ಹುಬ್ಬಳ್ಳಿ : ನಾಳೆ ನಾಡಿದ್ದು ಎರಡೂ ದಿನಗಳ ಕಾಲ ಪ್ರಧಾನಿ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ನಾಳೆ ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ. ನಾಡಿದ್ದು ಮೈಸೂರಿನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮೈಸೂರಿನಲ್ಲಿ ಮೋದಿ ನೋಡಿದ್ರೆ ಕೊರೊನಾ ಓಡಿ ಹೊಗುತ್ತಾ ಎನ್ನೋ ಕೈ ನಾಯಕರ ಆರೋಪ ವಿಚಾರ ಎಂದರು.
Read More »ನಕಲಿ ಹತ್ತಿ ಬೀಜದ ಮಾರಾಟ : ವ್ಯಕ್ತಿ ಬಂಧನ
ಶಹಾಪುರ: ರೈತರಿಗೆ ನಕಲಿ ಹತ್ತಿ ಬೀಜದ ಪಾಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಕಲಿ ಹತ್ತಿ ಬೀಜದ ಸಮೇತ ಬಂಧಿಸಿದ ಘಟನೆ ಭೀಮರಾಯನ ಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಮುಡಬೂಳ ಗ್ರಾಮ ಸಮೀಪದ ಆಂಧ್ರ ಕ್ಯಾಂಪ್ನಲ್ಲಿ ವ್ಯಕ್ತಿಯೊಬ್ಬ ನಕಲಿ ಹತ್ತಿ ಬೀಜಗಳ ಪಾಕೆಟ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿದ್ದು, ನಕಲಿ ಹತ್ತಿ ಬೀಜದ …
Read More »ರಾಜ್ಯಕ್ಕೆ ಪ್ರಧಾನಿ ಆಗಮನ : ಸಿಎಂಗೆ ಕೋವಿಡ್ ಪರೀಕ್ಷೆ
ಬೆಂಗಳೂರು: ಜೂನ್.21ರಂದು ಮೈಸೂರಿನಲ್ಲಿ ನಡೆಯಲಿರುವಂತ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಹೀಗಾಗಿ, ಸಿಎಂ ಬಸವರಾಜ ಬೊಮ್ಮಾಯಿ ಕೂಡ ಇಂದು ಕೋವಿಡ್ ಪರೀಕ್ಷೆಗೆ ಒಳಗಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆರ್ ಟಿ ನಗರದ ನಿವಾಸಕ್ಕೆ ಆಗಮಿಸಿದಂತ ಆರೋಗ್ಯ ಸಿಬ್ಬಂದಿಗಳು, ಅವರ ಸ್ವಾಪ್ ಅನ್ನು ಪರೀಕ್ಷೆಗಾಗಿ ಕೊಂಡೊಯ್ದರು. ಈ ಮೂಲಕ ಕೋವಿಡ್ ಪರೀಕ್ಷೆಗೆ …
Read More »ಅಗ್ನಿಪಥ್ ಯೋಜನೆಯಿಂದ ರಾಷ್ಟ್ರಕ್ಕಾಗಿ ಸುವರ್ಣ ಅವಕಾಶ ದೊರೆಯಲಿದ್ದು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತಿದ್ದಾರೆ : ಜೋಶಿ
ಹುಬ್ಬಳ್ಳಿ; ಅಗ್ನಿಪಥ್ ಯೋಜನೆಯಿಂದ ರಾಷ್ಟ್ರಕ್ಕಾಗಿ ಸಮರ್ಪಿತರಾಗುವ ಸುವರ್ಣ ಅವಕಾಶ ದೊರೆಯಲಿದ್ದು ಕೇಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತಿದ್ದಾರೆ. ಅಗ್ನಿಪಥ್ ಯೋಜನೆಯ ಮೂಲಕ ನಮ್ಮ ದೇಶದ ಅತೀ ಹೆಚ್ಚು ಯುವಕರಿಗೆ ಅಗ್ನಿವೀರರಾಗಿ ತಾಯಿಭಾರತಿಯ ಸೇವೆ ಮಾಡುವ ಹಾಗು ರಾಷ್ಟ್ರಕ್ಕಾಗಿ ಸಮರ್ಪಿತರಾಗುವ ಸುವರ್ಣ ಅವಕಾಶ ದೊರೆಯಲಿದೆ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ತಮ್ಮನ್ನ ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದರು ಅಗ್ನಿಪಥ ಯೋಜನೆ ವಿರೋಧಿಸಿ …
Read More »ಕ್ಯಾಂಟರ್ , ಕಾರ್ ಡಿಕ್ಕಿ: ತಂದೆ, ಮಗ ಸಾವು
ಆಲೂರು: ಕ್ಯಾಂಟರ್ – ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ನಡೆದಿದೆ. ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. 2 ಕಾರಿನಲ್ಲಿ ಒಟ್ಟು 10 ಜನ ಧರ್ಮಸ್ಥಳಕ್ಕೆಂದು ತೆರಳುತ್ತಿದ್ದರು. ಈ ವೇಳೆ ಮಾರುತಿ 800 ಕಾರಿಗೆ ಕ್ಯಾಂಟರ್ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಘಟನೆಯಲ್ಲಿ ಮೂವರಿಗೆ ಗಂಭೀರ …
Read More »ಮಹಿಳೆಯರು ಸಂಘಟಿತರಾಗಬೇಕು ಚಂದುನವರ ಕರೆ
