Breaking News

BigTv News

SIR ಕರ್ತವ್ಯದ ನಡುವೆ PDOಗಳ ಪಾರ್ಟಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದ ನಡುವೆ ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಪಾರ್ಟಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಬೇಕಿದ್ದ ಅಧಿಕಾರಿಗಳು ಕರ್ತವ್ಯದ ವೇಳೆಯೇ ಮೋಜು-ಮಸ್ತಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬರಗಾಲದ ಪರಿಸ್ಥಿತಿಯ ನಡುವೆಯೂ ಗುಂಡು-ತುಂಡಿನ ಪಾರ್ಟಿ ನಡೆಸಿದ್ದು, ಸಿದ್ದೇಶ್ವರಸ್ವಾಮಿ ಹೆಸರಿನಲ್ಲಿ …

Read More »

ಮನೆ ಕಟ್ಟಲು 15 ಲಕ್ಷ ಸಾಲ; ಫೈನಾನ್ಸ್‌ನವರ ಕಾಟಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಕೋಲಾರ ಜಿಲ್ಲೆಯ ಛತ್ರಕೋಡಿಹಳ್ಳಿ ಸಮೀಪ ಸಾಲದ ಬಾಧೆಯಿಂದ ಮನನೊಂದ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಪ್ರಮೀಳ (40), ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಮೃತರು. ಕುಟುಂಬವು ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಸುಮಾರು ₹15 ಲಕ್ಷ ಸಾಲ ಮಾಡಿಕೊಂಡಿದ್ದು, ಖಾಸಗಿ ಫೈನಾನ್ಸ್ ಹಾಗೂ ಸಂಘ-ಸಂಸ್ಥೆಗಳ ಸಾಲದ ಒತ್ತಡ ಹೆಚ್ಚಾಗಿತ್ತು. ಇದೇ ವಿಚಾರವಾಗಿ ರಾತ್ರಿ …

Read More »

ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಸರಿಯಾಗೇ ಗೂಸಾ ಕೊಟ್ಟ ಚಾಲಕ

ಬೆಂಗಳೂರು: ಹೊರವರ್ತುಲ ರಸ್ತೆಯ 500D ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ಹೆದರದ ಯುವತಿ ಗಟ್ಟಿಯಾಗಿ ಧ್ವನಿ ಎತ್ತಿ ಆರೋಪಿಯ ವಿರುದ್ಧ ಪ್ರತಿಭಟಿಸಿದ್ದಾರೆ. ಯುವತಿಯ ಕಿರುಚಾಟ ಕೇಳಿದ ಚಾಲಕ ಪ್ರವೀಣ್ ತಕ್ಷಣ ಬಸ್‌ನ್ನು ನಿಲ್ಲಿಸಿ ಆರೋಪಿಯನ್ನು ಪ್ರಶ್ನಿಸಿದ್ದಾರೆ. ಆದರೆ ಆರೋಪಿಯು ಚಾಲಕನ ಮೇಲೆಯೇ ಉಗುಳಿದ ಹಿನ್ನೆಲೆಯಲ್ಲಿ ಚಾಲಕ ಹಾಗೂ ಪ್ರಯಾಣಿಕರು ಆರೋಪಿಯನ್ನು ಹಿಡಿದು ನಿಯಂತ್ರಣಕ್ಕೆ ತಂದಿದ್ದಾರೆ. ಯುವತಿಯ ಧೈರ್ಯ ಮತ್ತು ಚಾಲಕ ಪ್ರವೀಣ್ …

Read More »

ವಿದ್ಯುತ್ ಸಂಪರ್ಕದ ವಿಚಾರಕ್ಕೆ ಕಿರಿಕ್ – ಜಮೀನು ಮಾಲಿಕನ ಬರ್ಬರ ಹತ್ಯೆ!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗುಳಘಟ್ಟ ಗ್ರಾಮದಲ್ಲಿ ವಿದ್ಯುತ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ನಡೆದಿದೆ. ಗುಳಘಟ್ಟ ಗ್ರಾಮದ ರುದ್ರೇಗೌಡ ಕೊಲೆಯಾದ ದುರಂತ ವ್ಯಕ್ತಿಯಾಗಿದ್ದಾರೆ. ನೆರೆಯ ಜಮೀನಿನ ಮಾಲೀಕನ ಜೊತೆಗೆ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ತೆಗೆದುಕೊಳ್ಳುವ ವಿಷಯದಲ್ಲಿ ರುದ್ರೇಗೌಡ ಅವರಿಗೆ ಗಲಾಟೆಯಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. …

Read More »

ರಾತ್ರೋ ರಾತ್ರಿ ಅಪರಿಚಿತ ದುಷ್ಕರ್ಮಿಗಳ ದಾಂಧಲೆ – ಮನೆ, ಕಾರು ಧ್ವಂಸ!

