ಬೆಂಗಳೂರು: ಕರ್ನಾಟಕದಲ್ಲಿನ ನದಿಗಳ ಮಾಲಿನ್ಯದ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿರುವ ತಜ್ಞರ ಸಮಿತಿಯು 2025 ರ ಜನವರಿಯಲ್ಲಿ ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳ ಜಂಟಿ ಪರಿಶೀಲನೆಗೆ ನಿರ್ದೇಶನ ನೀಡಿದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಅಡಿಯಲ್ಲಿನ ಕೇಂದ್ರ ಮೇಲ್ವಿಚಾರಣಾ ಸಮಿತಿಯು ಸಂಸ್ಕರಿಸದ ಒಳಚರಂಡಿಯ ಹರಿವನ್ನು ತಡೆಯುವ ಮೂಲಕ 350 ಕ್ಕೂ ಹೆಚ್ಚು ಕಲುಷಿತ ನದಿಗಳನ್ನು ಪುನರುಜ್ಜೀವನಗೊಳಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿದೆ. ನದಿಗಳಿಗೆ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಿಸಲು …
Read More »ಕರ್ನಾಟಕದಲ್ಲಿ ಹೊಸ ವರ್ಷಕ್ಕೆ ಮದ್ಯ ಮಾರಾಟದಲ್ಲಿ ದಾಖಲೆಯ ಆದಾಯ
ಬೆಂಗಳೂರು: ಹೊಸ ವರ್ಷಾಚರಣೆಗೆ ಮದ್ಯ ಇಲ್ಲವೆಂದರೆ ನಡೆಯೋದೆ ಇಲ್ಲ. ಬಹುತೇಕ ಮಂದಿ ನಶೆಯಲ್ಲಿ ಹೊಸ ವರ್ಷವನ್ನು ಸ್ವಾಗಿತಿಸುವುದು ವಾಡಿಕೆ. ಹೊಸ ವರ್ಷದ ಪ್ರಯುಕ್ತ 2024ರ ಕೊನೆ ದಿನ ಡಿಸೆಂಬರ್ 31ರಂದು ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ದಾಖಲೆ ಆಗಿದೆ. ಅಬಕಾರಿ ಇಲಾಖೆಗೆ ನಿರೀಕ್ಷೆಗೂ ಮೀರಿ ನೂರಾರು ಕೋಟಿ ರೂಪಾಯಿ ಹಣ ಕೆಲವೇ ಗಂಟೆಗಳಲ್ಲಿ ಸಂಗ್ರಹವಾಗಿದೆ. ಹೌದು, ಡಿಸೆಂಬರ್ 31ರಂದು ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ ‘ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ’ದಿಂದ 308 …
Read More »ರಾಜ್ಯ ಸರ್ಕಾರದಿಂದ 65 ಮಂದಿ ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ
ಬೆಂಗಳೂರು : ರಾಜ್ಯ ಸರಕಾರವು ಹೊಸ ವರ್ಷದ ಹಿನ್ನೆಲೆಯಲ್ಲಿ 65 ಮಂದಿ ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಬಡ್ತಿ ಪಡೆದ ಅಧಿಕಾರಿಗಳು : ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ-ಮಹೇಶ್ವರ ರಾವ್ ಎಂ., ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ-ಅನಿಲ್ ಕುಮಾರ್ ಟಿ.ಕೆ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ-ಪಂಕಜ್ ಕುಮಾರ್ ಪಾಂಡೆ, ಕೇರಳ ರಾಜ್ಯದ ವಾಣಿಜ್ಯ ಇಲಾಖೆಯ ಎಸ್ಇಝೆಡ್ ಅಭಿವೃದ್ಧಿ ಆಯುಕ್ತೆ-ಹೇಮಲತಾ ಪಿ., ಏಷಿಯನ್ ಅಭಿವೃದ್ಧಿ ಬ್ಯಾಂಕ್ನ ಹಿರಿಯ …
Read More »ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಗಣಿ ರಫ್ತು ಮಾಡಿ 386 ಕೋಟಿ ರೂ. ಗಳಿಸಿದ ಭಾರತ
