ಬೆಂಗಳೂರು : ಚುನಾವಣೆ ಸಮಯದಲ್ಲಿ ಟ್ರಬಲ್ ಇಂಜಿನ್ ಬಿಜೆಪಿ ಸರಕಾರ ತನ್ನ ಭ್ರಷ್ಟಾಚಾರ , ಹಗರಣ, ಕರ್ತವ್ಯಲೋಪಗಳನ್ನು ಮುಚ್ಚಿಕೊಳ್ಳಲು ಮಹನೀಯರ ಪ್ರತಿಮೆಯ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಭ್ರಷ್ಟಾಚಾರದ ಸಾಧನೆ ಹಾಗೂ ಅಸಲಿಯತ್ತು ಈಗಾಗಲೇ ರಾಜ್ಯದ ಜನರ ಮುಂದೆ ಬಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೆಂಪೇಗೌಡರ ಪ್ರತಿಮೆ ಅನಾವರಣ, …
Read More »ನರೇಂದ್ರ ಮೋದಿ ಮಾತಿಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ
ಬೆಂಗಳೂರು : ಪ್ರತಿದಿನ ನಾನು ನಿಂದನೆಗಳನ್ನು ಸ್ವೀಕರಿಸುತ್ತೇನೆ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತಿಗೆ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. ಮೋದಿ ಮಾತನಾಡಿರುವ ವಿಡಿಯೋ ಹಂಚಿಕೊಂಡು, ಇದನ್ನೇ ನಾಚಿಕೆಗೇಡು ಮತ್ತು ಅಹಂಕಾರ ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ತೆಲಂಗಾಣ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ.. ನಾನು ಪ್ರತಿದಿನ 2 ರಿಂದ 2.5 ಕೆಜಿಯಷ್ಟು ನಿಂದನೆಗಳನ್ನು ತಿನ್ನುತ್ತೇನೆ. ಆದರೂ ನನಗೆ ಸುಸ್ತಾಗುವುದಿಲ್ಲ. ದೇವರ ಅನುಗ್ರಹದಿಂದ ಆ ನಿಂದನೆಗಳೆಲ್ಲವೂ ನನ್ನ …
Read More »ಯುಎಇ ಕನ್ನಡ ರತ್ನ ಪ್ರಶಸ್ತಿಯನ್ನು ನಿರಾಕರಿಸಿದ ಯದುವೀರ್
ಮೈಸೂರು: ಯುಎಇ ಕನ್ನಡ ರತ್ನ ಪ್ರಶಸ್ತಿಯನ್ನು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಿರಾಕರಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನನಗೆ ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂಬ ಸುದ್ದಿ ಮುದ್ರಣ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ.ಈ ಪ್ರಶಸ್ತಿಯನ್ನು ತಾನು ಸ್ವೀಕರಿಸುವುದಿಲ್ಲ. ಪ್ರಶಸ್ತಿಗೆ ತನ್ನನ್ನು ಪರಿಗಣಿಸಿದ್ದಕ್ಕಾಗಿ ಸಂಘಟಕರಿಗೆ ಧನ್ಯವಾದ ತಿಳಿಸುತ್ತೇನೆ. ಆದರೆ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಸೂಕ್ತವೆಂದು ತಾನು ಭಾವಿಸುವುದಿಲ್ಲ …
Read More »ರಾಜ್ಯ ಕಾಂಗ್ರೆಸ್ ದಿಂದ ಮಹತ್ವದ ಸಭೆ
