ಹುಬ್ಬಳ್ಳಿ: ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ ಅವರಿಗೆ ಪಕ್ಷದಿಂದ ಟಿಕೆಟ್ ಕೊಟ್ಟಿರುವುದೇ ಆ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಅಸಮಾಧಾನವಿದೆ. ಹೀಗಾಗಿ ಬಿಜೆಪಿಯವರೇ ಬಸವರಾಜ ಹೊರಟ್ಟಿ ಅವರನ್ನು ಸೋಲಿಸುವ ಅನುಮಾನವಿದೆ ಎಂದು ಜೆಡಿಎಸ್ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ್ ಹುನಸಿಮರದ ವ್ಯಂಗ್ಯವಾಡಿದರು. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಬಸವರಾಜ ಹೊರಟ್ಟಿ ಅವರು ಪಶ್ಚಿಮ ಶಿಕ್ಷಕರ …
Read More »ಹೆಸ್ಕಾಂ ನಿರ್ಲಕ್ಷ್ಯದಿಂದ ಜನರಲ್ಲಿ ಆತಂಕ: ಬೆಂಕಿಯಿಂದ ಬೆಚ್ಚಿದ ಜನ
ಹುಬ್ಬಳ್ಳಿ: ಹೆಸ್ಕಾಂ ಇಲಾಖೆಯು ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ವಿದ್ಯುತ್ ತೊಂದರೆ ಆಗದಂತೆ ಸೂಕ್ತ ಕಾರ್ಯಾಚರಣೆಗೆ ಮುಂದಾಗಿದೆ. ಆದರೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಎಲ್ಲೆಂದರಲ್ಲಿ ವಿದ್ಯುತ್ ಟ್ರಾನ್ಸಫಾರ್ಮ್ ಬೆಂಕಿ ಹತ್ತಿ ಜನರಲ್ಲಿ ಆತಂಕವನ್ನು ಹುಟ್ಟು ಹಾಕಿದೆ. ಹೌದು… ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಹಿಂದಿರುವ ವಿದ್ಯುತ್ ಟ್ರಾನ್ಸಫಾರ್ಮ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಂಥಾಲಯದಲ್ಲಿ ಓದುತ್ತಾ ಕುಳಿತಿದ್ದವರು ಭಯಬೀತರಾಗಿ …
Read More »ಗುಟ್ಕಾ ವಿಷಯಕ್ಕೆ ಬಿತ್ತು ಹುಬ್ಬಳ್ಳಿ ಯುವಕನ ಹೆಣ
ಹುಬ್ಬಳ್ಳಿ: ಆನಂದ ನಗರದಲ್ಲಿ ವಿಮಲ್ (ಗುಟ್ಕಾ) ಕೊಡಿಸಲಿಲ್ಲ ಎಂಬ ವಿಷಯಕ್ಕೆ ರೌಡಿಶೀಟರ್ ಒಬ್ಬ ಅಮಾಯಕ ವ್ಯಕ್ತಿಗೇ ಚಾಕು ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆನಂದ ನಗರದ ಮೆಹಬೂಬ್ ಕಳಸ ಹಾಗೂ ಕೊಲೆ ಮಾಡಿ ಪರಾರಿಯಾಗಿರುವ ಗೌಸ್ ಎಂಬಾತ ಪರಸ್ಪರ ಪರಿಚಯಸ್ಥರು, ನಿನ್ನೇ ಕೂಡಾ ಇಬ್ಬರು ಮಂಜುನಾಥ ನಗರದ ಬಳಿ ಇರುವ ಕೊಡೆ ಬಾರ್ ನಲ್ಲಿ ಸಾರಾಯಿ ಕುಡಿದಿದ್ದಾರೆ. ಬಾರ್ ನಿಂದ ಹೊರಬಂದ ನಂತರ ಗೌಸ್,ಮೆಹಬೂಬ್ ಗೇ ವಿಮಲ್ …
Read More »ಮಾಜಿ ಸಿಎಂ ಪುತ್ರನಿಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್
ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದ್ದು , ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದ್ದೆ . ವಿಶೇಷವೆಂದರೆ , ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿಜೆಪಿ ರಾಜ್ಯ ನಾಯಕ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸಿದೆ . ಲಿಂಗಾಯತ ಕೋಟಾದಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರಾಗಿರುವ ಧಾರವಾಡದ ಲಿಂಗರಾಜ್ ಪಾಟೀಲ್ , ಮಹಿಳಾ ಹಾಗೂ ಒಕ್ಕಲಿಗ ಕೋಟಾದಲ್ಲಿ ಶಿವಮೊಗ್ಗ ಮೂಲದ ಸಿ . ಮಂಜುಳಾ …
Read More »ಹುಬ್ಬಳ್ಳಿ ಅಪಘಾತ ದುರಂತದಲ್ಲಿ 9 ಜನ ಸಾವು
ಹುಬ್ಬಳ್ಳಿ : ಅಪಘಾತ ಪ್ರಕರಣ ದುರಂತದಲ್ಲಿ ಒಂಬತ್ತು ಜನರ ಸಾವುನಪ್ಪಿದ್ದಾರೆ. ಇಚಲಕರಂಜಿ ನಿವಾಸಿ ಬಾಬಾಸೋ ಚೌಗಲೇ(59) , ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ಬಸ್ ಚಾಲಕ ನಾಗರಾಜ ಆಚಾರ್(56) , ಬೆಂಗಳೂರಿನ ನಿವಾಸಿ ಬಸ್ ಚಾಲಕ ಅತಾವುಲ್ಲಾ ಖಾನ್(40), ಮಸ್ತಾನ್, ಮೈಸೂರು ನಿವಾಸಿ ಮಹಮ್ಮದ್ ದಯಾನ್ಬೇಗ್(17), ಕೊಲ್ಲಾಪುರದ ನಿವಾಸಿ ಅಕ್ಷಯ ದವರ್(28)ಕೊಲ್ಲಾಪುರದ ನಿವಾಸಿಗಳಾದ ಅಕೀಫ್(40), ಅಫಾಕ್( 41) ಮೃತ ದುರ್ದೈವಿಗಳು.
