ಹುಬ್ಬಳ್ಳಿ ಶಿವಮೊಗ್ಗ ಗಲಾಟೆ ವಿಚಾರ ರಾಜ್ಯ ಸರ್ಕಾರದ ತುಷ್ಠೀಕರಣ ರಾಜಕಾರಣದ ಪರಮಾವದಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.ಶಿವಮೊಗ್ಗ ಗಲಾಟೆಯನ್ನ ರಾಜ್ಯ ಸರ್ಕಾರ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ.ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ತುಷ್ಢೀಕರಣ ಕಾರಣದಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ ಇದೆ ಅನ್ನೋ ಮನೋಭಾವನೆ ಇದೆ. ಕಾಂಗ್ರೆಸ್ ಸರ್ಕಾರದಿಂದ ನಮಗೆ ರಕ್ಷಣೆ ಇದೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಇಷ್ಟೊಂದು ರೀತಿಯ …
Read More »ಸಚಿವ ಪ್ರಹ್ಲಾದ ಜೋಶಿ ಅವರು ಶೌರ್ಯ ಜಾಗರಣ ಯಾತ್ರೆಗೆ ಚಾಲನೆ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಶೌರ್ಯ ಜಾಗರಣ ಯಾತ್ರೆಗೆ ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜ ಯೋಗೇಂದ್ರ ಸ್ವಾಮೀಜಿ, ಶಾಸಕ ಮಹೇಶ್ ಟೆಂಗಿನಕಾಯಿ ಉಪಸ್ಥಿತಿಯಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶೌರ್ಯ ಜಾಗರಣ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇನ್ನೂ ದೇಶಾದ್ಯಂತ ಮಾಡಲಾಗುತ್ತಿದ್ದು, ನಮ್ಮ ದೇಶದ ಚರಿತ್ರೆ …
Read More »ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಹಸ್ತಪ್ರತಿಗಳ ಆಹ್ವಾನ
ಧಾರವಾಡ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ವತಿಯಿಂದ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ ಎಂದು ಮಲ್ಲಿಕಾರ್ಜುನ ಹಿರೇಮಠ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಶಸ್ತಿಯು 20,000/- ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಕನ್ನಡದ ಹಿರಿಯ-ಕಿರಿಯ ಲೇಖಕರೆಲ್ಲ ಅಪ್ರಕಟಿತ ಕಥೆಗಳು ಮತ್ತು ನಿಯತಕಾಲಿಕಗಳು, ವಿಶೇಷಾಂಕಗಳಲ್ಲಿ ಪ್ರಕಟವಾದ ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾಗದಿರುವ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು …
Read More »9 ರಂದು ಛಾಯಾಗ್ರಾಹಕರಿಗೆಕಾನೂನು ಅರಿವು ಕೌಶಲ್ಯಾಭಿವೃದ್ಧಿಗಾಗಿ ಜಿಲ್ಲಾ ಮಟ್ಟದ ಕಾರ್ಯಾಗಾರ.
