Breaking News

BigTv News

*ಆನ್ ಲೈನ್ ವಂಚನೆ: 19.50 ಲಕ್ಷ ರೂ ಕಳೆದುಕೊಂಡ ಬೆಳಗಾವಿ ವ್ಯಕ್ತಿ*

ಬೆಳಗಾವಿ : ಆನ್ ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೊಬ್ಬರೊ 19.50 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳಗಾವಿ ತಾಲೂಕಿನ‌ ಮುತಗಾ ಗ್ರಾಮದ ಭೂಷಣ ಪಾಟೀಲ ವಂಚನೆಗೊಳಗಾದವರು‌.‌ ಭೂಷಣ ಅವರು ಮೊಬೈಲ್ ಸಂಖ್ಯೆಯನ್ನು ಡಿ85 ಅಷ್ಟಾ ಟ್ರೇಡ್ ಮಾರ್ಕೆಟ್ ಥಿಂಕಿಂಗ್ ಅಲಾಯನ್ಸ್ ” ಎಂಬ ವಾಟ್ಸ್‌ಆಪ್ ಗ್ರೂಪ್‌ಗೆ ಸೇರಿಸಿದ್ದರು. ಆ …

Read More »

ಬಿಹಾರದಲ್ಲಿ ಹೊತ್ತಿ ಉರಿದ ಪ್ಯಾಸೆಂಜರ್ ರೈಲು

ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಹೊತ್ತಿ ಉರಿದಿರುವ ಘಟನೆ ಇಂದು ನಡೆದಿದೆ. ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿರುವಾಗ ರೈಲು ಬೋಗಿಯಿಂದ ದಟ್ಟವಾದ ಹೊಗೆ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಶಾರ್ಟ್​ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲು ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿತ್ತು ಇದಕ್ಕೂ ಸ್ವಲ್ಪ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.

Read More »

ನಕಲಿ ಲಾಟರಿ ಮಾರಾಟ: ಮೂವರ ಬಂಧನ

ಕುಂಬಳೆ: ನಕಲಿ ಲಾಟರಿ ಮಾರಾಟ ನಡೆಸಿದ ಆರೋಪದ ಮೇಲೆ ಕುಂಬಳೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂದ್ಯೋಡಿನ ಮಂಜುನಾಥ, ಕಿಶನ್ ಕುಮಾರ್ ಮತ್ತು ಕುಂಬಳೆ ಶಾಂತಿಪಳ್ಳದ ಚರಣ್ ಕುಮಾ‌ರ್ ಬಂಧಿತ ಆರೋಪಿಗಳು. ಕುಂಬಳೆ, ಬಂದ್ಯೋಡು ಭಾಗಗಳಲ್ಲಿ ನಕಲಿ ಲಾಟರಿ ಮಾರಾಟ ನಡೆಸುತ್ತಿದ್ದ ಆರೋಪವನ್ಬು ಇವರು ಎದುರಿಸುತ್ತಿದ್ದಾರೆ. ಬಂಧಿತರಿಂದ ನಕಲಿ ಲಾಟರಿ ಚೀಟಿ, ನಂಬರ್ ಬರೆದ ಚೀಟಿ, ವ್ಯವಹಾರಕ್ಕೆ ಬಳಸಿದ ಎರಡು ಮೊಬೈಲ್ ಫೋನ್, 6,280 ರೂ ನಗದು ವಶಪಡಿಸಲಾಗಿದೆ.

Read More »

ಕನ್ನಡಿಕಟ್ಟೆಯಲ್ಲಿ ಭೀಕರ ರಸ್ತೆ ಅಪಘಾತ; ಪ್ರಗತಿಪರ ಕೃಷಿಕ ಅನಿಲ್ ಬಳಂಜ ಪತ್ನಿ ಮೃತ್ಯು

ಬೆಳ್ತಂಗಡಿ: ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಬಳಿ ಮೇ.17 ರಂದು ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬಳಂಜ ಫಾರ್ಮ್ ನ ಮಾಲಕ ಪ್ರಗತಿಪರ ಕೃಷಿಕ ಅನಿಲ್ ಭಟ್ (45) ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಅನಿಲ್ ಭಟ್ ಅವರು ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ …

Read More »

ಬೆಂಗಳೂರು | ವಿದ್ಯಾರ್ಥಿಗೆ ಚಾಕು ಇರಿತ: ಮೂವರ ಬಂಧನ

ರಾಮಮೂರ್ತಿನಗರದ ಬಳಿ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ಬಿಬಿಎಂ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಘಟನೆ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡಿರುವ ವಿದ್ಯಾರ್ಥಿ ಧೀರಜ್ (21) ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಾದ ಭುವನ್, ಮಿಥುನ್ ಮತ್ತು ಬಾಲಕನನ್ನು ಬಂಧಿಸಲಾಗಿದೆ ಎಂದು ರಾಮಮೂರ್ತಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಸಮೀಪದ ಬಂಜಾರ ಲೇಔಟ್‍ನ ಧೀರಜ್, ಬೆಳಗಿನ ಜಾವ ಬೈಕ್‍ನಲ್ಲಿ ಹೊಸಕೋಟೆ ಕಡೆಗೆ ಹೋಗುತ್ತಿದ್ದಾಗ …

Read More »

