Breaking News

BigTv News

ಬೈಕ್​ಗೆ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿ : ಸವಾರ‌ ಸಾವು

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಬೈಕ್​ಗೆ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹೆಂಡತಿಯ ಮುಂದೆಯೇ ಗಂಡ ಸಾವನ್ನಪ್ಪಿದ ಘಟನೆ ಗುಡಿಬಂಡೆ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೀಲೇರು ಗ್ರಾಮದ ಚಿನ್ನಬಾಬು(27) ಮೃತ ಬೈಕ್ ಸವಾರ. ಘಟನೆಯಲ್ಲಿ ಆತನ ಪತ್ನಿ ಸುಮಿತ್ರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅತ್ತೆ ಮಾವನನ್ನು ನೋಡಿಕೊಂಡು ಸ್ವಗ್ರಾಮಕ್ಕೆ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಪತ್ನಿಯ ಮುಂದೆಯೇ ಪತಿ …

Read More »

ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂವಾದ ಗೃಹ ಸಚಿವ

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವರು ಇಂದು ರಿವ್ಯೂ ಮೀಟಿಂಗ್ ನಡೆಸಿದ್ದಾರೆ.ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಸಚಿವರು ಫುಲ್ ಕ್ಲಾಸ್ ತೆಗದುಕೊಂಡಿದ್ದಾರೆ. ನಗರದಲ್ಲಿ ಪಬ್, ಕ್ಯಾಸಿನೋ, ಲೇಡಿಸ್ ಬಾರ್, ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎಂದು ಗರಂ ಆಗಿದ್ದಾರೆ. ಪಬ್, ಕ್ಯಾಸಿನೋ ಮತ್ತು ಲೇಡಿಸ್ ಬಾರ್ ಗಳ ಬಗ್ಗೆ ಮಾಹಿತಿ ಮತ್ತು ದಾಖಲೆ ಸಮೇತ ಸಭೆಗೆ ಬಂದಿದ್ದ ಗೃಹ ಸಚಿವರು, ಕೆಲ ರೌಡಿಶೀಟರ್ ಗಳ ಚಟುವಟಿಕೆ …

Read More »

ವಿನಯ್ ಕುಲಕರ್ಣಿ ಮನೆಗೆ ಅನಾಮಧೇಯ ಪತ್ರ: ಪೊಲೀಸ್ ಠಾಣೆ ಮೆಟ್ಟಿಲೇರಿದ ಶಿವಲೀಲಾ

ಧಾರವಾಡ: ಈ ಹಿಂದೆ ತಮ್ಮ ಮನೆಗೆ ಬರುತ್ತಿದ್ದ ಅನಾಮಧೆಯ ಪತ್ರಗಳ ವಿರುದ್ಧ ಧ್ವನಿ ಎತ್ತಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು, ಆ ರೀತಿ ಪತ್ರ ಬರೆಯುವವರನ್ನು ಪತ್ತೆ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು. ಕಳೆದ ನಾಲ್ಕೂವರೆ ವರ್ಷಗಳಿಂದ ಈ ರೀತಿಯ ಯಾವುದೇ ಪತ್ರಗಳು ಬಂದಿರಲಿಲ್ಲ. ಆದರೆ, ಇದೀಗ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಮತ್ತೆ ಅನಾಮಧೇಯ ಬೆದರಿಕೆ ಪತ್ರಗಳು ಬಂದಿದ್ದು, ಇದರ ವಿರುದ್ಧ ಇದೀಗ ವಿನಯ್ …

Read More »

ಟೆರರಿಸ್ಟ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧವಾಗಿದೆ: ಡಿಕೆಶಿ ಹೇಳಿಕೆಗೆ ಮುತಾಲಿಕ್ ಪ್ರತಿಕ್ರಿಯೆ

