Breaking News

BigTv News

ನಿನ್ನ ರೇಟ್‌ ಎಷ್ಟು? ಕ್ಯಾಬ್‌ಗೆ ಕಾಯುತ್ತಿದ್ದ ಯುವತಿ ಬಳಿ ವ್ಯಕ್ತಿಯ ಅಸಭ್ಯ ವರ್ತನೆ!

ಬೆಂಗಳೂರು ನಗರದ ರಾಮಮೂರ್ತಿ ನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಗೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯ ದೂರಿನ ಪ್ರಕಾರ, ಆರೋಪಿ “ನಿನ್ನ ರೇಟ್‌ ಎಷ್ಟು?” ಎಂದು ಅಸಭ್ಯವಾಗಿ ಪ್ರಶ್ನಿಸಿದ್ದಾನೆ. ಘಟನೆಯನ್ನು ಮಹಿಳೆ ತನ್ನ ಮೊಬೈಲ್‌ನಲ್ಲಿ ವಿಡಿಯೋವಾಗಿ ದಾಖಲಿಸಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಹೇಳುತ್ತಿದ್ದಂತೆ ಆರೋಪಿ ನಿಂದಿಸಿ, ಬಳಿಕ ಸ್ಥಳದಿಂದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಮಹಿಳೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, …

Read More »

ಗ್ಯಾರೇಜ್‍ನಲ್ಲಿ ಬೆಂಕಿ ಅವಘಡ: 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಭಸ್ಮ

ಬೆಂಗಳೂರು: ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಕಾರು ಗ್ಯಾರೇಜ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿ, ರೇಂಜ್ ರೋವರ್, ಆಡಿ, ಜಾಗ್ವಾರ್ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಮುಂಜಾನೆ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಗ್ಯಾರೇಜ್ ಪಕ್ಕದ ಶೆಡ್‌ನಲ್ಲಿದ್ದ ಎಂಟು ಆಟೋಗಳು ಹಾಗೂ ಸಮೀಪದ ಯುಪಿವಿಸಿ ಕಿಟಕಿ ಫ್ಯಾಕ್ಟರಿಗೂ ಹಾನಿಯಾಗಿದೆ. ಫ್ಯಾಕ್ಟರಿಯ ಯಂತ್ರ ಮತ್ತು ಗ್ರಾಹಕರ ವಸ್ತುಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಆರು ಅಗ್ನಿಶಾಮಕ …

Read More »

ಅಪ್ರಾಪ್ತ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಂಧನ

ಬಾಗೇಪಲ್ಲಿ: ತಾಲೂಕಿನಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂದಿಸಿ ಆರೋಪಿಯನ್ನು ಬಾಗೇಪಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ನಂದೀಶ್​(27) ಎಂಬಾತ ಬಂಧಿತ. ಪಟ್ಟಣದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಟನೆ ಶನಿವಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. 17 ವರ್ಷದ ವಿದ್ಯಾರ್ಥಿನಿ ಮೇಲೆ ನಂದೀಶ್​ ನಿರಂತರವಾಗಿ …

Read More »

ಬೆಂಗಳೂರು: ಥಣಿಸಂದ್ರದಲ್ಲಿ ಭೀಕರ ಅಗ್ನಿ ದುರಂತ, ಕೋಟಿ ಕೋಟಿ ಮೌಲ್ಯದ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಭಸ್ಮ!

ಬೆಂಗಳೂರು ಥಣಿಸಂದ್ರದ ಕಾರು ಗ್ಯಾರೇಜ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿ, ಜಾಗ್ವಾರ್, ಆಡಿ, ರೇಂಜ್ ರೋವರ್ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿವೆ. ಗ್ಯಾರೇಜ್‌ನಲ್ಲಿದ್ದ ತೈಲ ಹಾಗೂ ದಹನಕಾರಿ ವಸ್ತುಗಳಿಂದ ಬೆಂಕಿ ವೇಗವಾಗಿ ವ್ಯಾಪಿಸಿದ್ದು, ಪಕ್ಕದ ಶೆಡ್‌ನಲ್ಲಿದ್ದ 8 ಆಟೋರಿಕ್ಷಾಗಳು ಹಾಗೂ ಸಮೀಪದ ಫ್ಯಾಕ್ಟರಿಗೂ ಹಾನಿಯಾಗಿದೆ. ಘಟನೆಯಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಐದು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಯಾವುದೇ ಪ್ರಾಣಹಾನಿ …

Read More »

ಎಂ.ಡಿ.ಎಂ.ಎ. ವಶ: ಯುವಕನ ಬಂಧನ

ಕಾಸರಗೋಡು: ಉಪ್ಪಳ ಜೋಡುಕಲ್ಲಿನಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ 112 ಗ್ರಾಂ ಎಂ.ಡಿ.ಎಂ.ಎ. (MDMA) ಮಾದಕ ವಸ್ತುವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂರನೇ ಆರೋಪಿ ಅಬ್ದುಲ್ ಸಮದ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಮೊಯ್ದೀನ್ ಕುಂಞಿ ಮತ್ತು ಫಾರೂಕ್ ಮುಹಮ್ಮದ್ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಕರ್ನಾಟಕದಿಂದ ಕಾರಿನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಪ್ರತ್ಯೇಕ ಸ್ಕ್ವಾಡ್‌ನ ಎಸ್.ಐ. ಉಮೇಶ್ …

Read More »

