Breaking News

BigTv News


ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ

ನವದೆಹಲಿ : ನೀವು ರೈಲಿನಲ್ಲಿ ಪ್ರಯಾಣಿಸಿದ್ರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ನಾಗರಿಕರಿಗೆ ನೀಡಿದ ವಿನಾಯಿತಿಯ ಬಗ್ಗೆ ದೊಡ್ಡ ಮಾಹಿತಿಯನ್ನ ನೀಡಿದ್ದಾರೆ. ಹಿರಿಯ ನಾಗರಿಕರಿಗೆ ನೀಡಲಾದ ವಿನಾಯಿತಿಯನ್ನ ರೈಲ್ವೆ ಪುನಃಸ್ಥಾಪಿಸಲಿದೆ. ಮಾಧ್ಯಮ ವರದಿಗಳ ಪ್ರಕಾರ, ರೈಲ್ವೆ ಮಂಡಳಿಯು ಹಿರಿಯ ನಾಗರಿಕರ ವಯಸ್ಸಿನ ಮಿತಿಯನ್ನ ಬದಲಾಯಿಸಲು ಯೋಜಿಸುತ್ತಿದೆ. ಇದರೊಂದಿಗೆ, ಟಿಕೆಟ್’ನಲ್ಲಿ ರಿಯಾಯಿತಿ ಲಭ್ಯವಿದೆ. ಆ ರಿಯಾಯಿತಿಗಳು ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಅದೇ …

Read More »


ಎಲ್ಲಾ ಕಡೆಯೂ ಗುಜರಾತ್‌ ಮಾದರಿ ಅನ್ವಯಿಸಲು ಆಗಲ್ಲ : ಶೆಟ್ಟರ್

ಬಾಗಲಕೋಟೆ: ದೇಶದ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಚುನಾವಣೆ ತಂತ್ರಗಾರಿಕೆ ನಡೆಯುತ್ತವೆ. ಎಲ್ಲಾ ಕಡೆಯೂ ಗುಜರಾತ್‌ ಮಾದರಿ ಅನ್ವಯಿಸಲು ಆಗಲ್ಲ. ಕರ್ನಾಟಕದಲ್ಲೂ ಅದೇ ಮಾದರಿ ಅನ್ವಯಿಸುತ್ತೇವೆಂದು ಮೋದಿ ಆಗಲಿ ಅಥವಾ ಅಮಿತ್‌ ಶಾ ಅವರಾಗಲಿ ಎಲ್ಲೂ ಹೇಳಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹಂತದಲ್ಲೂ ಒಂದೊಂದು ಪ್ರಯೋಗ ನಡೆಯುತ್ತವೆ. ಗುಜರಾತ್‌ನಲ್ಲಿ ಸ್ಥಳೀಯ ವ್ಯವಸ್ಥೆ ಹಿನ್ನೆಲೆಯಲ್ಲಿ ಅಮಿತ್‌ ಶಾ ಮತ್ತು ಮೋದಿ ಅವರು …

Read More »

ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕಿಳಿಯುವಂತೆ ಪಕ್ಷ ಸೂಚಿಸಿದರೆ ನಾನು ಸಿದ್ಧ : ಬಿ.ವೈ.ವಿಜಯೇಂದ್ರ

ಮೈಸೂರು: ‘ಕಾಂಗ್ರೆಸ್‌ನ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಅವರ ವಿರುದ್ಧ ಕಣಕ್ಕಿಳಿಯುವಂತೆ ಪಕ್ಷ ಸೂಚಿಸಿದರೆ ನಾನು ಸಿದ್ಧ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ  ಬಿ.ವೈ.ವಿಜಯೇಂದ್ರ ಭಾನುವಾರ ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷ ನನಗೆ ಯಾವುದೇ ಸವಾಲು ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ.‌ ಪಕ್ಷದ ತೀರ್ಮಾನವೇ ಅಂತಿಮ’ ಎಂದರು. ‘ವರುಣಾ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಮಾಡುತ್ತಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲು ಹೋರಾಡುತ್ತಿದ್ದೇವೆ, ಸಂಘಟನೆ …

