Breaking News

BigTv News

ವರ್ಷಾಂತದ ಹಿನ್ನಲೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ…

ಬೆಂಗಳೂರು: ವರ್ಷಾಂತದ ಹಿನ್ನಲೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನದಲ್ಲಿ ಲಕ್ಷಾಂತರ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ನಿನ್ನೆ ಒಂದೇ ದಿನ ಅಂದರೆ ಡಿಸೆಂಬರ್ 31ರಂದು ತಡರಾತ್ರಿಯವರಿಗೆ ಮೆಟ್ರೋದಲ್ಲಿ 6,26,202 ಜನ ಸಂಚಾರ ಮಾಡಿದ್ದಾರೆ. ಹೊಸ ವರ್ಷದ ಹಿನ್ನಲೆ ತಡರಾತ್ರಿ 2.15ರವರೆಗೆ ನಮ್ಮ ಮೆಟ್ರೋ ಸಂಚಾರ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಎಂಜಿ ರೋಡ್ ಮೆಟ್ರೋ ಮಾರ್ಗದಲ್ಲಿ ಹೆಚ್ಚು ಜನ ಸಂಚಾರ ಮಾಡಿದ್ದಾರೆ. ಇಂದಿರಾ …

Read More »

ದೇಶದಲ್ಲಿ ರಾಜಕೀಯ ಪಕ್ಷಗಳು ಐಎನ್‌ಡಿಐಎ ಮತ್ತು ಎನ್‌ಡಿಎ ಎಂಬ ಎರಡು ಬೃಹತ್ ಶಕ್ತಿ….

ಬೆಂಗಳೂರು: 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ರಾಷ್ಟ್ರೀಯ ಪಕ್ಷಗಳಿಗೆ ಹೊಸವರ್ಷ ಹತ್ತು ಹಲವು ಸವಾಲಿನ ವರ್ಷವಾಗಿ ಮಾರ್ಪಡುತ್ತಿದೆ. ದೇಶದಲ್ಲಿ ರಾಜಕೀಯ ಪಕ್ಷಗಳು ಐಎನ್‌ಡಿಐಎ ಮತ್ತು ಎನ್‌ಡಿಎ ಎಂಬ ಎರಡು ಬೃಹತ್ ಶಕ್ತಿಗಳಾಗಿ ಅಖಾಡಕ್ಕಿಳಿದಿವೆ. ಮತದಾರರು ಯಾರ ಮೇಲೆ ಒಲವು ತೋರುತ್ತಾರೋ ಗೊತ್ತಿಲ್ಲ. ಆದರೆ ಮತದಾರರನ್ನು ಓಲೈಸುವ ಕಾರ್ಯಗಳಂತು ಎಗ್ಗಿಲ್ಲದೆ ನಡೆಯಲಿದೆ. ಕರ್ನಾಟಕದ ಮಟ್ಟಿಗೆ ರಾಜಕೀಯವಾಗಿ ಹೇಳುವುದಾದರೆ ಕಳೆದ ವರ್ಷದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಹಿಯನ್ನು ಅನುಭವಿಸಿದರೆ, …

Read More »

ಸೋಮವಾರ ಉತ್ತರ ಮಧ್ಯ ಜಪಾನ್‌ ಅಧಿಕ ತೀವ್ರತೆಯ ಭೂಕಂಪ ಸಂಭವಿಸಿದೆ…..

ನವದೆಹಲಿ: ತಂತ್ರಜ್ಞಾನದಲ್ಲಿ ಸದಾ ಸುದ್ದಿ ಮಾಡುವ ಜಪಾನ್ ದೇಶದಲ್ಲಿ ಮತ್ತೆ ಸುನಾಮಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದರ ಭಾಗವೆಂಬಂತೆ ಸೋಮವಾರ ಉತ್ತರ ಮಧ್ಯ ಜಪಾನ್‌ ಅಧಿಕ ತೀವ್ರತೆಯ ಭೂಕಂಪ ಸಂಭವಿಸಿದೆ. ಜಪಾನ್‌ನ ಉತ್ತರ ಮಧ್ಯ ಭಾಗದಲ್ಲಿ ಸೋಮವಾರ ಬೆಳಗ್ಗೆ 7.6ರ ಪ್ರಾಥಮಿಕ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿ ಆಗಿದೆ. ಇಲ್ಲಿನ ಇಶಿಕಾವಾ, ನಿಗಾಟಾ ಹಾಗೂ ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಪಶ್ಚಿಮ ಪ್ರದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದೆ. …

Read More »

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ…..

