Breaking News

BigTv News

ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ಬಿದಿಗೆ ಇಳಿದು ರೈತರ ಪ್ರತಿಭಟನೆ

ಧಾರವಾಡ: ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತೀಯಾದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಬೆಳೆ ಹಾನಿಯಾಗಿದೆ. ಮಳೆ ನೀರು ನಿಂತು ಬೆಳೆ ಹಾನಿಯಾಗುತ್ತಿದ್ದರು ಅಧಿಕಾರಿಗಳು ಸಮೀಕ್ಷೆ ಮಾಡುತ್ತಿಲ್ಲ ಆದ್ದರಿಂದಲೇ ನಿರಂತರ ಮಳೆಯಿಂದಾಗಿ ರೈತರು ಬಿದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. …

Read More »

ಬೆಣ್ಣೆಹಳ್ಳ ಸೇತುವೆ ಪ್ರದೇಶಕ್ಕೆ ಲಾಡ್ ಭೇಟಿ

ಧಾರವಾಡ ಮಾನ್ಯ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಜಿಲ್ಲೆಯ ಹೆಮ್ನೂರ್‌ ಗ್ರಾಮದ ಬೆಣ್ಣೆಹಳ್ಳ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಎನ್‌ ಎಚ್‌ ಕೋನರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿಗಳು ಭಾರಿ ಪ್ರಮಾಣದಲ್ಲಿ ಹರಿಯುತ್ತಿವೆ. ಸೇತುವೆಗಳ ಮೇಲೆ ಸಂಚರಿಸುವಾಗ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ ಎಂದು ಲಾಡ್ ಅವರು ತಿಳಿಸಿದರು.

Read More »

ವಿದ್ಯುತ್ ತಂತಿ ತಗುಲಿ ಎಮ್ಮೆ ಸಾವು….

ಹುಬ್ಬಳ್ಳಿ : ವಿದ್ಯುತ್ ತಂತಿ ತಗುಲಿ ಮೂಕಪ್ರಾಣಿ ಎಮ್ಮೆ ಸಾವನ್ನಪ್ಪಿದ ಘಟನೆ, ಹುಬ್ಬಳ್ಳಿಯ ಇಂಡಿಪಂಪ್ ಬಳಿ ನಡೆದಿದೆ. ಮಳೆಗಾಲ ಹಿನ್ನೆಲೆಯಲ್ಲಿ ವಿದ್ಯುತ್ ಕಂಬದಿಂದ ಹರಿದು ಬಿದ್ದ ವಿದ್ಯುತ್ ತಂತಿ. ಕಂಬದ ಬಳಿ ಮೇಯಲು ಹೋಗಿದ್ದ ಎಮ್ಮೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಹೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಮೂಕಪ್ರಾಣಿ ಬಲಿಯಾಗಿದೆ. ಸ್ಥಳಕ್ಕೆ ಹೆಸ್ಕಾಂ ಸಿಬ್ಬಂಧಿ ಹಾಗೂ ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಹೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು …

Read More »

ಶಿವಮೊಗ್ಗದ ಅಥ್ಲೆಟಿಕ್‌ ರೈಲಿಗೆ ಸಿಲುಕಿ ಆತ್ಮಹತ್ಯೆ…

ಶಿವಮೊಗ್ಗ: ಶಿವಮೊಗ್ಗದ ವಿನೋಬ ನಗರದ ಬಳಿ ಬೆಳಿಗ್ಗೆ ಶಿವಮೊಗ್ಗ-ತಾಳಗುಪ್ಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಿಶ್ವನಾಥ್‌ 2012ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದು,ಮಗನ ಮನೆಗೆ ತೆರಳಿದ್ದ ಅವರು ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗಕ್ಕೆ ವಾಪಾಸ್‌ ಬಂದಿದ್ದರು ಎಂದು ತಿಳಿದುಬಂದಿದೆ. ಸೋಮವಾರ ತಮ್ಮ ಸಹೋದರಿಗೆ ಕರೆ ಮಾಡಿದ್ದ ಅವರು ಯಾವುದೊ ಸರಿ ಇಲ್ಲ. ನಿಮ್ಮ ಬಳಿ ಬಂದು ಮಾತನಾಡಬೇಕು ಎಂದು ಹೆಳಿದ್ದರು ಎನ್ನಲಾಗಿದೆ. ಈ ಬಗ್ಗೆ ರೈಲ್ವೆ ಪೊಲಿಸ್‌ ಠಾಣೆಯಲ್ಲಿ ದೂರು …

Read More »

ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಳದಿ ನಂಜು ರೋಗ….

ಬೀದರ್: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೆಸರು, ಸೋಯಾ ಹಾಗೂ ಅವರೆಯಲ್ಲಿ ಹಳದಿ ನಂಜು ರೋಗಭಾದೆ ಕಂಡು ಬಂದಿದೆ.ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆ ವೇಳೆ ರೋಗ ಪತ್ತೆಯಾಗಿದೆ.ಹುಮನಾಬಾದ್ ತಾಲ್ಲೂಕಿನ ಕೆಲ ಹೊಲಗಳಲ್ಲಿ ಹೆಸರು ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಕಾಣಿಸಿದೆ.ಹಳದಿ ನಂಜು ರೋಗ ಪಸರಿಸಲು ಬಿಳಿ ನೊಣ ಕಾರಣವಾಗಿದೆ. ಪ್ರೌಢ ಹಾಗೂ ಮರಿಕೀಟ ಎಲೆ ಹಾಗೂ ಇತರ ಭಾಗಗಳಿಂದ …

Read More »

