Breaking News

BigTv News

ನಟಿ ರಾಗಿಣಿ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ನಿರ್ದೇಶಕ ನಂದ ಕಿಶೋರ್ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ವೃಷಭ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮೋಹಲ್ ಲಾಲ್ ಜೊತೆ ಕನ್ನಡದ ನಟಿ, ತುಪ್ಪದ ಹುಡುಗಿ ರಾಗಿಣಿ ನಟಿಸುತ್ತಿದ್ದು, ಚಿತ್ರತಂಡದ ಜೊತೆಗಿನ ಫೋಟೋವನ್ನ ರಾಗಿಣಿ ಹಂಚಿಕೊಂಡಿದ್ದಾರೆ. ವೃಷಭ ಸಿನಿಮಾದ ಚಿತ್ರೀಕರಣ ಕಳೆದ ಭಾನುವಾರದಿಂದ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಡಿಫರೆಂಟ್ ಆಗಿರೋ ಕಥೆಯನ್ನ ಹೇಳೋಕೆ ನಿರ್ದೇಶಕ ನಂದ ಕಿಶೋರ್ ಮುಂದಾಗಿದ್ದು, ‘ಕಾಂದಹಾರ್’ ಬಳಿಕ ಸೂಪರ್ …

Read More »

ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರವು ಐದು ಚುನಾವಣಾ ಭರವಸೆಗಳ ಅನುಷ್ಠಾನ ಮಾಡಿರುವುದರಿಂದ ಆರ್ಥಿಕ ಅಡಚಣೆ ಉಂಟಾಗಿದೆ. ಹಾಗಾಗಿ, ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ, ಅನುದಾನ ಮತ್ತು ಅಭಿವೃದ್ಧಿ ವಿಚಾರವಾಗಿ ಕೆಲವು ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ಭಾರಿ ನಿರೀಕ್ಷೆಗಳನ್ನು ಹೊಂದಿರುವ ಪಕ್ಷದ ಶಾಸಕರು …

Read More »

ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚು..

ಬೆಂಗಳೂರು: ಮಳೆಗಾಲದಲ್ಲಿ ಜ್ವರ, ಡೆಂಗ್ಯೂ ಸೇರಿದಂತೆ ಕಣ್ಣಿನ ಸೋಂಕಿನ ಸಮಸ್ಯೆ ಕೂಡ ಹೆಚ್ಚು. ಭಾರಿ ಮಳೆ ಮತ್ತು ಪ್ರವಾಹ ವಾತಾವರಣಗಳು ಇದಕ್ಕೆ ಪ್ರಮುಖ ಕಾರಣಗಳು. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲವಾಗುವ ಪರಿಸ್ಥಿತಿ, ಹವಾಮಾನ ಬದಲಾವಣೆ ಮತ್ತು ಪ್ರವಾಹ, ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚುತ್ತದೆ. ರಸ್ತೆಯಲ್ಲಿ ಮಳೆಯ ಕೊಳಚೆ ನೀರುಗಳ ಮೇಲೆ ವಾಹನಗಳು ಸವಾರಿ ಮಾಡಿದಾಗ ಅದರಿಂದ ಮೈಕ್ರೋಡ್ರಾಪ್ಸ್​ ಮೂಲಕ ಸೋಂಕುಗಳು ಪರಿಸರದಲ್ಲಿ ಹರಡುವುದರಿಂದ ಅದೂ ಕೂಡ …

Read More »

ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಹರೀಶ್‌ ರಾಜ್

ಜೊತೆ ಜೊತೆಯಲಿ’ ಧಾರವಾಹಿ ಖ್ಯಾತಿಯ ನಟ ಹರೀಶ್ ರಾಜ್ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ‘ಕಲಾಕರ್’ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನಕ್ಕೆ ಬಿಗ್ ಬಾಸ್ ಹರೀಶ್ ರಾಜ್ ಕೈ ಹಾಕಿದ್ದು, ಸದ್ಯ ಹರೀಶ್ ರಾಜ್ ನಿರ್ದೇಶನದ ‘ಪ್ರೇತʼ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಿರುವ ರಾಜ್ ನಟನಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿದೆ. ಬೆಳ್ಳಿ …

Read More »

ಕೇಂದ್ರ ಸರ್ಕಾರದ ವಿರುದ್ಧ 17 ಪ್ರತಿಪಕ್ಷಗಳ ನಾಯಕರು ಸಾಂಕೇತವಾಗಿ ಕಪ್ಪು ಬಟ್ಟೆ ಧರಿಸಿ ಗುರುವಾರ ಒಗ್ಗಟ್ಟು ಪ್ರದರ್ಶನ…

ನವದೆಹಲಿ: ಮಣಿಪುರ ಹಿಂಸಾಚಾರ ವಿಚಾರವಾಗಿ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರಿ ಗದ್ದಲ ನಡೆಯುತ್ತಿರುವ ನಡುವೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ 17 ಪ್ರತಿಪಕ್ಷಗಳ ನಾಯಕರು ಸಾಂಕೇತವಾಗಿ ಕಪ್ಪು ಬಟ್ಟೆ ಧರಿಸಿ ಗುರುವಾರ ಒಗ್ಗಟ್ಟು ಪ್ರದರ್ಶಿಸಿದ್ದಾರೆ.ಮಣಿಪುರ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿಯವರು ಹೇಳಿಕೆ ನೀಡುವಂತೆ ಪಟ್ಟು ಹಿಡಿದಿರುವ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಸಭೆ ನಡೆಸಿ ಸಂಸತ್ತಿನ ಉಭಯ …

Read More »

ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ: ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, 435 ಹುಲಿಗಳು ಪತ್ತೆಯಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂತಾರಾಷ್ಟ್ರೀಯ ಹುಲಿ ದಿನಕ್ಕೆ 2 ದಿನಗಳ ಮುನ್ನ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಲಾಗಿದೆ.ರಾಷ್ಟ್ರೀಯ ಹುಲಿ ಪ್ರಾಧಿಕಾರ (ಎನ್.ಟಿ.ಸಿ.ಎ) ಮಾರ್ಗಸೂಚಿಯ ಪ್ರಕಾರ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. …

Read More »

ಮೊದಲ ಒಡಿಐಗೂ ಮಳೆ ಕಾಟ ಕೊಡಬಹುದೇ: ಇಲ್ಲಿದೆ ಪಿಚ್‌ ರಿಪೋರ್ಟ್!