ನವದೆಹಲಿ: ಭಾರತೀಯ ಹಸುವಿನ ಸಗಣಿಗೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ. ಸಗಣಿಯ ರಫ್ತಿನಿಂದ 2023-24 ಈ ಆರ್ಥಿಕ ವರ್ಷದಲ್ಲಿ ಭಾರತಕ್ಕೆ 386 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಲಭ್ಯವಾಗಿದೆ. ‘ಎಕ್ಝಮಪೇಡಿಯ’ ಈ ವಸ್ತುಗಳ ಆಮದು-ರಫ್ತಿಗೆ ಸಂಬಂಧಿತ ವಿಷಯದ ಅಧ್ಯಯನ ನಡೆಸುವ ಕಂಪನಿಯಿಂದ ಇದರ ಸಂದರ್ಭದಲ್ಲಿ ಒಂದು ವರದಿ ಪ್ರಸಾರ ಮಾಡಿದೆ. ಭಾರತೀಯ ಹಸುವಿನ ಸಗಣಿ ಹೊಲಗಳಿಗಾಗಿ ಸಂಜೀವಿನಿಯಾಗಿದೆ, ಎಂದು ವಿದೇಶದಲ್ಲಿನ ಅನೇಕ ರೈತರು ನಂಬಿದ್ದಾರೆ. ಮಾಲ್ಡಿವ್, ಚೀನಾ, ನೇಪಾಳ, ಸಿಂಗಪುರ, …
Read More »ದೇಶದ ಬಡ ಜನರಿಗೆ ಎರಡು ಕೋಟಿ ಮನೆ ನೀಡಲು ಮನೆಮನೆ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ
ನವದೆಹಲಿ: ಸೂರಿಲ್ಲದ ಜನರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಹೊಸ ವರ್ಷದ ಉಡುಗೊರೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದ ಬಡವರಿಗೆ ಇನ್ನೂ ಎರಡು ಕೋಟಿ ಮನೆಗಳನ್ನು ನೀಡಲು ಮನೆಮನೆ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಮುಂದಿನ ಮೂರು ತಿಂಗಳೊಳಗೆ ಅಂದರೆ 2025ರ ಮಾರ್ಚ್ 31ರೊಳಗೆ ಮನೆಮನೆ ಸಮೀಕ್ಷೆ ಪೂರ್ಣಗೊಳಿಸಲಿದೆ. ಇದು 2024ರಲ್ಲಿ ಬಿಜೆಪಿಯ ಚುನಾವಣಾ ಭರವಸೆಗಳಲ್ಲಿ ಪ್ರಮುಖವಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಕಳುಹಿಸಿರುವ ಸಂವಹನಾ ಪತ್ರವು …
Read More »ರಾಜ್ಯ ಸರ್ಕಾರಿ ನೌಕರರಿಗೆ ಜ.4 ರಂದು ಸಾಂದರ್ಭಿಕ ರಜೆ ಮಂಜೂರು
ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನ ಹೊರಡಿಸಿದೆ. ವಿಶ್ವ ಬ್ರೈಲ್ ದಿನಾಚರಣೆಯಂದು ದೃಷ್ಟಿದೋಷವುಳ್ಳ ವಿಕಲಚೇತನರ ಸರ್ಕಾರಿ ನೌಕರರಿಗೆ ದಿನಾಂಕ 04-01-2025ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಹೌದು, ಸಾಂದರ್ಭಿಕ ರಜೆ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ನಿರ್ದೇಶಕರು, ವಿಕಲಚೇತನರ ಮತ್ತು ಹಿರಿಯ ನಾಗರಿಕರ …
Read More »ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿಎಂಗೆ ಧೈರ್ಯ ಇಲ್ಲ: ಶಾಸಕ ಜನಾರ್ಧನ ರೆಡ್ಡಿ
