ನವದೆಹಲಿ: ಲೋಕಸಭಾ ಚುನಾವಣೆಗೆ ಒಂದು ವಾರವಷ್ಟೇ ಇರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 7ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ.ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪ್ರಣಾಲೈಕ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ಸಮಿತಿಯಲ್ಲಿ ಕೇಂದ್ರ ಸಚಿವರಾದ …
Read More »ಯೋಗಿ ಆದಿತ್ಯನಾಥ್ಗೆ ಚುನಾವಣಾ ಆಯೋಗದಿಂದ ನೋಟಿಸ್..!
ಲಕ್ನೋ: ಭಾರತೀಯ ಸೇನೆಯನ್ನು ‘ಮೋದಿ ಕೀ ಸೇನಾ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಚುನಾವಣಾ ಆಯೋಗ ವಿವರಣೆ ಕೇಳಿ ನೋಟಿಸ್ ನೀಡಿದೆ.ಕಳೆದ ಸೋಮವಾರ ಘಾಜಿಯಾಬಾದ್ನಲ್ಲಿ ನಡೆದ ಸಾರ್ವಜನಿಕ ಱಲಿಯಲ್ಲಿ ಸಿಎಂ ಯೋಗಿ, ಕಾಂಗ್ರೆಸ್ ಸರ್ಕಾರ ಉಗ್ರರಿಗೆ ಬಿರಿಯಾನಿ ಸರ್ವ್ ಮಾಡ್ತಿದ್ರೆ, ಪ್ರಧಾನಿ ‘ಮೋದಿ ಜಿ ತನ್ನ ಸೇನೆ’ಗೆ ಬುಲೆಟ್ ಮತ್ತು ಬಾಂಬ್ ಸರ್ವ್ ಮಾಡ್ತಾರೆ ಅಂತ ಹೇಳಿಕೆ ನೀಡಿದ್ರು. ಆದಿತ್ಯನಾಥ್ ಭಾರತೀಯ ಸೇನೆಯನ್ನ …
Read More »56 ಇಂಚಿನ ಎದೆ ಎಂದು ಹೇಳುವ ಮೋದಿ, ಸುಳ್ಳು ಹೇಳುವುದರಲ್ಲಿ ನಿರತರಾಗಿದ್ದಾರೆ-ಮಮತಾ ಬ್ಯಾನರ್ಜೀ
ನವದೆಹಲಿ: ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ “ಪ್ರಧಾನಿ ಮೋದಿ ಸುಳ್ಳು ಹೇಳಬಾರದು. 56 ಇಂಚಿನ ಎದೆ ಎಂದು ಹೇಳುವ ಅವರು ಬರಿ ಸುಳ್ಳು ಹೇಳುವುದರಲ್ಲೇ ನಿರತರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.ಬುಧುವಾರದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜೀ”ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ತಮ್ಮ ಆಡಳಿತ ಅವಧಿಯಲ್ಲಿ ರೈತರ …
Read More »ಎಸ್ಪಿ ವರ್ಗಾವಣೆ; ಚುನಾವಣಾ ಆಯೋಗ ಆದೇಶ..
ಹಾಸನ ಪೊಲೀಸ್ ಅಧೀಕ್ಷಕ(ಎಸ್ಪಿ) ಎ.ಎನ್. ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ. ಪ್ರಕಾಶ್ ಗೌಡ ಸ್ಥಾನಕ್ಕೆ ನೂತನವಾಗಿ ಚೇತನ್ ಸಿಂಗ್ ರಾಥೋರ್ ಅವರನ್ನು ನೇಮಕ ಮಾಡಿದೆ.ಕರ್ನಾಟಕ ರಾಜ್ಯ ಚುನಾವಣಾಧಿಕಾರಿಗಳ ಶಿಫಾರಸಿನ ಮೇರೆಗೆ ಭಾರತೀಯ ಚುನಾವಣಾ ಆಯೋಗವು ವರ್ಗಾವಣೆಯನ್ನು ಅನುಮೋದಿಸಿತು.ಕಳೆದ ವಾರ, ಚುನಾವಣಾ ಆಯೋಗವು ಹಾಸನ ಉಪ ಕಮೀಷನರ್ ಅಕ್ರಮ್ ಪಾಶಾವನ್ನು ವರ್ಗಾಯಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಆ ಜಾಗಕ್ಕೆ ಪೋಸ್ಟ್ ಮಾಡಿತ್ತು.ಅದಕ್ಕೂ …
Read More »ಟಿಕ್ ಟಾಕ್' ನಿಷೇಧಿಸಿ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ತಾಕೀತು
ನವದೆಹಲಿ: ಜನಪ್ರಿಯ ಚೀನೀ ವೀಡಿಯೊ ಅಪ್ಲಿಕೇಶನ್ ಟಿಕ್ ಟಾಕ್ ನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.ಈ ವೀಡಿಯೊ ಅಪ್ಲಿಕೇಶನ್ ಅಶ್ಲೀಲತೆಯನ್ನು ಉತ್ತೇಜಿಸುತ್ತಿರುವ ಹಿನ್ನಲೆಯಲ್ಲಿ ಇದನ್ನು ನಿಷೇಧಿಸಬೇಕೆಂದು ಅದು ಕೇಳಿಕೊಂಡಿದೆ ಎಂದು ಹೇಳಿದೆ.ಈ ಆಪ್ ಮೂಲಕ ರಚಿಸಿದ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡುವುದನ್ನು ಕೂಡ ನಿಲ್ಲಿಸಬೇಕೆಂದು ಕೋರ್ಟ್ ಹೇಳಿದೆ.ಭಾರತದಲ್ಲಿ ಸುಮಾರು 54 ಮಿಲಿಯನ್ ಜನರು ಟಿಕ್ ಟಾಕ್ ಅಪ್ಲಿಕೇಶನ್ ಬಳಸುತ್ತಿದ್ದಾರೆ.ಈ ಆಪ್ ಬಳಕೆದಾರರಿಗೆ ವಿಶೇಷ ಎಫೆಕ್ಟ್ ಗಳೊಂದಿಗೆ …
Read More »ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ
ವಯನಾಡ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಗೆ ಕೇರಳದ ವಯನಾಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.ಅಮೇಥಿ ಕ್ಷೇತ್ರದ ಜೊತೆಗೆ ವಯನಾಡ್ ನಲ್ಲಿಯೂ ಸ್ಪರ್ಧಿಸುತ್ತಿರುವ ರಾಹುಲ್ ಇಂದು ಜಿಲ್ಲಾಧಿಕಾರಿ ಜಿ.ಆರ್.ಅಜಯಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸುವ ವೇಳೆ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ಮುಕುಲ್ ವಾಸ್ನಿಕ್ ಕೂಡ ಸಾಥ್ ನೀಡಿದ್ದಾರೆ.ಇದಕ್ಕೂ ಮೊದಲು ರಾಹುಲ್ ಗಾಂಧಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು …
Read More »ಆರ್ಬಿಐನಿಂದ ರೆಪೋ ದರ ಇಳಿಕೆ..
ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನಿರೀಕ್ಷೆಯಂತೆ ಸತತ ಎರಡನೇ ಬಾರಿಗೆ ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಇಂದು ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಆರ್ಬಿಐ ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಸಭೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯನ್ನು ಬಲಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಲಾಗಿದೆ. ಆರ್ಬಿಐನ ಈ ನಿರ್ಧಾರದಿಂದಾಗಿ ಗೃಹ ಹಾಗೂ …
Read More »ಸಿಎಂ ಕಾರು ತಡೆದು ತಪಾಸಣೆ ನಡೆಸಿದ ಪೋಲಿಸರು
ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಪ್ರತಿ ವಾಹನದ ಮೇಲೂ ಹದ್ದಿನ ಕಣ್ಣಿಟ್ಟಿದೆ. ಸಾಮಾನ್ಯ ವ್ಯಕ್ತಿಯ ವಾಹನದಿಂದ ಹಿಡಿದು ಎಂತಹ ದೊಡ್ಡ ವ್ಯಕ್ತಿಯಾದರೂ ಪ್ರತಿ ವಾಹನವನ್ನು ತಪಾಸಣೆಗೆ ಒಳಪಡಿಸುತ್ತಿದೆ. ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಬಿಡದ ಚುನಾವಣಾ ಆಯೋಗ ಚನ್ನರಾಯಪಟ್ಟಣದ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಅವರ ಎಸ್ಯುವಿ ಕಾರನ್ನು ತಡೆಹಿಡಿದು ತಪಾಸಣೆ ನಡೆಸಿದರು.ಶಿವಮೊಗ್ಗದಲ್ಲಿಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ …
Read More »ಇಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ..
ನವದೆಹಲಿ: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದೆ.ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.ಪ್ರಣಾಳಿಕೆಯು ಕೇವಲ ಒಂದು ವ್ಯಕ್ತಿಯ ದೃಷ್ಟಿಕೋನವಲ್ಲ, ಅದು ಜನರ ಧ್ವನಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ …
Read More »ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ್ದಕ್ಕೆ ಪ್ರಿಯಾಂಕಾ ವಿರುದ್ಧ ಕೇಸ್
ವಾರಣಾಸಿ: ಕಾಂಗ್ರೆಸ್ನ ಸ್ಟಾರ್ ಕ್ಯಾಂಪೇನರ್ ಹಾಗೂ ಯುಪಿ ಕಾಂಗ್ರೆಸ್ ಜನರಲ್ ಸೆಕ್ರಟರಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ, ಪೂಜಾ ಸ್ಥಳವನ್ನ ಅಪವಿತ್ರಗೊಳಿಸಿ, ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ವಕೀಲರೊಬ್ಬರು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ವಾರಣಾಸಿ ಮೂಲದ ವಕೀಲ ತ್ರಿಪಾಠಿ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಕೋರ್ಟ್ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ಇನ್ನೂ ಈ ಸಂಬಂಧ ಅರ್ಜಿ ವಿಚಾರಣೆಯನ್ನ ಕೈಗೆತ್ತಿಕೊಂಡ ಕೋರ್ಟ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





