ರಾಯಚೂರು: ಬಾರಿ ಹತ್ತಿಗೂ ಭಾರೀ ಬೆಲೆ ಸಿಕ್ಕಿದ್ದು, ಬೆಳೆಗಾರರಿಗೆ ನಿಟ್ಟುಸಿರು ಬಿಡುವಂತಾಗಿದೆ. ಕೃಷಿಕರು ಒಂದೆಡೆ ಇಳುವರಿ ಬಂದಿಲ್ಲ ಎಂದು ಪೇಚಾಡುವ ಹೊತ್ತಲ್ಲೇ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಮಾಧಾನಕರವಾಗಿದೆ.
ಕಳೆದ ತಿಂಗಳು ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ ಸುರಿದು ಬೆಳೆಗಳಿಗೆಲ್ಲ ಕುತ್ತುಂಟಾಯಿತು. ಇಳುವರಿ ಕಡಿಮೆಯಾಗಲು ಇದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೆ, ಕೆಲವೆಡೆ ಮಳೆ ಸುರಿದರೂ ಉತ್ತಮ ಇಳುವರಿ ಸಿಕ್ಕಿದೆ. ಫಸಲು ಕಡಿಮೆ ಬಂದಿರುವ ಕಡೆ ದರ ಹೆಚ್ಚಳ ಕೈ ಹಿಡಿದರೆ, ಉತ್ತಮ ಬೆಳೆ ಬೆಳೆದ ರೈತರಿಗೆ ಈ ಬಾರಿ ಶುಕ್ರದೆಸೆ ಎಂದೇ ಹೇಳಬೇಕು.
bigtvnews | Hubli Dharwad News | Kannada News | Karnataka News Hubli News | News In Hubli | Local news

