Breaking News

BigTv News

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸರಾ ಹಬ್ಬದ ದಿನ ರೈತರು ಪ್ರತಿಭಟನೆ

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸರಾ ಹಬ್ಬದ ದಿನ (ಅ. 5 ರಂದು) ಹೆದ್ದಾರಿ ಬಂದ್​ಗೆ ರೈತ ಸಂಘಟನೆ ಕರೆ ನೀಡಿದೆ. ಮಂಡ್ಯ, ಮದ್ದೂರು, ಕೆ.ಆರ್​.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಮೈಸೂರಿನ ಇಲವಾಲ, ಟಿ.ನರಸೀಪುರ, ನಂಜನಗೂಡು, ಹುಣಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ರೈತ ಸಂಘಟನೆ ಕರೆ ನೀಡಿದೆ. ಟ್ರ್ಯಾಕ್ಟರ್, ಎತ್ತಿನಗಾಡಿಗಳ ಮೂಲಕ ಹೆದ್ದಾರಿ ತಡೆಯಲಾಗುವುದು. ರಾಜ್ಯ ಸರ್ಕಾರ ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು, ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದ್ದೆವು. …

Read More »

ಹವಮಾನ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರು : ವರುಣಾರ್ಭಟಕ್ಕೆ ಈ ಬಾರಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಮುಂಗಾರು ಆರಂಭದ ಸಂದರ್ಭದಲ್ಲಿ ಸಕಾಲಕ್ಕೆ ಮಳೆಯಾಗದಿದ್ದರೂ ಸಹ ಆ ಬಳಿಕ ಬಿಟ್ಟೂಬಿಡದಂತೆ ಮಳೆ ಸುರಿದಿದ್ದು, ಬೆಳೆ ನಷ್ಟದ ಜೊತೆಗೆ ಆಸ್ತಿ ಹಾನಿಯೂ ಸಂಭವಿಸಿದೆ. ನಗರ ಪ್ರದೇಶದ ಜನತೆಯೂ ಸಹ ಮಳೆ ಅಬ್ಬರಕ್ಕೆ ಸಾಕಾಗಿ ಹೋಗಿದ್ದು, ಮಳೆ ಸುರಿದ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಜೊತೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಪರಿತಪಿಸಿದ್ದರು.ಇದೀಗ ಹಬ್ಬದ ಸಂದರ್ಭದಲ್ಲಿ ಕಳೆದ ಎರಡು …

Read More »

ಮಗನಿಗೆ ಸಾಥ್ ಕೊಡಲು ನಾಳೆ ಮೈಸೂರುಗೆ ಸೋನಿಯಾ ಗಾಂಧಿ

ಮೈಸೂರು : ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಡಿಕೇರಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 4 ರಂದು ಬೆಳಿಗ್ಗೆ ದೆಹಲಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಾಳೆ ಮೈಸೂರು ನಗರದಿಂದ Ts ಛತ್ರದವರೆಗೂ ಸಾಗಲಿರುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ನಂತರ ಎಸಿಸಿಸಿ ಅಧ್ಯಕ್ಷ ಚುನಾವಣೆ ಕುರಿತು ರಾಹುಲ್ ಜೊತೆ ಚರ್ಚಿಸಲು ಮಡಿಕೇರಿಗೆ ಸೋಮವಾರ ಮಧ್ಯಾಹ್ನ 12.30ಕ್ಕೆ …

Read More »

ಎಪ್‌ಕೆಸಿಸಿಐ ಅಧ್ಯಕ್ಷರಾಗಿ ಉದ್ಯಮಿ ಬಿ.ವಿ. ಗೋಪಾಲ ರೆಡ್ಡಿ ಆಯ್ಕೆ

ಬೆಂಗಳೂರು: ಉದ್ಯಮಿ ಬಿ.ವಿ. ಗೋಪಾಲ ರೆಡ್ಡಿ ಅವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಪ್‌ಕೆಸಿಸಿಐ)ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರೆಡ್ಡಿ ಅವರ ಬೆಂಗಳೂರಿನ ಮಾರ್ಷಲ್ ಮೋಟರ್ಸ್ ಪ್ರೈ.ಲಿ. ಕಂಪನಿಯ ಅಧ್ಯಕ್ಷ. ರೆಡ್ಡಿ ಅವರು ಎಫ್‌ಕೆಸಿಸಿಐ ಜೊತೆ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಗುರುತಿಸಿಕೊಂಡಿದ್ದಾರೆ. ಹಿಂದೆ ಎಫ್‌ಕೆಸಿಸಿಐ ಉಪಾಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಅವರು ಕರ್ತವ್ಯ ನಿಭಾಯಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ರಮೇಶ್‌ ಚಂದ್ರ ಲಹೋಟಿ ಅವರು ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷರಾಗಿ, ಎಂ.ಜಿ. …

