ಅಮೇರಿಕಾ: ಅಧ್ಯಕ್ಷ ಜೋ ಬಿಡೆನ್ ಸೆಪ್ಟೆಂಬರ್ 21 ರಂದು ಡೆಲವೇರ್ನಲ್ಲಿ ನಾಲ್ಕನೇ ವ್ಯಕ್ತಿಗತ ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸಲು ಮುಂದಾಗಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರನ್ನು ಸ್ವಾಗತಿಸಲು ಮುಂದಾಗಿದ್ದಾರೆ. ಈ ಶೃಂಗಸಭೆ ಭಾರತ ಮತ್ತು ಅಮೆರಿಕಾ ನಡುವೆ ಹಲವು ಕಾರ್ಯತಂತ್ರದ ಏಕ ಅಭಿಪ್ರಾಯವನ್ನು ಹೆಚ್ಚಿಸುವುದರ ಮೇಲೆ ಸಂಪೂರ್ಣ ಕೇಂದ್ರೀಕರಿಸುತ್ತದೆ. ಮುಕ್ತ ಮತ್ತು ಮುಕ್ತ ಇಂಡೋ ಪೆಸಿಫಿಕ್ ಪ್ರದೇಶದ ಹಂಚಿಕೆಯ ದೃಷ್ಟಿಕೋನದಲ್ಲಿ ಕೂಡ ಚರ್ಚೆ ನಡೆಯಲಿದೆ. …
Read More »ಮೈಸೂರು ದಸರಾ: ದೀಪಾಲಂಕಾರಕ್ಕೆ ಮುಂಬೈ ಕೋಲ್ಕತ್ತಾ ಚೀನಾ ತಂತ್ರಜ್ಞಾನದ ಬಳಕೆ
ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರವೂ ಒಂದು, ದಸರಾ ಅವಧಿಯೂ ಸೇರಿದಂತೆ ಸುಮಾರು ಒಂದು ತಿಂಗಳ ಕಾಲ ಇಡೀ ಮೈಸೂರು ನಗರ ದೀಪಧಾರಿಣಿಯಂತೆ ಕಂಗೊಳಿಸುತ್ತದೆ. ವರ್ಷದಿಂದ ವರ್ಷಕ್ಕೂ ಇದರ ಮಹತ್ವ, ಜನಾಕರ್ಷಣೆ ಹೆಚ್ಚುತ್ತಲೇ ಇದೆ. ಪಾರಂಪರಿಕ ಕಟ್ಟಡ, ವೃತ್ತ,ರಸ್ತೆಗಳಲ್ಲಿ ಅಳವಡಿಸುವ ದೀಪದ ಬಗೆಯಿಂದ ಇದು ಆಕರ್ಷಣೀಯ. ಈ ಬಾರಿ ಇನ್ನಷ್ಟು ವಿಭಿನ್ನವಾಗಿ ದೀಪಾಲಂಕಾರ ಆಯೋಜಿಸುವ ಚಟುವಟಿಕೆಗಳು ಶುರುವಾಗಿವೆ. ಚೀನಾದಲ್ಲಿ ದೀಪಾಲಂಕಾರಕ್ಕೆ ಬಳಸುವ ತಂತ್ರಜ್ಞಾನಗಳನ್ನು ಮೈಸೂರು ದಸರಾ ದೀಪಾಲಂಕರಾದಲ್ಲೂ ಹೇಗೆ …
Read More »ಕರ್ನಾಟಕದ ಅತೀ ಎತ್ತರದ ಗಣೇಶ: ಹುಬ್ಬಳ್ಳಿ ಕಾ ಮಹಾರಾಜ್
ಹುಬ್ಬಳ್ಳಿ: ಕರ್ನಾಟಕದಲ್ಲಿಯೇ ಹುಬ್ಬಳ್ಳಿಯ ಗಣೇಶೋತ್ಸವವು ಸಾಕಷ್ಟು ಪ್ರಸಿದ್ದಿಯನ್ನು ಪಡೆದುಕೊಂಡಿದ್ದು ರಾಜ್ಯದಲ್ಲೇ ಅತ್ಯಂತ ಎತ್ತರವಾದ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ದಾಜೀಬಾನಪೇಟ, ಮರಾಠಾಗಲ್ಲಿಯಲ್ಲಿ 21 ಅಡಿಗೂ ಎತ್ತರವಾದ ಗಣೇಶ ವಿಗ್ರಹವನ್ನು ಇರಿಸಲಾಗುತ್ತದೆ. ಇದು 25 ಅಡಿ ಎತ್ತರವಿದ್ದು , ಸುಮಾರು 5ಟನ್ ಗೂ ಅಧಿಕ ತೂಕ ಹೊಂದಿದೆ. ಕರ್ನಾಟಕದಲ್ಲಿಯೇ ಅತಿ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಳೆದ 42 ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಮೊದಲು ಇಲ್ಲಿ ಚಿಕ್ಕದಾದ ಮೂರ್ತಿಗಳನ್ನು …
Read More »ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆ ರದ್ದುಗೊಳಿಸಿದ ಕೇಂದ್ರ ಸರ್ಕಾರ
