Breaking News

Shaikh BIG TV NEWS, Hubballi

ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 10 ಪೈಸೆ ಹೆಚ್ಚಳ, ಡೀಸೆಲ್ ಬೆಲೆ ಸ್ಥಿರ

ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 82.32 ರೂ. ಮತ್ತು ಮುಂಬೈನಲ್ಲಿ 89.69 ರೂ.   ನವದೆಹಲಿ: ಕಳೆದ ಒಂದು ತಿಂಗಲಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಗುರುವಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 10 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 82.32 ರೂ. ತಲುಪಿದೆ. ಆದಾಗ್ಯೂ, ಡೀಸೆಲ್ ಬೆಲೆಗಳ ಮೇಲೆ ಜನರಿಗೆ ಸ್ವಲ್ಪ ಪರಿಹಾರ ಸಿಕ್ಕಿದೆ. ಶುಕ್ರವಾರ ಸತತ ಎರಡನೇ ದಿನಕ್ಕೆ ಡೀಸೆಲ್ …

Read More »

ವಿಧಾನ ಪರಿಷತ್ ಚುನಾವಣೆ ಮುಂದೂಡಿಕೆ..

ಕರ್ನಾಟಕ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಗಳನ್ನು ಮುಂದೂಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ. ನವದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಗಳನ್ನೂ ಅ.4ಕ್ಕೆ ಮುಂದೂಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ.  ನಾಮಪತ್ರ ಸಲ್ಲಿಕೆಗೆ ಸೆ. 24 ಕೊನೆಯದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಸೆ.27 ಕೊನೆಯದಿನವಾಗಿದೆ. ಚುನಾವಣಾ ಆಯೋಗವು ಈ ಮೊದ್ಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ನಾಮಪತ್ರ ಸಲ್ಲಿಸಲು ಸೆ.22 ಕೊನೆಯದಿನ ಎಂದು ಘೋಷಿಸಿತ್ತು.  ಸೆ.22 ನಾಲ್ಕನೇ ಶನಿವಾರವಾಗಿದ್ದು, …

Read More »

ಲೈಂಗಿಕ ದೌರ್ಜನ್ಯ: ಸಂತ್ರಸ್ತರು ಆನ್​ಲೈನ್​ನಲ್ಲೇ ದೂರು

ನವದೆಹಲಿ: ಅತ್ಯಾಚಾರಕ್ಕೊಳಗಾದ ಯಾವುದೇ ಸಂತ್ರಸ್ತರು ಇನ್ನು ಮುಂದೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಒದ್ದಾಡುವ ಹಾಗೂ ದೂರು ದಾಖಲಿಸಲು ನೂರೆಂಟು ತಕರಾರುಗಳನ್ನು ಕೇಳುವ ಪ್ರಮೇಯವೆ ಬರಲ್ಲ . ಯಾಕಂದ್ರೆ ಸಂತ್ರಸ್ತರು ಇನ್ನು ಮಂದೆ ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲೇ ದೂರು ಸಲ್ಲಿಸಬಹುದಾಗಿದೆ. ದೂರುಗಳನ್ನು ಸ್ವೀಕರಿಸಲೆಂದೇ ಕೇಂದ್ರ ಗೃಹ ಇಲಾಖೆ ಹೊಸ ಪೋರ್ಟಲ್​ವೊಂದನ್ನ ಲೋಕಾರ್ಪಣೆಗೊಳಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್ ಈ ಹೊಸ ಪೋರ್ಟಲ್ ಬಿಡುಗಡೆ ಮಾಡಿದ್ದು, ಇದರ ಮೂಲಕ …

Read More »

ರೌಡಿಶೀಟರ್ ಗಳ ಲೈವ್ ಎನ್​ಕೌಂಟರ್..!

