ಬೆಂಗಳೂರು : ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಾದ ರಾಮಮುರ್ತಿನಗರದ ನಾಗಪ್ಪ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕೆರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸುವ ಸಂಬಂಧ ಹಿರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದು ಮಾಡಲಾಗಿದೆ. ಯಾವುದೇ ಅಧಿಸೂಚಿತ ಕೆರೆ ಪ್ರದೇಶದಗಳ ಮೇಲೆ ಬಡಾವಣೆಗಳನ್ನು ಮಂಜೂರು ಮಾಡುವ ಪ್ರಶ್ನೆಯೇ …
Read More »ಏ ವರುಣ ಬಾರದೆ ನಿನಗೆ ಕರುಣೆ : ಮಳೆಯ ಅಬ್ಬರಕ್ಕೆ ಜನಜೀವನ ತತ್ತರ
ಹುಬ್ಬಳ್ಳಿ : ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ . ಮಳೆಯ ಅಬ್ಬರಕ್ಕೆ ರಾಜ್ಯವೇ ಅಕ್ಷರಶಃ ಆಂತಕದ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರವಾಹದ ಭೀತಿಯಲ್ಲಿರುವ ಜನರಿಗೆ ವರುಣನ ಅಬ್ಬರ ನಿಜಕ್ಕೂ ಮತ್ತೊಂದು ಚಿಂತೆಯನ್ನು ತಂದೊಡ್ಡಿದ್ದಾನೆ . ಈಗಾಗಲೇ ಜಿಲ್ಲೆಯಾದ್ಯಂತ ಬಹುತೇಕ ಕಡೆಯಲ್ಲಿ ಕೆರೆ ಭರ್ತಿಯಾಗಿ ಕೋಡಿ ಹರಿದು , ಹೊಲ , ಮನೆಗಳಿಗೆ ನೀರು ನುಗ್ಗುತ್ತಿದೆ . ಮೊನ್ನೆ ರಾತ್ರಿಯಿಂದಲೂ ಸುರಿಯುತ್ತಿರುವ ಮಳೆಯಿಂದ ಹೊಲಗಳಲ್ಲಿನ ನೀರು ಮನೆಗಳಿಗೆ ನುಗ್ಗಿ ಹಾನಿ …
Read More »ಪೆಪ್ಪಿ ಫ್ಯಾಕ್ಟರಿ ಬಳಿ ಅಪಘಾತ : ಇಬ್ಬರಿಗೆ ಗಾಯ
ಧಾರವಾಡ : ನಗರದ ಪೆಪ್ಪಿ ಫ್ಯಾಕ್ಟರಿ ಬಳಿ ಕಾರು ಹಾಗೂ ಕ್ಯಾಂಟರ್ ವಾಹನದ ಅಪಘಾತವಾಗಿ ಇಬ್ಬರಿಗೆ ಗಾಯವಾದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ ಕಾರಿನಲ್ಲಿದ್ದ ಇಬ್ಬರ ತಲೆಗೆ ಪೆಟ್ಟಾಗಿದೆ ಕಾರಿ ಪೆಪ್ಪಿ ಫ್ಯಾಕ್ಟರಿ ಪಕ್ಕದ ರಸ್ತೆಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
Read More »ಕವಿವಿ ತರಗತಿಗಳಿಗೂ ರಜೆ ಘೋಷಣೆ
ಧಾರವಾಡ : ಜಿಲ್ಲೆಯಲ್ಲಿ ನಿನ್ನೆಯಿಂದ ಅತಿಯಾದ ಮಳೆ ಆಗುತ್ತಿರುವುದರಿಂದ ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲ ಸ್ನಾತಕೋತ್ತರ ವಿಭಾಗಗಳ ಹಾಗೂ ಅಧೀನ ಕಾಲೇಜುಗಳ ತರಗತಿಗಳಿಗೆ ಇಂದು ಮೇ .20 ರಂದು ಒಂದು ದಿನದ ರಜೆ ಘೋಷಿಸಿ , ಕುಲಸಚಿವ ಯಶಪಾಲ ಕ್ಷೀರಸಾಗರ ಆದೇಶಿಸಿದ್ದಾರೆ . ಹವಾಮಾನ ಇಲಾಖೆ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದ್ದು , ಇದೇ ರೀತಿಯಲ್ಲಿ ಮಳೆ ಮುಂದುವರೆದರೆ ಪರಶೀಲಿಸಿ ಕ್ರಮವಹಿಸಲಾಗುವುದು . ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಇಂದು ಒಂದು ದಿನ …
Read More »ಬಿಟ್ಟು ಬಿಡದ ಮಳೆ ಆಗಮನ : ಮನೆಗಳು ಕುಸಿತ
ಧಾರವಾಡ: ಚಂಡಮಾರುತ ಹವಾಮಾನ ವೈಪರಿತ್ಯದಿಂದ ಧಾರವಾಡದಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು , ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ . ಅಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ಕೆಲ ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ , ಸುಮಾರು 50 ಕ್ಕೂ ಹೆಚ್ಚು ಮನೆಗಳು ಭಾಗಶಃ ಧರೆಗುರುಳಿವೆ . ಇಂದು 13 ಮನೆಗಳು ಭಾಗಶಃ ಬಿದ್ದಿದ್ದು , ಕುಂದಗೋಳದಲ್ಲಿ ನಿನ್ನೆ ರಾತ್ರಿ 18 ಹಾಗೂ ನವಲಗುಂದದಲ್ಲಿ 12 ಮನೆಗಳು ಹಾನಿಯಾಗಿವೆ.ನಿನ್ನೆ ರಾತ್ರಿಯಿಂದಲೇ ಆರಂಭವಾಗಿರುವ ಮಳೆ ಬಿಟ್ಟೂ ಬಿಡದೇ ಸುರಿಯುತ್ತಿದೆ.ಮಳೆಯ ಪರಿಣಾಮ …