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ದಿಣ್ಣೆಪಾಳ್ಯದಲ್ಲಿ ನಾಲ್ವರು ದುಷ್ಕರ್ಮಿಗಳು ಲಾಂಗು-ಮಚ್ಚುಗಳಿಂದ ಮನೆಯೊಂದರ ಮೇಲೆ ದಾಳಿ ನಡೆಸಿ ಭೀತಿ ಸೃಷ್ಟಿಸಿದ್ದಾರೆ. ಮನೆಯ ಮಾಲೀಕ ವಿಶ್ವನಾಥ ರೆಡ್ಡಿ ಹಾಗೂ ಕುಟುಂಬದವರು ಪ್ರಾಣಭಯದಿಂದ ಮನೆಯೊಳಗೆ ಆಶ್ರಯ ಪಡೆದಿದ್ದು, ದುಷ್ಕರ್ಮಿಗಳು ಬಾಗಿಲು ಒಡೆಯಲು ವಿಫಲವಾದ ಬಳಿಕ ಕಿಟಕಿ ಗಾಜುಗಳು, ಕಾರು, ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ದಾಳಿಕೋರರು ಸಮೀಪದ ಅಂಗಡಿ ಹಾಗೂ ಬೈಕ್ ಸವಾರನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪ್ರಕರಣ …

Read More »

ಆನ್‍ಲೈನ್ ಬೆಟ್ಟಿಂಗ್ | 1,906 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಈಡಿ ಅಧಿಕಾರಿಗಳು

ಬೆಂಗಳೂರು ಮೂಲದ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ₹1,906 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಈಡಿ) ಆನ್‌ಲೈನ್ ಬೆಟ್ಟಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಪ್ತಿ ಮಾಡಿದೆ. ತನಿಖೆಯ ಪ್ರಕಾರ, ವಿವಿಧ ರಮ್ಮಿ ಅಪ್ಲಿಕೇಷನ್‌ಗಳ ಮೂಲಕ ಸುಮಾರು 3 ಕೋಟಿ ಗ್ರಾಹಕರನ್ನು ಸೆಳೆದು, ಸ್ವಯಂಚಾಲಿತ ಪ್ರೋಗ್ರಾಂಗಳ ಸಹಾಯದಿಂದ ಆಟಗಾರರಿಗೆ ನಷ್ಟವಾಗುವಂತೆ ಮಾಡಿ ಅಕ್ರಮ ಲಾಭ ಗಳಿಸಲಾಗುತ್ತಿತ್ತು. ಆಟಗಾರರನ್ನು ಸೆಳೆಯಲು ₹1,035 ಕೋಟಿ ಜಾಹೀರಾತಿಗೆ ಖರ್ಚು ಮಾಡಲಾಗಿತ್ತು. …

Read More »