Read More »

ಅಲ್ಪಸಂಖ್ಯಾತರಿಗೆ ಸಿಹಿ ಸುದ್ದಿ

ನವದೆಹಲಿ: ಕೇಂದ್ರವು 2006 ರಲ್ಲಿ ಯುಪಿಎ ಸರ್ಕಾರ ಸ್ಥಾಪಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಪಡಿಸುವ ಸಾಧ್ಯತೆಯಿದೆ. ಅದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮೋದಿ ಸರ್ಕಾರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ವಿಲೀನದ ನಂತರವೂ ಸಚಿವಾಲಯವು ಜಾರಿಗೊಳಿಸುತ್ತಿರುವ ಎಲ್ಲಾ ಯೋಜನೆಗಳು ಮುಂದುವರಿಯುತ್ತವೆ. ಅಲ್ಪಸಂಖ್ಯಾತ ವ್ಯವಹಾರಗಳಿಗೆ ಸ್ವತಂತ್ರ ಸಚಿವಾಲಯದ ಅಗತ್ಯವಿಲ್ಲ ಎಂಬ ಅಭಿಪ್ರಾಯ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಂದಿದೆ. ಯುಪಿಎಯ ತುಷ್ಟೀಕರಣ …

Read More »

4ನೇ ದಿನಕ್ಕೆ ಕಾಲಿಟ್ಟಿ ಭಾರತ್​ ಜೋಡೋ ಯಾತ್ರೆ : ರಾಗಾ ಸುತ್ತ ಮುತ್ತ ಪೋಲಿಸ್ ಭದ್ರತೆ

ಮೈಸೂರು: ಕರ್ನಾಟಕದಲ್ಲಿ ಭಾರತ್​ ಜೋಡೋ ಯಾತ್ರೆ ಇಂದು(ಸೋಮವಾರ) 4ನೇ ದಿನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಆರ್​.ಗೇಟ್ ವೃತ್ತದಿಂದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ರಾಹುಲ್ ಸುತ್ತ ಮುತ್ತ ಕಾರ್ಯಕರ್ತರಿಗಿಂತ ಬಹುತೇಕ ಪೊಲೀಸರೇ ಇದ್ದು, ಬಿಗಿ ಭದ್ರತೆ ನೀಡಲಾಗಿದೆ. ದಾರಿ ಮಧ್ಯೆ ಮಸೀದಿ ಮತ್ತು ಚರ್ಚ್​ಗೂ ರಾಹುಲ್ ಭೇಟಿ ನೀಡಿದರು. ಮಂಡಿ ಮೊಹಲ್ಲಾದಲ್ಲಿರುವ ಮಸ್ಜಿದೇ ಅಜಃಮ್ ಮಸಿದೀಗೆ ತೆರಳಿದ ರಾಗಾ, ಕೆಲ ನಿಮಿಷ ಪ್ರಾರ್ಥನೆ …

Read More »

ಅಗ್ನಿ ಅವಘಡ : 3 ಜನ ಸಾವು, 60 ಮಂದಿ ಗಂಭೀರಗೆ ಗಾಯ

ಉತ್ತರಪ್ರದೇಶ‌:  ಭದೋಹಿ ಜಿಲ್ಲೆಯ ಔರೈನಲ್ಲಿ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೂರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಬಾಲಕರು ಇದ್ದಾರೆ, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರ್ಗಾ ಪೂಜೆಯ ಪೆಂಡಾಲ್‌ನಲ್ಲಿ ಆರತಿ ವೇಳೆ ಬೆಂಕಿ ಕಾಣಿಸಿದ್ದು, ಸಾರ್ಟ್ ಸರ್ಕೀಟ್‌ನಿಂದ ಬೆಂಕಿ ಹತ್ತಿದೆ ಎನ್ನಲಾಗಿದೆ. ಘಟನೆ ವೇಳೆ ಪೆಂಡಾಲ್‌ನಲ್ಲಿ 150 ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ಹೇಳಿದ್ದಾರೆ. ಹೆಚ್ಚಿನ …