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ರಾಜ್ಯ ಕಾಂಗ್ರೆಸ್ ಇದೀಗ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಕುರಿತಂತೆ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರಾದ ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಜೆ ಜಾರ್ಜ್ ಹಾಗೂ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಕುರಿತಂತೆ ಚರ್ಚೆ …
Read More »ಬೆಂಗಳೂರುನಲ್ಲಿ ಪ್ರಧಾನಿ ಕಾರ್ಯ ಕ್ರಮ : ಬಿಜೆಪಿ ಮುಖಂಡನ ವಿರುದ್ಧ ಪೊಲೀಸರಿಗೆ ದೂರು
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ್ದು, ಈ ಕಾರ್ಯಕ್ರಮಕ್ಕಾಗಿ ಕೆಲಸ ಮಾಡಲು ಕರೆ ತಂದಿದ್ದ ಕೂಲಿ ಕಾರ್ಮಿಕರಿಗೆ ಬಾಕಿ ಹಣ ಪಾವತಿ ಮಾಡದ ಸ್ಥಳೀಯ ಬಿಜೆಪಿ ಮುಖಂಡನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳೀಯ ಬಿಜೆಪಿ ಮುಖಂಡ ನಂದೀಶ್ ಅವರ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಸಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ 40 ಕಾರ್ಮಿಕರು …
Read More »ಬೆಂಬಿಲಿಗರು , ಕಾರ್ಯಕರ್ತರ ಕಡೆಗಣನೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ : ಯು ಬಿ ಬಣಕಾರ
ಹಾವೇರಿ: ನಮ್ಮ ಬೆಂಬಿಲಿಗರು ಹಾಗೂ ಕಾರ್ಯಕರ್ತರ ಕಡೆಗಣನೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತರಾಗಿರುವ ಮಾಜಿ ಶಾಸಕ ಯು ಬಿ ಬಣಕಾರ ಹೇಳಿದರು. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ತಿಂಗಳುಗಳಿಂದ ಬೆಂಬಲಿಗರ ಒತ್ತಡವಿತ್ತು. ಹಾಗಾಗಿ ರಾಜೀನಾಮೆ ನೀಡಿದ್ದೇನೆ ಎಂದರು. ಇನ್ನು, ಮುಂದಿನ ಬಾರಿಯ ಚುನಾವಣೆಗೆ ಸ್ಪರ್ಧೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧಿಸಿದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು …
Read More »ವೈಯಕ್ತಿಕ ಜಗಳ : ಯುವಕನಿಗೆ ಚಾಕು ಇರಿತ
ಹುಬ್ಬಳ್ಳಿ : ವೈಯಕ್ತಿಕ ಜಗಳದಿಂದಾಗಿ ಯುವಕರು ಇಬ್ಬರು ಹೊಡೆದಾಡಿಕೊಂಡ ಚಾಕು ಇರಿತವಾದ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇಹುಬ್ಭಳ್ಳಿ ದುರ್ಗದ ಬೈಲ್ ಸರ್ಕಲ್ ಸಮೀಪ ಕಾರ್ಪೊರೇಷನ್ ಆಫೀಸ್ ಮುಂದೆ ನಡೆದಿದೆ. ಸಂತೋಷ ಮುರಗೋಡ ( ೩೪ ವರ್ಷ ) ಹಲ್ಲೆ ಗೀಡಾದ ಯುವಕ. ಶಿವಾನಂದ ನಾಯ್ಕ ( ೩೨ ) ಕುರುಬರ ಓಣಿ ಇತನು ತನ್ನ ವೈಯಕ್ತಿಕ ಜಗಳದಿಂದಾಗಿ ಬೈದಾಡಿಕೊಂಡು ನಂತರ ಸಿಟ್ಟಿನಿಂದ ಸಂತೋಷ ಮುರಗೋಡ ಇತನಿಗೆ ಹೊಟ್ಟೆಗೆ …
