಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಇಲ್ಲಿರುವ 182 ಎಕರೆ ಪ್ರದೇಶದಲ್ಲಿ 105 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಲು ಕಾಯ್ದಿರಿಸಲಾಗಿದೆ. ಅಲ್ಲದೇ ಖಾಸಗಿ ಸಂಸ್ಥೆಯ …

Read More »

ಬೇಗ ಹುಷಾರಾಗು ಗೆಳೆಯ..! ದರ್ಶನ್​ಗೆ ಸುದೀಪ್​ ವಿಶ್​​.

ಸ್ಯಾಂಡಲ್​ವುಡ್​ನ ಒಂದು ಕಾಲದ ಜಿಗರಿ ದೋಸ್ತುಗಳೆಂದರೆ ದರ್ಶನ್- ಸುದೀಪ್​. ಆದರೆ, ಕಾರಣಾಂತರಗಳಿಂದ ಇಬ್ಬರಲ್ಲೂ ಮನಸ್ತಾಪ ಉಂಟಾಗಿತ್ತು. ಆದ್ರೀಗ, ಕುಚುಕು ಗೆಳಯನ ಅಪಘಾತ ಸುದ್ದಿ ಕೇಳಿ ಸುದೀಪ್​ ಆತಂಕಗೊಂಡಿದ್ದರು. ಮತ್ತೆ ಗೆಳೆಯನಿಗಾಗಿ ಕಿಚ್ಚನ ಹೃದಯ ಮಿಡಿದಿದ್ದು ದರ್ಶನ್​ ಅಪಾಯದಿಂದ ಪಾರಾಗಿ, ಗುಣಮುಖ ಆಗ್ತಿರೋ ಸುದ್ದಿ ಕೇಳಿ  ಸಮಾಧಾನಪಟ್ಟಿದ್ದಾರೆ. ಅಲ್ಲದೇ, ಟ್ವಿಟ್ಟರ್​ನಲ್ಲಿ ದರ್ಶನ್ ಕ್ಷೇಮದ ಬಗ್ಗೆ ಬರೆದುಕೊಂಡಿದ್ದಾರೆ. ‘ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಆದಷ್ಟು ಬೇಗ ಹುಷಾರಾಗು ಗೆಳೆಯ’ ಅಂತಾ ಸುದೀಪ್​ ಬರೆದುಕೊಂಡಿದ್ದಾರೆ.  https://twitter.com/KicchaSudeep/status/1044220802751766528?s=20

Read More »