ಧಾರವಾಡ ಛಾಯಾಗ್ರಾಹಕರ ಕೌಶಲ್ಯಾಭಿವೃದ್ಧಿಗಾಗಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು 9 ಸೋಮವಾರ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 4:30ರ ವರಿಗೆ ಸುವರ್ಣ ಸಮ್ಮುಚಯ ಭವನ, ರಂಗಾಯಣ, ಧಾರವಾಡದಲ್ಲಿ ಆಯೋಜಿಸಲಾಗುತ್ತಿದೆ.ಎಂದು ಧಾರವಾಡ ಫೋಟೂ ಮತ್ತು ವಿಡಿಯೋಗ್ರಾಫರ ಸಂಘದ ಅಧ್ಯಕ್ಷ ರಾಹುಲ್ ದತ್ತಪ್ರಸಾದ ತಿಳಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಓಡುತ್ತಿರುವ ಆಧುನಿಕ ತಂತ್ರಜ್ಞಾನದಲ್ಲಿ ಅತೀ ಹೆಚ್ಚು ಸವಾಲುಗಳು ಎದುರಾಗುತ್ತಿರುವುದು ವೃತ್ತಿಪರ ಛಾಯಾಗ್ರಾಹಕರಿಗೆ ಕಾರ್ಯಕ್ರಮ ಸಂಘ ಹಮ್ಮಿಕೊಂಡಿದೆ ಎಂದರು. ಸತತ 17 ವರ್ಷಗಳಿಂದ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿಗಾಗಿ …
Read More »1978 ನನ್ನ ಜೀವನದ ಅಮೂಲ್ಯ ವರ್ಷ: ಡಾ.ವೀರೇಂದ್ರ ಹೆಗ್ಗಡೆ
ಧಾರವಾಡ : 1978 ರಲ್ಲಿ ನನ್ನ ಜೀವನದ ಅತಿ ಅಮೂಲ್ಯವಾದ ವರ್ಷ. ನನ್ನ ಮದುವೆಯಾಗಿದ್ದು 1978 ರಲ್ಲಿ ಆ ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ರಾಜ್ಯಸಭಾ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಮ್ಮ ಮದುವೆಯ ನೆನಪನ್ನು ಮೆಲುಕು ಹಾಕಿದರು. ಜೆಎಸ್ಎಸ್ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿ ಪ್ರಾರಂಭ ಮಾಡಿದ ವರ್ಷ ಅದು. ಧಾರವಾಡದಲ್ಲಿ ಜೆಎಸ್ಎಸ್ ಧಾರವಾಡ …
Read More »ಈಶ್ವರಿ ಫೌಂಡೇಶನ್ ವತಿಯಿಂದ ಸವಿಗಾನ ಕಾರ್ಯಕ್ರಮವನ್ನು ಅಕ್ಟೋಬರ್ 8 ರಂದು ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ
ಹುಬ್ಬಳ್ಳಿ :ಈಶ್ವರಿ ಫೌಂಡೇಶನ್ ವತಿಯಿಂದ ಪದ್ಮಶ್ರೀ, ಪದ್ಮವಿಭೂಷಣ ಹಾಗೂ ಸಂಗೀತ ದಿಗ್ಗಜರಾದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಇವರ ಸ್ಮರಣೆಯ ಸವಿಗಾನ ಕಾರ್ಯಕ್ರಮವನ್ನು ಅಕ್ಟೋಬರ್ ೮ ರಂದು ಸಂಜೆ ೪.೩೦ ಕ್ಕೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರಿ ಫೌಂಡೇಷನ್ ಸಂಸ್ಥಾಪಕರಾದ ಸಂತೋಷ್ ವರ್ಣೇಕರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅಧ್ಯಕ್ಷತೆಯನ್ನು ಈಶ್ವರಿ ಫೌಂಡೇಶನ್ …
Read More »8 ರಂದು ಬಸವರಾಜ ಡೋಣೂರ ಅವರ ಕುರಿತು ವಿಚಾರ ಸಂಕಿರಣ.
ಧಾರವಾಡ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕನ್ನಡ ಲೇಖಕರಾಗಿ ಸಾಮಾಜಿಕ ಚಿಂತಕರಾಗಿ ಮತ್ತು ಶೈಕ್ಷಣಿಕ ಆಡಳಿತಗಾರರಾಗಿ ಕರ್ನಾಟಕ ಮತ್ತು ಭಾರತದಲ್ಲಿ ತಮ್ಮದೇ ಆದ ಸ್ಥಾನ, ಶಿಷ್ಯವೃಂದ ಮತ್ತು ಗೆಳೆಯರ ಬಳಗ ಕಟ್ಟಿಕೊಂಡಿರುವ ಬಸವರಾಜ ಡೋಣೂರ ಅವರ ಸಾಹಿತ್ಯ ಮತ್ತು ಬದುಕಿನ ಕುರಿತು ಒಂದು ದಿನದ ವಿಚಾರ ಸಂಕಿರಣ, ಡೋಣಿ ಸಾಲು, A Melting Pot ಕೃತಿಗಳ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ದಿ 08 ರಂದು , ಬೆಳಿಗ್ಗೆ 9.30 ಘಂ ಧಾರವಾಡದ …
Read More »ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ….