ಧಾರವಾಡ : ಶ್ರೀರಾಮಸೇನೆ ಸಂಘಟನೆ ಇದನ್ನು ವಿರೋಧ ಮಾಡುತ್ತವೆ. ಟೆರರಿಸ್ಟ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧವಾಗಿದೆ.‌ಮುಸ್ಲಿಂ ವೋಟಿಗಾಗಿ ಕಾಂಗ್ರೆಸ್ ತುಷ್ಟೀಕರಣ ಮಾಡಿದ‌ ಪರಿಣಾಮ ಇಡೀ ದೇಶದಲ್ಲಿ ಕಸದ ಬುಟ್ಟಿಯಲ್ಲಿ ಬಿದ್ದಿದೆ ಎಂದು ಕುಕ್ಕರ್ ಬಾಂಬ್ ಬ್ಲಾಸ್ಟ್ ಕುರಿತು ಡಿಕೆಶಿ‌ ಹೇಳಿದ ವಿಚಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು. ನಗರದಲ್ಲಿ ಮಾತನಾಡಿದ ಅವರು, ಆದರೂ‌ ಇವರಿಗೆ ಬುದ್ಧಿ ಬಂದಿಲ್ಲಾ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ‌ ಕೊಡೋದು ಸರಿಯಲ್ಲ. ಟೆರರಿಸ್ಟ್ …

Read More »

ನನ್ನ ಜೀವಕ್ಕೆ ಏನಾದರೂ ಆದರೆ ಕಡೂರು, ಮೂಡಗೆರೆ ತಾಲೂಕಿನ‌ ತಾಪಂ, ಗ್ರಾಪಂ ಅಧಿಕಾರಿಗಳೇ ಹೊಣೆ : ಗುತ್ತಿಗೆದಾರ ಬಸವರಾಜ ಅಮರಗೋಳ

ಹುಬ್ಬಳ್ಳಿ : ರಾಷ್ಟ್ರಪತಿ ಭವನದಿಂದ ಸೂಚನೆ ನೀಡಿದರು ಅಧಿಕಾರಿಗಳು ಹಣ ಪಾವತಿ ಮಾಡುತಿಲ್ಲ. ನನ್ನ ಜೀವಕ್ಕೆ ಏನಾದರೂ ಆದರೆ ಕಡೂರು, ಮೂಡಗೆರೆ ತಾಲೂಕಿನ‌ ತಾಪಂ, ಗ್ರಾಪಂ ಅಧಿಕಾರಿಗಳೇ ಹೊಣೆ ಎಂದು ಗುತ್ತಿಗೆದಾರ ಬಸವರಾಜ ಅಮರಗೋಳ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಈಗ ರಾಷ್ಟ್ರಪತಿಗಳ ಭವನದಿಂದ ಬಿಲ್ ಪಾವತಿ ಮಾಡಲು ಆದೇಶ ಬಂದರೂ ಅಧಿಕಾರಿಗಳು ಹಣ ಪಾವತಿ ಮಾಡುತಿಲ್ಲ . ನಾನು ಈಗಾಗಲೇ ಕೋವೀಡ್ ಸಂದರ್ಭದಲ್ಲಿ ಕಾಮಗಾರಿಗೆ …

Read More »

ಕೆ ಐ ಎ ಡಿ ಬಿಯ ಕೋಟ್ಯಾಂತರ ರೂ. ಹಗರಣ : ಧಾರವಾಡ ಲೋಕಾಯುಕ್ತರಿಗೆ ಬಸವರಾಜ ಕೊರವರ ನೇತೃತ್ವದಲ್ಲಿ ದೂರು ಸಲ್ಲಿಕೆ

ಧಾರವಾಡ : ಇಲ್ಲಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಸಂತಕುಮಾರ ಡಿ. ಸಜ್ಜನ, ಹಿರಿಯ ಸಹಾಯಕ ಶಂಕರ ತಳವಾರ ಹಾಗೂ ವ್ಯವಸ್ಥಾಪಕ ಶಿರಸ್ತೆದಾರ ಎಂ. ಕೆ . ಸಿಂಪಿ ಸೇರಿದಂತೆ ಇತರರ ವಿರುದ್ಧ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಧಾರವಾಡ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಪ್ಪಿ ಅವರಿಗೆ ದೂರು ಸಲ್ಲಿಸಲಾಯಿತು. ಧಾರವಾಡದ ಹತ್ತು ಹಲವು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ …

Read More »

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿ-ಯಾರಿಗೆ ಒಲಿಯಲಿದೆ ಗದ್ದುಗೆ ?