ಬಳ್ಳಾರಿ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮತಹ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹುಗುರುವಾಗಿ ಮಾತನಾಡುತ್ತಾ, ದುರಹಂಕಾರದ ವರ್ತನೆ ತೋರುತ್ತಿದ್ದಾರೆ. ಅವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಧೈರ್ಯ ಇಲ್ಲದಂತಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ‘ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಯು ಗಂಭೀರ ಪ್ರಕರಣ. ಡೆತ್ನೋಟ್ನಲ್ಲಿ ಅವರು ಪ್ರಿಯಾಂಕ್ ಖರ್ಗೆ ಆಪ್ತ ರಾಜು ಎಂಬುವರ ಹೆಸರು ಬರೆದಿಟ್ಟಿದ್ದಾರೆ. ಅವರಿಗಾದ ಕಿರುಕುಳ, ಶೇ 5ರ …
Read More »ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ: ಗುತ್ತಿಗೆ ಆಧಾರದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಳ್ಳಾರಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯ ಕಾನೂನು ನೆರವು ಅಭಿರಕ್ಷಕರ ಹುದ್ದೆ 01, ಉಪ ಕಾನೂನು ನೆರವು ಅಭಿರಕ್ಷಕರ ಹುದ್ದೆ 01 ಮತ್ತು ಸಹಾಯಕ ಕಾನೂನು ನೆರವು ಅಭಿರಕ್ಷಕರ ಹುದ್ದೆ 01 ಇವುಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು. ಮಾಹೆಯಾನ ಮುಖ್ಯ ಕಾನೂನು ನೆರವು ಅಭಿರಕ್ಷಕರ …
Read More »ಹೊಸ ವರ್ಷಾಚರಣೆ: ವಿದೇಶ ಪ್ರವಾಸಕ್ಕೆ ತೆರಳಿದ ಡಿಸಿಎಂ ಡಿಕೆಶಿ
ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಹೊಸ ವರ್ಷದ ಸಂಭ್ರಮಾಚರಣೆಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದ್ದು, ವಿದೇಶದಲ್ಲಿ ಈ ಬಾರಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಲಿದ್ದಾರೆ. ಇಂದು ಮುಂಜಾನೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ನಾಲ್ಕು ದಿನಗಳಕಾಲ ಡಿಸಿಎಂ ವಿದೇಶದಲ್ಲಿರಲಿದ್ದಾರೆ. ಕೆನಡಾ, ಟರ್ಕಿ …
Read More »ಶಿರಾದಲ್ಲೂ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ: ಸಚಿವ ಕೆ.ಜೆ.ಜಾರ್ಜ್
ಶಿರಾ: ತಾಲ್ಲೂಕಿನ ಗೌಡಗೆರೆ ಹೋಬಳಿಯ ಚೆಂಗಾವರ, ಹುಲಿಕುಂಟೆ ಹೋಬಳಿಯ ಚಿಕ್ಕಬಾಣಗೆರೆ ಗ್ರಾಮದ ಬಳಿ ಸೋಲಾರ್ ಘಟಕ ನಿರ್ಮಿಸಿದ್ದು, ಎರಡೂ ಕಡೆಯಿಂದ ಒಟ್ಟು 8.9 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಸೋಲಾರ್ ಘಟಕ ನಿರ್ಮಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ‘ಉತ್ಪಾದಿಸಿದ ವಿದ್ಯುತ್ಅನ್ನು ಸ್ಥಳೀಯವಾಗಿ ಕೃಷಿ ಪಂಪ್ಸೆಟ್ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಪಿಎಂ- ಕುಸುಮ್ ಯೋಜನೆಯಲ್ಲಿ ಸೋಲಾರ್ ಘಟಕ ನಿರ್ಮಿಸಿ ವಿದ್ಯುತ್ ಉತ್ಪಾದನೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