ಮಂದಿಯ ಕೊಲೆ ಪ್ರಕರಣದ ಆರೋಪಿಗಳಾದ ಮುಸ್ತಾಕಿಮ್​ ಮತ್ತು ನೌಷದ್​ ತಲೆಮರೆಸಿಕೊಂಡಿದ್ದರು. ಎರಡು ದಿನದ ಹಿಂದಷ್ಟೇ ಇದೇ ಪ್ರಕರಣದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪರಾರಿಯಾಗಿದ್ದ ಮುಸ್ತಾಕಿಮ್​ ಮತ್ತು ನೌಷದ್​​ ಅಡಗಿರುವ ಸ್ಥಳದ ಖಚಿತ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚಾರಣೆಗಿಳಿಯುವ ಮುನ್ನ ಮಾಧ್ಯಮಗಳಿಗೆ ವಿಷಯ ಮುಟ್ಟಿಸಿ ಕಾರ್ಯಾಚರಣೆಯ ದೃಶ್ಯವನ್ನು ಸೆರೆ ಹಿಡಿಯಲು ಆಹ್ವಾನಿಸಿದ್ದಾರೆ. ಇನ್ನು ಹಳೇ ಕಟ್ಟಡವೊಂದರಲ್ಲಿ ಅಡಗಿದ್ದ ಆರೋಪಿಗಳ ಅಡ್ಡೆಗೆ ದಾಳಿ ನಡೆಸಿದ ವೇಳೆ ಬೈಕ್​ನಲ್ಲಿ ಆರೋಪಿಗಳು ಎಸ್ಕೇಪ್​ ಆಗಲು …

Read More »

ಆಪರೇಷನ್- ಅಬಾರ್ಷನ್ ಹತ್ತಂಗಿಲ್ಲ.. ಹರಿಯಂಗಿಲ್ಲ- ರಾಜಕೀಯದಲ್ಲಿ ಇದೆಲ್ಲ ಇರೋದೇ- ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿಕೆ

ಶಿವಮೊಗ್ಗ:  ಅಪರೇಷನ್ ಅಬಾಷನ್ ಹತ್ತಗಿಲ್ಲ ಹರಿಯಗ್ಗಿಲ್ಲಾ. ದಂಗೆ ಎಳಿರಿ ಎನ್ನುವುದು ರಾಜಕೀಯದ ಭಾಗ ರಾಜಕೀಯ ಬೆಳವಣಿಗೆಯನ್ನ ಮಾಧ್ಯಮ ತೋರಿಸುವುದನ್ನ ಬಿಡಿ, ಎಲ್ಲವೂ ಸರಿಹೋಗಲಿದೆ.. ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿಕೆ. ಜೆಡಿಎಸ್- ಕಾಂಗ್ರೆಸ್ ಮತ್ತು ಬಿಜೆಪಿಯವರ ನಡುವೆ ಪರಸ್ಪರ ವಾದ ನಡೆಯುತ್ತಿರುತ್ತವೆ.. ಐದು ವರ್ಷಗಳ ಕಾಲ ರಾಜ್ಯ ಮೈತ್ರಿ‌ ಸರ್ಕಾರ ಸುಭದ್ರವಾಗಿರಲಿದೆ‌. ನಮ್ಮ‌ ಕಡೆ ಮಳೆ ಚನ್ನಾಗಿ‌ ಆಗುತ್ತಿದೆ, ಬೆಳೆ ಚನ್ನಾಗಿ ಬರಲಿ ಎಂದು ಆಶಿಸುತ್ತೆನೆ..

Read More »

