ಧಾರವಾಡ 3 : ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ನಗರದ ಪ್ರತಿಷ್ಠಿತ ಕೆ. ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ 2023-24 ರ ಶೈಕ್ಷಣಿಕ ವರ್ಷದಿಂದ ನೂತನ ವಿಜ್ಞಾನ ವಿಭಾಗಕ್ಕೆ ಇಲಾಖೆಯ ಅನುಮೋದನೆಯನ್ನು ನೀಡಿದ್ದಾರೆಂದು ಕೆ. ಇ. ಬೋರ್ಡ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀಕಾಂತ ಪಾಟೀಲ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯವು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 'ಎ' ಶ್ರೇಣಿ ಮಾನ್ಯತೆಯನ್ನು ಪಡೆದಿದೆ. ವಿಜ್ಞಾನ …
Read More »ಹಳ್ಳೇ ಹುಬ್ಬಳ್ಳಿ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಜಗಳ
ಧಾರವಾಡ ಜಿಲ್ಲಾ ಹುಬ್ಬಳಿಯ ಶಹರದ ಹಳೇ ಹುಬ್ಬಳ್ಳಿಯ ಬಾರ್ & ರೆಸ್ಟೋರೆಂಟ್ ನಲ್ಲಿ ನಿನ್ನೆ ತಡರಾತ್ರಿ ಬಾರ್ ಮಾಲೀಕ ಹಾಗೂ ಗ್ರಾಹಕರ ನಡುವೆ ಕ್ಷುಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಡುತ್ತಿರುವ ಹಿನ್ನಲೆ 112 ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 03 ದವರು ಸ್ಥಳಕ್ಕೆ ತೆರಳಿ ಅವರಿಗೆ ಸೂಕ್ತ ತಿಳಿಹೇಳಿದ್ದಾರೆ. ಆದರೆ ಸ್ಥಳದಲ್ಲಿ ಜಗಳದ ಸಮಸ್ಯೆ ಬಗೆಹರಿಯದ ಕಾರಣ ಅವರನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ಒಪ್ಪಿಸಿರುತ್ತಾರೆ. ಎಂದು ತಿಳಿದು ಬಂದಿದೆ.
Read More »ಜೂಜಾಟದಲ್ಲಿ ತೊಡಗಿದ್ದ, ಆರೋಪಿಗಳ ಬಂಧನ,ಹಣ ವಶಕ್ಕೆ ಪಡೆದ ಪೋಲಿಸ್ ಅಧಿಕಾರಿಗಳು
ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ, ಗದಗ ಜಿಲ್ಲೆಯ ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಪೋಲಿಸ್ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಜೂಜಾಟದ ಹಣ ವಶಪಡಿಸಿಕೊಂಡು, ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ, ಇನ್ನು ಸಾರ್ವಜನಿಕ ರಿಂದ ಸ್ಥಳದಲ್ಲಿ ಬಾಂಬೆ ಓಸಿ ಮೂಲಕ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿದ ಪೋಲಿಸರು …
Read More »ಪಾಸ್ ಪಡೆಯುವ ಸಮಯದಲ್ಲಿ ನೂಕು ನುಗ್ಗಲು ಸ್ಥಳಕ್ಕೆ ಪೋಲಿಸ್ರ ಬೇಟಿ
ಗದಗ ನಗರದ ಹೊಸ ಬಸ್ಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ಸ ಪಾಸ್ ನೀಡುವ ಸಮಯದಲ್ಲಿ ನೂಕನುಗ್ಗಲು ಉಂಟಾಗಿರುವ ಕಾರಣ ಸ್ಥಳೀಯ ಅಧಿಕಾರಿಯಗಳು ಬಸ್ಸ ನಿಲ್ದಾಣದಿಂದ ಪೋಲಿಸ್ ತುರ್ತ ಸಹಾವಾಣಿ ಕೆರೆ ಮಾಡಿದ್ದಾರೆ ತದನಂತರದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ 112 ಸಿಬ್ಬಂದಿಗಳು ಸಮಸ್ಯೆ ಪರಿಶೀಲಿಸಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಸಂದರ್ಭದಲ್ಲಿ ನೂಕು ನುಗ್ಗಲು ಮಾಡಿದ ಕೀಡಿಗೇಡಿಗಳಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಲಾಗಿರುತ್ತದೆ. ಎಂದು ತಿಳಿದು ಬಂದಿದೆ ಗದಗ ಜಿಲ್ಲೆ ಹೊಸ …
Read More »ಸುರಿಯದ ಮಳೆ ,ಸಂಕಷ್ಟದಲ್ಲಿ ರೈತನ ಬೆಳೆ, ನೀರಿಗಾಗಿ ಟ್ಯಾಂಕರ್ ಮೋರೆಹೋದ ರೈತರು.
