Breaking News

BigTv News

ಧಾರವಾಡದಲ್ಲಿ ನಡೆಯಬೇಕಿದ್ದ ಕೃಷಿ ಮೇಳ ಮೂಂದೂಡಿಕೆ

ಧಾರವಾಡ : ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮೇ 27 , 28 , 29 ರಂದು ಧಾರವಾಡದಲ್ಲಿ ನಡೆಯಬೇಕಿದ್ದ ಕೃಷಿ ಮೇಳವನ್ನು ಕಾರಣಾಂತರಗಳಿಂದ ಮೂಂದೂಡಲಾಗಿದೆ . ಐಎಂಡಿ ಮುನ್ಸೂಚನೆಯ ಪ್ರಕಾರ ರೈತರು ಬಿತ್ತನೆ ಪೂರ್ವ ಮತ್ತು ಬಿತ್ತನೆ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಮತ್ತು ಮಾದರಿ ನೀತಿ ಸಂಹಿತೆಯು ಜಾರಿ ಇರುವುದರಿಂದ ಕೃಷಿ ಮೇಳವನ್ನು ಮುಂದೂಡಲಾಗಿದೆ.ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು . ಮತ್ತು ವಿಶ್ವವಿದ್ಯಾಲಯದಲ್ಲಿ ಬೀಜಗಳ ಮಾರಾಟವು ಮೇ .23 ರಿಂದ …

Read More »

ಕಲಿತ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಧಾರವಾಡ: ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಕರ್ತವ್ಯ ನಿಮಿತ್ಯವಾಗಿ ತಾವು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದ ಕೆ.ಇ.ಬೋರ್ಡ್ ಶಾಲೆಗೆ ಭೇಟಿ ನೀಡಿ , ಪರೀಕ್ಷೆ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ , ತಾವು ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ಸಹಾಯಕ ಸಿಬ್ಬಂದಿಯಾಗಿದ್ದ ಬಾಬು ಹಾಗೂ ಹಾಜರಿದ್ದ ಶಿಕ್ಷಕರನ್ನು ಆತ್ಮೀಯವಾಗಿ ಮಾತನಾಡಿ ಕ್ಷೇಮ ವಿಚಾರಿಸಿದರು . ಜಿಲ್ಲಾಧಿಕಾರಿಗಳ ಆಪ್ತತೆ , ಸರಳತೆ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಪುಳಕಿತರನ್ನಾಗಿಸಿತು.ಶಾಲೆಗೆ ಮತ್ತೊಮ್ಮೆ ಪ್ರತ್ಯೇಕವಾಗಿ ಆಗಮಿಸಿ ಗೌರವ ಸ್ವೀಕರಿಸಲು ಶಿಕ್ಷಕರು …

Read More »

ಜವಳಿ ಕೈಗಾರಿಕೆ ತರಬೇತಿ ಕಾರ್ಯಕ್ರಮ

ನವಲಗುಂದ : ನೂತನ ಜವಳಿ ನೀತಿಯಡಿ ಜವಳಿ ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಕೈ ಮಗ್ಗ ಮತ್ತು ಜವಳಿ ಖಾತೆ ಸಚಿವ ಹಾಗೂ ನವಲಗುಂದ ಶಾಸಕ ಎಸ್ಪಿ ಮುನೇನಕೊಪ್ಪ ಹೇಳಿದರು . ಈ ಕುರಿತು ಪ್ರಕಟನೆ ನೀಡಿದ ಸಚಿವರು 45 ದಿನಗಳ ಅಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಅರ್ಹಫಲಾನುಭವಿಗಳಿಗೆ ಲಭ್ಯವಿದೆ .ಈ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ 3 , 500 ರೂಗಳ ಶಿಷ್ಯವೇತನ …

Read More »

ಕಾರುಗಳ ಮುಖಮುಖಿ ಡಿಕ್ಕಿ : ಓರ್ವ ಸಾವು

ಕೊಡಗು: ಮಳೆಯಿಂದಾಗಿ ರಸ್ತೆ ಕಾಣದೆ ಕಾರುಗಳ ನಡುವೆ ‌ಮುಖಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಕುಶಾಲನಗರ ತಾಲೂಕು ಕೊಡಗರಹಳ್ಳಿಯ NH275ರಲ್ಲಿ ನಡೆದಿದೆ. ಮುಸ್ತಾಫ್ (47) ಮೃತ ದುರ್ದೈವಿ. ಇನಾವೋ ಕಾರು ಕುಶಾಲನಗರ ಕಡೆಗೆ ಹೋಗುತ್ತಿತ್ತು. ಸುಂಟಿಕೊಪ್ಪ ‌ಕಡೆಗೆ ಬರುತ್ತಿದ್ದ XUV ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮುಸ್ತಾಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಈ ಅಪಘಾತದ ತೀವ್ರತೆಗೆ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಅಪಘಾತದಿಂದ ಕೆಲಕಾಲ‌ ರಾಷ್ಟ್ರೀಯ ಹೆದ್ದಾರಿ …

Read More »