Read More »ಚುನಾವಣೆ ಅಖಾಡ ಸಜ್ಜಾಗುವ ಮುನ್ನವೇ ಜೋರಾಗುತ್ತಿದೆ ಕುಕ್ಕರ್ ಸಿಟಿ
ಹುಬ್ಬಳ್ಳಿ;ಕಲಘಟಗಿ ವಿಧಾನ ಸಭಾ ಕ್ಷೇತ್ರ ಈಗಲೇ ರಂಗುರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಐದಾರು ತಿಂಗಳು ಬಾಕಿ ಇವೆ. ಈಗಲೇ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮತದಾರರನ್ನ ಸೆಳೆಯಲು ಅನೇಕ ಕಸರತ್ತು ನಡೆದಿವೆ. ಒಂದು ಸಮುದಾಯ ಒಲಿಸುವಿಕೆ ಆಯಕಟ್ಟಿನ ಸ್ಥಳ ಹುಡುಕಾಟ, ಮತದಾರರ ಮನವೊಲಿಸಲು ಆಶೆ ಆಮಿಷ ಹೀಗೆ ಒಂದಲ್ಲಾ ಎರಡಲ್ಲ ಅನೇಕ ರೀತಿಯ ಒಲೈಕೆ ರಾಜಕಾರಣಕ್ಕೆ ನಾಂದಿಯಾಗಿದೆ ಧಾರವಾಡ ಜಿಲ್ಲೆ. ಈಗ ಜಿಲ್ಲೆಯಲ್ಲಿಯೇ ಹೈಲ್ಟೋಜ್ ಕ್ಷೇತ್ರ ಎಣಿಸಿಕೊಂಡಿರುವ ಕಲಘಟಗಿಯಲ್ಲಿ ಈಗ ಕುಕ್ಕರಿನ …
Read More »ಟಿಪ್ಪು ಮೂರ್ತಿ ನಿರ್ಮಾಣ ಮಾಡಿದರೇ ಕಾಂಗ್ರೆಸ್ಸಿಗರನ್ನ ಮನೆಗೆ ಕಳುಹಿಸುತ್ತಾರೆ : ಜೋಶಿ
ಹುಬ್ಬಳ್ಳಿ : ಕಾಂಗ್ರೆಸ್ ನಾಯಕರು ಟಿಪ್ಪು ಸುಲ್ತಾನ್ ಮೂರ್ತಿ ನಿರ್ಮಾಣ ಮಾಡಿದರೆ ಜನರು ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರಮೈಸೂರಿನಲ್ಲಿ ಟಿಪ್ಪು ಪ್ರತಿಮೆ ವಿಚಾರ ಕುರಿತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತಪಡಿಸುತಿದ್ದುಟಿಪ್ಪು ಪ್ರತಿಮೆ ಮಾಡಲಿ ಅವರನ್ನ ಜನ ಮನೆಗೆ ಕಳಿಸುತ್ತಿದೆ. ಟಿಪ್ಪು ಸುಲ್ತಾನ್ ಪ್ರತಿಮೆಗೆ ಬೆಂಬಲ ಕೊಟ್ಟವರನ್ನು ಮನೆಗೆ ಕಳಸೇ ಕಳಸ್ತಾರೆ. …
Read More »ಸ್ಮಾರಕ ನಿರ್ಮಾಣವಾಗಲಿ, ಪಾಪು ಜೀವನ ಚರಿತ್ರೆ ಪಠ್ಯದಲ್ಲಿ ಸೇರ್ಪಡೆ ಮಾಡಿ- ಪಾಪು ಮೊಮ್ಮಗಳು ವಿಜಯಾ ಪಾಟೀಲ್
ಹುಬ್ಬಳ್ಳಿ; ಕನ್ನಡದ ಕಟ್ಟಾಳು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಸ್ಮಾರಕವನ್ನು ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ನಾಡೋಜ ದಿ.ಪಾಟೀಲ ಪುಟ್ಟಪ್ಪ ಅವರ ಮೊಮ್ಮಗಳು ವಿಜಯಾ ಪಾಟೀಲ ಆಗ್ರಹಿಸಿದರು ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿದು ಮಾತನಾಡಿದ ಅವರು, ಡಾ ಪಾಟೀಲ್ ಪುಟ್ಟಪ್ಪನವರ ಈ ಹಿಂದೆ ಸರ್ಕಾರದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ ಅಂತಿಮ ನಮನಗಳನ್ನು ಪಡೆದು ಪಾಪು ಅವರನ್ನು ಹಾಡಿ ಹೊಗಳಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