Read More »ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ : ತಪ್ಪಿದ ಅನಾಹುತ
ಕಲಘಟಗಿ : ಮಳೆಯ ಪ್ರಮಾಣ ಹೆಚ್ಚಿದ ಪರಿಣಾಮ ಪಟ್ಟಣದ ಬಸ್ ನಿಲ್ದಾಣ ದ ಎದುರು ವಿಷ್ಣು ಲಾಡ್ಜ್ ಹತ್ತಿರದ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ . ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ . ಜಿಟಿ ಜಿಟಿ ಮಳೆಗೆ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು , ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು . ಸ್ವಲ್ಪ ಸಮಯದ ನಂತರ ಬೆಂಕಿ …
Read More »ಹಲವು ಕಾರ್ಯಕ್ರಮದಲ್ಲಿ ಅರವಿಂದ್ ಬೆಲ್ಲದ್ ಭಾಗಿ
ಹುಬ್ಬಳ್ಳಿ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ , ಶ್ರೀ ಸತ್ಯಸಾಯಿ ಮಹಾದ್ವಾರ , ಶ್ರೀ ಸತ್ಯ ಸಾಯಿ ವಿದ್ಯಾಮಂದಿರ , ಶ್ರೀ ಸತ್ಯ ಸಾಯಿ ಕ್ರೀಡಾಂಗಣವನ್ನು ಶಾಸಕ ಅರವಿಂದ್ ಬೆಲ್ಲದ್ ಉದ್ಘಾಟನೆ ಮಾಡಿದರು ಇದೆ ವೇಳೆಯಲ್ಲಿ ನಡೆದ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು . ಈ ಸಂದರ್ಭದಲ್ಲಿ , ಸತ್ಯಸಾಯಿ ಸೇವಾ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀ ಆರ್.ಜೆ. ರತ್ನಾಕರ , ಟ್ರಸ್ಟ್’ನ …
Read More »ವಿವಾಹ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ
ಚೆನ್ನೈ: ನಟಿ ಸಂಜನಾ ಗಲ್ರಾನಿ ಅವರ ಸಹೋದರಿ ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ, ಬಹುಕಾಲದ ಗೆಳೆಯ ಆದಿ ಪಿನಿಶೆಟ್ಟಿ ಅವರೊಟ್ಟಿಗೆ ಚೆನ್ನೈನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂದ್ರ ಸಂಪ್ರದಾಯದ ಪ್ರಕಾರ ವಿವಾಹವಾಗಿರುವ ಈ ಜೋಡಿಯ ಅದ್ದೂರಿ ಮದುವೆಯ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
Read More »ಮಳೆ ಆರ್ಭಟ : ಬೆಂಗಳೂರು ಸಿಟಿ ರೌಂಡ್ಸ್ ಮಾಡಿದ ಸಿಎಂ
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಮಳೆಯಿಂದಾಗಿ ತೊಂದರೆಗೊಳಗಾದ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಬಿಬಿಎಂಪಿ ಅಧಿಕಾರಿಗಳ ಜೊತಗೆ ಸಿಎಂ ಬಸವರಾಜ ಬೊಮ್ಮಾಯಿಇಂದು ಸಿಟಿ ರೌಂಡ್ಸ್ ಹೊರಟಿದ್ದಾರೆ.ಮಳೆ ಹಾನಿ ಸಂಬಂಧ ಸ್ಥಳೀಯರಿಂದ ಸಿಎಂ ಬೊಮ್ಮಾಯಿ ಮಾಹಿತಿ ಪಡೆಯುತ್ತಿದ್ದಾರೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ, ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ, ಪೈ ಬಡಾವಣೆಗಳಲ್ಇ ವೀಕ್ಷಣೆ ಮಾಡಲಿದ್ದಾರೆ. …
Read More »ನಟಿ ಸಂಜನಾ ಮನೆಗೆ ಹೊಸ ಅತಿಥಿ ಆಗಮನ
ನಟಿ ಸಂಜನಾ ಗಲ್ರಾನಿ ಅವರ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇಂದು (ಮೇ 19) ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ ಮದುವೆ ಇಂದೇ ನೆರವೇರಿದೆ. ಮೇ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಸಂಜನಾ ಈ ಮೊದಲೇ ಹೇಳಿದ್ದರು. ಅವರು 7ನೇ ತಿಂಗಳಿಗೆ ಕಾಲಿಟ್ಟಾಗ ಸೋಶಿಯಲ್ ಮೀಡಿಯಾದಲ್ಲಿ ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್ ಮೂಲಕ ಪ್ರಶ್ನಿಸಿದ್ದರು. ‘ಪ್ರಾಯಶಃ ಮೇ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





