Breaking News

BigTv News

ಬಣವಿ ಸೇರಿದಂತೆ ದವಸಧಾನ್ಯಗಳಿಗೆ ಬೆಂಕಿ, ರೈತ ಕಂಗಾಲು

ಧಾರವಾಡ: ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಬಳಿ ಇರುವ ಹೊಲದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಬಣಿವೆಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಭೀಮಪ್ಪ ಸಿದ್ದನ್ನವರ ಇವರಿಗೆ ಸೇರಿದ ಹೊಟ್ಟಿನ ಬಣಿವೆಯಾಗಿದ್ದು, ಅದರಲ್ಲಿ ದಿನನಿತ್ಯ ತಿನ್ನುವ ಆಹಾರದ ಕಾಳು ಕಡಿಗಳನ್ನು ಶೇಖರಸಿಟ್ಟಿದ್ದರು. ಮನೆಯಲ್ಲಿ ಇಟ್ಟರೆ ಹುಳ ಆಗುತ್ತದೆ ಎಂದು ತಮ್ಮ ಬಣಿವೆಯಲ್ಲಿ ಇಟ್ಟಿದ್ದರು ಎಂದು ಹೇಳಲಾಗಿದೆ. ಇನ್ನೂ ಹತ್ತಿದ ತಕ್ಷಣ ಕುಂದಗೋಳ ಅಗ್ನಿಶಾಮಕ ಆಗಮಿಸಿ, ಬೆಂಕಿಯನ್ನು ನಂದಿಸಿದರು. ಅಂದಾಜು …

Read More »

ಒಳಗೊಳ್ಳುವಿಕೆಯಿಂದ ಭಾರತ ವಿಶ್ವಗುರು ಆಗಲು ಸಾಧ್ಯ ; ಪ್ರೊ.ಸದಾನಂದ ಸುಗಂಧಿ

ಧಾರವಾಡ:–ಬಹುಸಂಸ್ಕೃತಿಯ ಬಹುಜನರಿಂದ ತುಂಬಿಕೊಂಡಿರುವ ಭಾರತ ದೇಶವು ಸರ್ವರೂ ಒಳಗೊಳ್ಳುವಂಥಹ ಕಲ್ಯಾಣ ಕೆಲಸಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಹೀಗೆ ಸರ್ವರ ಒಳಗೊಳ್ಳುವಿಕೆಯಿಂದ ಮಾತ್ರ ಇಂದಿನ ಕಾಲದಲ್ಲಿಯೂ ಸಹ ಭಾರತ ವಿಶ್ವಗುರು ಆಗಲು ಸಾಧ್ಯವಿದೆ ಎಂದು ಕವಿವಿ ಮಾನವಶಾಸ್ತ್ರ ವಿಭಾಗದ ಪ್ರೊ.ಸದಾನಂದ ಸುಗಂಧಿಯವರು ಅಭಿಪ್ರಾಯಪಟ್ಟರು. ಅವರು ಧಾರವಾಡದ ಗಣಕರಂಗ ಸಂಸ್ಥೆಯು ಕರ್ನಾಟಕ ವಿದ್ಯಾವರ್ಧಕ ಸಂಘದ ರಾಹದೇ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ೨೦೫ನೇಯ ಕೋರೆಗಾಂವ ವಿಜಯೋತ್ಸವ ಮತ್ತು ಕೋರೆಗಾಂವ ವಿಜಯಸ್ತಂಭ ಲೇಖನ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದ …

Read More »

ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಬಗ್ಗೆ ಚಿಂತನೆ ಮಾಡುವ ಬಿಜೆಪಿ

ಹುಬ್ಬಳ್ಳಿ: ಹುಬ್ಬಳ್ಳಿಯ ಪೂರ್ವ ವಿಧಾನಸಭಾ ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಬಿಜೆಪಿ ಪಕ್ಷದ ಕಾರ್ಯ ಕರ್ತರು ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ದ ಆರೋಪ ಮಾಡಿದರು. ಕಳೆದ ೧೦ ವರ್ಷಗಳಿಂದ ಶಾಸಕರಿದ್ದರೂ ಕ್ಷೇತ್ರ ಯಾವುದೇ ಅಭಿವೃದ್ಧಿ ಯಾಗಿಲ್ಲ. ತಮಗೆ ಬೇಕಾದ ವಾರ್ಡಗಳಲ್ಲಿ ಮಾತ್ರ ಕೆಲಸ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಬಿಜೆಪಿ ಮತಗಳು ಇರುವ ಕಡೆ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಡಾ.ಬಾಬು ಜಗಜೀವನ್ ರಾಮ್ ಜಿಲ್ಲಾ …