ಹೂವಿನಹಡಗಲಿ: ದುಷ್ಕರ್ಮಿಯಿಂದ ಎಸ್ ಬಿಐ ಎಟಿಎಂನಲ್ಲಿ ದಾಂಧಲೆ

ಹೂವಿನಹಡಗಲಿ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ (SBI) ಎಟಿಎಂ ದುಷ್ಕರ್ಮಿಯೊಬ್ಬ ಧ್ವಂಸ ಮಾಡಿರುವ ಘಟನೆ ಶನಿವಾರ ನಸುಕಿನ ವೇಳೆ ನಡೆದಿದೆ. 2 ಗಂಟೆಯ ನಂತರ ಘಟನೆ ನಡೆದಿದ್ದು, ದುಷ್ಕರ್ಮಿಯು ಎಟಿಎಂ ಗ್ಲಾಸ್ ಒಡೆದಿರುವುದು ಮಾತ್ರವಲ್ಲದೆ, ಪಾಸ್ ಬುಕ್ ಪ್ರಿಂಟ್ ಮಾಡುವ ಯಂತ್ರವನ್ನು ಧ್ವಂಸ ಮಾಡಿದ್ದಾನೆ. ಬಾಗಿಲ ಬಳಿ ಸಿಬಂದಿ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸುವ ಪತ್ರ ಸಹ ಹಾಕಿ ಹೋಗಿದ್ದಾನೆ. ಎಟಿಎಂ ಯಂತ್ರಕ್ಕೆ ಯಾವುದೇ ಹಾನಿ ಮಾಡಿಲ್ಲ ಎಂದು …

Read More »

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ : ಆರ್‌ಎಎಫ್‌ನಿಂದ ತನಿಖೆ ಆರಂಭ

ನವದೆಹಲಿ: ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗನ್ ಬಳಸಿದ ಹಾಗೂ ಅತಿಯಾದ ಬಲಪ್ರಯೋಗ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ತನಿಖೆ ಆರಂಭಿಸಿದೆ. ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದ ಸಂದರ್ಭದಲ್ಲಿ ಪೆಲ್ಲೆಟ್ ಗನ್ ಬಳಸಲಾಗಿದೆ ಎಂದು ಆರೋಪಿಸಲಾಗಿದ್ದರೂ, ದೆಹಲಿ ಪೊಲೀಸರು ಪೆಲ್ಲೆಟ್ ಗನ್ ಅಥವಾ ರಬ್ಬರ್ …

Read More »

ಚಿಂತಾಮಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೆಜಿಗೂ ಹೆಚ್ಚು ಗಾಂಜಾ ಸಹಿತ ಇಬ್ಬರು ಆರೋಪಿಗಳು ವಶಕ್ಕೆ

ಚಿಂತಾಮಣಿ ನಗರದ ಎನ್‌ಎನ್‌ಟಿ ವೃತ್ತದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಚಿಂತಾಮಣಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶ್ರೀನಿವಾಸ್ (19) ಹಾಗೂ ಬೆಂಗಳೂರು ಮೂಲದ ರೋಜಾ (40) ಎಂದು ಗುರುತಿಸಲಾಗಿದೆ. ಗಸ್ತಿನಲ್ಲಿದ್ದ ಪೊಲೀಸರಿಗೆ ಬೆಳಿಗ್ಗೆ ಸುಮಾರು 11:30ರ ವೇಳೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಎನ್‌ಎನ್‌ಟಿ ರಸ್ತೆಯಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿಗಳು ಬ್ಯಾಗ್‌ನಲ್ಲಿ ಗಾಂಜಾ ಇಟ್ಟು ಗ್ರಾಹಕರಿಗೆ ಮಾರಾಟ ಮಾಡಲು …

Read More »

ಮಡಿಕೇರಿ: ತಮ್ಮದೇ ಕಚೇರಿ ಸಿಬ್ಬಂದಿಯಿಂದ ಲಂಚ ಪಡೆದ ಇಬ್ಬರ ಬಂಧನ

ಕೊಡಗು ಜಿಲ್ಲೆಯ ಮಡಿಕೇರಿಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇರೆಗೆ ಕಚೇರಿ ಮ್ಯಾನೇಜರ್ ವೈದ್ಯನಾಥ್ ಹಾಗೂ ಎಸ್‌ಡಿಎ ಸೋಮಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅಮಾನತುಗೊಂಡಿದ್ದ ಗ್ರೂಪ್ ‘ಡಿ’ ನೌಕರ ಶರತ್‌ಗೆ ನಿಯಮಾನುಸಾರ ಅರ್ಧ ಸಂಬಳ ಬಿಡುಗಡೆ ಮಾಡಲು ವೈದ್ಯನಾಥ್ ₹5 ಸಾವಿರ ಹಾಗೂ ಸೋಮಣ್ಣ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಇಬ್ಬರೂ ಈಗಾಗಲೇ ₹5 ಸಾವಿರ ಲಂಚ ಪಡೆದಿದ್ದರೆಂದು …

Read More »