ಮುಂಬೈ: ಇದು ದೇಶದ ಅತೀ ಉದ್ದದ ಸಮುದ್ರ ಸೇತುವೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗಾದರೆ ಈ ಸೇತುವೆ ಎಲ್ಲಿದೆ ಹಾಗೂ ಉದ್ಘಾಟನೆ ದಿನಾಂಕ, ವೆಚ್ಚ ಹಾಗೂ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.ದೇಶದಲ್ಲಿ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ …

Read More »

ಧಾರವಾಡದ ವಿವಿಧ ಸ್ಲಂಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ….

ಧಾರವಾಡ : ಧಾರವಾಡದ ವಿವಿಧ ಸ್ಲಂಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನ್ನತನಗರದ ಸಾದಿಕ್ ಕಬಾಡಿ ಹಾಗೂ ಹಾಸ್ಮಿನಗರದ ನಾಜಿಮ್ ಶೇಖ್ ಎಂಬುವವರೇ ಬಂಧಿತ ಆರೋಪಿಗಳು. ಇವರು ಸ್ಲಂ ಏರಿಯಾಗಳಲ್ಲಿನ ಗಾರೆ ಕೆಲಸದವರನ್ನೇ ಟಾರ್ಗೆಟ್ ಮಾಡಿ ಅವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು 200 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.

Read More »

ಬೈಕ್‌ ಸವಾರನಿಗೆ ಗುದ್ದಿಕೊಂಡು ಹೋದ ಕಾರು…

ಧಾರವಾಡ: ಬೈಕ್‌ ಸವಾರನೊಬ್ಬನಿಗೆ ಕಾರು ಡಿಕ್ಕಿ ಹೊಡೆದುಕೊಂಡು ಹೋದ ಘಟನೆ ಧಾರವಾಡದ ಜೆಎಸ್‌ಎಸ್‌ ಕಾಲೇಜು ಬಳಿ ಸಂಭವಿಸಿದೆ. ಈ ಘಟನೆಯಲ್ಲಿ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ. ಇವರು ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಪತ್ರಿಕೆ ಹಾಕಲು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರು ಚಾಲಕ ಸ್ಥಳದಲ್ಲಿ ನಿಲ್ಲದೇ ಪಾರಾಗಿ ಹೋಗಿದ್ದು, ಈ ಸಂಬಂಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

55 ಕ್ವಿಂಟಲ್ ತೂಕದ ಆನೆ ಹಾಗೂ ಅಂಬಾರಿ ತುಲಾಭಾರ ಮಾಡುವ ಮೂಲಕ ಶಿರಹಟ್ಟಿ ಫಕ್ಕಿರ ಸಿದ್ದರಾಮರ ಅಮೃತ ಮಹೋತ್ಸವ ವಿಜೃಂಭಣೆಯಿಂದ ಮಾಡಲಾಗುವುದು…..

ಹುಬ್ಬಳ್ಳಿ: 55 ಕ್ವಿಂಟಲ್ ತೂಕದ ಆನೆ ಹಾಗೂ ಅಂಬಾರಿ ತುಲಾಭಾರ ಮಾಡುವ ಮೂಲಕ ಶಿರಹಟ್ಟಿ ಫಕ್ಕಿರ ಸಿದ್ದರಾಮರ ಅಮೃತ ಮಹೋತ್ಸವ ವಿಜೃಂಭಣೆಯಿಂದ ಮಾಡಲಾಗುವುದು ಎಂದು ಶಿರಹಟ್ಟಿ ಫಕ್ಕಿರ ಸಂಸ್ಥಾನಮಠದ ಶ್ರೀ ಫಕ್ಕಿರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಶಿರಹಟ್ಟಿ ಫಕ್ಕಿರ ಸಿದ್ದರಾಮ ಸ್ವಾಮೀಜಿ ಅವರ 75ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹುಬ್ಬಳ್ಳಿ ನಗರದ 108 ಸಮಾಜದ ಮುಖಂಡರು ಆಗಮಿಸಿ ಸಲಹೆ ಸೂಚನೆ ನೀಡಿದರು. ಜನೇವರಿ 10 ರಿಂದ …