ನವಲಗುಂದ: ಪುರಸಭೆ ನೂತನ ಅಧ್ಯಕ್ಷರ ಆಯ್ಕೆಗಾಗಿ ಶನಿವಾರ (ಡಿಸೆಂಬರ್ 17ರಂದು) ಚುನಾವಣೆ ಜರುಗಲಿದ್ದು, ಪುರಸಭೆ ಅಧ್ಯಕ್ಷ ಪಟ್ಟ ಯಾರಿಗೆ ದೊರೆಯಲಿದೆ ಎಂಬ ಕುತೂಹಲ ನವಲಗುಂದದ ಜನರಲ್ಲಿ ಹೆಚ್ಚಾಗಿದೆ. ಈ ಮೊದಲಿದ್ದ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ ಅವರ ರಾಜೀನಾಮೆಯಿಂದ ಖಾಲಿ ಉಳಿದ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಪುರಸಭೆ ಒಟ್ಟು 23 ಸದಸ್ಯರನ್ನು ಹೊಂದಿದ್ದು, ಅತೀ ಹೆಚ್ಚು ಅಂದರೆ 17 …

Read More »

ಕಾಂಗ್ರೆಸ್‌ ನ ಮಾಜಿ ಶಾಸಕ ಶಂಕರಗೌಡ ಎನ್‌ ಪಾಟೀಲ್‌ ನಿಧನ

ಗದಗ:  ಕಾಂಗ್ರೆಸ್‌ ನ ಮಾಜಿ ಶಾಸಕ ಶಂಕರಗೌಡ ಎನ್‌ ಪಾಟೀಲ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ 81 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಇವರು ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಪಾಟೀಲ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಇದರ ಕಾರಣ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1989-1994ರ ಅವಧಿಯಲ್ಲಿ ಶಂಕರಗೌಡ ಅವರು ಕಾಂಗ್ರೆಸ್‌ ನಿಂದ …

Read More »

ನಾಳೆ ಧರ್ಮಸ್ಥಳದ ಸ್ನಾನಘಟ್ಟ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ

ಮಂಗಳೂರು: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ನಾನಘಟ್ಟ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ ಸಮಾರಂಭ ಡಿ. 17ರಂದು ಬೆಳಗ್ಗೆ 10 ಗಂಟೆಗೆ ಸ್ಥಾನಘಟ್ಟದಲ್ಲಿ ನೆರವೇರಲಿದೆ. ರಾಜ್ಯಸಭಾ ಸಂಸದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಸಚಿವ ವಿ. ಸುನಿಲ್‌ ಕುಮಾರ್‌ ಉದ್ಘಾಟಿಸುವರು. ಸಚಿವ ಆನಂದ್‌ ಸಿಂಗ್‌ ನಾಮಫಲಕ ಅನಾವರಣ ಮಾಡುವರು. ಶಾಸಕ ಹರೀಶ್‌ ಪೂಂಜ …

Read More »

ಹಾವೇರಿಯಲ್ಲಿ ಬಿಜೆಪಿಯ ನೂತನ ಜಿಲ್ಲಾ ಕಾರ್ಯಾಲಯದ ಉದ್ಘಾಟನೆ

ಹಾವೇರಿ: ಬಿಜೆಪಿಯ ನೂತನ ಜಿಲ್ಲಾ ಕಾರ್ಯಾಲಯದ ಉದ್ಘಾಟನೆ  ನಡೆಯಿತು. ಮುಂಜಾನೆ ಗೋ ಪೂಜೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ದಂಪತಿ ನೆರವೇರಿಸಿದರು. ತದನಂತರ ನವಗ್ರಹ ಪೂಜೆ ಸಾಂಗವಾಗಿ ನೆರವೇರಿತು ಹಾಗೂ ಶಾಂತಿ ಹೋಮ ಮಾಡಲಾಯಿತು.ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ವಿಧಾನ ಪರಿಷತ್‌ ಸದಸ್ಯರಾದ ಆರ್. ಶಂಕರ್‌, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಸುರೇಶಗೌಡ ಪಾಟೀಲ ಅವರು ಭವನದ ವಿವಿಧ ಕೊಠಡಿಗಳನ್ನು ಉದ್ಘಾಟಿಸಿದರು. ರಾಜ್ಯ ಶಿಸ್ತು …

Read More »