Breaking News

BigTv News

ಮೀಸಲಾತಿ ಬಗ್ಗೆ ಅವಹೇಳನ ಆರೋಪ: ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಎಫ್‍ಐಆರ್ ದಾಖಲು

ಮೀಸಲಾತಿ ಹಾಗೂ ಅದರ ಫಲಾನುಭವಿಗಳ ಕುರಿತು ಅವಹೇಳನಕಾರಿ ಮತ್ತು ಸಮಾಜದಲ್ಲಿ ದ್ವೇಷ, ವಿಭಜನೆಗೆ ಕಾರಣವಾಗುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಖಾಸಗಿ ವಾಹಿನಿಯ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅವರು ಮೀಸಲಾತಿ ಕುರಿತು ಪೂರ್ವಾಗ್ರಹಪೀಡಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನೆಲಮಂಗಲ ನಿವಾಸಿ ಅನಂತಕುಮಾರ್ ಡಿ.ಆರ್. ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಅರುಣ್ ಬಡಿಗೇರ್ …

Read More »

ಲಂಚದ ಹಣ ಕೈಸೇರುತ್ತಿದ್ದಂತೆ ರೇಡ್; ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಮಂಜುನಾಥ್!

ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಮಂಜುನಾಥ್ ಅವರು ₹20 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಘಟ್ಟದಹಳ್ಳಿ ಗ್ರಾಮದ ಸಂತೋಷ್ ಎಂಬುವವರ ಕೆಲಸ ಮಾಡಿಕೊಡಲು ಪಿಎಸ್‌ಐ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಸಂತೋಷ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಸಂತೋಷ್ ಅವರಿಂದ ₹20 ಸಾವಿರ ಪಡೆಯುತ್ತಿದ್ದ ವೇಳೆ ಮಂಜುನಾಥ್ ಅವರನ್ನು ರೆಡ್‌ಹ್ಯಾಂಡ್ …

Read More »

ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನಿಸಿದವರ ಬಂಧನ

ಮೈಸೂರು: ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಲೆವೆಲ್-1 ಪರೀಕ್ಷೆಯಲ್ಲಿ ಅಂಗವಿಕಲ ಅಭ್ಯರ್ಥಿ ಎಂದು ನಕಲಿ ದಾಖಲೆ ನೀಡಿ ಬೇರೆಯವರಿಂದ ಪರೀಕ್ಷೆ ಬರೆಸಲು ಯತ್ನಿಸಿದ ಆರೋಪದ ಮೇಲೆ ಹೆಬ್ಬಾಳು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ರಾಜಸ್ಥಾನದ ವಿಕಾಸ್ ಮೀನಾ, ವಿಜಯ್ ಮೀನಾ ಹಾಗೂ ಬಿಹಾರದ ಸುಮಿತ್ ಕುಮಾರ್ ಸಿಂಗ್ ಬಂಧಿತರು. ಆ.6ರಂದು ಹೆಬ್ಬಾಳಿನ ಪರೀಕ್ಷಾ ಕೇಂದ್ರಕ್ಕೆ ವಿಕಾಸ್ ಹಾಗೂ ಸುಮಿತ್ ಬಂದಿದ್ದು, ಸುಮಿತ್ ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಬರಹ ಸಹಾಯಕನಾಗಿ ಪರೀಕ್ಷೆ ಬರೆಯಲು …

Read More »

ವಳಚ್ಚಿಲ್ ಬಳಿ ಕಾರು ಹಿಟ್ ಅಂಡ್ ರನ್ ; ಬೈಕ್‌ ಸವಾರನಿಗೆ ಕಾರು ಡಿಕ್ಕಿಯಾಗಿ ಪರಾರಿ, ಯುವಕ ಸ್ಥಳದಲ್ಲೇ ಮೃತ್ಯು!