ಹುಬ್ಬಳ್ಳಿ: ಆಕಾಶದಲ್ಲಿ ಮೋಡಗಳು ಆವರಿಸುತ್ತಿವೆ, ಆದರೆ ಮಳೆ ಹನಿ ಮಾತ್ರ ಕಾಣುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿನ ರೈತರು ಸಾಲದಲ್ಲಿ ಸಿಲುಕಿರುವ ಹಿನ್ನಲೆ ಇದೀಗ ಮುಂಗಾರು ಮಳೆಯ ಅವಕೃಪೆಯಿಂದ ಕಂಗೆಟ್ಟಿದ್ದಾರೆ. ಕುಡಿಯುವ ನೀರಿನ ಪರದಾಟದೊಂದಿಗೆ ಈಗ ಹಣವನ್ನು ಖರ್ಚು ಮಾಡಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡು ಮತ್ತೊಂದು ಹಂಗಾಮಿಗೆ ಸಿದ್ಧತೆಯಾಗಬೇಕಿತ್ತು. ಆದರೆ ತುಂತುರು ಮಳೆ ಕೂಡ ಸುರಿಯದ ಪರಿಣಾಮ ಬರಗಾರಲದ ಭಯ …
Read More »ಜಗತ್ತಿಗೆ ಮೂರು ಗಂಡಾಂತರ, ಸಾವು ನೋವುಗಳ ಸಂಖ್ಯೆ ಹೆಚ್ಚಳ, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ,ಕೋಡಿಮಠದ ಶ್ರೀಗಳ ಭವಿಷ್ಯವಾಣಿ;
ಹುಬ್ಬಳ್ಳಿಯಲ್ಲಿ ಇಂದು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ಮತ್ತೆ ಜಗತ್ತೀನಲ್ಲಿ ನಡೆಯುವ ಗಂಡಾಂತರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಒಂದು ಸರ್ಕಾರ ಬರುತ್ತೆ. ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ಈಗ ನಿಜವಾಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತೆ , ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ …
Read More »ದಾಳಿ ಮಾಡಿದ ಮಂಗನನ್ನು ಬಲೆಗೆ ಕೆಡುವಿದ ಅರಣ್ಯ ಇಲಾಖೆ, ನಾಲ್ಕು ದಿನಗಳ ನಂತರ ಮಂಗನ ಬಂಧನ:
ಧಾರವಾಡದ ಗರಗ ದಲ್ಲಿ ಹಲವರ ಮೇಲೆ ದಾಳಿ ಮಾಡಿದ್ದ ಮಂಗ ಇಂದು ಬಲೆಗೆ ಬಿದ್ದಿದೆ. ಹಲವಡೆ ದಾಳಿ ಮಾಡಿದ ಮಂಗ ಧಾರವಾಡದಲ್ಲಿನ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಸೇರಿದಂತೆ ಹಲವರಿಗೆ ಕಚ್ಚಿ ಗಾಯಗೊಳಿಸಿದ್ದ ಮಂಗನನ್ನು ಬಲೆಗೆ ಕೆಡವಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನೇತ್ರತ್ವದಲ್ಲಿ ಮಂಗನನ್ನು ಯಶಸ್ವಿ ಕಾರ್ಯಾಚರಣೆಯಿಂದ ಹಿಡಿಯಲಾಗಿದೆ ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಮದ ಇಕ್ರಾ ಗಡದಾಳೆ ಎಂಬ ಬಾಲಕಿಗೆ ಮಂಗ ಕಚ್ಚಿತ್ತು.ಗಾಯಗೊಂಡ ಅನೇಕರು …
Read More »ಧಾರವಾಡದಲ್ಲಿ ಗರ್ಭ ಸಂಸ್ಕಾರ ಕಾರ್ಯಕ್ರಮ
