Breaking News

BigTv News

ಸ್ವಾತಂತ್ರ್ಯ ದಿನ ಆಚರಿಸದೆ ಶಾಲೆಗೆ ರಜೆ : ಗ್ರಾಮಸ್ಥರು ಆಕ್ರೋಶ

ಮೇಲುಕೋಟೆ: ಪಾಂಡವಪುರ ತಾಲ್ಲೂಕಿನ ಸಿಂಗ್ರೀಗೌಡನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸದೆ ಶಾಲೆಗೆ ರಜೆ ಘೋಷಣೆ ಮಾಡಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಮೇರಿ ಅವರ ವಿರುದ್ಧ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ‘ಶಾಲೆಯಲ್ಲಿ ಸುಮಾರು 15 ವಿದ್ಯಾರ್ಥಿಗಳು ಇದ್ದು, ಅವರು ಸ್ವಾತಂತ್ರ್ಯದ ಸಂಭ್ರಮದಿಂದ ವಂಚಿತರಾ ಗಿದ್ದಾರೆ. ಶಾಲೆಯಲ್ಲಿ ಸ್ವಾತಂತ್ರ್ಯದ ಆಚರಣೆ ಬಗ್ಗೆ ಎಸ್‌ಡಿಎಂಸಿ ಆಡಳಿತ ಮಂಡಳಿ …

Read More »

ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ ನಿಧನ

ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ (94) ಸೋಮವಾರ ರಾತ್ರಿ 12 ಗಂಟೆಯಲ್ಲಿ ನಿಧನರಾದರು. ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ತಮ್ಮಣ್ಣಪ್ಪ ಬುದ್ನಿ ಅವರು ವಿನೋಭಾ ಬಾವೆ ಅವರ ಅನುಯಾಯಿ ಆಗಿದ್ದರು. ಬಾಲ್ಯದಲ್ಲೇ ಗಾಂಧೀವಾದಿಯಾಗಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಸ್ವಾತಂತ್ರ್ಯೋತ್ಸವ ಸಂಭ್ರಮದ ದಿನದ ರಾತ್ರಿಯೇ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ಮಧ್ಯಾಹ್ನ 12ಕ್ಕೆ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

Read More »

ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಆದೇಶ ಹೊರಡಿಸಲಾಗುವುದು : ಸುಧಾಕರ್ ಭರವಸೆ

ಬೆಂಗಳೂರು: ಇನ್ನೊಂದು ತಿಂಗಳೊಳಗೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ದೇವನಹಳ್ಳಿಯು ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶವಾಗಿದೆ. 54 ಪೇಟೆಗಳು, 340 ಕ್ಕೂ ಅಧಿಕ ಕೆರೆಗಳ ನಿರ್ಮಾಣಗೊಂಡಿವೆ. ಪರಿಸರ ಸಂರಕ್ಷಣೆ ಮೊದಲಾದ ಮಹತ್ವದ ಕ್ರಮಗಳನ್ನು ಅವರು ಜಾರಿ ಮಾಡಿದ್ದರು. ಕೆಂಪೇಗೌಡರ …

Read More »

ಮತ್ತೊಂದು ವಿವಾದದಲ್ಲಿ ಸಿಲುಕಿದ ಬ್ರಿಟನ್ ಪ್ರಧಾನಿ

ಲಂಡನ್ : ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇಂಗ್ಲೆಂಡಿನ ಹಲವೆಡೆ ಕ್ಷಾಮದ ಪರಿಸ್ಥಿತಿ ಇರುವಾಗ ತಮ್ಮ ಮನೆಯಲ್ಲಿ 3.8 ಕೋಟಿ ರೂಪಾಯಿ ವೆಚ್ಚದ ಈಜುಕೊಳ ನಿರ್ಮಿಸಿದ್ದಾರೆ ಎಂಬ ವರದಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಾರ್ಥ್ ಯಾರ್ಕ್‌ಶೈರ್‌ನಲ್ಲಿನ ತನ್ನ ಬಂಗಲೆಯಲ್ಲಿ ಸುನಾಕ್ 3.8 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದು ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾರಾಂತ್ಯ ಹಾಗೂ ರಜೆಯನ್ನು ಮೋಜಿನಿಂದ ಕಳೆಯುತ್ತಿದ್ದಾರೆ …

Read More »

ತ್ರಿವರ್ಣ ಧ್ವಜ ಕಟ್ಟಿ ಇಳಿಯುವಾಗ ಹಾರಿ ಹೋಯಿತು ಯುವಕನ ಪ್ರಾಣಪಕ್ಷಿ

ಬೆಂಗಳೂರು : ಹೆಣ್ಣೂರು ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ತ್ರಿವರ್ಣ ಧ್ವಜ ಕಟ್ಟಿ ಇಳಿಯುವ ಸಂದರ್ಭದಲ್ಲಿ ಕಾಲುಜಾರಿ ಬಿದ್ದು, ವಿಶುಕುಮಾರ್ (33) ಎಂಬುವವರು ಮೃತಪಟ್ಟಿದ್ದಾರೆ. ‘ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿಶುಕುಮಾರ್, ಎಚ್‌ಬಿಆರ್ ಲೇಔಟ್‌ 5ನೇ ಹಂತದಲ್ಲಿ ವಾಸವಿದ್ದರು. ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇವರ ಸಾವಿನ ಬಗ್ಗೆ ತಂದೆ ನಾರಾಯಣ ಭಟ್ ದೂರು ನೀಡಿದ್ದಾರೆ. ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡು, ತನಿಖೆ …

Read More »

ಜನತೆಗೆ ಕ್ಷಮೆಯಾಚಿಸಿದ ಸಂಸದ ಪ್ರತಾಪ್ ಸಿಂಹ .. ಯಾಕೆ ಗೊತ್ತಾ?