Read More »

ಕರುನಾಡ ರಕ್ಷಣಾ ವೇದಿಕೆ ಮನವಿ.ಕರ್ನಾಟಕ ರಾಜ್ಯಾದ್ಯoತ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯವಿರಬೇಕೆಂದು ಸರ್ಕಾರದ ಆದೇಶ…

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಆಂಗ್ಲ ನಾಮಫಲಕಗಳ ಕನ್ನಡೀಕರಣ ವಾಗಬೇಕು ಕರುನಾಡ ರಕ್ಷಣಾ ವೇದಿಕೆ ಮನವಿ.ಕರ್ನಾಟಕ ರಾಜ್ಯಾದ್ಯoತ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯವಿರಬೇಕೆಂದು ಸರ್ಕಾರದ ಆದೇಶವಾಗಿದೆ.ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಈಗಾಗಲೇ ಕನ್ನಡ ಜಾಗೃತಿ ಸಮಿತಿ ಹಾಗೂ ಕನ್ನಡ ಕಾಯಕ ಪಡೆಯ “ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ” ಎಲ್ಲರ ಗಮನಕ್ಕೆ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯೂ ಕೂಡ ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. …

Read More »

ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸಲಾಗುತ್ತಿದೆ….

ಕುಂದಗೋಳ: ಆರ್.ಟಿ.ಪಿ.ಸಿ.ಆರ್ ವಿಧಾನದ ಮೂಲಕ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲಾ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ವಿದ್ಯಾವತಿ ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾ‌ರ್ ಕಚೇರಿ ಯಲ್ಲಿ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕು -ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ ಮಾಡಿ ಕೊಂಡಿದ್ದೇವೆ. ಒಟ್ಟು 100 ಹಾಸಿಗೆ, 11 ವೆಂಟಿಲೇಟರ್, 25 3, 133, 643 20, 1 ಪಿ.ಎಸ್.ಎ ಆಕ್ಸಿಜನ್ -ಪ್ಲಾಂಟ್, …

Read More »

ಹೊಸ ವರ್ಷಾಚರಣೆಯ ನೆಪದಲ್ಲಿ ಅಸಭ್ಯವಾಗಿ ವರ್ತಿಸುವುದು,ಕಾನೂನು ಉಲ್ಲಂಘನೆಯ ಚಟುವಟಿಕೆ ನಡೆಸುವವರನ್ನು ಹೆಡೆಮುರಿ ಕಟ್ಟಲು ಮೈಸೂರಿನಲ್ಲಿ ಚಾಮುಂಡಿ ಪಡೆ ತಯಾರಾಗಿದೆ….

ಮೈಸೂರು: ಹೊಸ ವರ್ಷಾಚರಣೆಯ ನೆಪದಲ್ಲಿ ಡಿಸೆಂಬರ್ 31ರ ರಾತ್ರಿ ಅಸಭ್ಯವಾಗಿ ವರ್ತಿಸುವುದು, ಕುಡಿದು ಹುಚ್ಚಾಟವಾಡುವುದು ಸೇರಿದಂತೆ ಕಾನೂನು ಉಲ್ಲಂಘನೆಯ ಚಟುವಟಿಕೆ ನಡೆಸುವವರನ್ನು ಹೆಡೆಮುರಿ ಕಟ್ಟಲು ಮೈಸೂರಿನಲ್ಲಿ ಚಾಮುಂಡಿ ಪಡೆ (ಸುರಕ್ಷತಾ ಪಿಂಕ್ ಗರುಡಾ) ತಯಾರಾಗಿದೆ.ಹೊಸ ವರ್ಷಾಚರಣೆ ಸಲುವಾಗಿ ಜನ ಮನೆಯಿಂದ ಹೊರಬಂದು ತಮಗೆ ಇಷ್ಟವಾದ ಸ್ಥಳಗಳಲ್ಲಿ ಪಾರ್ಟಿಗಳನ್ನು ಮಾಡುವುದರಿಂದ ನಗರದಾದ್ಯಂತ ಜನ ಸಂದಣಿಯಿರುತ್ತದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ವರ್ಷಾಚರಣೆಯ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತದೆ. ರಾತ್ರಿಯಿಡೀ ಕೆಲವರು ನಗರದಲ್ಲಿ ಅಡ್ಡಾಡುವ ಮೂಲಕ ಹೊಸ …

Read More »