ಬ್ರಿಡ್ಜ್‌ಟೌನ್‌ (ವೆಸ್ಟ್‌ ಇಂಡೀಸ್‌): ಟೆಸ್ಟ್‌ ಸರಣಿ ಬಳಿಕ ಆತಿಥೇಯ ವೆಸ್ಟ್‌ ಇಂಡೀಸ್‌ ಮತ್ತು ಪ್ರವಾಸಿ ಟೀಮ್ ಇಂಡಿಯಾ ವೈಟ್‌ಬಾಲ್‌ ಕ್ರಿಕೆಟ್‌ ಸರಣಿಗಳ ಸಲುವಾಗಿ ತಯಾರಿ ನಡೆಸಿವೆ. ಇತ್ತಂಡಗಳು ಮೊದಲಿಗೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲಿದ್ದು, ಪ್ರಥಮ ಹಣಾಹಣಿ ಇಲ್ಲಿನ ಕೆನ್ಸಿಂಗ್ಟನ್‌ ಓವಲ್ ಕ್ರೀಡಾಂಗಣದಲ್ಲಿ ಜುಲೈ 27ರಂದು (ಗುರುವಾರ) ಜರುಗಲಿದೆ. ಎರಡು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ 1-0 ಅಂತರದ ಜಯ ದಾಖಲಿಸಿದ ರೋಹಿತ್‌ ಶರ್ಮಾ ಸಾರಥ್ಯದ ಟೀಮ್ …

Read More »

ಟೀಮ್ ಇಂಡಿಯಾ ಟ್ರೋಫಿ ಗೆಲ್ಲಬೇಕಾದರೆ ನಿರೀಕ್ಷೆಗಳ ಒತ್ತಡವನ್ನು ಜಯಿಸಬೇಕು ಕಪಿಲ್ ದೇವ್

ಬೆಂಗಳೂರು: ತವರಿನ ಅಂಗಣದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಭಾರತ ತಂಡವೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಚಾಂಪಿಯನ್ ಪಟ್ಟ ಅಲಂಕರಿಸಬೇಕಾದರೆ ನಿರೀಕ್ಷೆಗಳ ಒತ್ತಡವನ್ನು ಜಯಿಸಬೇಕೆಂದು ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಸಲಹೆ ನೀಡಿದ್ದಾರೆ. 13ನೇ ಆವೃತ್ತಿಯ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು, ಇದಕ್ಕಾಗಿ ಬಿಸಿಸಿಐ, ಈಗಾಗಲೇ ರೋಹಿತ್ ಶರ್ಮಾ ನಾಯಕತ್ವದಲ್ಲಿ ಸಂಭಾವ್ಯ …

Read More »

ಜಾಗಿಂಗ್ ಮಾಡೋ ರೀತಿಯಲ್ಲಿಬಂಗಾರದ ಅಂಗಡಿ ಕಳ್ಳತನ

ಕಲ್ಬುರ್ಗಿ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಜಾಗಿಂಗ್ ಮಾಡುವ ರೀತಿಯಲ್ಲಿ ಬಂದು ಬಂಗಾರದ ಅಂಗಡಿ ಕಳ್ಳತನ ಮಾಡಿದ ಘಟನೆ ಜರುಗಿದೆ. ರಂದು ನಸುಕಿನ ಜಾವ 3.30 ರ ಸಮಯದಲ್ಲಿ ವಾಯು ವಿಹಾರಿಗಳ ಸೋಗಿನಲ್ಲಿ ಬಂದಿದ್ದ ಖದೀಮರು. ಪಟ್ಟಣದ ಸಂತೋಷ್ ಮಾಳಿ ಎಂಬುವವರ ಜ್ಯುವೆಲರ್ ಶಾಪ್​​ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ …

Read More »

ಗದಗ ಜಿಲ್ಲೆಯಲ್ಲಿ ಪ್ರವಾಹದ ಭೀತಿ

ಗದಗ;- ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದ ಭೀತಿ ಶುರುವಾಗಿದೆ. ಹೀಗಾಗಿ ನದಿ‌ ದಡದ ಗ್ರಾಮಗಳಿಗೆ ಪ್ರವಾಹದ ಆತಂಕ ಶುರುವಾಗಿದೆ. ಮಲಪ್ರಭಾ ನದಿಯ ದಡದ ಗ್ರಾಮಗಳಲ್ಲಿ ಧ್ವನಿವರ್ದಕ ಮೂಲಕ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿ ಹಾಗೂ ಪೋಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದಾರೆ. ಮಲಪ್ರಭಾ ನದಿಯಲ್ಲಿ ದಿನದಿನೇ ನೀರನ ಮಟ್ಟ ಹೆಚ್ಚಾಗ್ತಿದೆ ನದಿಗೆ ಹೋಗಬಾರದು. ಬಟ್ಟೆ ತೊಳೆಯಲು ಹಾಗೂ ಜಾನುವಾರುಗಳನ್ನೂ …

Read More »