Read More »

ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರ

ಮಂಡ್ಯ : ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಕೋಟಿ ಕೋಟಿ ಬೊಕ್ಕಸಕ್ಕೆ ತುಂಬಿಕೊಳ್ಳುವ ಸರ್ಕಾರ ಚಿಲ್ಲರೆ ಕಾಸು ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯ ಘಟಕಗಳಲ್ಲಿನ ಪ್ರತಿ ವಾಹನಕ್ಕೆ ತಲಾ 50 ರೂಪಾಯಿ. ವಿಭಾಗೀಯ ಕಾರ್ಯಗಾರಕ್ಕೆ 1000 ರೂಪಾಯಿ. ಪ್ರಾದೇಶಿಕ ಕಾರ್ಯಾಗಾರಕ್ಕೆ 2000 ರೂಪಾಯಿ ಹೀಗೆ ಆಯುಧ ಪೂಜೆಗಾಗಿ ಕೆಎಸ್‌ಆರ್‌ಟಿಸಿಗೆ ಸರ್ಕಾರ ಚಿಲ್ಲರೆ ಕಾಸು …

Read More »

ಈಜಲು ಹೋಗಿ ನಾಲ್ವರು ಮಕ್ಕಳು ನೀರುಪಾಲು

ಹೈದರಾಬಾದ್(ತೆಲಂಗಾಣ): ಈಜಲು ಹೋಗಿ ನಾಲ್ವರು ಮಕ್ಕಳು ನೀರುಪಾಲಾದ ಘಟನೆ ರಂಗಾರೆಡ್ಡಿ ಜಿಲ್ಲೆಯ ಯಾಚರಂ ಮಂಡಲದ ತಾಡಿಪರ್ತಿ ಗ್ರಾಮದಲ್ಲಿ ನಡೆದಿದೆ. ಸಮ್ರೀನ್, ಖಾಲಿದ್, ರೆಹಾನ್ ಮತ್ತು ಇಮ್ರಾನ್ ಮೃತ ಬಾಲಕರು. ದರ್ಗಾಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಈಜಲು ಎರ್ರಕುಂಟಾ ಹೊಂಡಕ್ಕೆ ಇಳಿದಿದ್ದಾರೆ. ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದು, ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕರೆಲ್ಲರೂ 14 ವರ್ಷಕ್ಕಿಂತ ಕಡಿಮೆ …

Read More »

ಹಣ ವಸೂಲಿ ಮಾಡಿ ಚಾಕು ಇರಿತ ಮಾಡಿದ ಆರೋಪಿಗಳನ್ನು ಬಂಧಿಸಿದ ಕಾಸಬಾಪೆಟ್ ಪೊಲೀಸರು.

ಕೋತಂಬರಿ ವ್ಯಾಪರಿಗೆ ಹಾಡು ಹಗಲು ಚಾಕು ಇರಿದ ಪ್ರಕರಣ, ಬೀದಿ ವ್ಯಾಪರಿಗಳ ಬಳಿ ಹಣ ವಸೂಲಿಗೆ ಬಂದು ಚಾಕು ಇರಿದಿದ್ದ ದುಷ್ಕರ್ಮಿಗಳು, ರಕ್ತಸಿಕ್ತ ಪರಿಸ್ಥಿತಿಯಲ್ಲೆ ಹಳೇ ಹುಬ್ಬಳ್ಳಿ ಠಾಣೆಗೆ ಬಂದಿದ್ದ ವ್ಯಕ್ತಿ. ಹುಬ್ಬಳ್ಳಿಯ ಕರ್ಜಗಿ ಓಣಿಯ ನಿವಾಸಿ ಮಹಮ್ಮದ್ ಗಾಯಗೊಂಡು ಕಿಮ್ಸ್ ಗೆ ದಾಖಲು ಆಗಿದ್ದ.ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕಸಬಾಪೇಟೆ ಪೊಲೀಸರು. ಖಾದರ್, ಬಿಲಾಲ್, ಸಾಧಿಕ್ ಹಾಗೂ ಖಾಜಾ ಬಂಧಿತ ಆರೋಪಿಗಳು. ಇನ್ಸಪೆಕ್ಟರ್ A M ಬನ್ನಿ …

Read More »