ಧಾರವಾಡ: ಮಹಿಳೆಯರು ಸಮಾಜದಲ್ಲಿ ಗುರುತಿಸಿಕೊಳ್ಳಲು ಆಸಕ್ತಿಯಿಂದ ಸಂಘಟನಾತ್ಮಕವಾಗಿ ಕಾರ್ಯ ಮಾಡಬೇಕು ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಜೆ.ಎಂ ಚಂದುನವರ ತಿಳಿಸಿದರು. ಧಾರವಾಡ ಕಮಲಾಪುರದ ಪ್ರಮೀಳಾ ಕೌಶಲ್ಯ ಅಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಬ್ಯಾಗ್ ತಯಾರಿಕಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಸಂಘಟಿತರಾಗಬೇಕು ಅಂದಾಗ ಸಮಾಜಕ್ಕೆ ಮಹಿಳೆಯರ ಶಕ್ತಿ ಏನು ಎಂಬುದು ತಿಳಿಯುತ್ತದೆ. ಪ್ರಮೀಳಾ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಮಹಿಳೆಯರನ್ನು ಸಂಘಟಿಸಲು ಉತ್ತಮ ಕಾರ್ಯ …
Read More »ಜೂ.20ಕ್ಕೆ ಬೆಂಗಳೂರಿಗೆ ಪ್ರಧಾನಮಂತ್ರಿ ಆಗಮನ
ಬೆಂಗಳೂರು: ಜೂನ್.20ಕ್ಕೆ ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ವೇಳೆ 20 ಗಂಟೆಗಳಲ್ಲಿ 10 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಸೋಮವಾರ ನಗರಕ್ಕೆ ಆಗಮಿಸಿರುವ ಮೋದಿಯವರು ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ನಂತರ ಜೂನ್.21ಕ್ಕೆ ಮೈಸೂರಿಗೆ ಭೇಟಿ ನೀಡಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Read More »ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ
ಬಾಗಲಕೋಟೆ: ನನಗೆ ಪ್ರಚಾರದ ಅವಶ್ಯಕತೆ ಇಲ್ಲ, ಸುದ್ದಿ ಬೇಕೆಂದರೆ ನೀವು ಕಾಯಲೇಬೇಕು ಎಂದು ಮಾಧ್ಯಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಘುವಾಗಿ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮಾಧ್ಯಮದವರಿಗೆ ಅಷ್ಟು ಇಂಪಾರ್ಟೆನ್ಸ್ ಕೊಡಬಾರದು, ನನಗೆ ಪ್ರಚಾರ ಬೇಕಿಲ್ಲ, ಅವಶ್ಯಕತೆಯೂ ಇಲ್ಲ, ಎಂದು ಹೇಳಿದ್ದಾರೆ.ಟಿಆರ್ಪಿ ಬೇಕಾಗಿರುವುದು ಮಾಧ್ಯಮದವರಿಗೆ ನಮಗಲ್ಲ, ಇವರಿಗೆ ಮಹತ್ವ ಕೊಡಲೇಬಾರದು, ಸುದ್ದಿ ಕೊಡೋರು ನಾವು, ಬೇಕಾಗಿರೋದು ನಿಮಗೆ ಹಾಗಾಗಿ ನೀವು ಕಾಯಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರದ …
Read More »ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ : ವಿದ್ಯಾರ್ಥಿ ಆತ್ಮಹತ್ಯೆ
ಕುಮಟಾ : ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಲನಗದ್ದೆ ಎಂಬಲ್ಲಿ ನಡೆದಿದೆ. ಕುಮಟಾ ತಾಲೂಕಿನ ಹೊಲನಗದ್ದೆ ಕಡ್ಲೆ ನಿವಾಸಿ ಪ್ರಣಮ್ ಈಶ್ವರ ನಾಯ್ಕ (18) ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಪಿಯುಸಿ ಫಲಿತಾಂಶದಲ್ಲಿ ಪ್ರಣವ್ ಫೇಲ್ ಆಗಿದ್ದು, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ. ತಂದೆ ಆಟೋ ಚಾಲಕನಾಗಿದ್ದು, ಒಬ್ಬನೇ ಮಗನಾದ ಈತನನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕುಮಟಾ …
Read More »ರಾಜ್ಯದಲ್ಲಿ ಎರಡನೇ ಸ್ಥಾನಗಳಿಸಿದ ಆಳ್ವಾಸ್ ಕಾಲೇಜು
ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಮರ್ಥ್ ವಿಶ್ವನಾಥ್ ಜೋಶಿ (595) ಹಾಗೂ ವಿಜ್ಞಾನ ವಿಭಾಗದ ಶ್ರೀಕೃಷ್ಣ ಪೆಜತ್ತಾಯ ಪಿ.ಎಸ್. (597) ಅಂಕ ಪಡೆದು ರಾಜ್ಯದಲ್ಲಿ ಎರಡನೇ ಸ್ಥಾನಗಳಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ತಲಾ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