ಮೈಸೂರು: ಅಂದುಕೊಂಡಂತೆ ಕಾಮಗಾರಿ ಸಾಗಿದ್ದರೇ ಆಗಸ್ಟ್ 15ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಒನ್ ವೇ ಸಂಚಾರಕ್ಕೆ ಚಾಲನೆ ನೀಡಬೇಕಿತ್ತು. ಆದ್ರೇ ದಶಪಥ ಕಾಮಗಾರಿಯಿಂದಾಗಿ ಬೆಂಗಳೂರು – ಮೈಸೂರು ಹೆದ್ದಾರಿ ಮೊದಲ ಹಂತದ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಕೊಟ್ಟ ಮಾತಿಗೆ ತಪ್ಪಿದ್ದೇನೆ. ದಯವಿಟ್ಟು ಕ್ಷಮಿಸಿ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಜನತೆಯ ಕ್ಷಮೆಯಾಚಿಸಿದ್ದಾರೆ. ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದು, ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ …

Read More »

5 ಸಾವಿರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆ ಭರ್ತಿ ಮಾಡಲಿದ್ದೇವೆ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ವೆಬ್‌ಸೈಟ್‌ನಲ್ಲಿ ಈವರೆಗೆ 5 ಕೋಟಿಗೂ ಹೆಚ್ಚು ಮಂದಿ ರಾಷ್ಟ್ರ ಧ್ವಜದ ಜತೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ವರ್ಷ ಸಿಬ್ಬಂದಿ ನೇಮಕ ಕಾರ್ಯ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿಯೂ 5 ಸಾವಿರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆ ಭರ್ತಿ …

Read More »

ಹರ್ ಘರ್ ತಿರಂಗಾ ಅಭಿಯಾನದ ವೆಬ್‌ಸೈಟ್‌ನಲ್ಲಿ 5 ಕೋಟಿಗೂ ಹೆಚ್ಚು ಸೆಲ್ಫಿ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ವೆಬ್‌ಸೈಟ್‌ನಲ್ಲಿ ಈವರೆಗೆ 5 ಕೋಟಿಗೂ ಹೆಚ್ಚು ಮಂದಿ ರಾಷ್ಟ್ರ ಧ್ವಜದ ಜತೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಇದೊಂದು ಅದ್ಭುತ ಸಾಧನೆ ಎಂದು ಸಚಿವಾಲಯ ಬಣ್ಣಿಸಿದೆ. 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ವೈಭವೋಪೇತವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 25 ವರ್ಷಗಳ ‘ಅಮೃತ ಕಾಲ’ದ …

Read More »

ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ : ಆಸ್ಪತ್ರೆಗೆ ಬಿ.ವೈ ವಿಜಯೇಂದ್ರಶಿ

ಶಿವಮೊಗ್ಗ: ನಗರದಲ್ಲಿ ಚಾಕು ಇರಿತ ಪ್ರಕರಣ ಸಂಬಂಧಿಸಿ ಮೆಗ್ಗಾನ್‌ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಐಸಿಯುನಲ್ಲಿ ಪ್ರೇಮ್‌ಕುಮಾರ್‌ನಲ್ಲಿ ಭೇಟಿ ಬಳಿಕ ಮಾತನಾಡಿ. 8-10 ನಿಮಿಷ ತಡವಾಗಿದ್ರು, ಪ್ರೇಮ್‌ ಸಿಂಗ್‌ ಪ್ರಾಣಕ್ಕೆ ಅಪಾಯವಾಗಿಲ್ಲ. ದೇವರು ದೊಡ್ಡವನು ಯಾವುದೇ ಅಪಾಯ ಸಂಭವಿಸಿಲ್ಲ. ಶೀಘ್ರದಲ್ಲೇ ಪ್ರೇಮ್‌ಸಿಂಗ್‌ ಬೇಗ ಗುಣಮುಖರಾಗುವ ಭರವಸೆ ನೀಡುವ ಮೂಲಕ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

Read More »

ಭಾರತದ ಅಮೃತ ಮಹೋತ್ವವನ್ನು ನ್ಯೂಯಾರ್ಕ್ ನಲ್ಲಿ ವಿಭಿನ್ನ ಆಚರಣೆ

ನ್ಯೂಯಾರ್ಕ್​: ರಾಜ್ಯದ ಅಲ್ಬನಿಯಲ್ಲಿರುವ ಅನಿವಾಸಿ ಭಾರತೀಯರು ಭಾರತದ ಅಮೃತ ಮಹೋತ್ವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಸೋಮವಾರ ಸಂಜೆ ಭಾರತದ ತಿರಂಗ ಧ್ವಜ ಮತ್ತು ಅಮೆರಿಕದ ಧ್ವಜಗಳನ್ನು ಕಟ್ಟಿದ ಬೈಕ್​ಗಳ ಪರೇಡ್ ನಡೆಸಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಇದೇ ವೇಳೆ ಅಲ್ಬನಿ ಹಿಂದೂ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಕೇಸರಿ ಬಿಳಿ ಹಸಿರು ಬಣ್ಣಗಳಿಂದ ಅಲಂಕರಿಸಿ ಭಾರತದ ಧ್ವಜದೊಂದಿಗೆ ಸಿಂಗರಿಸಲಾಗಿತ್ತು.

Read More »