ದಿ 04 ರಂದು ಸಂಜೆ 4:00 ಗಂಟೆಗೆ. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸ್ಟೇಷನ್ ರೋಡ ಪ್ರಶಾಂತ ಆಸ್ಪತ್ರೆ ಮತ್ತು ಐ ವಿ ಎಫ್ ಕೇಂದ್ರ ಆವರಣದಲ್ಲಿ ಜರಗಲಿದೆ ಎಂದು.ಡಾ ಸೌಭಾಗ್ಯ ಕುಲಕರ್ಣಿ ತಿಳಿಸಿದರು ,ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭ ಸಂಸ್ಕಾರ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಜರುಗಲಿದ್ದು. ಗರ್ಭಿಣಿ ಹಾಗು ಗರ್ಭಿಣಿಯಾಗುವ ಸ್ತ್ರೀಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕೆಂದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಪೂಜ್ಯ ವಿಜಯಾನಂದ ಸ್ವಾಮೀಜಿ ವಹಿಸಲಿದ್ದು ಮುಖ್ಯ …
Read More »ಕೆಡಿಪಿ ಸಭೆಯಲ್ಲಿ ಭಾಗಿಯಾದ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ : ಹಾಗೂ ಶಾಸಕರು
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಕೆಡಿಪಿ ಸಭೆ ಜರುಗಿಸಿದರು. ವೇದಿಕೆಯಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಅಬ್ಬಯ್ಯ ಪ್ರಸಾದ, ಎಂ.ಆರ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ, ಮಹಾನಗರ ಪೊಲೀಸ್ ಪ್ರಭಾರಿ ಆಯುಕ್ತ ಕೆ.ಸಂತೋಷ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಇದ್ದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ವಿವಿಧ …
Read More »ಬಸವರಾಜ ಯತ್ನಾಳ ಅವರಿಂದ ಟ್ವೇಟ್ ಬಾಂಬ್ , ಆಧಿಕಾರಿಗಳು ಕಾಂಗ್ರೇಸ್ ಪಕ್ಷದ ಗುಪ್ತ ಸಭೆಯಲ್ಲಿ ಭಾಗಿಯಾಗಿದ್ದು ಏಕೆ ?
ಕಾಂಗ್ರೇಸ್ ಪಕ್ಷದ ನಾಯಕರುಗಳು ನಿನ್ನೆ ನಡೆದ ಉಸ್ತುವಾರಿ ಸಭೆಯಲ್ಲಿ ರಾಜ್ಯ ಪ್ರಮುಖ ಐಎಎಸ್ ಅಧಿಕಾರಿಗಳು ಬಾಗಿಯಾಗಿದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ, ಈ ಹಿನ್ನಲೆಯಲ್ಲಿ ಬಿಜೆಪಿ ಪೈರ್ ಬ್ಯಾಂಡ್ ನಾಯಕ ಬಸವರಾಜ್ ಯತ್ನಾಳ ಟ್ವೀಟ್ ಮಾಡುವ ಮೂಲಕ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಡೆಸುವ ಸಭೆಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿಗಳಿಗೆ ಏನು ಕೆಲಸ? ಬಿಬಿಎಂಪಿ ಚುನಾವಣೆಗೆ ಸಂಗ್ರಹ ಮಾಡಲು ಸೂಚಿಸಿದ್ದಾರೆಯೇ? ಬಿಬಿಎಂಪಿ ವಾರ್ಡ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