ಮಂಗಳೂರು: ನಗರ ಹೊರವಲಯದ ವಳಚ್ಚಿಲ್‌ ಬಳಿಯ ಹೊಸ ಪೆಟ್ರೋಲ್‌ ಪಂಪ್‌ ಎದುರು ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸೂರಲ್ಪಾಡಿಯ ಹ್ಯಾರಿಸ್ ಎಂದು ಗುರುತಿಸಲಾಗಿದೆ. ರಾತ್ರಿ 10ರ ಸುಮಾರಿಗೆ ಘಟನೆ ನಡೆದಿದ್ದು, ಕಾರಿನ ಡಿಕ್ಕಿಯ ರಭಸಕ್ಕೆ ಬೈಕ್‌ ಸವಾರ ದೂರಕ್ಕೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆ ಕುರಿತು ಕಂಕನಾಡಿ ಟ್ರಾಫಿಕ್‌ ಪೊಲೀಸರು ಅಜಾಗರೂಕ ಚಾಲನೆ ಹಾಗೂ ಅಪಘಾತ ಪ್ರಕರಣ ದಾಖಲಿಸಿಕೊಂಡು …

Read More »

ಉಡುಪಿ: ಅಧಿಕ ಬಡ್ಡಿ- ಸಾಲ ವಸೂಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ; ಮೂವರ ಬಂಧನ

ಉಡುಪಿ: ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ, ಕಂತಿನ ಹಣ ಬಾಕಿ ಉಳಿದಾಗ ಸಾರ್ವಜನಿಕರಿಗೆ ಕಿರುಕುಳ ನೀಡಿದ ಆರೋಪದಡಿ ಸಾನಿಧ್ಯ ಫೈನಾನ್ಸ್‌ನ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಕುಂಜಾಲಿನಲ್ಲಿ ಸಾಲದ ಕಂತು ಬಾಕಿ ಉಳಿದ ಹಿನ್ನೆಲೆಯಲ್ಲಿ ಗಣೇಶ್ ಗಾಣಿಗ ಅವರ ಮೋಟಾರ್‌ಸೈಕಲ್‌ನ್ನು ಬಲವಂತವಾಗಿ ತೆಗೆದುಕೊಂಡು ಹೋಗಿ, ಜಾಮೀನುದಾರ ರಾಜೇಶ್ ನಾಯ್ಕ್ ಅವರಿಗೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ಶೆಟ್ಟಿ ಹಾಗೂ …

Read More »

ರೀಲ್ಸ್​​ ನೋಡಬೇಡ..! ಅಮ್ಮನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಮಗಳು!

ಧಾರವಾಡ: ರೀಲ್ಸ್ ನೋಡಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಮೇಘಾ ಗೂಬ್ಬನ್ನವರ್ ಎಂದು ಗುರುತಿಸಲಾಗಿದೆ. ಮೇಘಾ ಖಾಸಗಿ ಕಾಲೇಜಿನಲ್ಲಿ ಡಿಎಡ್ ವ್ಯಾಸಂಗ ಮಾಡುತ್ತಿದ್ದಳು. ಮೊಬೈಲ್‌ನಲ್ಲಿ ದಿನವಿಡೀ ರೀಲ್ಸ್ ನೋಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದು ಆಕೆ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು …

Read More »

ಫೇಸ್ ಬುಕ್ ನಲ್ಲಿ ಬಂದ ಹೂಡಿಕೆ ಮಾಹಿತಿ ನಂಬಿ 28 ಲಕ್ಷಕ್ಕೂ ಕಳೆದುಕೊಂಡ ಮೈಸೂರಿಗರು

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಬಂದ ಹೂಡಿಕೆ ಜಾಹೀರಾತುಗಳನ್ನು ನಂಬಿದ ನಗರದ ಇಬ್ಬರು ನಿವಾಸಿಗಳು ಅಪಾರ ಲಾಭದ ಆಸೆಯಿಂದ ₹28.23 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಜೆ.ಪಿ.ನಗರದ 72 ವರ್ಷದ ರಾಜೇಶ್‌ ಅವರು ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಹರಿದಾಡಿದ ನಕಲಿ ಹೂಡಿಕೆ ವಿಡಿಯೊ ನಂಬಿ ₹12.93 ಲಕ್ಷ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ₹65 ಸಾವಿರ ವಾಪಸ್‌ ಬಂದಿದ್ದು, ಬಳಿಕ ಹಣ ಪಡೆಯಲು ಮತ್ತಷ್ಟು ಠೇವಣಿ ಮಾಡುವಂತೆ ವಂಚಕರು ಒತ್ತಾಯಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ …

Read More »

ಪಾಕಿಸ್ತಾನ, ಐಸಿಸ್ ಜತೆ ನಂಟು: ಕಲಬುರಗಿಯಲ್ಲಿ ಇಬ್ಬರು ಶಂಕಿತರು ಪೊಲೀಸ್​ ವಶಕ್ಕೆ

ಕಲಬುರಗಿ: ಪಾಕಿಸ್ತಾನ ಹಾಗೂ ಐಸಿಸ್‌ ಉಗ್ರ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಎಟಿಎಸ್‌ ತಂಡ ಇಬ್ಬರು ಶಂಕಿತರನ್ನು ಕಲಬುರಗಿಯಲ್ಲಿ ವಶಕ್ಕೆ ಪಡೆದಿದೆ. ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಹಾಗೂ ಸಲ್ಮಾನ್‌ ಅವರನ್ನು ಮಾಲಗತ್ತಿ ಮತ್ತು ಉಪಳಾಂವ್‌ ಗ್ರಾಮದ ಹೊರವಲಯದಲ್ಲಿ ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಬೀಫ್‌ ರಫ್ತು ಮಾಡುವ ಫೇರ್ ಎಕ್ಸ್‌ಪೋರ್ಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ವಾಟ್ಸಾಪ್‌ ಕರೆ ಹಾಗೂ ಫೇಸ್‌ಬುಕ್‌ ಮೂಲಕ …

Read More »

8 ಲಕ್ಷ ರೂ. ಲಾಟರಿ ಹೊಡೆದಿದೆ ಎಂದು ನಂಬಿಸಿ ಮಹಿಳೆಗೆ 2.34 ಲಕ್ಷ ವಂಚನೆ

ಚಿಕ್ಕಮಗಳೂರು, ಆ.13- ಕೇರಳ ಲಾಟರಿಯಲ್ಲಿ ₹8 ಲಕ್ಷ ಬಹುಮಾನ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ₹2.34 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸೀಮಾ ಬಾನು ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಲಾಟರಿ ಬಹುಮಾನ ಬಂದಿದೆ ಎಂದು ನಂಬಿಸಿ, ಪ್ರೊಸೆಸಿಂಗ್‌ ಶುಲ್ಕ, ಜಿಎಸ್‌ಟಿ, ಟಿಡಿಎಸ್‌ ಹಾಗೂ ಆರ್‌ಬಿಐ ಶುಲ್ಕದ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಸೀಮಾ ಬಾನು ಒಟ್ಟು ₹2,34,200 …

Read More »

ಕೇವಲ ₹20 ವಿದ್ಯುತ್ ಬಿಲ್ ಪಾವತಿಸಲು ಹೋಗಿ ₹1.99 ಲಕ್ಷ ಕಳೆದುಕೊಂಡ 71 ವರ್ಷದ ವ್ಯಕ್ತಿ!

ಬೆಂಗಳೂರು: ₹20 ವಿದ್ಯುತ್ ಬಿಲ್ ಪಾವತಿಸಲು ಮುಂದಾದ 71 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.99 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ಸಂದೇಶ ನಂಬಿ ನಕಲಿ ಆಯಪ್ ಡೌನ್‌ಲೋಡ್ ಮಾಡಿದ ಬಳಿಕ ಅವರ ಎಸ್‌ಬಿಐ ಖಾತೆಯಿಂದ ಅನಧಿಕೃತ ವಹಿವಾಟು ನಡೆದಿದೆ. ವಂಚನೆ ಗೊತ್ತಾದ ತಕ್ಷಣ ಬ್ಯಾಂಕ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ, ಎಸ್‌ಬಿಐ ₹1.99 ಲಕ್ಷ ಮರುಪಾವತಿಸಲು ನಿರಾಕರಿಸಿತ್ತು. ಗ್ರಾಹಕ ಆಯೋಗಗಳು …

Read More »