ಸಾಮಾನ್ಯವಾಗಿ ನಾಯಿ ಮೇಲೆ ಚಿರತೆ ದಾಳಿ, ನಾಯಿಯನ್ನು ಹೊತ್ತೊಯ್ದ ಚಿರತೆ ಎಂಬ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿ ಚಿರತೆಯೊಂದನ್ನು ನಾಯಿಗಳ ಗುಂಪು ಬೇಟೆಯಾಡಿ ಕೊಂದಿದೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಐದಾರು ನಾಯಿಗಳು ಚಿರತೆಯನ್ನು ಸುತ್ತುವರಿದು ದಾಳಿ ಮಾಡಿರುವ ಪರಿಣಾಮ ಚಿರತೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅಲ್ಲೇ ಪ್ರಾಣಬಿಟ್ಟಿದೆ. @TheBrutalNature ಮೇಲೆ ನಾಯಿಗಳ ದಾಳಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 27ರಂದು …
Read More »ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಮೂವರು ಆರೋಪಿ ಸೆರೆ
ಬೆಂಗಳೂರು: ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಉತ್ತರ ಪ್ರದೇಶ ಮೂಲದ ಅಕ್ಟರ್ (38), ಪತ್ನಿ ಮುಬೀನಾ (32) ಹಾಗೂ ಸೋನು ಯಾದವ್ (39) ಎಂದು ಗುರುತಿಸಲಾಗಿದೆ. ಮೂವರು ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಮನೆಗಳ್ಳತನ ಮಾಡುತ್ತಿದ್ದರು. ಕೊನೆಗೂ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30.50 ಲಕ್ಷ …
Read More »ಸಮೋಸಾ ಮಾರಾಟ ಮಾಡುವ ವೈದ್ಯನಾಗುವ ಕನಸು ನನಸು
ನವದೆಹಲಿ: ಸಮೋಸಾ ಮತ್ತು ಪಕೋಡಾ ಮಾರಾಟ ಮಾಡುವ 18 ವರ್ಷದ ಸನ್ನಿ ಕುಮಾರ್ NEET UG ಪರೀಕ್ಷೆಯಲ್ಲಿ 720ಕ್ಕೆ 664 ಅಂಕಗಳನ್ನು ಗಳಿಸಿ ವೈದ್ಯನಾಗುವ ಬಹಳ ವರ್ಷಗಳ ಕಾಲದ ಕುಮಾರ್ ಕನಸೀಗ ನನಸಾಗಿದೆ. ಕುಮಾರ್ ದುಡಿದು ತನ್ನ ಕುಟುಂಬ ನೋಡಿಕೊಳ್ಳುತ್ತಿದ್ದನು. ಆತ ಶಾಲೆ ಮುಗಿಸಿದ ನಂತರ ಸಂಜೆ 4 ಗಂಟೆಗೆ ಅಂಗಡಿ ಓಪನ್ ಮಾಡಿ ನೋಯ್ಡಾ ಸೆಕ್ಟರ್ 12 ರಲ್ಲಿ ಸಮೋಸವನ್ನು ಮಾರಾಟ ಮಾಡುತ್ತಿದ್ದನು. ರಾತ್ರಿ 9ಗಂಟೆಗೆ ಅಂಗಡಿ ಬಾಗಿಲು …
Read More »ಮದುವೆಯಾಗುವ ಭರವಸೆ ನೀಡಿ ನರ್ಸ್ ಮೇಲೆ ನಿರಂತರ ಅತ್ಯಾಚಾರ
ಉತ್ತರ ಪ್ರದೇಶ: ಮದುವೆಯಾಗುವ ಭರವಸೆ ನೀಡಿ ನರ್ಸ್ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಭದೋಹಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಚಿಂತಾಮಣಿ ಶರ್ಮಾ ಎಂದು ಗುರುತಿಸಲಾಗಿದೆ. 36 ವರ್ಷದ ನರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಎಂ ಸಬಿಹಾ ಖಾತೂನ್, ಆರೋಪಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ …
Read More »ಬಿಎಂಟಿಸಿ ಬಸ್ : ಡಿಜಿಟಲ್ ಮಾದರಿಯ ಬಸ್‌ಪಾಸ್ ವ್ಯವಸ್ಥೆ ಜಾರಿ
ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಓಡಾಡುವವರಿಗೆ ಡಿಜಿಟಲ್ ಮಾದರಿಯ ಬಸ್‌ಪಾಸ್ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಆ ಮೂಲಕ ಡಿಜಿಟಲ್ ಸೇವೆಗೆ ಉತ್ತೇಜನ ನೀಡುವುದರ ಜೊತೆಗೆ ಪ್ರಯಾಣವನ್ನು ಸುಗಮವನ್ನಾಗಿಸಲು ಸಹಾಯ ಮಾಡುತ್ತಿದೆ. ಸೆ.15ರಂದು ಮೊಬೈಲ್ ಆ್ಯಪ್ ಮೂಲಕ ಈ ಸೇವೆಯನ್ನು ವಿತರಿಸಲು ಮುಂದಾಗಿದೆ. ಬಿಎಂಟಿಸಿ ಬಸ್ ಪ್ರಯಾಣಿಕರು ಈವರೆಗೆ ವಾರದ ಮತ್ತು ಮಾಸಿಕ ಬಸ್‌ಪಾಸ್ ಬಳಸುತ್ತಿದ್ದರು. ಪೂರ್ವ ಮುದ್ರಿತ ಪಾಸ್ ಇದಾಗಿತ್ತು. ಆದರೆ ಇನ್ಮುಂದೆ ಡಿಜಿಟಲ್ ಮಾದರಿಯ ಟುಮೋಕ್ ಹೆಸರಿನ ಆ್ಯಪ್‌ನಲ್ಲಿ ಬಸ್ …
Read More »ಮಹಿಳಾ ಅಧಿಕಾರಿಯಿಂದ ಬಾಲಕ, ಅಜ್ಜಿ ಮೇಲೆ ಹಲ್ಲೆ
ದಲಿತ ಬಾಲಕ ಮತ್ತು ಆತನ ಅಜ್ಜಿಯನ್ನು ಮಹಿಳಾ ಅಧಿಕಾರಿ ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದ್ದು ರೈಲ್ವೇ ಪೊಲೀಸ್ ಠಾಣೆ ಅಧಿಕಾರಿಗಳು ಕೃತ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣ 2023 ರ ಅಕ್ಟೋಬರ್‌ನಲ್ಲಿ ಜಬಲ್‌ಪುರದ ಕಟ್ಟಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನಲೆ ಅಧಿಕಾರಿಯನ್ನು …
Read More »ಯೋಧನಿಂದ ಕಾಂಗ್ರೆಸ್ ಶಾಸಕನಿಗೆ ಬಿತ್ತು ಧರ್ಮದೇಟು!
