Breaking News

BigTv News

ಅನಧಿಕೃತ ಮೈಕ್ ಗಳನ್ನ ತೆರವುಗೊಳಿಸುವಂತೆ ಒತ್ತಾಯ

ಧಾರವಾಡ : ಅನಧಿಕೃತ ಮೈಕ್ ಗಳನ್ನ ತೆರವುಗೊಳಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಸಂಘಟನೆಯಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರು, ಕೋರ್ಟ್ ಅದೇಶವನ್ನ ಪಾಲಿಸಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಸೀದಿ ಮೇಲಿನ ಮೈಕ್ ಗಳನ್ನ ತೆರವುಗೊಳಿಸಬೇಕು. ಆದೇಶವನ್ನ ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸಿಧಾರವಾಡ ಎಸ್ ಪಿ ಲೋಕೇಶ ಗೆ ಮನವಿ ಸಲ್ಲಿಸಿದರು. ಮಸೀದಿ ಮೇಲಿನ …

Read More »

ಅರೆ ಹುಚ್ಚನಾದ ಪತಿ, ಅತ್ತೆ ಮಾವ ಮನೆ ಖಾಲಿ ಮಾಡುವಂತೆ ತಾಕೀತು, ನ್ಯಾಯಕ್ಕಾಗಿ ಹೆಣ್ಣು ಮಗಳ ಅಲೆದಾಟ

ಹುಬ್ಬಳ್ಳಿ; ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಇಬ್ಬರು ಚಿಕ್ಕಮಕ್ಕಳು, ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇನ್ನು ತಾಯಿ ಮನೆಗೆ ಹೋಗಬೇಕಾದರೆ ಅಲ್ಲಿಯೂ ಅವಳ ಕಾಳಜಿ ಮಾಡುವವರಿಲ್ಲ. ಈಗಾಗಲೇ ಇದ್ದೊಂದು ಗಂಡನೆ ಮನೆಯನ್ನ ಖಾಲಿ ಮಾಡುವಂತೆ ಗಂಡನ ಮನೆಯವರ ಕಿರುಕುಳ ಈ ಹೆಣ್ಣು ಮಗಳು ಬೇಸತ್ತು ಹೋಗಿದ್ದಾಳೆ. ಈ ಮಹಿಳೆಯ ಹೆಸರು ವಿದ್ಯಾರಾಣಿ ಹಬೀಬ ಹೆಸರಿಗೆ ತಕ್ಕಹಾಗೇ ವಿದ್ಯ ವಿನಯ ಎರಡು ಇದೆ ಆದರೆ ಬದುಕಿನಲ್ಲಿ ನೆಮ್ಮದಿ ಮಾತ್ರ ಇಲ್ಲ. ಇವಳ …

Read More »

ಜೊತೆ ಜೊತೆಯಲಿ ಧಾರವಾಹಿಯಿಂದ ಅನಿರುದ್ಧ ಔಟ್ : ಅನೂಪ್​ ಭಂಡಾರಿಗೆ ಆಫರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸದ್ಯ ವಿವಾದದ ಕಾರಣಗಳಿಂದಲೇ ಸುದ್ದಿಯಲ್ಲಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಧಾರವಾಹಿ ತಂಡದಿಂದ ಗೇಟ್​ಪಾಸ್​​​ ಪಡೆದಿದ್ದಾರೆ. ಅಲ್ಲದೇ ಕಿರುತೆರೆಯಿಂದ 2 ವರ್ಷಗಳ ನಿಷೇಧವನ್ನೂ ಅನುಭವಿಸುತ್ತಿದ್ದಾರೆ. ಅನಿರುದ್ಧ ಜತ್ಕರ್​ ಹಾಗೂ ಆರೂರು ಜಗದೀಶ್​ ನಡುವಿನ ಗುದ್ದಾಟದಿಂದ ಧಾರವಾಹಿಗೆ ಇದೀಗ ಮುಖ್ಯ ಪಾತ್ರಧಾರಿ ಇಲ್ಲದಂತಾಗಿದೆ. ಜೊತೆ ಜೊತೆಯಲಿ ಧಾರವಾಹಿ ತಂಡವು ಇದೀಗ ಮುಖ್ಯ ಪಾತ್ರಧಾರಿಯ ಹುಡುಕಾಟದಲ್ಲಿದೆ. ಈಗಾಗಲೇ ಆರ್ಯವರ್ಧನ್​​ …

Read More »

ಹೋಟೆಲ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ನಿಜಾಮಾಬಾದ್‌ : ಕಪಿಲಾ ಹೋಟೆಲ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಅಮಾನುಷ ಘಟನೆ ನಿಜಾಮಾಬಾದ್‌ನಲ್ಲಿ ನಡೆದಿದೆ. ಮೃತರನ್ನು ಆದಿಲಾಬಾದ್ ಜಿಲ್ಲೆಯ ಸೂರ್ಯಪ್ರಕಾಶ್ (37), ಪತ್ನಿ ಅಕ್ಷಯ (36), ಪ್ರತ್ಯೂಷಾ (13) ಮತ್ತು ಅದ್ವೈತ್ (10) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕಳೆದ ಎರಡು ವಾರಗಳಿಂದ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಹೊಟೇಲ್‌ ಮ್ಯಾನೇಜರ್‌ ತಿಳಿಸಿದ್ದಾರೆ. ತಾಯಿ ಮತ್ತು ಇಬ್ಬರು ಮಕ್ಕಳು ಕೀಟನಾಶಕ ಸೇವಿಸಿದ್ದು, ಸೂರ್ಯಪ್ರಕಾಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂರ್ಯಪ್ರಕಾಶ್ …

