Breaking News

BigTv News

ಭೀಮನ ಅಮಾವಾಸ್ಯೆ ಹಿಂದಿನ ದಿನವೇ ಭೀಕರ ಅಪಘಾತಕ್ಕೆ 7 ಜನ ಬಲಿ

ಬೀದರ್ ಮೂಲದ ಕೂಲಿ ಕಾರ್ಮಿಕರು ತೆಲಂಗಾಣದ ಜಾಹಿರಾಬಾದ್ ಬಳಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಟೋ ಚಾಲಕ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಮೆದಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಶ್ರೀದೇವಿ, ರೇಖಾ, ಕವಿತಾ, ರೇಷ್ಮಾ, ದೇವದಾಸ್, ನಿಖಿತಾ ಸೇರಿದಂತೆ 7 ಮಂದಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆ ತೆರಳುತ್ತಿದ್ದ …

Read More »

ಪಿಎಸ್‌ಐಗೆ ಕಟ್ಟಿಗೆಯಿಂದ ಹಲ್ಲೆ, ಮುಂಗೈ ಮೂಳೆ ಮುರಿತ

ಯಾದಗಿರಿ: ಪ್ಯಾಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪಿಎಸ್‌ಐ ಮೇಲೆ ವ್ಯಕ್ತಿಯೊಬ್ಬ ಕಟ್ಟಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ಎಡಗೈ ಮುಂಗೈ ಮೂಳೆ ಮುರಿದ ಘಟನೆ ಸೈದಾಪುರದಲ್ಲಿ ಸೋಮವಾರ ಸಂಜೆ ನಡೆದಿದೆ. ಸೈದಾಪುರ ಠಾಣೆಯ ಪಿಎಸ್‌ಐ ಭೀಮರಾಯ ದಾನನ್ನೋರ ಗಾಯಗೊಂಡವರು. ಕಾಂಚನಾ ಲಾಡ್ಜ್ ಸಮೀಪ ಮಳೆಯಿಂದಾಗಿ ಅಂಗಡಿ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬರು ಕೆಲವರು ಹಲ್ಲೆ ಮಾಡಲು ಬೆನ್ನಟ್ಟುತ್ತಿದ್ದಾರೆ ಎಂದು ಪೊಲೀಸರ ಬಳಿ ರಕ್ಷಣೆ ಕೋರಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮೂವರು ಆತನ ಮೇಲೆ ಹಲ್ಲೆ …

Read More »

ಕೊರ್ದಬ್ಬು ದೈವಸ್ಥಾನದ ಕಾಣಿಕೆ ಹುಂಡಿ ಕಳವು – ಆರೋಪಿ ಬಂಧನ

ಮಂಗಳೂರು: ಸುರತ್ಕಲ್ ಸಮೀಪದ ಮಧ್ಯ ಕೊಡಿಪಾಡಿಯ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕಾಣಿಕೆ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಆರೋಪಿ ಸುಖೇಶ್ ನಾಯ್ಕ್ (40)ನನ್ನು ಬಂಧಿಸಿದ್ದಾರೆ. ಆ.5ರಂದು ಬೆಳಗಿನ ಜಾವ ದೈವಸ್ಥಾನಕ್ಕೆ ನುಗ್ಗಿದ್ದ ಆರೋಪಿ, ಕಬ್ಬಿಣದ ಆಯುಧದಿಂದ ಬಾಗಿಲು ಹಾಗೂ ಕಿಟಕಿ ಮುರಿದು ಕಾಣಿಕೆ ಹುಂಡಿ ಕಳವು ಮಾಡಿದ್ದ. ಹುಂಡಿಯಲ್ಲಿದ್ದ ಸುಮಾರು ₹15 ಸಾವಿರ ನಗದನ್ನು ದೋಚಿಕೊಂಡು ಪರಾರಿಯಾಗಿದ್ದ. ಖಚಿತ ಮಾಹಿತಿ ಮೇರೆಗೆ ಆ.10ರಂದು ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ …

Read More »

ಚಿಕ್ಕಮಗಳೂರು ಡಿಸಿ ಹೆಸರಲ್ಲಿ ನಕಲಿ ವಾಟ್ಸಪ್ ಖಾತೆ, ಆಹಾರ ಇಲಾಖೆ ಅಧಿಕಾರಿಗೆ 50,000 ರೂ. ಟೋಪಿ!