Read More »

ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ, ಪರಿಶೀಲನೆ

ಹುಬ್ಬಳ್ಳಿ: ಜನವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಇಂದು ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈಗಾಗಲೇ ಪ್ರಧಾನಮಂತ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಪ್ರಹ್ಲಾದ್ ಜೋಶಿಯವರ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಧಾನಿಯವರು ಕಾರ್ಯಕ್ರಮಕ್ಕೆ ಆಗಮಿಸುವ …

Read More »

ನದಿಯಲ್ಲಿ ಈಜಲು ಹೋದವರು ನೀರುಪಾಲು

ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಯ ಪಂಪಹೌಸ್ ಬಳಿಯ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನದಿಯಲ್ಲಿ ಮುಳುಗಿ ಸಾವಿಗಿಡಾಗಿದ್ದಾರೆ.ಹೊಸವರ್ಷದ ನಿಮಿತ್ತ ಪಾರ್ಟಿ ಮಾಡಲು ಹೊಗಿದ್ದ ಈ  ಯುವಕರು ಈಜು ಬಾರದೆ ನದಿ ಪಾಲಾಗಿದ್ದಾರೆ. ಈ ಮೂವರ ಗುರುತು ಪತ್ತೆಹಚ್ಚಿದ್ದು .ನವೀನ್ ಕುರಗುಂದ 20 ವರ್ಷ, ವಿಕಾಸ ಪಾಟೀಲ್ 20 ವರ್ಷ, ಹಾಗು  ನೆಪಾಳದ ಮೂಲದ ಪ್ರೇಮ್ ಬೋರಾ 25 ವರ್ಷದ ಯುವಕ ಇನ್ನು …

Read More »

ಅನಿಲ ಸೋರಿಕೆಯಿಂದ ಮಹಿಳೆ ಸೇರಿದಂತೆ ಮಗುವಿಗೆ ಗಂಭೀರ ಗಾಯ

ಹುಬ್ಬಳ್ಳಿ: ದೇವರ ದರ್ಶನಕ್ಕೆ ಹೋಗಿದ್ದ ಭಕ್ತರಿಗೆ ಬೆಂಕಿಯ ಅವಘಡದಿಂದ ಆಸ್ಪತ್ರೆ ಪಾಲಾದ ಘಟನೆ ಇಂದು ಬೆಳ್ಳಿಗ್ಗೆ ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಜರುಗಿದೆ. ನಗರದ ವೀರಪೂರ ಓಣಿಯಲ್ಲಿನ ಗಣಪತಿ ದೇವಸ್ಥಾನದ ಕೊಠಡಿಯಲ್ಲಿ ಅನಿಲ ಸೋರಿಕೆಯಾಗಿದೆ. ಕೊಠಡಿಯ ಬಾಗಿಲು ತೆಗೆದ ಕೂಡಲೇ ದೇವರ ಮುಂದೆ ಇದ್ದ ದೀಪದ ಬೆಂಕಿ ಅನಿಲ ಸ್ಪರ್ಶವಾಗಿ ದೊಡ್ಡ ಮಟ್ಟದಲ್ಲಿ ಬೆಂಕಿ ಆವರಿಸಿದೆ.ಅಲ್ಲೇ ಇದ್ದ ಕೆಲ ಭಕ್ತರಿಗೆ ಹತ್ತಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಮಗುವಿಗೆ ಬೆಂಕಿ …

Read More »

ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ.

