ಬಂಟ್ವಾಳದ ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಾ (21) ಅವರನ್ನು ತಲವಾರಿನಿಂದ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿ ಚೇತನ್ (22)ನನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧನದ ವೇಳೆ ಆತ ವಿಷ ಸೇವಿಸಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ಅರುಣ್ ಕುಮಾರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ದೂರದ ಸಂಬಂಧಿಯಾಗಿದ್ದ ಚೇತನ್ ಲಾವಣ್ಯಾಳನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಲಾವಣ್ಯಾ ಕಳೆದ …
Read More »ಯುವತಿ ಹತ್ಯೆ ಪ್ರಕರಣ, ಪ್ರಚೋದನಾತ್ಮಕ ಪೋಸ್ಟ್: ಅನೇಕ ಖಾತೆಗಳ ವಿರುದ್ಧ ಕ್ರಮ
ಮಂಗಳೂರು: ಬಂಟ್ವಾಳದಲ್ಲಿ ಗುರುವಾರ ನಡೆದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ. ಯುವತಿಯನ್ನು ಹತ್ಯೆ ಮಾಡಿದ ಆರೋಪಿ ಭಾವಚಿತ್ರಕ್ಕೆ ಕೇಸರಿ ಶಾಲು, ಕುಂಕುಮ ಅಳವಡಿಸಿ ಬಜರಂಗದ ಕಾರ್ಯಕರ್ತರು ಎಂದು ಎಡಿಟ್ ಮಾಡಿ, ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹ ಹಾಕಿರುವ ಆರೋಪದ ಮೇಲೆ …
Read More »ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದ ಯುವತಿ ಬರ್ಬರ ಹತ್ಯೆ
ಬೆಂಗಳೂರು ನಗರದ ಕೋಡಿಹಳ್ಳಿಯಲ್ಲಿ ಪ್ರೀತಿಸಲು ನಿರಾಕರಿಸಿದ್ದ 24 ವರ್ಷದ ಕಾನೂನು ವಿದ್ಯಾರ್ಥಿನಿ ಅಮೃತಾಳನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಧನುಷ್ ಹಾಗೂ ಆತನ ಸಹೋದರ ಸೂರ್ಯರನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ವಿವಾಹಿತನಾಗಿರುವ ಧನುಷ್ ತನ್ನ ವೈವಾಹಿಕ ಜೀವನದ ವಿಚಾರವನ್ನು ಮುಚ್ಚಿಟ್ಟಿದ್ದ. ಸತ್ಯ ತಿಳಿದ ಬಳಿಕ ಅಮೃತಾ ಆತನಿಂದ ದೂರವಾಗಿದ್ದು, ಇದರಿಂದ ಉಂಟಾದ ದ್ವೇಷವೇ ಹತ್ಯೆಗೆ ಕಾರಣವಾಗಿದೆ. ಜುಲೈ 13ರಂದು ನಡೆದ ದಾಳಿಯಲ್ಲಿ …
Read More »ರೈಲಿನಲ್ಲಿ ಚಾಕು ತೋರಿಸಿ ದರೋಡೆಗೆ ಯತ್ನ
ಮುಂಬೈ–ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಲು ಯತ್ನಿಸಿದ ಯುವಕನನ್ನು ಎಚ್ಚೆತ್ತ ಪ್ರಯಾಣಿಕರು ಹಿಡಿದು ಗೋವಾ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ರೈಲು ಟಿಕೆಟ್ ಕಲೆಕ್ಟರ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದಾಗ ಆತ ಓಡಲು ಯತ್ನಿಸಿದ್ದಾನೆ. ಕುಂದಾಪುರದ ನಾಗರಾಜ್ ಪೂಜಾರಿ ಸೇರಿದಂತೆ ಹಲವು ಪ್ರಯಾಣಿಕರು ಬೆನ್ನಟ್ಟಿ ಹಿಡಿದ ವೇಳೆ ಆತ ಚಾಕು ತೋರಿಸಿ ಬೆದರಿಸಿದ್ದರೂ, ಪ್ರಯಾಣಿಕರು ಧೈರ್ಯದಿಂದ ಚಾಕುವನ್ನು ಕಸಿದುಕೊಂಡಿದ್ದಾರೆ. ಬಂಧಿತ ಯುವಕ ಮುಂಬೈನ ಮುಂಬ್ರಾ …
Read More »ಸೈಬರ್ ಕ್ರೈಮ್, ಇ.ಡಿ, ಸಿ.ಬಿ.ಐ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ 22 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಉಡುಪಿ ಜಿಲ್ಲೆಯ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು ಪೊಲೀಸ್, ಇ.ಡಿ. ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ ₹22 ಲಕ್ಷ ಹಣವನ್ನು ವಂಚಿಸಿರುವ ಘಟನೆ ನಡೆದಿದೆ. ಜಯಕರ ಕಾಮತ್ ಪಿ. (76) ಎಂಬವರು ವಂಚನೆಗೆ ಒಳಗಾದವರು. ವಾಟ್ಸಾಪ್ ವಿಡಿಯೋ ಕರೆ ಮೂಲಕ ಸಂಪರ್ಕಿಸಿದ ಆರೋಪಿಗಳು, ಅವರ ಬ್ಯಾಂಕ್ ಖಾತೆಯಿಂದ ಮನಿ ಲಾಂಡರಿಂಗ್ ನಡೆಯುತ್ತಿದೆ ಎಂದು ಬೆದರಿಕೆ ಹಾಕಿ, ಫಂಡ್ ಪರಿಶೀಲನೆ ಹೆಸರಿನಲ್ಲಿ RTGS ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಜುಲೈ …
Read More »ಹಾವೇರಿ| ಬಂಡಿ ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ; ವೃದ್ಧ ಕೊಲೆ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಬಂಡಿ ದಾರಿ ವಿವಾದಕ್ಕೆ ಸಂಬಂಧಿಸಿದ ಎರಡು ಕುಟುಂಬಗಳ ನಡುವಿನ ಮಾರಾಮಾರಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಡಿವೆಪ್ಪ ಉದ್ದನಕಾಲು (60) ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜುಲೈ 15ರಂದು ನಡೆದ ಘರ್ಷಣೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಜಮೀನಿನ ಬಂಡಿ ದಾರಿ ಅತಿಕ್ರಮಣ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹಲವು ದಿನಗಳಿಂದ ವಿವಾದ ನಡೆಯುತ್ತಿತ್ತು. ಜಗಳದ ವೇಳೆ ಬಡಿಗೆ, ಕುಡಗೋಲುಗಳಿಂದ ಹಲ್ಲೆ ನಡೆದಿದ್ದು, ಆರೋಪಿಯೊಬ್ಬ ಟೆಂಪೋ …
Read More »ಕೌಟುಂಬಿಕ ಕಲಹ: ಇಬ್ಬರು ಸಹೋದರರ ಹತ್ಯೆ
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಕ್ಷುಲ್ಲಕ ಜಗಳ ಇಬ್ಬರು ಸಹೋದರರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಲಗಮಪ್ಪ ರಾಮಣ್ಣವರ (32) ಹಾಗೂ ಬಸಪ್ಪ ರಾಮಣ್ಣವರ (38) ಮೃತರು. ಸಹೋದರರು ಮತ್ತು ಸಂಬಂಧಿಕರ ನಡುವೆ ಆರಂಭವಾದ ವಾಗ್ವಾದ ತೀವ್ರಗೊಂಡು, ಸುಮಾರು ಆರು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ …
Read More »ಅಕ್ರಮ ನಾಡ ಬಂದೂಕು ಸಾಗಣೆ: ನಾಲ್ವರು ಪೊಲೀಸರ ವಶಕ್ಕೆ!
ಗುಂಡ್ಲುಪೇಟೆ: ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 3 ಬಂದೂಕು, 18 ಕಾರ್ಟ್ರಿಜ್ ಗುಂಡುಗಳು, ಎರಡು ಚಾಕುಗಳು ಹಾಗೂ ಒಂದು ಕಾರನ್ನು ತೆರಕಣಾಂಬಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಜು.17ರ ಶುಕ್ರವಾರ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಗೂರು ಗ್ರಾಮದ ಕುಮಾರಪ್ಪ, ಸುನೀಲ್, ದಿನೇಶ್ ಮತ್ತು ಕಾಂತ ಬಂಧಿತ ಆರೋಪಿಗಳು. ಇವರು ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ …
Read More »ಸಂಪ್ ವಿಚಾರಕ್ಕೆ ಗಲಾಟೆ : ಮರ್ಮಾಂಗಕ್ಕೆ ಒದ್ದು ಪ್ಲಂಬರ್ ಕೊಲೆ
ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ನೀರಿನ ಸಂಪ್ ನಿರ್ಮಾಣದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಆಂಧ್ರಪ್ರದೇಶ ಮೂಲದ 38 ವರ್ಷದ ರವಿ ಎಂಬ ಪ್ಲಂಬರ್ ಹಾಗೂ ಗಾರೆ ಕೆಲಸಗಾರ ಹಲ್ಲೆಯಿಂದ ಮೃತಪಟ್ಟಿದ್ದಾರೆ. ನಿರ್ಮಾಣ ಹಂತದ ಮನೆಯ ಸಂಪ್ಗೆ ಹಾಳಾದ ಮುಚ್ಚುಳ ಅಳವಡಿಸಿರುವ ವಿಚಾರವಾಗಿ ಮನೆ ಮಾಲೀಕ ದೇವರಾಜ್ ಮತ್ತು ಗಾರೆ ಮೇಸಿ ಮಂಜುನಾಥ್ ನಡುವೆ ವಾಗ್ವಾದ ನಡೆದಿದೆ. ಬಳಿಕ ದೇವರಾಜ್ ತನ್ನವರೊಂದಿಗೆ ಮಂಜುನಾಥ್ ಮನೆಗೆ …
Read More »ಲಂಚ ಪಡೆಯುವಾಗಲೇ ರೇಡ್: ಕಲಬುರಗಿ, ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು
ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಬಿಗಿ ಕಾರ್ಯಾಚರಣೆ ನಡೆಸಿದ್ದು, ಕಲಬುರಗಿ ಜಿಲ್ಲಾ ನ್ಯಾಯಾಲಯದ ಎಪಿಪಿ ಸಂತೋಷ್ ಕುಮಾರ್ ಲೋಖಂಡೆ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಅವರನ್ನು ಬಂಧಿಸಲಾಗಿದೆ. ಇನ್ನೊಂದೆಡೆ, ಪ್ರವಾಸೋದ್ಯಮ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಹಿರಿಯೂರು ಬಳಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 48 ಲಕ್ಷ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





