Breaking News

BigTv News

ಸಾರ್ವತ್ರಿಕ ಚುನಾವಣೆ : ನೇಪಾಳ ಅಂತಾರಾಷ್ಟ್ರೀಯ ಗಡಿ ಬಂದ್

ನೇಪಾಳ: ನವೆಂಬರ್​ 20 ರಂದು ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ನೇಪಾಳ ಅಂತಾರಾಷ್ಟ್ರೀಯ ಗಡಿಯನ್ನು ನವೆಂಬರ್ 17 ರ ಮಧ್ಯರಾತ್ರಿಯಿಂದ​ 72 ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ. ಈ ಬಗ್ಗೆ ಭಾರತದ ಗೃಹ ಇಲಾಖೆಗೆ ಪತ್ರ ಬರೆದಿರುವ ನೇಪಾಳ ಸರ್ಕಾರ ಮತದಾನದ ಬಳಿಕ ಅಂದರೆ, ನವೆಂಬರ್​ 20 ರಂದು ರಾತ್ರಿ 8 ಗಂಟೆಗೆ ಗಡಿ ತೆರೆಯಲಾಗುವುದು. ವಿಮಾನಗಳ ಮೂಲಕ ನೇಪಾಳಕ್ಕೆ ಬರುವ ಎಲ್ಲ ದೇಶಗಳ ಪ್ರಯಾಣಿಕರು ಪಾಸ್‌ಪೋರ್ಟ್ ಮತ್ತು ಟಿಕೆಟ್ …

Read More »


ಸಿಎಂ ಬಂಧಿಸುವಂತೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ ಮುಂದುವರಿದ ಭಾಗವಾದ ‘ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ …

Read More »

ಮಳೆ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರು: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರಕಡಿಮೆಯಾಗಿದೆ. ಆದರೆ, ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದೆ. ಈ ವಾರದಲ್ಲಿ ಸಿಲಿಕಾನ್ ಸಿಟಿಯಲ್ಲಿ ಮುಂಜಾನೆಯಿಂದಲೇ ಚಳಿಯ ವಾತಾವರಣವಿದ್ದು, ಇಂದು ಕೂಡ ಮಂಜು ಮುಸುಕಿದ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ. ಬೆಂಗಳೂರು ಹವಾಮಾನ ವರದಿ ಪ್ರಕಾರ, ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಹಾಗೂ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಇಂದು …

Read More »

ಇಂದಿನಿಂದ ಮತ್ತೆ ಪಂಚರತ್ನ ಯಾತ್ರೆ ಪ್ರಾರಂಭ

ಬೆಂಗಳೂರು: ಕೆಲ ದಿನಗಳ ಹಿಂದೆ ಆರಂಭಗೊಳ್ಳಬೇಕಿದ್ದಂತ ಜೆಡಿಎಸ್ ಪಂಚರತ್ನ ಯಾತ್ರೆಯು ಮಳೆಯಿಂದಾದ ಅಡ್ಡಿಯಿಂದಾಗಿ ಸ್ಥಗಿತಗೊಂಡಿತ್ತು. ಈಗ ಇಂದಿನಿಂದ ಮತ್ತೆ ಜೆಡಿಎಸ್ ಪಕ್ಷದ  ಪಂಚರತ್ನ ಯಾತ್ರೆ ಮುಂದುವರೆಯಲಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ  ಮಾಹಿತಿ ಹಂಚಿಕೊಂಡಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, ನವೆಂಬರ್ 18 ರ ಶುಕ್ರವಾರದಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಿಂದ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ. ಮುಳಬಾಗಿಲು ತಾಲೂಕಿನ ಊರುಕುಂಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದೇನೆ. ಬನ್ನಿ, ರಾಜ್ಯದ ಅಭಿವೃದ್ಧಿಗೆ …

Read More »