ಧಾರವಾಡ : ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟದ ಸಂಸ್ಕೃತಿ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದ ವಿದ್ಯಾರ್ಥಿಗಳಾದ ಕು.ಸುಬ್ರಹ್ಮಣ್ಯ ತೋಳಮಟ್ಟಿ, .ದಾನೇಶ್ ಎಂ.ವಿ. ಹಾಗೂ ಆದಿತ್ಯ ಜನಾದ್ರಿ ಇವರು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಆಶುಭಾಷಣ ಸ್ಪರ್ಧೆಯಲ್ಲಿ ಕು.ಶ್ರೇಯಸ್ ಯಮಕನಮರಡಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಶಾಲೆಯ ಕಾರ್ಯದರ್ಶಿಗಳಾದ ರಾಘವೇಂದ್ರ ಅಂಬೇಕರ್, ಪ್ರಾಚಾರ್ಯರಾದ ಡಾ. ಅನಿತಾ …
Read More »ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವು…
ಧಾರವಾಡ : ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಹಾಗೂ ನವಲಗುಂದ ರಸ್ತೆಯಲ್ಲಿ ಸೋಮಾಪೂರ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದ ಸುರೇಶ ಎಂಬಾತನೆ ಸ್ಥಳದಲ್ಲಿಯೇ ಮೃತಪಟ್ಟವನೆಂದು ಗುರುತಿಸಲಾಗಿದೆ. ರಾಯಚೂರ ಜಿಲ್ಲೆಯ ಸಿಂಧನೂರಿನಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್, ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ ಇದರಿಂದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ …
Read More »ಧಾರವಾಡದ ಕೆಲಗೇರಿ ಗ್ರಾಮದಲ್ಲಿ ಧಾರವಾಡ ವಿಭಾಗ “ಶೌರ್ಯ ಜಾಗರಣ ರಥ ಯಾತ್ರೆ” ಆಗಮನ….
ಧಾರವಾಡ :ಧಾರವಾಡದ ಕೆಲಗೇರಿ ಗ್ರಾಮದಲ್ಲಿ ಧಾರವಾಡ ವಿಭಾಗ “ಶೌರ್ಯ ಜಾಗರಣ ರಥ ಯಾತ್ರೆ” ಆಗಮಿಸಿದ್ದು. ಕೆಲಗೇರಿ ಗ್ರಾಮದ ಮಹಿಳೆಯರು ಪೂರ್ಣ ಕುಂಭದೊಂದಿಗೆ ಮತ್ತು ಗ್ರಾಮದ ರೈತರು ರಥವನ್ನು ಭವ್ಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿದ ಆರ್.ಎಸ.ಎಸ ನ ಹಿರಿಯರಾದ ಶ್ರೀಧರ ನಾಡಿಗೇರ ಅವರು ಮಾತನಾಡಿ ಸನಾತನ ಧರ್ಮ ಅಮರ, ಭಾರತ ಜಗತ್ತಗುರು ಆಗಬೇಕೆಂದ್ರೆ ಹಿಂದೂಗಳು ಜಾಗೃತವಾಗಬೇಕ, ಒಂದಾಗಬೇಕು ಎಂದು ಕರೆಕೊಟ್ಟರು. ರಥದಲ್ಲಿ ಹನುಮನ ಮೂರ್ತಿ ಸ್ಥಾಪಿಸಲ್ಪಟ್ಟಿತು ರಥ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