ಸಾಂಸ್ಕೃತಿ ಸಿರಿ, ಭಾವೈಕ್ಯತೆಯ ಗರಿ ಯರಗುಪ್ಪಿಯ ಮೊಹರಂ ಹಬ್ಬ

ಧಾರವಾಡ ಹಬ್ಬ-ಹರಿದಿನಗಳು ಮನುಷ್ಯರನ್ನ ಬೆಸೆಯಬೇಕು. ಸಾರಮಸ್ಯ ಮೂಡಿಸ್ಬೇಕು. ಧರ್ಮಗಳ ಮಧ್ಯೆ ಸಾಮರಸ್ಯ ಬೆಳೆಸೆಯುವ, ದ್ವೇಷ-ಅಸೂಯೆ ಬಿಟ್ಟು ಎಲ್ರನ್ನೂ ಪ್ರೀತಿಸುವಂತೆ ಮಾಡುವ ಹಬ್ಬವನ್ನ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬರ್ಲಾಗ್ತಿದೆ. ಧರ್ಮ ಯಾವುದಾದರೇನು ಅದರ ತಿರುಳು ಒಂದೇ ಅಂತ ಭಾವೈಕ್ಯತೆಯನ್ನ ಸಾರುವ ಮೊಹರಂ ಹಬ್ಬ ಯರಗುಪ್ಪಿ ಗ್ರಾಮದಲ್ಲಿ ನಡೆಯುತ್ತೆ. ಇಡೀ ನಾಡಿನಲ್ಲಿಯೇ ವಿಶೇಷ ಆಚರಣೆಯಿಂದ ಈ ಗ್ರಾಮ ಸಾಮರಸ್ಯವನ್ನ ಬೆಸೆಯುತ್ತಲೇ ಬಂದಿದೆ. ಇದೇ ಸೆಪ್ಟೆಂಬರ್ 22ಕ್ಕೆ …

Read More »

ಹಾಡಹಗಲೇ ಮದ್ಯ ಸೇವಿಸಿ ಪೊಲೀಸ್ ಪೇದೆ

ಮಂಗಳೂರು: ನಗರದಲ್ಲಿ ಕರ್ತವ್ಯನಿತರ ಸಂಚಾರ ಪೊಲೀಸ್ ಪೇದೆಯೊಬ್ಬರು ಕಂಠಪೂರ್ತಿ ಕುಡಿದು, ರಸ್ತೆ ಮಧ್ಯದಲ್ಲಿ ತೂರಾಡಿದ್ದಾರೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಕಮಿಷನರ್ ಟಿ.ಆರ್ ಸುರೇಶ್ ಆದೇಶ ಹೊರಡಿಸಿದ್ದಾರೆ. ಮಂಗಳೂರು ಪಶ್ಚಿಮ ಸಂಚಾರ ಠಾಣೆಯ ಅಶೋಕ್ ಗೌಡ ಅಮಾನತುಗೊಂಡ ಪೊಲೀಸ್ ಪೇದೆ. ಅಶೋಕ್ ಅವರು ಹಾಡಹಗಲೇ ಮದ್ಯ ಸೇವಿಸಿ, ನಗರದ ಲಾಲ್ ಬಾಗ್‍ನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ ನಿಂತಿದ್ದಾರೆ. ಜನರು ಇದ್ದರೂ ಲೆಕ್ಕಿಸದ ಅಶೋಕ್ ರಸ್ತೆ …

Read More »

ಒಂದು ದಿನಕ್ಕೆ ಕನಿಷ್ಟ ಮೂರು ಚಿನ್ನದ ಚೈನ್ ಕದಿಯಬೇಕು: ಪತಿಗೆ ಪತ್ನಿ ಟಾರ್ಗೆಟ್!

ಬೆಂಗಳೂರು: ಪತಿ ಕೈಯಲ್ಲಿ ಸರಗಳ್ಳತನ ಮಾಡಿಸುತ್ತಿದ್ದ ಪತ್ನಿ, ಪ್ರತಿ ದಿನ ಕನಿಷ್ಟ ಮೂರು ಚೈನ್ ಕಳ್ಳತನ ಮಾಡಬೇಕು ಎಂದು ಪತಿಗೆ ಟಾರ್ಗೆಟ್ ನೀಡುತ್ತಿದ್ದ ಕತರ್ನಾಕ್ ಪತ್ನಿ ಮಹಾದೇವಿ(29)ಯನ್ನು ಕೆಂಗೇರಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 100 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕುಖ್ಯಾತ ಚೈನ್ ಸ್ನ್ಯಾಚರ್ ಅಚ್ಯುತ್ ಕುಮಾರ್ ಪತ್ನಿ ಮಹಾದೇವಿಗಾಗಿ ಕೆಂಗೇರಿ ಪೊಲೀಸರು ಕಳೆದ ಮೂರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದರು.  ಮೂರು ತಿಂಗಳ ಹಿಂದೆ ಅಚ್ಯುತ್ ಕುಮಾರ್ ನನ್ನು …

Read More »

ಮರ್ಯಾದಾ ಹತ್ಯೆ ಯತ್ನ: ಯುವತಿ ತಂದೆಯಿಂದ ನವಜೋಡಿ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ!