ರಾಜನಾಥ್‌ ಸಿಂಗ್‌ ಮಣಿಪಾಲಕ್ಕೆ ಆಗಮನ : ಪೋಲಿಸ್ ರಿಂದ ಬಂಧುಬಸ್ತ್

ಉಡುಪಿ: ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ಶುಕ್ರವಾರ ಮಾಹೆ ವಿಶ್ವವಿದ್ಯಾನಿಲಯದ 30ನೇ ಘಟಿಕೋತ್ಸವಕ್ಕೆ ಆಗಮಿಸಲಿದ್ದು, ಆ ಪ್ರಯುಕ್ತ ನಗರದಲ್ಲಿ ಗುರುವಾರವೇ ಪೊಲೀಸರು ಪ್ರಾಯೋಗಿಕವಾಗಿ ಝೀರೋ ಟ್ರಾಫಿಕ್‌ ಮಾಡಿದರು. ಆದಿ ಉಡುಪಿಯ ಹೆಲಿಪ್ಯಾಡ್‌ನಿಂದ ಮಣಿಪಾಲದ ವರೆಗೆ ಪ್ರಾಯೋಗಿಕವಾಗಿ ಝೀರೋ ಟ್ರಾಫಿಕ್‌ ಮಾಡಲಾಯಿತು.ಈ ಕಾರಣಕ್ಕೆ ನಗರದಾದ್ಯಂತ ಟ್ರಾಫಿಕ್‌ ದಟ್ಟನೆ ಉಂಟಾಯಿತು. ಈಗಾಗಲೇ ಸ್ಟೇಟ್‌ ಇಂಟೆಲಿಜೆನ್ಸ್‌, ಎನ್‌ಎಸ್‌ಜಿ, ಯುಪಿ ಪೊಲೀಸರು ಉಡುಪಿಯಲ್ಲಿ ಬೀಡುಬಿಟ್ಟಿದ್ದಾರೆ. 100ರಿಂದ 150 ಮಂದಿ ಜಿಲ್ಲೆಯ ಪೊಲೀಸರು ಭದ್ರತೆಗೆ …

Read More »

ಭಾರತ್ ಜೋಡೊ ಯಾತ್ರೆ’ಯಲ್ಲಿ ನಟಿ ರಿಯಾ ಸೇನ್ ಭಾಗಿ

‘ಅಕೋಲಾ (ಮಹಾರಾಷ್ಟ್ರ): ಇಲ್ಲಿಗೆ ಆಗಮಿಸಿದ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ನಟಿ ರಿಯಾ ಸೇನ್ ಪಾಲ್ಗೊಂಡಿದ್ದಾರೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ತಿಂಗಳ ಆರಂಭದಲ್ಲಿ ನಟಿ ಹಾಗೂ ನಿರ್ದೇಶಕಿ ಪೂಜಾ ಭಟ್ ಹೈದರಾಬಾದ್‌ನಲ್ಲಿ ‘ಭಾರತ್ ಜೊಡೊ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದರು. 71ನೇ ದಿನದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ರಿಯಾ ಸೇನ್ ಪಾಲ್ಗೊಂಡಿರುವ ಚಿತ್ರಗಳ ಸರಣಿಯನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ”ನಟಿ …

Read More »

ಭಾರತ್‌ ಜೋಡೊ ಯಾತ್ರೆಯಲ್ಲಿ ಭಾರತದ ರಾಷ್ಟ್ರಗೀತೆ ಬದಲಿಗೆ ನೇಪಾಳದ ರಾಷ್ಟ್ರಗೀತೆ

ಮುಂಬೈ: ಭಾರತ್‌ ಜೋಡೊ ಯಾತ್ರೆಯಲ್ಲಿ ಭಾರತದ ರಾಷ್ಟ್ರಗೀತೆ ಬದಲಿಗೆ ನೇಪಾಳದ ರಾಷ್ಟ್ರಗೀತೆ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅನ್ನು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಮಹಾರಾಷ್ಟ್ರದ ವಾಶಿಮ್‌ನಲ್ಲಿ ರಾಹುಲ್‌ ಗಾಂಧಿ ಅವರ ಭಾಷಣ ಇತ್ತು.ಭಾಷಣ ಮುಗಿದ ಬಳಿಕ, ರಾಹುಲ್‌ ಅವರು ‘ಈಗ ರಾಷ್ಟ್ರಗೀತೆ ಹಾಕಲಿದ್ದಾರೆ’ ಎಂದು ವೇದಿಕೆಯಲ್ಲಿ ನಿಂತುಕೊಂಡರು. ಆದರೆ, ಭಾರತದ ರಾಷ್ಟ್ರಗೀತೆ ಬದಲಿಗೆ, ನೇಪಾಳದ ರಾಷ್ಟ್ರಗೀತೆ ಕೇಳಿಬಂದಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು ಎಂದು ವರದಿ ಮಾಡಿದೆ. ವೇದಿಕೆಯಲ್ಲಿ ನಿಂತಿದ್ದ …