Read More »4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಶಿವಮೊಗ್ಗ : ಇಲ್ಲೊಬ್ಬಳು ಮಹಾತಾಯಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಅಂದ ಹಾಗೇ ಭದ್ರಾವತಿ ತಾಲೂಕಿನ ಅಲ್ಮಾ ಬಾನು 4 ಮಕ್ಕಳಿಗೆ ಜನ್ಮ ನೀಡಿದ ತಾಯಿಯಾಗಿದ್ದಾರೆ. ಅಂದ ಹಾಗೇ ಭದ್ರಾವತಿ ತಾಲೂಕಿನ ಕಡಸ ಗ್ರಾಮದ ಆರೀಫ್ ಪತ್ನಿ ಅಲ್ಮಾ ಬಾನು ಹೆರಿಗೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ 22 ವರ್ಷದ ಅಲ್ಮಾ ಬಾನು ಸಿಸೇರಿಯನ್ ಮೂಲಕ ಎರಡು ಗಂಡು ಮತ್ತು ಎರಡು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ತಾಯಿ ಅಲ್ಮಾಸ್ …
Read More »ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಿಸಿದ ಮಾಜಿ ಸಿಎಂ
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶ್ರೀಶೈಲ ನಿಂಗಪ್ಪ ಗಡದಿನ್ನಿ ಕಣಕ್ಕಿಳಿಯಲಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಚಂದ್ರಶೇಖರ ಲೋಣಿ ಕಣಕ್ಕಿಳಿಯಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶ್ರೀಶೈಲ ನಿಂಗಪ್ಪ ಕಣಕ್ಕಿಳಿಯಲಿದ್ದಾರೆ.ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶ್ರೀಶೈಲ ಅವರಿಗೆ ಟಿಕೆಟ್ ನೀಡಲಾಗಿದೆ. ಹೊರಟ್ಟಿ ಅವರು ಬಿಜೆಪಿ …
Read More »ಚಿತ್ರೀಕರಣದಲ್ಲಿ ಬ್ಯುಸಿಯಾದ ಪ್ರಶಾಂತ್ : 2 ವರ್ಷ ಸ್ಯಾಂಡಲ್ ವುಡ್ ಗೆ ಬರುವುದು ಡೌಟ್
ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಈಗ ಅತ್ಯಂತ ಬ್ಯುಸಿ ನಿರ್ದೇಶಕ. ಸದ್ಯಕ್ಕೆ ಪ್ರಶಾಂತ್ ತೆಲುಗಿನಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ಈ ಪೈಕಿ ಸಲಾರ್ ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಲ್ಲದೆ ಜೂ. ಎನ್ ಟಿಆರ್ ಜೊತೆಗೆ ಮೊನ್ನೆಯಷ್ಟೇ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದು ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಹೀಗಾಗಿ ಮುಂದಿನ ಎರಡು ವರ್ಷಗಳಿಗೆ ಪ್ರಶಾಂತ್ …
Read More »ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಶಾಲೆಗಳು, ಆಸ್ಪತ್ರೆಗಳಿಗೆ ನೀಡಲಾಗುವುದು : ಆದಿತ್ಯನಾಥ್
ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಶಾಲೆಗಳು, ಆಸ್ಪತ್ರೆಗಳಿಗೆ ನೀಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದ ಮಸೀದಿಗಳಲ್ಲಿನ ಕೆಲವು ಧ್ವನಿವರ್ಧಕಗಳ ಧ್ವನಿ ಕಡಿಮೆ ಮಾಡಲಾಗಿದೆ. ಕೆಲವನ್ನು ತೆಗೆದುಹಾಕಲಾಗಿದೆ.ತೆಗೆದುಹಾಕಲಾದ ಧ್ವನಿವರ್ಧಕಗಳನ್ನು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ದಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತು ನಂತರ ಬಿಜೆಪಿ ಆಡಳಿತದ ಉತ್ತರ ಪ್ರದೇಶ ರಾಜ್ಯದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ ಎಂದು ಆರ್.ಎಸ್.ಎಸ್. ಸಂಯೋಜಿತ ವಾರಪತ್ರಿಕೆಗಳಾದ ‘ಪಾಂಚಜನ್ಯ’ …
Read More »ಮಾಜಿ ಸಿಎಂಗೆ ವಿಶೇಷ ಕೋರ್ಟ್ ಸಮನ್ಸ್ ಜಾರಿ
ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಿಶೇಷ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಸಮನ್ಸ್ ಜಾರಿ ಮಾಡಿದ್ದು, 24 ರಂದು ನಡೆಯುವ ವಿಚಾರಣೆಗೆ ಖದ್ದು ಹಾಜರಾಗುವಂತೆ ಸೂಚಿಸಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