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಎಂದು ಭೇಟಿ ನೀಡಿದ ಶಾಸಕ: ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಎಂದು ಭೇಟಿ ನೀಡಿದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಆವರಣದಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಾರ್ವಜನಿಕರ ದೂರಿನ ಅನ್ವಯ ದಿಢೀರ್ ಭೇಟಿ ನೀಡಿದ ಅವರು, ಶುಚಿತ್ವವಿಲ್ಲದ ಇಡೀ ಬಸ್ ನಿಲ್ದಾಣ ಕೆಟ್ಟ ವಾಸನೆಯಿಂದ ಕೂಡಿದೆ. ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದನ್ನು ಹಾಗೂ ನಿಲ್ದಾಣ ಸ್ವಚ್ಛತೆ ಇಲ್ಲದೇ ಇರುವುದನ್ನು ಅವರು …

Read More »

ಮಗಳ ಮೇಲೆ ಅತ್ಯಾಚಾರ ವೆಸಗಿದ ಹೀನ ತಂದೆ…

ಚಾಮರಾಜನಗರ :- ಮಗಳ ಮೇಲೆ ಅತ್ಯಾಚಾರ ಮಾಡಿದ ತಂದೆಗೆ ಮಕ್ಕಳ ಸ್ನೇಹಿ ಮತ್ತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಶೇಷನ್ಸ್ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.ತಿಂಗಳ ಹಿಂದೆಯಷ್ಟೇ ಈ ಪ್ರಕರಣ ದಾಖಲಾಗಿತ್ತು.48 ವರ್ಷದ ತಂದೆ, ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಮಗಳು ಗರ್ಭಿಣಿಯಾಗಿದ್ದಳು. ಪಿಎಸ್ಐ ಪಿ. ಏನ್. ಶೇಷಾದ್ರಿ ಅವರು ತನಿಖೆ ನಡೆಸಿ ಆರೋಪಿಯ ಪಟ್ಟಿ ಸಲ್ಲಿಸಿದ್ದರು. ಆರೋಪಗಳು ಸಾಬೀತಾಗಿದ್ದರಿಂದ ಮಕ್ಕಳ ಸ್ನೇಹಿ ಮತ್ತು …

Read More »

ನಿರಂತರ ಮಳೆಗೆ ಕುಸಿದ ಮನೆಯ ಮೇಲ್ಬಾವಣಿ

ನವಲಗುಂದ: ನವಲಗುಂದ ತಾಲೂಕಿನಲ್ಲಿ ಕಳೆದ ಒಂದು ವಾರಗಳಿಂದ ಸತತ ಸುರಿಯುತ್ತಿರುವ ಮಳೆ ಜನ ಜೀವನವನ್ನೇ ಹೈರಾನ್ ಮಾಡಿದೆ. ಮಳೆ ಆಗಾಗ ಜೋರು ಮಳೆ ಹಾಗೂ ನಿರಂತರ ಜಿಟಿಜಿಟಿಯಾಗಿ ಮಳೆ ಸುರಿಸುತ್ತಿರುವುದು ಹಳೆಯ ಮಣ್ಣಿನ ಗೋಡೆಯ ಮನೆಗಳು ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬೆಳವಟಗಿ ಗ್ರಾಮದ ಮಂಜುಳಾ ಜಾವೂರ ಎಂಬುವರ ಮನೆ ಮೇಲ್ಟಾವಣಿ ಕುಸಿದು ಬಿದ್ದಿದೆ ಇದರಿಂದ ಆ ಬಡ ಕುಟುಂಬ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನು ತಾಲೂಕಿನಲ್ಲಿ …

Read More »

ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ ಅಪರಿಚತ ವ್ಯೆಕ್ತಿಗಳ ವಿರುದ್ಧ ಎಫ್ ಐ ಆರ್…

ಇಂಫಾಲ್ : ಮಣಿಪುರದಲ್ಲಿ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆಯ ಪ್ರಕರಣದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಅವರ ಮಗ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಅವರ ಚಿತ್ರಗಳನ್ನು ಪ್ರಸಾರ ಮಾಡಿದಕ್ಕೆ ಭಾನುವಾರ ರಾತ್ರಿ ಪೊಲೀಸರು ಅಪರಿಚಿತರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ.ಮಹಿಳೆಯರು ಮೆರವಣಿಗೆಯ ವಿಡಿಯೋಗಳ sreenshot ತೆಗೆದು ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಅವನ್ ಮಗನ ಚಿತ್ರವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ …

Read More »

ಹೆಂಡತಿ ಮತ್ತು ಅಳಿಯನಿಗೆ ಗುಂಡು ಹಾರಿಸಿ ಹತ್ಯೆಗೈದು ತಾವೂ ಶೂಟ್ ಮಾಡಿಕೊಂಡ ಎಸಿಪಿ ಭರತ್‌ ಗಾಯಕ್ವಾಡ್…

ಪುಣೆ: ಹೆಂಡತಿ ಮತ್ತು ಅಳಿಯನಿಗೆ ಗುಂಡು ಹಾರಿಸಿ ಹತ್ಯೆಗೈದು ತಾವೂ ಶೂಟ್ ಮಾಡಿಕೊಂಡು ಸಹಾಯಕ ಪೊಲೀಸ್ ಕಮಿಷನ‌ (ಎಸಿಪಿ) ಮೃತಪಟ್ಟ ಘಟನೆ ಸೋಮವಾರ ಪುಣೆಯಲ್ಲಿ ನಡೆದಿದೆ.ಎಸಿಪಿ ಭರತ್‌ ಗಾಯಕ್ವಾಡ್, ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಮೃತರು. ಘಟನೆಗೆ ಕಾರಣವೇನು ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು.ಬೆಳಗ್ಗಿನ ಜಾವ 3.30 ರ ಸುಮಾರಿಗೆ ಮೊದಲು …

Read More »