ಧಾರವಾಡ 3 : ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ನಗರದ ಪ್ರತಿಷ್ಠಿತ ಕೆ. ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ 2023-24 ರ ಶೈಕ್ಷಣಿಕ ವರ್ಷದಿಂದ ನೂತನ ವಿಜ್ಞಾನ ವಿಭಾಗಕ್ಕೆ ಇಲಾಖೆಯ ಅನುಮೋದನೆಯನ್ನು ನೀಡಿದ್ದಾರೆಂದು ಕೆ. ಇ. ಬೋರ್ಡ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀಕಾಂತ ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯವು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 'ಎ' ಶ್ರೇಣಿ ಮಾನ್ಯತೆಯನ್ನು ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಗಣಕವಿಜ್ಞಾನ ಸಂಯೋಜನೆಗಳು ಲಭ್ಯವಿವೆ.

ಕೇವಲ ಶಿಕ್ಷಣ ಮಾತ್ರವಲ್ಲದೇ ಕ್ರೀಡೆ, ಸಂಗೀತ, ಕಿರುತೆರೆ, ಮನೋರಂಜನೆ ಮುಂತಾದ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿರುವುದು ಪ್ರಶಂಸನೀಯ. ಶಿಸ್ತು, ಸಾಂಪ್ರದಾಯಿಕ ಆಚರಣೆ ಗುರುಹಿರಿಯರಿಗೆ ಗೌರವ ಮೊದಲಾದ ಸುಸಂಸ್ಕೃತಿಗಳನ್ನು ವಿದ್ಯಾರ್ಥಿಗಳ ಜೀವನದಲ್ಲಿ ಬೆಳೆಸಲಾಗುತ್ತಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀಕಾಂತ ಪಾಟೀಲ, . ಡಿ. ಎಸ್. ರಾಜಪುರೋಹಿತ , ಎಸ್.ಎನ್.ಪರಾಂಡೆ , ಡಾ. ಎಸ್. ಎಚ್. ಹನಮಂತಗಡ, ಡಾ. ಕೆ. ಎನ್. ಕುಲಕರ್ಣಿ, ಆರ್. ಎ. ಸಿದ್ಧಾಂತಿ, ವಸಂತ ಮುರ್ಡೇಶ್ವರ, ಗುರುರಾಜ ಜಮಖಂಡಿ, ಜಿ. ಆರ್. ಭಟ್ಟ, ಮೋಹನ ಸಿದ್ಧಾಂತಿ,ಪ್ರಾಚಾರ್ಯಾರಾದ. ಶ್ರೀಮತಿ, ಎಸ್. ಜಿ ಕಡಪಟ್ಟಿ , ಎಸ್. ಎಲ್. ಶೇಖರಗೋಳ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