ಚಾಲಕನಿಂದ ಲಂಚ ಪಡೆದ ಆರೋಪ: ಕಾನ್‌ಸ್ಟೇಬಲ್‌ ಅಮಾನತು

ಬೆಂಗಳೂರು: ವಾಹನ ಚಾಲಕರಿಂದ ₹5 ಸಾವಿರ ಲಂಚ ಪಡೆದ ಆರೋಪದ ಮೇಲೆ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸೋಮಶೇಖರ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ಅಮಾನತುಗೊಳಿಸಿದ್ದಾರೆ. ಜುಲೈ 18ರಂದು ಸೆಂಟ್ ಜಾನ್ಸ್ ಮುಖ್ಯರಸ್ತೆಯಲ್ಲಿ ಕಬ್ಬಿಣದ ಲೋಡ್ ಸಾಗಿಸುತ್ತಿದ್ದ ವಾಹನದ ವಿರುದ್ಧ ಬಿಎನ್‌ಎಸ್ 285ರಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲೇ ದಂಡ ಪಾವತಿಸಬೇಕಿದ್ದರೂ, ವಾಹನ ಬಿಡಿಸುವುದಾಗಿ ಹೇಳಿ ಚಾಲಕನಿಂದ ₹5 ಸಾವಿರ ಲಂಚ …

Read More »

ನಡುರಸ್ತೆಯಲ್ಲಿ ಬರ್ಬರವಾಗಿ ಹೆಣವಾದ ರೌಡಿಶೀಟರ್! ದುಷ್ಕರ್ಮಿಗಳಿಂದ ಗುರುತೇ ಸಿಗದ ರೀತಿಯಲ್ಲಿ ಭೀಕರ ಹತ್ಯೆ!

ತುಮಕೂರು: ಜಿಲ್ಲೆಯ ಬೆಳಗುಂಬ ಸಮೀಪ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ರೌಡಿಶೀಟರ್ ಮಲ್ಲ ಅಲಿಯಾಸ್ ವೀರಣ್ಣ (38) ಅವರನ್ನು ದುಷ್ಕರ್ಮಿಗಳ ತಂಡ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ. ಇಂದು ರಾತ್ರಿ ಸುಮಾರು 8:30ರ ವೇಳೆಗೆ ಗರುಡ ಕೆಫೆ ಮುಂಭಾಗ ಬೈಕ್‌ನಲ್ಲಿ ತೆರಳುತ್ತಿದ್ದ ಮಲ್ಲನಿಗೆ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ಡಿಕ್ಕಿ ಹೊಡೆದು, ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು …

Read More »

ಪ್ರತಿಭಟನೆ ವೇಳೆ ಉಮರ್ ಖಾಲಿದ್ ಪರ ಭಿತ್ತಿಪತ್ರ ಪ್ರದರ್ಶನ: ಯುವತಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಪರ ಭಿತ್ತಿಪತ್ರ ಪ್ರದರ್ಶಿಸಿದ್ದ ಯುವತಿ ವಿರುದ್ಧ ಇಲ್ಲಿನ ಉಪ್ಪಾರಪೇಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜು.24ರಂದು ಪ್ರತಿಭಟನೆಯ ವೇಳೆ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಯುವತಿಯ ವಿರುದ್ಧ ‘ಗಲಭೆ ಉದ್ದೇಶದಿಂದ ಪ್ರಚೋದನೆ’ ನೀಡುವ ಆರೋಪದ ಮೇಲೆ ಎಫ್‍ಐಆರ್ ದಾಖಲಾಗಿದ್ದು, …

Read More »

ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಮಹೀಂದ್ರಾ XUV300 ಕಾರು ಸ್ಫೋಟಗೊಂಡಿದೆ. ಹಿಪ್ಪರಗಿಯ ಯುವರಾಜ ವೈನ್ ಸ್ಟೋರ್ ಮಾಲೀಕ ಕಮ್ ಮ್ಯಾನೇಜರ್ ಹನುಮಂತ ಅಥಣಿ ಅವರ ಕಾರು ನಿನ್ನೆ ಸಂಜೆ 4:30ಕ್ಕೆ ವೈನ್ ಸ್ಟೋರ್ ಎದುರು ನಿಲ್ಲಿಸಲಾಗಿದ್ದು, ರಾತ್ರಿ 10:45ರ ಸುಮಾರಿಗೆ ಏಕಾಏಕಿ ಕಾರು ಸ್ಫೋಟಗೊಂಡಿದೆ. ಘಟನೆಯ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಒಸಿಒ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ …

Read More »

ಬೆಂಗಳೂರಲ್ಲಿ ಮತ್ತೊಂದು ರೋಡ್‌ ರೇಜ್‌; ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಕುಡುಕ ಚಾಲಕ!

ಬೆಂಗಳೂರು ನಗರದ ಚೌಡೇಶ್ವರಿ ನಗರದಲ್ಲಿ ನಡೆದ ಭೀಕರ ರೋಡ್‌ ರೇಜ್‌ ಘಟನೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ಕ್ಯಾಬ್‌ ಚಾಲಕ ಅನಂತ್‌ ಎಂಬಾತ ವಾಹನ ಸವಾರ ಮಂಜುನಾಥ್‌ ಅವರನ್ನು ಕಾರಿನ ಬಾನೆಟ್‌ ಮೇಲೆ ಸುಮಾರು ಒಂದು ಕಿಲೋಮೀಟರ್‌ ದೂರ ಎಳೆದೊಯ್ದಿದ್ದಾನೆ. ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಮಂಜುನಾಥ್‌ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಬಳಿಕ ಆಕ್ರೋಶಗೊಂಡ ಚಾಲಕ ಕಾರು ಚಲಾಯಿಸಿದ್ದಾನೆ. ಘಟನೆಯಲ್ಲಿ ಮಂಜುನಾಥ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. …

Read More »