Read More »

ಭೀಕರ ಅಪಘಾತ : 3 ಜನ ಸಾವು

ಕಲಘಟಗಿ: ಇಲ್ಲಿ‌ ಭೀಕರ ಅಪಘಾತ ವೊಂದು ಸಂಭವಿಸಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಘಟಗಿಯ ರಾಮನಾಳ ಕ್ರಾಸ್ ನಲ್ಲಿ ಸೀ ಬರ್ಡ್ ಬಸ್ ಮತ್ತು ಕ್ರೂಜರ್ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಮೂವರು ಕ್ರೂಜರ್ ನಲ್ಲಿದ್ದ ವರು ಸ್ಥಳದಲ್ಲೇ ಸಾವಿಗೀಡಾದವರಾಗಿದ್ದಾರೆ. ಮೃತರು ಹಳಿಯಾಳದವರಾಗಿದ್ದು, ಪಾರ್ಥಿವ ಶರೀರ ತರಲು ಹೊರಟ್ಟಿದ್ದರು. ಸ್ಥಳಕ್ಕೆ ಕಲಘಟಗಿ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

Read More »

ಧಾರವಾಡ ದೇವರ ಜಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರ ಮೆರವಣಿಗೆ

ಧಾರವಾಡ : ರಾಜ್ಯದಲ್ಲಿ ವಿ.ಡಿ.ಸಾವರ್ಕರ್ ಫೋಟೋ ವಿಚಾರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಧಾರವಾಡದಲ್ಲಿ ದೇವರ ಜಾತ್ರೆಯಲ್ಲಿ ಯುವಕರು ವಿ.ಡಿ. ಸಾವರ್ಕರ್ ಭಾವಚಿತ್ರ ಮೆರವಣಿಗೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಅಮ್ಮಿನಬಾವಿಯ ಈಶ್ವರ ಜಾತ್ರೆ ಹಿನ್ನೆಲೆಯಲ್ಲಿ ಹೆಜ್ಜೆಮೇಳದೊಂದಿಗೆ ಯುವಕರುಉ ವಿ.ಡಿ.ಸಾವರ್ಕರ್ ಭಾವಚಿತ್ರವನ್ನು ಹಿಡಿದು ಯುವಕರು ಸಾಗಿದ್ದಾರೆ. ವಿ.ಡಿ.ಸಾವರ್ಕರ್ ಭಾರತಾಂಬೆಯ ಹೆಮ್ಮೆಯ ವೀರಪುತ್ರ ಎಂಬ ಬರಹವುಳ್ಳ ಫೋಟೋ ಹಿಡಿದು ಸಾಗಿರುವ ಘಟನೆ ನಡೆದಿದೆ.

Read More »

ಸೆ. 2ರಂದು ಮಂಗಳೂರಿಗೆ ಪ್ರಧಾನಿ ಆಗಮನ

ಮಂಗಳೂರು: ಸೆಪ್ಟೆಂಬರ್ 2 ಶುಕ್ರವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಮಂಗಳೂರಿಗೆ ಆಗಮಿಸಲಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರು, ಮೈಸೂರಿಗೆ ಬಂದಿದ್ದರು. ಪಣಂಬೂರುನಲ್ಲಿರುವ “ನವ ಮಂಗಳೂರು ಬಂದರು ಪ್ರಾಧಿಕಾರದ” ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಎನ್ ಎಂ ಪಿ ಟಿ ಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲಾ …

Read More »

ದತ್ತಾತ್ರೇಯ ಪೀಠದ ಪೂಜೆ ಕುರಿತು ಹೈಕೋರ್ಟ್‌ ಮಹತ್ವದ ತೀರ್ಪು

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯಗಳಂತೆ ಪೂಜಾ ವಿಧಿವಿಧಾನ ನೆರವೇರಿಸಲು ಅವಕಾಶ ಕಲ್ಪಿಸಲು ಕೈಗೊಂಡಿರುವ ನಿರ್ಣಯದ ಕುರಿತು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ತಮ್ಮನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಸ್ಲಿಂ ಮೌಲ್ವಿ ಸೈಯದ್‌ ಗೌಸ್‌ …

Read More »

ಮೊಟ್ಟೆ ಎಸೆತ: ಬಂಧಿತರ ಸಂಖ್ಯೆ 18ಕ್ಕೆ ಏರಿಕೆ

ಕೊಡುಗು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 18ಕ್ಕೆ ಏರಿದೆ.

Read More »

ಕೊಡಗು ಜಿಲ್ಲೆ 4 ದಿನ ಬಂದ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೇ 24ರ ಬೆಳಿಗ್ಗೆ 6 ಗಂಟೆಯಿಂದ 27ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೋಮವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಪ್ರತಿಭಟನೆ, ಜಾಥಾ, ಮೆರವಣಿಗೆ, ಕಪ್ಪುಬಾವುಟ ಪ್ರದರ್ಶನ ನಿಷೇಧಿಸಲಾಗಿದೆ. ಐವರು ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗಿದೆ. ಈ ಮೂಲಕ ಆ.26ರಂದು ಕಾಂಗ್ರೆಸ್ ಕರೆ ನೀಡಿದ್ದ ‘ಮಡಿಕೇರಿ ಚಲೋ’ ಹಾಗೂ ಬಿಜೆಪಿ ಆಯೋಜಿಸಿದ್ದ ‘ಜನಜಾಗೃತಿ ಸಮಾವೇಶ’ಗಳಿಗೆ ಅನುಮತಿ …

Read More »