Breaking News

BigTv News

ಮೊರ್ಬಿ ಕೇಬಲ್​ ಸೇತುವೆ ದುರಂತ : 12 ಜನ ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ

ಮೊರ್ಬಿ, ಗುಜರಾತ್​: ಮೊರ್ಬಿ ಕೇಬಲ್​ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಇದುವರೆಗೆ 141ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಸ್ಥಳೀಯರ ಪ್ರಕಾರ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಈ ದುರಂತದಲ್ಲಿ ಬಿಜೆಪಿ ಸಂಸದ ತಮ್ಮ 12 ಜನ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಈ ದುರಂತದ ಬಗ್ಗೆ ಮಾತನಾಡಿದ ರಾಜ್‌ಕೋಟ್ ಬಿಜೆಪಿ ಸಂಸದ ಮೋಹನ್‌ಭಾಯ್ ಕುಂದರಿಯಾ, ಈ ಘಟನೆ ಅತ್ಯಂತ ದುಃಖಕರವಾಗಿದೆ. …

Read More »

ಮೊರ್ಬಿ ಕೇಬಲ್ ಸೇತುವೆ ದುರಂತ : ಸಾವಿನ ಸಂಖ್ಯೆ 137ಕ್ಕೆ ಏರಿಕೆ

ಅಹಮದಾಬಾದ್: ಮೊರ್ಬಿ ಕೇಬಲ್ ಸೇತುವೆ  ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯದಲ್ಲಿ ಮೃತದೇಹಗಳ ಪತ್ತೆ ಕಾರ್ಯ ನಡೆಯುತ್ತಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಪಘಾತದ ಮಾಹಿತಿಯ ಮೇರೆಗೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮೊರ್ಬಿಗೆ ಬಂದಿದ್ದಾರೆ. ತಡರಾತ್ರಿ ಮೊರ್ಬಿ ತಲುಪಿ, ಮೊದಲು ಘಟನೆಯ ಸ್ಥಳದಲ್ಲಿದ್ದ ಗಾಯಾಳುಗಳಿಗೆ ಸಾಂತ್ವನ ಹೇಳಿ ನಂತರ ಆಸ್ಪತ್ರೆಗೆ ತೆರಳಿದ್ದಾರೆ. 230 ಮೀಟರ್‌ ಉದ್ದದ ಈ ಸೇತುವೆಯನ್ನು 19ನೇ …

Read More »

2022 ನೇ ಸಾಲಿನ ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ಪಟ್ಟಿ ಪ್ರಕಟ

ಬೆಂಗಳೂರು : 2022 ನೇ ಸಾಲಿನ ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, 67 ಮಂದಿ ಸಾಧಕರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಇಸ್ರೋ ಮಾಜಿ ನಿರ್ದೆಶಕ ಶಿವನ್, ಸಾಹಿತಿ ಆ.ರಾ.ಮಿತ್ರ, ನಟರಾದ ದತ್ತಣ್ಣ, ಸಿಹಿಕಹಿ ಚಂದ್ರು, ನಿವೃತ್ತ ಐಎಎಸ್ ಅಧಿಕಾರಿ ಎಂ.ಮದನ್ ಗೋಪಾಲ್, ಶಿಕ್ಷಣ ತಜ್ಞ ಸುಬ್ಬರಾವ್ ಶೆಟ್ಟಿ ಸೇರಿ 67 ಮಂದಿ ಸಾಧಿಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ …

Read More »

ಪಂಚರತ್ನ ರಥಯಾತ್ರೆಗೆ ಭರ್ಜರಿ ಸಿದ್ದತೆ

ಕೋಲಾರ : ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರೊ ಜೆಡಿಎಸ್ ಪಕ್ಷ, ನವೆಂಬರ್ 1 ರಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಿಂದ ಪಂಚರತ್ನ ರಥಯಾತ್ರೆ ಆರಂಭಿಸಲಿದೆ. ನವೆಂಬರ್ 1 ರಂದು ಕುರುಡುಮಲೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಕೆ ನಂತರ, ಮುಳಬಾಗಿಲು ಪಟ್ಟಣ ಹೊರವಲಯದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮುಂದಿನ ವರ್ಷದ ಮಾರ್ಚ್ ವರೆಗು ಪಂಚರತ್ನ ರಥಯಾತ್ರೆ ಸಾಗಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲು ಮಾಜಿ ಸಿಎಂ …

Read More »

ಕೆಲಗೇರಿ ಕೆರೆಗೆ ಕಾಯಕಲ್ಪ : ಮೇಯರ್ ಸೂಚನೆ

ಧಾರವಾಡ: ಸರ್ ಎಂ. ವಿಶ್ವೇಶ್ವರಯ್ಯ ರವರಿಂದ ಸ್ಥಾಪಿತವಾದ ಧಾರವಾಡದ ಕೆಲಗೇರಿ ನಗರದ ನಾಗರಿಕರು ಹಾಗೂ ಸ್ಥಳೀಯ ಪಾಲಿಕೆಯ ಸದಸ್ಯರ ಕೋರಿಕೆಯ ಮೇರೆಗೆ ಇಂದು ಮುಂಜಾನೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಭೇಟಿ ನೀಡಿ ಕೆಲಗೇರಿ ಕೆರೆಯ ಸ್ವಚ್ಛತೆ ಹಾಗೂ ಅಭಿವೃದ್ಧಿಯ ಕುರಿತು ಪಾಲಿಕೆಯ ಅಧಿಕಾರಿಗಳಿಗೆ ಶೀಘ್ರವೇ ಕ್ರಮ ಕೈಗೊಳ್ಳಲು ಸೂಚಿಸಿದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಮಾತನಾಡಿ ಬರುವ ವಾರದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅತೀ ಶೀಘ್ರದಲ್ಲಿ …