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಹೆಸರು ಮತ್ತು ಭಾವಚಿತ್ರ ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರು ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಅವರಿಗೆ ₹50 ಸಾವಿರ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ವಂಚಕರು ಡಿಸಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ತುರ್ತಾಗಿ ಹಣ ವರ್ಗಾಯಿಸುವಂತೆ ಯೋಗಾನಂದ್ ಅವರಿಗೆ ಸಂದೇಶ ಕಳುಹಿಸಿದ್ದರು. ಜಿಲ್ಲಾಧಿಕಾರಿಗಳೇ ಸಂದೇಶ ಕಳುಹಿಸಿದ್ದಾರೆಂದು ನಂಬಿದ ಅವರು, ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ ₹50 ಸಾವಿರ ಆನ್‌ಲೈನ್ ಮೂಲಕ …

Read More »

ಪತ್ನಿ ಮೇಲಿನ ಅನುಮಾನಕ್ಕೆ ಜಿಲೆಟಿನ್ ಸ್ಫೋಟ: ತಂದೆ-ಮಗಳು ಸ್ಥಳದಲ್ಲೇ ಸಾವು

ಕಲಬುರಗಿ: ಪತ್ನಿ ಮೇಲಿನ ಅನುಮಾನಕ್ಕೆ ವ್ಯಕ್ತಿಯೊಬ್ಬ ಮನೆಯೊಳಗೆ ಜಿಲೆಟಿನ್ ಕಡ್ಡಿ ಸ್ಫೋಟಿಸಿದ ಪರಿಣಾಮ ತಂದೆ-ಮಗಳು ಮೃತಪಟ್ಟಿರುವ ದಾರುಣ ಘಟನೆ ಆಳಂದ ತಾಲೂಕಿನ ಮಟಕಿ ತಾಂಡದಲ್ಲಿ ನಡೆದಿದೆ. ಮೃತರನ್ನು ಶಿವಲಾಲ್ ಬಳಿರಾಮ್ ರಾಠೋಡ್ (50) ಹಾಗೂ ಅವರ ಪುತ್ರಿ ಮೀರಾ (15) ಎಂದು ಗುರುತಿಸಲಾಗಿದೆ. ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಲಾಲ್ ಅಲ್ಲಿಂದ ಜಿಲೆಟಿನ್ ಕಡ್ಡಿ ತಂದು, ಪತ್ನಿ ಹಾಗೂ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಸಿ ಬಳಿಕ ಸ್ಫೋಟಿಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಶಿವಲಾಲ್ …

Read More »

ಕೆಎಸ್‌‍ಆರ್‌ಟಿಸಿ ಬಸ್ಸಿನಲ್ಲಿ ಅನುಮಾನಾಸ್ಪದವಾಗಿ ಮಡಿಕೇರಿಗೆ ತೆರಳುತ್ತಿದ್ದ 30 ಮಂದಿ ಮೂಲ ಪತ್ತೆ

ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಮಡಿಕೇರಿಗೆ ತೆರಳುತ್ತಿದ್ದ ಸುಮಾರು 30 ಮಂದಿ ಬಾಂಗ್ಲಾದೇಶದವರು ಎಂಬ ಅನುಮಾನದಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಸ್‌ ತಡೆದು ಪ್ರತಿಭಟನೆ ನಡೆಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಯಾಣಿಕರನ್ನು ಪರಿಶೀಲಿಸಿದರು. ಪೊಲೀಸರ ವಿಚಾರಣೆಯಲ್ಲಿ ಬಹುತೇಕರು ಅಸ್ಸೋಂ ಮೂಲದವರಾಗಿದ್ದು, ಮಡಿಕೇರಿಯ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದರು ಎಂಬುದು ತಿಳಿದುಬಂದಿದೆ. ತಂಡದಲ್ಲಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರ …

Read More »