ನವದೆಹಲಿ: ಅಂತರರಾಷ್ಟ್ರೀಯ ಕೊರತೆಯ ಲಾಭವನ್ನ ಭಾರತೀಯ ರೈತರಿಗೆ ವರ್ಗಾಯಿಸಲು ಈರುಳ್ಳಿ ರಫ್ತಿಗೆ ಈ ಹಿಂದೆ ನಿಗದಿಪಡಿಸಿದ್ದ ಕನಿಷ್ಠ ಬೆಲೆ ಮಿತಿಯನ್ನ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ. ಸರ್ಕಾರವು ಈ ಹಿಂದೆ ಪ್ರತಿ ಟನ್ ಗೆ 550 ಡಾಲರ್ ಕನಿಷ್ಠ ರಫ್ತು ಬೆಲೆ ನಿಗದಿಪಡಿಸಿತ್ತು, ಇದರರ್ಥ ರೈತರು ತಮ್ಮ ಉತ್ಪನ್ನಗಳನ್ನು ಈ ದರಕ್ಕಿಂತ ಕಡಿಮೆ ಬೆಲೆಗೆ ವಿದೇಶದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಶುಕ್ರವಾರ ಹೊರಡಿಸಿದ ಡಿಜಿಎಫ್ಟಿ ಅಧಿಸೂಚನೆಯು ಎಂಇಪಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ …
Read More »ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಎಂಟಿಸಿಗೆ ಸೇರ್ಪಡೆಯಾದ 100 ನೂತನ ಬಿಎಸ್-6 ಬಸ್ಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ಬಡವ ಮತ್ತು ಶ್ರೀಮಂತರ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ತಂದಿದೆ. ಶಕ್ತಿ ಯೋಜನೆ ಕಾರ್ಯಗತದ ನಂತರ ಸರ್ಕಾರಿ ಬಸ್ನಲ್ಲಿ ಓಡಾಡುವರ ಸಂಖ್ಯೆ ಹೆಚ್ಚಾಗಿದೆ. …
Read More »ರಾಜ್ಯದಲ್ಲಿ ಸೋಲಾರ್ ಬೀದಿದೀಪ ಅಳವಡಿಸುವ ಹೊಂಬೆಳಕು ಯೋಜನೆ ಜಾರಿಗೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ವಿದ್ಯುತ್ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್ ವೆಚ್ಚ ಕಡಿಮೆ ಮಾಡಲು ರಾಜ್ಯದ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ಹೊಂಬೆಳಕು ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ವರ್ಷದ ಆಯವ್ಯಯದಲ್ಲಿ ಘೋಷಿಸಿದ್ದಂತೆ ಹೊಂಬೆಳಕು ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 25 …
Read More »ನಂದಿನಿ ಹಾಲಿನ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ
ರಾಮನಗರ: ಕಳೆದ ಕೆಲ ತಿಂಗಳ ಹಿಂದಷ್ಟೇ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿತ್ತು, ಆದರೆ ಈಗ ಮತ್ತೆ ನಂದಿನಿ ದರವನ್ನು ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾಗಡಿ ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಮಾತನಾಡಿ, ಕರ್ನಾಟಕದಲ್ಲಿ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ದರ ನೇರವಾಗಿ ರೈತರಿಗೆ ಹೋಗಬೇಕು, ನಂದಿನ ಹಾಲಿನ ದರ ಹೆಚ್ಚಳ ಮಾಡುವುದರ ಬಗ್ಗೆ …
Read More »ಕುಡಿಯುವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿದ ಜಿ.ಪಂ. ಸಿಇಒ
