Breaking News

BigTv News

ಸಾಲ ಬಾಧೆ ತಾಳದೆ ಶಂಕರಪ್ಪ ಹುರಳಿ ಎಂಬಾತ ಆತ್ಮಹತ್ಯೆಗೆ ಶರಣಾದ ಹಿನ್ನೆಲೆ, ಕೆರೆಯ ನೀರನ್ನು ಕಾಲಿ ಮಾಡಲು ಮುಂದಾದ ಗ್ರಾಮದ ಜನ..!

ಕುಡಿಯುವ ನೀರಿಗಾಗಿ ಎಲ್ಲಿ ನೋಡಿದ್ರೂ ಹಾಹಾಕಾರವೆದ್ದಿದೆ. ಹಲವಾರು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗ್ತಿದೆ. ಆದ್ರೆ ಈ ಊರಲ್ಲಿ ಮಾತ್ರ ತುಂಬಿ ತುಳುಕುತ್ತಿರುವ ಕೆರೆಯನ್ನು ಖಾಲಿ ಮಾಡಲಾಗುತ್ತಿದೆ.. ಅಧಿಕಾರಿಯೊಬ್ಬ ತನ್ನ ಒಂದು ಲಕ್ಷದ ಫೋನ್ ಗಾಗಿ ಡ್ಯಾಂ ನೀರನ್ನು ಖಾಲಿ ಮಾಡಿದ ಪ್ರಕರಣ ಸುದ್ದಿಯಾಗುತ್ತಲೇ, ಧಾರವಾಡ ಜಿಲ್ಲೆಯಲ್ಲಿ ಇಂತಹದ್ದೆ ಪ್ರಕರಣ ಬೆಳಕಿಗೆ ಬಂದಿದ್ದು, ಇದನ್ನು ಜನರ ಮೂಢನಂಬಿಕೆ ಅನ್ನಬೇಕೋ ಅಥವಾ ನಿರ್ಧಾರ ಸರಿಯಿದೆ ಅನ್ನಬೇಕು ತಿಳಿಯದಾಗಿದೆ. ಒಂದು ಕಡೆ …

Read More »

ಆಂಬ್ಯುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.

ಕುಂದಗೋಳ : ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗ ಮಧ್ಯೆ 108 ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾದ ಘಟನೆ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಗುಡೇನಕಟ್ಟೆ ಗ್ರಾಮದ ಆಫ್ರಿನ್ ದಾದಾಪೀರ ಅಜಮಕಾನವರ ಅವರಿಗೆ ಬುಧವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು 108 ಕ್ಕೆ ಕರೆ ಮಾಡಿದಾಗ ಅಲ್ಪ ಸಮಯದಲ್ಲಿಯೇ ಆಂಬ್ಯುಲೆನ್ಸ್ ಮನೆಗೆ ಬಂದಿದೆ. ನಂತರ ಗರ್ಭಿಣಿಯನ್ನು ಕರೆದುಕೊಂಡು ಹೋಗುವಾಗ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದುದನ್ನು ನೋಡಿದ ಆಂಬ್ಯುಲೆನ್ಸ್ ಸಿಬ್ಬಂದಿ ಅಶೋಕ …

Read More »

ಹುಬ್ಬಳ್ಳಿ: ಜಿಮ್ ಮಾಲೀಕ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ…!

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿರೂರು ಪಾರ್ಕ್ ಬಳಿಯ ಆರೆಂಜ್ ಜಿಮ್ ಮಾಲೀಕ ಜಿತೇಂದ್ರ ಶೀಗಿಹಳ್ಳಿ (48) ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ತಮ್ಮ ಮನೆ ಕೊಠಡಿಯ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ರಾತ್ರಿ ತಮ್ಮ ಮನೆಯ ಮೇಲ್ಭಾಗದಲ್ಲಿರುವ ಕೊಠಡಿಗೆ ಹೋಗಿದ್ದ ಜಿತೇಂದ್ರ ಅವರು ಎಷ್ಟೊತ್ತಾದರೂ ಹೊರಗೆ ಬಂದಿಲ್ಲ. ಕುಟುಂಬದವರು ಬಾಗಿಲು ಬಡಿದಿರೂ ತೆಗೆದಿಲ್ಲ. ಅನುಮಾನ ಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ ನೇಣು ಹಾಕಿಕೊಂಡಿ ರುವುದು ಗೊತ್ತಾಗಿದೆ. ತಕ್ಷಣ ಬಾಗಿಲು `ಮುರಿದು, …