ಕಲಬುರಗಿ: ಪತಿ-ಪತ್ನಿ ಜಗಳದಲ್ಲಿ ತಂದೆ-ಮಗಳು ಸಾವು; ಐವರಿಗೆ ಗಂಭೀರ ಗಾಯ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ಪತಿ-ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತಿಯೊಬ್ಬ ಸ್ಫೋಟಕ ಬಳಸಿ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ನಡೆದ ಸ್ಫೋಟದಲ್ಲಿ ಶಿವಲಾಲ್‌ ಬಲಿರಾಮ ರಾಠೋಡ (49) ಹಾಗೂ ಅವರ 15 ವರ್ಷದ ಮಗಳು ವೀರಾ ಶಿವಲಾಲ್‌ ರಾಠೋಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಸವಿತಾ (40), ಮಗ ಪ್ರಕಾಶ್‌ (19) ಸೇರಿದಂತೆ ಸಂಬಂಧಿಕರಾದ ಸುರೇಖಾ ಚವ್ಹಾಣ …

Read More »

ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿ ತಲಾಖ್ ಹೇಳಿದ ಪತಿ.!

ಬೆಂಗಳೂರು: ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯಿಂದ ದೈಹಿಕ, ಮಾನಸಿಕ ಕಿರುಕುಳ ಅನುಭವಿಸಿ, ಬಳಿಕ ತಲಾಖ್ ಹೇಳಿ ಮನೆಯಿಂದ ಹೊರಹಾಕಲಾಗಿದೆ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳ, ಹಲ್ಲೆ ಹಾಗೂ ಬೆದರಿಕೆ ಸೇರಿದಂತೆ ಹಲವು ಆರೋಪಗಳನ್ನು ಕುಟುಂಬ ಮಾಡಿದೆ. ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದ ವಿಚಾರದಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಪತ್ನಿಯ ಮೇಲೆ ಹಲ್ಲೆ ನಡೆಸಿ ಕಾಲಿಗೆ ಬಿಸಿನೀರು ಸುರಿಸಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಬಳಿಕ ಮನೆಯಲ್ಲೇ ತಲಾಖ್ …

Read More »

ಕಾಂಗ್ರೆಸ್‌ ಮುಖಂಡನ ಹತ್ಯೆಗೈದ ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

ಉಡುಪಿ: ಮುದರಂಗಡಿಯ ಕಾಂಗ್ರೆಸ್‌ ಮುಖಂಡ ಡೇವಿಡ್ ಡಿಸೋಜ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಉಡುಪಿ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಉತ್ತರಾಖಂಡದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತೋಗಿ ಹಾಗೂ ಬಿಹಾರದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಎಂಬುವವರನ್ನು ಪ್ರಕರಣದ ತನಿಖಾಧಿಕಾರಿ ಕಾಪು ಪೊಲೀಸ್ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪೊಲೀಸರು ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ …

Read More »

ಒಂದೇ ಕುಟುಂಬದ ಆರು ಮಂದಿಗೆ ಇರಿತ: ನಾಲ್ವರ ಬಂಧನ

ಕಾಸರಗೋಡು: ಒಂದೇ ಕುಟುಂಬದ ಬಾಲಕ ಸೇರಿ ಆರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕೊರಕೋಡಿನ ಇಮ್ರಾನ್, ತಳಂಗರೆ ಬಾಂಗೋಡಿನ ಸನಾಫ್, ಕೊರಕೋಡಿನ ಅಹಮದ್ ಹಾಗೂ ಬಾಂಗೋಡಿನ ಬಾಸಿತ್ ಬಂಧಿತರು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆ.8ರಂದು ರಾತ್ರಿ ಕೊರಕೋಡಿನ ಅಂಗಡಿಯೊಂದರ ಬಳಿ ಜಾಫರ್ ಸಾದಿಕ್, ಅವರ 15 ವರ್ಷದ ಸಹೋದರ, ತಂದೆ ಅಬ್ದುಲ್ ಕರೀಂ ಸೇರಿದಂತೆ ಆರು ಮಂದಿಗೆ ಇರಿದು ಗಾಯಗೊಳಿಸಲಾಗಿತ್ತು. …

Read More »