ಸ್ಯಾಕ್ಸೋಫೋನ್ ವಾದಕಿ ಆತ್ಮಹತ್ಯೆ

ಮಂಗಳೂರು: ಸ್ಯಾಕ್ಸೋಫೋನ್ ವಾದಕಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಕ್ತಿನಗರದ ಫ್ಲ್ಯಾಟ್ ವೊಂದರಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಶಕ್ತಿನಗರದ ಫ್ಲ್ಯಾಟ್ ನಲ್ಲಿ ಪತಿ, ತಂದೆ, ತಾಯಿ ಮತ್ತು ಮಗುವಿನೊಂದಿಗೆ ವಾಸವಿದ್ದ, ಮೂಲತಃ ಮುಲ್ಕಿಯವರಾದ ಸ್ಯಾಕ್ಸೊಫೋನ್ ವಾದಕಿ ಸುಜಾತಾ ದೇವಾಡಿಗ (29) ಆತ್ಮಹತ್ಯೆ ಮಾಡಿಕೊಂಡವರು.ತಲೆ ನೋವು ಅಗುತ್ತಿದೆ ಎಂದು ಹೇಳಿ ಕೋಣೆಗೆ ಹೋದವರು ಹೊರಗೆ ಬಾರದಿದ್ದಾಗ ಮನೆಯವರು ಕೋಣೆಯಲ್ಲಿ ನೋಡಿದಾಗ ಘಟನೆ ಗೊತ್ತಾಗಿದೆ.ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ …

Read More »

SSLC ಫಲಿತಾಂಶ : ಈ ವೈಬ್ ಸೈಟ್‌ನಲ್ಲಿ ನಿಮ್ಮ ಅಂಕಗಳನ್ನು ನೋಡಿ

ಬೆಂಗಳೂರು : ಇಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗುತ್ತದೆ ಎಂದು ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಂದು ಮಧ್ಯಾಹ್ನ 12.30ಕ್ಕೆ SSಐಅ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‍ಸೈಟ್‍ನಲ್ಲಿ, ಶಾಲೆಗಳಲ್ಲಿ ಫಲಿತಾಂಶ ಲಭ್ಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‍ಗಳಿಗೆ SಒS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.ಎಲ್ಲ ವಿದ್ಯಾರ್ಥಿಗಳಿಗೆ ಸಚಿವರು ಶುಭ ಹಾರೈಸಿದ್ದಾರೆ. ಇನ್ನೂ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್‌ಎಂಎಸ್ ಮೂಲಕ …

Read More »

ಇನ್ನೆರಡು ದಿನ ರಾಜ್ಯದಲ್ಲಿ ಭಾರೀ ಮಳೆ

ಬೆಂಗಳೂರು: ಕರ್ನಾಟಕದ ಬೆಂಗಳೂರು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆ ಮುಂದುವರೆಯಲಿದೆ. ಇಂದಿನಿಂದ 2 ದಿನ ಕರ್ನಾಟಕ , ತಮಿಳುನಾಡು, ಕೇರಳದಲ್ಲಿ ಕೂಡ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಇಂದಿನಿಂದ 2 ದಿನ ಭಾರೀ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 20ರಿಂದ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು, …

Read More »

ನಾನು ಮತ್ತೆ ಮುಖ್ಯಮಂತ್ರಿ ಆದರೆ ದಲಿತರ ಸಾಲ ಮನ್ನಾ : ಸಿದ್ದರಾಮಯ್ಯ

ಬೆಂಗಳೂರು : ನಾನು ಮತ್ತೆ ಮುಖ್ಯಮಂತ್ರಿ ಆದರೆ ದಲಿತರ ಸಾಲ ಮನ್ನಾ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಮತ್ತೆ ಮುಖ್ಯಮಂತ್ರಿ ಹುದ್ದೆಗೇರುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಷಿತರ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಶೋಷಿತ ಸಮುದಾಯದ ಅಭಿವೃದ್ಧಿಯಾಗಬೇಕೆಂದು ದಲಿತರಿಗೆ ಅನುದಾನವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಹೆಚ್ಚಳ …

Read More »

ಬಿಜೆಪಿ ಬುರುಡೆ ಪಾರ್ಟಿ : ಕುಮಾರಸ್ವಾಮಿ

ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. ‘ಬಿಜೆಪಿ ಎಂಬ ಬುರುಡೆ ಪಾರ್ಟಿ ‘ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸ್ಮಾರ್ಟ್ ಸಿಟಿ ನಡೆಯಲಿದೆ ಎಂದು ಹೊರಟವರು ಕೆಂಪೇಗೌಡರು ಕಟ್ಟಿದ ಭವ್ಯ ಬೆಂಗಳೂರು ನಗರವನ್ನು ಈಜು ಕೊಳ ಮಾಡುತ್ತಿದ್ದಾರೆ. ರಸ್ತೆಗಳು ರಾಜ ಕಾಲುವೆಗಳಾಗಿ, ಮನೆಗಳು ಕೆರೆ ಬಾವಿಗಳಾಗಿವೆ ಎಂದು ಟೀಕಿಸಿದ್ದಾರೆ. …

Read More »

ಪ್ರಮೋದ್ ಮುತಾಲಿಕ್ ಬಂಧಿಸುವಂತೆ ದಲಿತ ಸಂಘಟನೆಯಿಂದ ಪ್ರತಿಭಟನೆ

BIG TV NEWS Subscribe like share

Read More »