Read More »

ಸಾಮಾಜಿಕ ಸಾಮರಸ್ಯ ಕದಡದಂತೆ ಕಟ್ಟೆಚ್ಚರ ವಹಿಸಿ, ಶಾಂತಿ-ಸುವ್ಯವಸ್ಥೆ ಹದಗೆಟ್ಟರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಮುಖ್ಯಮಂತ್ರಿ ಖಡಕ್ ಎಚ್ಚರಿಕೆ

ಬೆಂಗಳೂರು: ಪೊಲೀಸರು ಬೆಂಗಳೂರು ನಗರದ ಸಂಚಾರ ಸಮಸ್ಯೆ ನಿವಾರಣೆ ಹಾಗೂ ಸೈಬರ್‌ ಅಪರಾಧಗಳ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜನ ಬದಲಾವಣೆಯ ನಿರೀಕ್ಷೆಯೊಂದಿಗೆ ಹೊಸ ಸರ್ಕಾರವನ್ನು ಚುನಾಯಿಸಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು, ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ …

Read More »

ಶಾಸಕ ಬಿ.ವೈ.ವಿಜಯೇಂದ್ರ ಅವರ ಬೆನ್ನು ತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕಾರಿಪುರದ ನೂತನ ಶಾಸಕ ಬಿ.ವೈ.ವಿಜಯೇಂದ್ರ ಅವರ ಬೆನ್ನುತಟ್ಟಿ ಕುಶಲೋಪರಿ ವಿಚಾರಿಸಿದರು. ಪ್ರಮಾಣ ಸ್ವೀಕರಿಸಲು ಬಂದ ಅವರು ತಮಗೆ ಎದುರಾದ ಸಿದ್ದರಾಮಯ್ಯ ಅವರ ಬಳಿ ಹೋಗಿ ಕೈ ಮುಗಿದರು. ಸಿದ್ದರಾಮಯ್ಯ ಪ್ರೀತಿಯಿಂದಲೇ ಬೆನ್ನು ತಟ್ಟಿದ್ದರು. ವಿಧಾನಸಭೆಯೊಳಗೂ ಅವರು ಆಡಳಿತ ಮತ್ತು ವಿರೋಧ ಪಕ್ಷದ ಸಾಲಿನದ್ದ ಎಲ್ಲ ಹಿರಿಯರು ಮತ್ತು ಕಿರಿಯ ಶಾಸಕರ ಬಳಿಗೆ ಹೋಗಿ ಮಾತನಾಡಿಸಿ, ಅಭಿನಂದಿಸಿದರು. ಪ್ರಮಾಣ ಸ್ವೀಕರಿಸಿದ ಹರೀಶ್‌ ಪೂಂಜಾ ಶ್ರೀರಾಮಚಂದ್ರನ ಹೆಸರಿನಲ್ಲಿ, ಲಕ್ಷ್ಮಿಹೆಬ್ಬಾಳ್ಕರ್‌ …

Read More »

ಕರ್ನಾಟಕ CM: ಸಿದ್ದರಾಮಯ್ಯ ಎಂಬ ಹೆಸರಿನವನಾದ ನಾನು…

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಈ ಮೂಲಕ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಆಯ್ಕೆ ನಾಟಕಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ. ಈ ಸಂಬಂಧ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ..ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಭಾನುವಾರ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ, ಸಿಎಂ ಆಯ್ಕೆ ದೆಹಲಿಗೆ ಶಿಫ್ಟ್ ಆಗಿತ್ತು. ಸೋಮವಾರವೇ ಸಿದ್ದರಾಮಯ್ಯ ದೆಹಲಿಗೆ ತೆರಳಿ …

Read More »

ನಡ್ಡಾ ಅವರ ಮಾತಿಗೆ ನಾನು ಚಿರಋಣಿ- ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಬಿಜೆಪಿ ಪಕ್ಷದಲ್ಲಿ ಸ್ಪಷ್ಟವಾದ ನಿಲುವು ಇದ್ದು, ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ವಿಚಾರವಾಗಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಪಿ. ನಡ್ಡಾ ಅವರು ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ …

Read More »

ಕಾಂಗ್ರೆಸ್ ನವರು ಅಧಿಕಾರದ ಮದಲಿನಲ್ಲಿ ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ-ಸಿಎಮ್