ಹೈದರಾಬಾದ್: ತಮ್ಮ ಕುಟುಂಬದ ಮರ್ಯಾದೆ ಕಾಪಾಡಿಕೊಳ್ಳುವದಕ್ಕಾಗಿ ತಂದೆಯೊಬ್ಬರು ತನ್ನ ಮಗಳು ಹಾಗೂ ಅಳಿಯನ ಮೇಲೆ ಮಾರಕಾಸ್ತ್ರಗಳಿಂದ ಹಾಡು ಹಗಲೇ ಹಲ್ಲೆ ನಡೆಸಿರುವ ಭೀಕರ ಘಟನೆ ಹೈದರಾಬಾದ್ ನಲ್ಲಿ  ನಡೆದಿದೆ. ತೆಲಂಗಾಣದ ಎರ್ರಂಗಡದಲ್ಲಿನ ಎಸ್.ಆರ್. ನಗರ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ನವಜೋಡಿಯಾಗಿರುವ ಮಾಧವಿ ಹಾಗೂ ಆಕೆಯ ಪತಿ ಸಂದೀಪ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಎದುರಿನಿಂದ ಇನ್ನೊಂದು ಬೈಕ್ ನಲ್ಲಿ ಬಂದ ಮಾಧವಿಯ ತಂದೆ ನರಸಿಂಹಾಚಾರಿಯನ್ನು ಕಂಡು ತಮ್ಮ ವಾಹನ ನಿಲ್ಲಿಸಿದ್ದಾರೆ. ಆಗ …

Read More »

ಹೈ-ಕೋರ್ಟ್ ಚಾಟಿಗೆ ಬೆಚ್ಚಿದ ಬಿಬಿಎಂಪಿ..!

ಬೆಂಗಳೂರು: ಫ್ಲೆಕ್ಸ್, ಬ್ಯಾನರ್ ವಿಚಾರದ ಬಳಿಕ ಹೈಕೋರ್ಟ್​ ಮತ್ತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಗರಂ ಆಗಿದೆ. ನಗರದ ರಸ್ತೆಯ ಅವ್ಯವಸ್ಥೆಯ ವಿಚಾರವಾಗಿ ಹೈಕೋರ್ಟ್ ಬಿಬಿಎಂಪಿಗೆ ಖಡಕ್​ ವಾರ್ನಿಂಗ್​ ನೀಡಿದೆ. ನಗರದ ರಸ್ತೆಗಳ ಎಲ್ಲಾ ಗುಂಡಿಗಳನ್ನು ಇಂದು ಸಂಜೆಯೊಳಗೆ ಮುಚ್ಚುವಂತೆ ಬಿಬಿಎಂಪಿಗೆ ಹೈಕೋರ್ಟ್​ ಆದೇಶಿಸಿದೆ. ಹೈಕೋರ್ಟ್​ನ ಆದೇಶದಿಂದ ಪಾಲಿಕೆ ನಿನ್ನೆ ರಾತ್ರೋರಾತ್ರಿ ನಗರದ ರಸ್ತೆಯ ಗುಂಡಿಗಳನ್ನು ಮುಚ್ಚಲು ಮುಂದಾಗಿದೆ. ಮೆಜೆಸ್ಟಿಕ್, ಓಕಳಿಪುರ ಸುತ್ತಲಿನ ರಸ್ತೆ, ಯಶವಂತಪುರ, ಬಳ್ಳಾರಿ ‌ಮುಖ್ಯ …

Read More »