ವಿಜಯಪುರ:- ವಯೋಸಹಜ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದಾರೆ. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಜೆ ೬ ಗಂಟೆ‌ ೫ ನಿಮಿಷಕ್ಕೆ ಶ್ರೀಗಳು ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ವಿಧಿವಶರಾದರು. 82ರ ಇಳಿ ವಯಸ್ಸಿನ ಅವರು ಪ್ರವಚನ, ಬೋದನೆ, ಮಾಡುವ ಮೂಲಕ ದೈವ ಮಾನವ ಎಂದು ಕೀರ್ತಿ ಪಡೆದಿದ್ದರು. ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರೆವೆರಿಸಲಾಗುವುದು. ಹಾಗೂ ಅಪಾರ ಜ್ಞಾನಿ, …

Read More »

ಕೇಂದ್ರ ಸರ್ಕಾರದ ನೋಟು ಬ್ಯಾನ್ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ನಲ್ಲಿ ಜಯ- 4:1 ಅನುಪಾತದಲ್ಲಿ ಮಹತ್ವದ ತೀರ್ಪು

ದೆಹಲಿ- ಇವತ್ತು ಇಡೀ ದೇಶದ ಜನರ ಚಿತ್ತವೇ ಸುಪ್ರೀಂಕೋರ್ಟ್ ನ ತೀರ್ಪಿನತ್ತ ಎದುರುನೋಡ್ತಾ ಇತ್ತು. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 500, 1000 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ 58 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಲಯ ಮಹತ್ವದ ತೀರ್ಪು ಕೊಟ್ಟಿದ್ದು, ನೋಟುಗಳ ಅಮಾನೀಕರಣ ತಪ್ಪಲ್ಲ ಎಂದು ತೀರ್ಪು ನೀಡಿದ್ದು, ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ಆರ್‌ಬಿಐ …

Read More »

ಹು-ಧಾ ಕಮೀಷನರ್ ಲಾಬೂರಾಮ್ ವರ್ಗಾವಣೆ: ಟಫ್ ಆಫಿಸರ್ ರಮಣ ಗುಪ್ತಾ ಅವಳಿ ನಗರಕ್ಕೆ …!!

ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಅತ್ಯಂತ ನಿಷ್ಠಾವಂತ, ಪ್ರಮಾಣಿಕ ಅಧಿಕಾರಿಯಂದೇ ಹೆಸರಾಗಿದ್ದ ಪೋಲಿಸ್ ಕಮಿಷನರ್ ಲಾಬೂರಾಮ್ ರವರನ್ನು ರಾಜ್ಯ ಗುಪ್ತ ಇಲಾಖೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ 2 ವರ್ಷಕ್ಕಿಂತಲೂ ಹೆಚ್ಚು ಕಾಲ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸಿದ್ದು, ಇಲ್ಲಿನ ಮಟ್ಕ, ಕ್ರಿಕೆಟ್ ಬೆಟ್ಟಿಂಗ್ , ಹವಾಲ ಸೇರಿದಂತೆ ಹಲವಾರು ದುಷ್ಕೃತ್ಯಗಳಿಗೆ ಕಡಿವಾಣ ಹಾಕಿದ್ದರು. ಇನ್ನೂ ಪೋಲಿಸ್ ಠಾಣೆಯ ಹಲವು ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ಮೂಲಕ ಪ್ರತಿಯೊಂದು ಠಾಣೆಯ …

Read More »


ವಾಸುದೇವ ಸೂರಕೋಡ   ಎಲ್ಲಾ ಸರ್ಕಾರಿ ಶಾಲೆಗಳಿಗೆ  ಕಲಿಕಾ ಸಾಮಗ್ರಿ ವಿತರಣೆ

ಧಾರವಾಡ  : ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸಮಾಜಸೇವಕ ವಾಸುದೇವ ಸೂರಕೋಡ ಅವರು, ಲೂಸಿ ಸಾಲ್ಡಾನರವರ, ಶಾಲೆಗಳಿಗೆ ನೀಡುತ್ತಿರುವ ನಿರಂತರ ದತ್ತಿ ಕಾರ್ಯಕ್ರಮದಿಂದ  ವಾಸುದೇವ ಸೂರಕೋಡ ಅವರು, ಎಲ್ಲಾ ಸರಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಆಭಾ ಕಾರ್ಡ ಮಾಡಿಕೊಡುವುದಲ್ಲದೇ, ಎಲ್ಲಾ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಕಲಿಕಾ ಸಾಮಗ್ರಿಗಳನ್ನು ವಿವರಿಸಿದರು. ಇಂದು ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಅವರು ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಬಡ ಮಕ್ಕಳಿಗೆ ಏನಾದರೂ …

Read More »