Read More »

ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ವಿ.ಎಂ. ಪಾಟೀಲ್​  ನಿಧನ

ಬೆಂಗಳೂರು: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ,​ ಅತಿ ವಿಶಿಷ್ಟ ಸೇವಾ ಪದಕ ಮತ್ತು ಪರಮ ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾಗಿದ್ದ ವಿ.ಎಂ. ಪಾಟೀಲ್​ ಅವರು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 84ವರ್ಷ ವಯಸ್ಸಾಗಿತ್ತು. ಲೆಫ್ಟಿನೆಂಟ್​ ಜನರಲ್​ ವಿ.ಎಂ.ಪಾಟೀಲ್​ ಅವರು 1962ರ ಭಾರತ-ಚೀನಾ ಯುದ್ಧ ಮತ್ತು 1965ರ ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಎರಡೂ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿ …

Read More »

ಇಂದು ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

ಬೆಂಗಳೂರು: ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಮಾಡೆಲ್ ಅವಿವಾ ಬಿದ್ದಪ್ಪಾ ಇಂದು ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಖ್ಯಾತ ಫ್ಯಾಶನ್ ಡಿಸೈನರ್ ಪ್ರಕಾಶ್ ಬಿಡ್ಡಪ್ಪಾ ಪುತ್ರಿಯಾಗಿರುವ ಅವಿವಾ ಜೊತೆ ಅಭಿಷೇಕ್ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದಕ್ಕೆ ಎಲ್ಲಾ ತಯಾರಿಗಳೂ ನಡೆದಿವೆ.ಕೇವಲ ಆಪ್ತರ ಬಳಗದವರಿಗೆ ಮಾತ್ರ ಸುಮಲತಾ ಅಂಬರೀಶ್ ಆಹ್ವಾನ ನೀಡಿದ್ದಾರೆ. ಇಂದು ವಿವಾಹ ದಿನಾಂಕವೂ ಘೋಷಣೆಯಾಗುವ ಸಾಧ‍್ಯತೆಯಿದೆ.

Read More »

ಮನೆಯವರನ್ನು ಭೇಟಿಯಾಗಲು ಭರತ್ತಿದ್ದ ಯೋಧ ಸ್ಮಶಾನ ಸೇರಿದ

ಬೆಳಗಾವಿ : ಜಿಲ್ಲೆಯ ನಿಪ್ಪಾಣಿಯ ಯೋಧರು ಮೃತಪಟ್ಟಿರುವ ಘಟನೆ , ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ನಡೆದಿದೆ. 45 ವರ್ಷದ ರಾಜೇಂದ್ರ ಪಾಂಡುರಂಗ ಕುಂಬಾರ ಮೃತ ಯೋಧರಾಗಿದ್ದಾರೆ. ನಿಪ್ಪಾಣಿಯ ಭಾರತೀಯ ಸೇನೆಯ ಯೋಧ ರಾಜೇಂದ್ರ ಪಾಂಡುರಂಗ ಅಪಘಾತದಲ್ಲಿ ಉತ್ತರ ಪ್ರದೇಶದಲ್ಲಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಕಳೆದ 22 ವರ್ಷಗಳಿಂದ ಇವರು ಭಾರತೀಯ ಸೇನೆಯಲ್ಲಿ ಯೋಧನಾಗಿ ರಾಜೇಂದ್ರ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೆ ದೆಹಲಿಯಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ …

Read More »

ರೈಲು ಹಳಿಗೆ ತಲೆ ಕೊಟ್ಟು ವ್ಯಕ್ತಿ ಸಾವು

ಮೈಸೂರು: ದೊಡ್ಡ ಕವಲಂದೆ ಗ್ರಾಮ ದ ರೈಲ್ವೆ ನಿಲ್ದಾಣದ ಬಳಿ ರೈಲು ಹಳಿಗೆ ತಲೆ ಕೊಟ್ಟು ಮೃತಪಟ್ಟಿದ್ದಾನೆ, ಮೃತನು ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದ ಆನಂದಬಾಬು(40)ಎಂದು ತಿಳಿದು ಬಂದಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸ್ ಠಾಣೆಯ ಎಎಸ್ ಐ ಶ್ರೀನಿವಾಸ ಮೂರ್ತಿ, ಸಿಬ್ಬಂದಿ ಸಾರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಚಾಮರಾಜನಗರ …

Read More »

ನೀರು ತುಂಬಿದ ಬಕೆಟ್ ಗೆ ಬಿದ್ದು ಮುದ್ದು ಕಂದಮ್ಮ‌ಸಾವುುಆದ

ದಾವಣಗೆರೆ :  ನೀರು ತುಂಬಿದ ಬಕೆಟ್ ಗೆ ಬಿದ್ದು 10 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ ಹಾಗೂ ತಾರಾ ದಂಪತಿಯ ಪುತ್ರಿ ಹತ್ತು ತಿಂಗಳ ಅನುಶ್ರಾವ್ಯ ಮೃತಪಟ್ಟಿದ್ದು, ಆಟವಾಡುತ್ತಿರುವ ವೇಳೆ ನೀರು ತುಂಬಿದ್ದ ಬಕೆಟ್ ಗೆ ಆಯತಪ್ಪಿ ಬಿದ್ದಿದ್ದಾಳೆ.ಇದನ್ನು ಗಮನಿಸಿದ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದೆ. …

Read More »

ʼಸೋಲಾರ ರೂಫ್‌ ಟಾಪ್ ಹಂತ-02ʼ ಯೋಜನೆಗೆ ಬೆಸ್ಕಾಂ ಚಾಲನೆ

ಬೆಂಗಳೂರು: ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼಸೋಲಾರ ರೂಫ್‌ ಟಾಪ್ ಹಂತ-02ʼ ಯೋಜನೆಗೆ ಬೆಸ್ಕಾಂ ಚಾಲನೆ ನೀಡಿದ್ದು, ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಸೋಲಾರ್‌ ಘಟಕಗಳ ಅಳವಡಿಕೆಗೆ ಉತ್ಸುಕರಾಗಿದ್ದಾರೆ. ಭಾರತ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ಸೌರ ಘಟಕಗಳ ಸ್ಥಾಪನೆಗಾಗಿ, ಬೆಸ್ಕಾಂಗೆ 10 ಮೆಗಾ ವ್ಯಾಟ್‌ ಸಾಮರ್ಥ್ಯವನ್ನು ಹಂಚಿಕೆ ಮಾಡಿದ್ದು, ಯೋಜನೆಯಡಿಯಲ್ಲಿ ಸೋಲಾರ್‌ ಘಟಕಗಳನ್ನು ಅಳವಡಿಸಿಕೊಳ್ಳಲು ಬೆಸ್ಕಾಂಗೆ 1500 ಅರ್ಜಿಗಳು …

Read More »

ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ವರ್ಷ ಗುಡ್‌ ನ್ಯೂಸ್‌

ನವದೆಹಲಿ: 18 ತಿಂಗಳ ಬಾಕಿ ಇರುವ ತುಟ್ಟಿಭತ್ಯೆ (ಡಿಎ) ಬಾಕಿ ಪಾವತಿ, ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ ಮತ್ತು ಮತ್ತೊಂದು ಸುತ್ತಿನ ಡಿಎ ಹೆಚ್ಚಳದ ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ವರ್ಷ ಗುಡ್‌ ನ್ಯೂಸ್‌ ಸಿಗುವ ಸಾಧ್ಯತೆ ಇದೆ. 7 ನೇ ವೇತನ ಆಯೋಗದ ಜಾರಿಗೆ ಕಾಯುತ್ತಿರುವವರಿಗೆ ಈಗ ಗುಡ್‌ನ್ಯೂಸ್‌ ಸಿಗಲಿದೆ.  ಜನವರಿ 2020 ರಿಂದ ಜೂನ್ 2021 ರವರೆಗಿನ 18 ತಿಂಗಳ ಡಿಎ ಬಾಕಿ ಪಾವತಿಗೆ …

Read More »