ಸಮಸ್ಯೆ ಹೇಳಿಕೊಳ್ಳಲು ಬಂದ ಸಿಆರ್‌ಪಿಎಫ್ ಯೋಧ ಕಾಂಗ್ರೆಸ್ ಶಾಸಕನ ವರ್ತನೆಯಿಂದ ಕೋಪಗೊಂಡು ಪಬ್ಲಿಕ್ ನಲ್ಲೇ ಥಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ರಫೀಕ್ ಖಾನ್ ಹಲ್ಲೆಗೊಳಗಾದ ಕಾಂಗ್ರೆಸ್ ಶಾಸಕ ಎಂದು ತಿಳಿದುಬಂದಿದೆ. ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಿಕಾಸ್ ಜಾಖಾ ಎಂದು ಗುರುತಿಸಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಿವೃತ್ತ ಯೋಧನಿಗೆ ಸಾರ್ವಜನಿಕರು ಥಳಿಸುತ್ತಿರುವುದನ್ನು ಕಾಣಬಹುದಾಗಿದೆ.
Read More »ಪುರಾತನ ದೇವಸ್ಥಾನದಲ್ಲಿ:ಪ್ರಯಾಣಿಕರು ರೀಲ್ಸ್ ಹುಚ್ಚಾಟ
ಕಾಂಬೋಡಿಯಾ : UNESCO ವಿಶ್ವ ಪರಂಪರೆಯ ತಾಣವಾಗಿರುವ ಕಾಂಬೋಡಿಯಾದ ಪುರಾತನ ಅಂಕೋರ್ ವಾಟ್ ದೇವಾಲಯದಲ್ಲಿ ಪ್ರವಾಸಿಗರು ಟೆಂಪಲ್ ರನ್ ಆಟವನ್ನು ಆಡುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರವಾಸಿಗರ ಹುಚ್ಚಾಟಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. 2011 ರಲ್ಲಿ ಟೆಂಪಲ್ ರನ್ ನನ್ನು ವಿಶ್ವಕ್ಕೆ ಪರಿಚಯಿಸಲಾಯಿತು, ಅಂತೆಯೇ ಕೆಲವೇ ಕೆಲವು ತಿಂಗಳಲ್ಲಿ ಆ ಗೇಮ್ ಅನ್ನು ಎಲ್ಲರೂ ಆಡಲು ಶುರು ಮಾಡಿದರು, ಆದರೆ ಇದೀಗ ಪ್ರಯಾಣಿಕರು ರೀಲ್ಸ್ ಹುಚ್ಚಿಗಾಗಿ ದೇವಸ್ಥಾನದ …
Read More »ಸರ್ ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ: ನಟ ದರ್ಶನ್
ಬೆಂಗಳೂರು: ಸರ್ ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇಎಂದು ನಟ ದರ್ಶನ್ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವ್ಯಾನ್‌ನಲ್ಲಿ ಬಳ್ಳಾರಿಗೆ ತೆರಳುವ ಐದು ಗಂಟೆಗಳ ಪ್ರಯಾಣದಲ್ಲಿ ತನ್ನ ಸಿನಿಮಾ ಜರ್ನಿ ಬಗ್ಗೆ ಪೊಲೀಸರ ಜೊತೆ ದರ್ಶನ್ ಮಾತನಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನಂತರದ ಬೆಳವಣಿಗೆಯ ಬಗ್ಗೆ ಮಾತನಾಡುವ ವೇಳೆ ದರ್ಶನ್ ಭಾವುಕರಾಗಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ …
Read More »ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ
ದಾವಣಗೆರೆ: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮದಲ್ಲಿ ನಡೆದಿದೆ. 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. 14 ಜನರನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಮತ್ತು 6 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಐವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ರಾತ್ರಿಯಿಂದಲೇ ಕೆಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲು ನಾಲ್ಕು ಜನರರಲ್ಲಿ ವಾಂತಿ-ಬೇಧಿ ಕಂಡಿತು. ಬಳಿಕ ಗ್ರಾಮದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