Read More »

ಅರವಿಂದ್ ಬೆಲ್ಲದ್ ಯುವತಿಗೆ ಅವಮಾನ : ಶಕುಂತಲಾ ಆತ್ಮಹತ್ಯೆ ಗೆ ಯತ್ನ

ಧಾರವಾಡ : ಶಾಸಕ ಅರವಿಂದ್ ಬೆಲ್ಲದ್ ಮಾಡಿದ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಶಕುಂತಲಾ ಮನಸೂರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗೆಗಾಗಿ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಕಳೆದ 20 ವರ್ಷಗಳಿಂದ ಶಕುಂತಲಾ ಕರ್ನಾಟಕ ಮಹರ್ಷಿ ವಾಲ್ಮಿಕಿ ಪಂಗಡದಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತಿದ್ದಳು. ಅಧಿಕಾರಿ ರವಿ ಬೆಂತೂರ ನಿರ್ದೇಶಕರಾಗಿ ಬಂದ ಮೇಲೆ ಈಕೆಯ ಮೇಲೆ ಲಂಚ ಪಡೆದ …

Read More »

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲು ಜೆಡಿಎಸ್ ಸಿದ್ಧತೆ : ಕುಮಾರಸ್ವಾಮಿ

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲು ಜೆಡಿಎಸ್ ಸಿದ್ಧತೆ ನಡೆಸಿದ್ದು, ಪ್ರಬಲ ಸಮುದಾಯಗಳನ್ನು ಸೆಳೆಯಲು ರಣತಂತ್ರ ಹೂಡಲಾಗಿದೆ. ದೊಡ್ಡ-ದೊಡ್ಡ ಸಮುದಾಯ ಸೆಳೆಯಲು ಪ್ಲಾನ್​​​ ಶುರುವಾಗಿದ್ದು, ಉತ್ತರ ಕರ್ನಾಟಕದ ಲಿಂಗಾಯತ ಮತ ಸೆಳೆಯಲು ಇಂದಿನಿಂದ ವರ್ಕೌಟ್ ಮಾಡಲಾಗುತ್ತಿದೆ. ಲಿಂಗಾಯತ ಮುಖಂಡರ ಜೊತೆ ಇಂದು ಕುಮಾರಸ್ವಾಮಿ ಬೆಂಗಳೂರಿನ JDS ಕಚೇರಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸೀಟ್ ಗೆಲ್ಲಲು HDK …

Read More »

ಭಾರತ ಜೋಡೊ ಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಗಾ

ಜಡೇಚರ್ಲ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಅಖಿಲ ಭಾರತ ಮಟ್ಟದ ಐಕ್ಯತಾ ಯಾತ್ರೆ ತೆಲಂಗಾಣ ರಾಜ್ಯದಲ್ಲಿಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ಓಟದ ಸ್ಪರ್ಧೆಯಾಗಿ ಪರಿವರ್ತನೆಯಾಗಿತ್ತು. ಇಂದಿನ ಪಾದಯಾತ್ರೆಯಲ್ಲಿ ಸುಮಾರು 22 ಕಿ.ಮೀ ಸಂಚರಿಸುವ ಮಾರ್ಗ ನಕ್ಷೆ ಸಿದ್ದಗೊಂಡಿತ್ತು.ಎಂದಿನಂತೆ ಬೆಳಗ್ಗೆ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದರು. ಭದ್ರತಾ ಸಿಬ್ಬಂದಿಗಳು, ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಮುಂದೆ ಹೆಜ್ಜೆ ಹಾಕುತ್ತಿದ್ದರು. ಒಂದು ಹಂತದಲ್ಲಿ ಮಕ್ಕಳು ಜೊತೆಗೂಡಿದರು. ಈ …

Read More »

ಹಿಂದುಳಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು : ಹಿಂದುಳಿದ ವರ್ಗವನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣವೇ ಅಸ್ತ್ರ. ಬಸವರಾಜ ಬೊಮ್ಮಾಯಿ ಸರ್ಕಾರ ಈ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯನ್ನು ನೀಡುತ್ತಿದೆ. ಈವರೆಗೆ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಹಿಂದುಳಿದ ವರ್ಗಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಮೂಲಕ ಅವರ ಬದುಕಿನ ಮನ್ವಂತರಕ್ಕೆ ಬಿಜೆಪಿ ಮುಂದಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವಸತಿಗಳನ್ನು ಹೆಚ್ಚಿಸಲು ಸರ್ಕಾರ ಹೆಚ್ಚುವರಿ 107 ಕೋಟಿ ರೂ. …

Read More »

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುತಾಲಿಕ್ ಕಣಕ್ಕಿಳಿಯುವುದು ಖಚಿತ

ಧಾರವಾಡ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಣಕ್ಕಿಳಿಯುವುದು ಖಚಿತವಾಗಿದೆ. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಲವು ಕ್ಷೇತ್ರಗಳ ಅಭಿಮಾನಿಗಳು ಮನವಿ ಮಾಡುತ್ತಿದ್ದು, ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಯಾವ ಕ್ಷೇತ್ರ ಎಂಬುದನ್ನು ಬಹಿರಂಗಪಡಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಮೂಲಗಳ ಪ್ರಕಾರ ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯ ಯಾವುದಾದರು ಒಂದು ಕ್ಷೇತ್ರದಿಂದ ಪ್ರಮೋದ್ …

Read More »