ಹೊಸಪೇಟೆ: ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಶಾ ಅವರು ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹತ್ತಿರದ ಪಾವಗಡ ಕುಡಿಯುವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿದ್ದಾರೆ. ನೀರಿನ ಶುದ್ಧೀಕರಣ ಘಟಕಗಳಲ್ಲಿ ಕ್ಯಾಸ್ಕೇಡ್ ಏರೇಟರ್, ಸ್ಟಿಲ್ಲಿಂಗ್ ಬೇಸಿನ್, ಫ್ಲಾಶ್ ಮಿಕ್ಸರ್ಸ್, ಕೆಮಿಕಲ್ ಹೌಸ್, ಕ್ಲೋರೀನ್ ಹೌಸ್, ಫಿಲ್ಟರ್ ಹೌಸ್ ಸೇರಿದಂತೆ ವಿವಿಧ ಉಪ ಘಟಕಗಳನ್ನು ಖುದ್ದಾಗಿ ವೀಕ್ಷಿಸಿ ತಾಂತ್ರಿಕ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಘಟಕಗಳ …
Read More »ಬತ್ತಿದ ಕೆರೆಗಳಿಗೆ ಜೀವಕಳೆ ತುಂಬಿದ ತುಂಗಭದ್ರೆ
ಗದಗ: ಎರಡು ವರ್ಷಗಳಿಂದ ಮಳೆ ಇಲ್ಲದೇ ಬತ್ತಿದ್ದ ಕೆರೆಗಳಿಗೆ ಮತ್ತೆ ಜೀವಕಳೆ ಬಂದಿದ್ದು, ಜಿಲ್ಲೆಯ ಐತಿಹಾಸಿಕ ಡಂಬಳದ ವಿಕ್ಟೋರಿಯಾ ಕೆರೆ, ನಗರದ ಭೀಷ್ಮ ಕೆರೆ ಸೇರಿ ಬಹುತೇಕ ಕೆರೆಗಳಿಗೆ ಸಿಂಗಟಾಲೂರು ಎಡದಂಡೆ ಕಾಲುವೆ ಮೂಲಕ ತುಂಗಭದ್ರಾ ನೀರು ಹರಿಸಲಾಗುತ್ತಿದ್ದು, ಕೆರೆಗಳಿಗೆ ಜೀವಕಳೆ ಬಂದಂತಾಗಿದೆ. ಕಳೆದ ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರಿಲ್ಲದ ಕಾರಣ ಕೆರೆಗಳನ್ನೇ ಅವಲಂಬಿಸಿದ್ದ ಗ್ರಾಮಗಳು ತೊಂದರೆ ಅನುಭವಿಸಿದ್ದವು. ಅಲ್ಲದೇ, ಕೃಷಿಗೆ ನೆರವಾಗಿದ್ದ ಕೆರೆಗಳು ಬತ್ತಿದ್ದರಿಂದ ರೈತರು ಪರದಾಡಿದ್ದರು. ಪ್ರಸಕ್ತ ಮುಂಗಾರಿನಲ್ಲಿ …
Read More »ನಿರುದ್ಯೋಗ ಯುವಕರಿಂದ ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ
ಅಳವಂಡಿ: ತಾವು ಪಡೆದ ಶಿಕ್ಷಣ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಕೊಪ್ಪಳ ತಾಲ್ಲೂಕಿನ ನಾಲ್ವರು ಯುವಕರು ಕಳೆದ ಮೂರು ವರ್ಷಗಳಿಂದ ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಉಚಿತ ಮನೆಪಾಠ ಮಾಡುತ್ತಿದ್ದಾರೆ. ಕೊಪ್ಪಳ ತಾಲ್ಲೂಕಿನ ನೀರಲಗಿ ಗ್ರಾಮದ ಪದವೀಧರರಾದ ಆಂದೇಶ ಉಳ್ಳಾಗಡ್ಡಿ, ವಿನಾಯಕ ಮರೇಬಾಳ, ಶಂಕರಗೌಡ ಪೊಲೀಸ್ ಪಾಟೀಲ, ದವನಕುಮಾರ ಆನಂದಹಳ್ಳಿ ಎಂಬುವವರು ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಎರಡರಿಂದ ಮೂರು ಗಂಟೆಗಳ ಕಾಲ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಗ್ರಾಮದ ಯುವಕರಾದ ಆಂದೇಶ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