Read More »

ಬೆಳಗಾವಿಯಲ್ಲಿ ಹತ್ತು ದಿನಗಳ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಚರ್ಚೆ : ಕಾಗೇರಿ

ಧಾರವಾಡ: ಬೆಳಗಾವಿಯಲ್ಲಿ ಹತ್ತು ದಿನಗಳ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಅಂತಿಮವಾಗಿ ಕ್ಯಾಬಿನೆಟ್ ಎಷ್ಟು ದಿನ ಅಧಿವೇಶನ ನಡೆಸಲು ನಿರ್ಧರಿಸುತ್ತದೆಯೋ ಅಷ್ಟು ದಿನ ನಡೆಸಲಾಗುವುದು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ದಿನಾಂಕದ ಬಗ್ಗೆ ಚರ್ಚೆಯಾಗಿದೆ. ಈ ಬಾರಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಒಳ್ಳೆಯ ರೀತಿಯಲ್ಲಿ ಅಧಿವೇಶನ ನಡೆಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ …

Read More »

ಸಿದ್ದರಾಮಯ್ಯನ್ನು  ಕೋಲಾರಕ್ಕೆ ಕರೆದು ಕಾಂಗ್ರೆಸ್‌ ಮುಖಂಡರು ಬಲಿ ಕೊಡಲು ಮುಂದಾಗಿದ್ದಾರೆ : ಡಾ.ಕೆ.ಸುಧಾಕರ್‌

ತುಮಕೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆದುಕೊಂಡು ಬಂದು ಅಲ್ಲಿನ ಕಾಂಗ್ರೆಸ್‌ ಮುಖಂಡರು ಬಲಿ ಕೊಡಲು ಮುಂದಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಲೇವಡಿ ಮಾಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಸಾಕಷ್ಟು ಕಾಂಗ್ರೆಸ್‌ ನಾಯಕರು ಇದ್ದರೂ ಸಹ ಬುಡ ಅಲಗಾಡುತ್ತಿರವ ಹಿನ್ನೆಲೆಯಲ್ಲಿ ಅದನ್ನು ಸರಿ ಮಾಡಲು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದ್ದಿದಾರೆ. ನಗರದಲ್ಲಿ ನಡೆದ ಬಾಣಂತಿ ಮತ್ತು ನವಜಾತ ಶಿಶುಗಳ ಸಾವು ಪ್ರಕರಣದಲ್ಲಿ ಏಕಪಕ್ಷೀಯ ಕ್ರಮವಾಗಿದೆ …

Read More »

ಸಿದ್ದರಾಮಯ್ಯ ಕಾರ್ಯಕ್ರಮ : ಬ್ರಾಹ್ಮಣ ಕುರಿತು ಅವಹೇಳನಕಾರಿ ರಾಜ್ಯದಲ್ಲಿ ಪ್ರತಿಭಟನೆ

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ‘ ಸಿದ್ದರಾಮಯ್ಯ 75’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರಾಹ್ಮಣರನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯರ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಕುರಿತು ಅವಹೇಳನ ಹೇಳಿಕೆ ನೀಡಲಾಗಿದೆ., ಬ್ರಾಹ್ಮಣ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ಮಾತನಾಡಲಾಗಿದೆ ಎಂದು ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನ.17 ರಂದು ( ನಾಳೆ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸಿದ್ದರಾಮಯ್ಯ-75 ಪುಸ್ತಕ …

Read More »