ಹುಬ್ಬಳ್ಳಿಯಲ್ಲಿ ಇಂದು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ಮತ್ತೆ ಜಗತ್ತೀನಲ್ಲಿ ನಡೆಯುವ ಗಂಡಾಂತರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಒಂದು ಸರ್ಕಾರ ಬರುತ್ತೆ. ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ಈಗ ನಿಜವಾಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತೆ , ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ ಮೃತ್ಯು ಆಗುವ ಸೂಚನೆ ಇದೆ. ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯುತ್ತೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು. ಇಲ್ಲಾ ಗಂಡಾಂತರ ಕಟ್ಟಿಟ್ಟ ಬುತ್ತಿ. ಕರುನಾಡಿಗೂ ಕೆಲವೊಂದು ಆಪತ್ತು ಇದೆ. ಕೆಲ ಸಾವು ನೋವುಗಳು ಆಗ್ತವೆ. ದೈವ ಕೃಪೆಯಿಂದ ಪಾರಾಗಬಹುದು,ಭಾರತದಲ್ಲಿ ನಾನು ಹೇಳಿದಂತೆ ಒಂದು ಘಟನೆ ಆಗುತ್ತೆ. ತಪ್ಪಿಸುವಂತದ್ದು ಆಳುವವರ ಕೈಯಲ್ಲಿದೆ. ಜಗತ್ತಿನ ಸಾಮ್ರಾಟರು ತಲ್ಲಣ ಆಗ್ತಾರೆ,

ಬಡವರಿಗೆ ಗ್ಯಾರಂಟಿ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವತಂತ್ರ ಇರ್ಲಿಲ್ಲವೊ ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ರಾಜ್ಯ ಸರಕಾರದ ಆಡಳಿತದ ಬಗ್ಗೆ ಮಾತನಾಡಿದ ಶ್ರೀಗಳು ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ, ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತೆ. ಎಂದು ನಿಗೂಢ ಅರ್ಥದಲ್ಲಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ಶ್ರೀಗಳ ಭವಿಷ್ಯವಾಣಿ ರೋಚಕವಾಗಿದ್ದು ನಿಜವಾಗಿ ಜಾಗತಿಕವಾಗಿ ಎನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವದನ್ನು ಕಾದುನೋಡಬೇಕಾದೆ,
bigtvnews | Hubli Dharwad News | Kannada News | Karnataka News Hubli News | News In Hubli | Local news