ಹುಬ್ಬಳ್ಳಿ: ಕಾಂಗ್ರೆಸ್ ನವರು ಹತಾಶರಾಗಿದ್ದಾರೆ, ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ. ಇನ್ನು ಅಧಿಕಾರದ ಮದದಲ್ಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಸಿಎಮ್ ಬಸವರಾಜ ಬೊಮ್ಮಾಯಿ ವಾಗ್ದಾಳಿ. ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆ. ವೋಟ್ ಬ್ಯಾಂಕ್ ಅಂತಾ ತಿಳಿದುಕೊಂಡು ಏನ್ ಬೇಕಾದರೂ ಮಾತಾಡಿದ್ರೆ ನಡೆಯತ್ತೆ ಅನ್ನೋ ಅಮಲಿನಲ್ಲಿ ಇದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಎಲ್ಲಕಿಂತ ನೋವಾಗಿರೋದು ಸಿದ್ದರಾಮಯ್ಯ ಖರ್ಗೆ ಮಾತಾಡಿರೋದು. ಸಿದ್ದರಾಮಯ್ಯ ಖರ್ಗೆ 50 ವರ್ಷ ಸಾರ್ವಜನಿಕ ಜೀವನ ಕಳೆದಿದ್ದಾರೆ. ಕೊನೆಯ …

Read More »

ಈ ಬಾರಿ ಜಗದೀಶ್ ಶೆಟ್ಟರ್ ನೂರಕ್ಕೆ ನೂರರಷ್ಟು ವಿಜಯಶಾಲಿ ಆಗುತ್ತಾರೆ. ರಕ್ತದಲ್ಲಿ ಬರೆದು ಕೊಡುತ್ತೇನೆ-ಕಾಂಗ್ರೆಸ್ ಕಾರ್ಯಕರ್ತ

ಹುಬ್ಬಳ್ಳಿ: ಇಡಿ ರಾಜ್ಯದಲ್ಲಿಯೇ ಈ ಬಾರಿ ವಿಧಾನಸಭಾ ಚುನಾವಣೆ ತೀವ್ರ ಕುತೂಹಲ ಮೂಡಿದೆ. ಅದರಲ್ಲೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ ಸಂಚಲನ ಮೂಡಿಸಿದೆ. ಇದಕ್ಕೆ ಮತ್ತೇ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಈ ಬಾರಿ ಜಗದೀಶ್ ಶೆಟ್ಟರ್ ಜಯಗಳಿಸುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂದು ರಕ್ತದಲ್ಲಿ ಪತ್ರ ಬರೆದು ಕೊಡುತ್ತೇನೆ ಎಂದಿದ್ದಾರೆ ಗೆಲುವಿನ ಸರ್ದಾರನೆಂದು ಹೆಸರು ಪಡೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಹೈ ಕಮಾಂಡ್ ಟಿಕೆಟ್ ತಪ್ಪಿಸಿದ್ದ ಹಿನ್ನೆಲೆಯಲ್ಲಿ, ಜಗದೀಶ್ …

Read More »

ಕಾಂಗ್ರೆಸ್ ನ ಪ್ರಭಲ ಅಭ್ಯರ್ಥಿಯಾದ ಪ್ರಸಾದ್ ಅಬ್ಬಯ್ಯ ಭರ್ಜರಿ ಮತಭೇಟೆ

ಕರ್ನಾಟಕ ವಿಧಾನ ಸಭಾ ಚುಣಾವಣೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆಬ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದೊಂದಿಗೆ ಮತಭೇಟೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ನ ಪ್ರಭಲ ಅಭ್ಯರ್ಥಿಯಾದ ಪ್ರಸಾದ್ ಅಬ್ಬಯ್ಯ ಅವರು ಮನೆ ಮನೆಗೆ ತೆರಳಿ ಮತದಾರರ ಮನ ಒಲೆಸುವ ಪ್ರಯತ್ನವನ್ನು ಮಾಡುತ್ತಿದ್ದು ಪ್ರಚಾರ ಮಾತ್ರ ಭರ್ಜರಿಯಾಗಿ ನಡೆದಿದೆ. ಕಳೆದ ಎರಡು ಭಾರಿ ಈ ಕ್ಷೇತ್ರದಲ್ಲಿ ಅಬ್ಬಯ್ಯ ಅವರು ಪ್ರತಿನಿಧಿಸಿ …

Read More »