ಕಲಬುರಗಿ: ಕಬ್ಬಿಣದ ರಾಡ್‌ನಿಂದ ಹೊಡೆದು ಸೆಕ್ಯುರಿಟಿ ಗಾರ್ಡ್ ಹತ್ಯೆ

ಕಲಬುರಗಿ: ನಗರದ ರಾಮ ಮಂದಿರದ ಬಳಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಭದ್ರತಾ ಸಿಬ್ಬಂದಿಯೊಬ್ಬರನ್ನು ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಆಳಂದ ತಾಲ್ಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ (45) ಕೊಲೆಯಾದ ದುರ್ದೈವಿ. ಹಾಲಿ ನಗರದ ರಾಣೇಶಪೀರ್ ದರ್ಗಾ ಪ್ರದೇಶದಲ್ಲಿ ನೆಲೆಸಿದ್ದರು.ರವಿಚಂದ್ರ ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಬಿಎಸ್‌ಎಫ್‌ನಿಂದ್‌ ನಿವೃತ್ತರಾಗಿದ್ದರು. ಸದ್ಯ ಕಲಬುರಗಿಯ ಇಂಡಿಯನ್ ಆಯಿಲ್ ಡಿಪೊದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. …

Read More »

ತಮ್ಮನಿಂದಲೇ ಅಣ್ಣನ ಕೊಲೆ

ಲಿಂಗಸುಗೂರು : ಪಟ್ಟಣದ ಬಸವಸಾಗರ ಕ್ರಾಸ್ ಹತ್ತಿರದ ಸಿದ್ದರಾಮೇಶ್ವರ ಶಾಲೆ ಬಳಿ ತಮ್ಮ ತನ್ನ ಅಣ್ಣನನ್ನು ಮಲಗಿರುವಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಬಸವರಾಜ ವಾಸದೇವ (32) ಕೊಲೆಯಾದ ವ್ಯಕ್ತಿ. ಬಸವರಾಜ ಕುಡಿದು ಬಂದು ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು ಎನ್ನಲಾಗಿದೆ. ಈ ವಿಚಾರವಾಗಿ ಬೇಸರಗೊಂಡ ಆತನ ತಮ್ಮ ಶ್ರೀಧರ (27) ಕೊಲೆ ಮಾಡಿರುವುದಾಗಿ ಆತನ ತಂದೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ …

Read More »

6 ಕಳ್ಳರ ಬಂಧನ, 14 ದ್ವಿಚಕ್ರ ವಾಹನ ಜಪ್ತಿ

ಸಂಕೇಶ್ವರ: ಜಿಲ್ಲೆಯ ವಿವಿಧೆಡೆ ಬೈಕ್​ ಕಳವು ಮಾಡುತ್ತಿದ್ದ ಕಳ್ಳರ ತಂಡವನ್ನು ಪತ್ತೆ ಹಚ್ಚುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿತರಿಂದ ಒಟ್ಟು 14 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಸಂಕೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಎರಡು ಪ್ರತ್ಯೇಕ ಬೈಕ್​ ಕಳ್ಳತನ ಪ್ರಕರಣದ ಕುರಿತು ದಾಖಲಾದ ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಸುಮಿತ ಕಮ್ಮಾರ (21), ಶಿವರಾಜ ಪಾಟೀಲ (21), ಓಂಕಾರ ಕಡಲಗಿಕರ (20), ಕಿರಣ ಕಮ್ಮಾರ (18), ಅಮಿತ ಕೋಳಿ …

Read More »

ಜೆಪ್ಪಿನಮೊಗರು ಹೆದ್ದಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ; 27 ದನಗಳ ರಕ್ಷಣೆ, ಇಬ್ಬರು ವಶಕ್ಕೆ

ಬೆಂಗಳೂರು: ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಜಾನುವಾರು ಸಾಗಾಟ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾವೇರಿಯಿಂದ ಮಂಗಳೂರು ಮಾರ್ಗವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು, ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಕಂಟೇನರ್ ಟ್ರಕ್ ಒಂದರಲ್ಲಿ ಬರೋಬ್ಬರಿ 27 ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ, ಉಸಿರುಗಟ್ಟುವ ರೀತಿಯಲ್ಲಿ ಕಟ್ಟಿ ಹಾಕಿ …

Read More »

ಅಬುಧಾಬಿಯ ಅಣುಸ್ಥಾವರದ ಬಳಿ ಡ್ರೋನ್ ದಾಳಿ: ಬೆಂಕಿ ಅವಘಡ

ಡ್ರೋನ್ ದಾಳಿಯಿಂದಾಗಿ ಅಬುದಾಭಿಯಲ್ಲಿರುವ ಅಣುಸ್ಥಾವರದ ಸಮೀಪ ಬೆಂಕಿ ಕಾಣಿಸಿಕೊಂಡಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಸೋಸಿಯೇಟ್ ಪ್ರೆಸ್ ವರದಿ ಮಾಡಿದೆ. ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್ ಅಲ್‌ ಧ್ರಫ್ರಾದಲ್ಲಿರುವ ಬರಕ ಅಣುಸ್ಥಾವರದ ಸಮೀಪ ಇರುವ ಹೊರಾಂಗಣ ವಿದ್ಯುತ್ ಜನರೇಟರ್ ಬಳಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಕಿರಣ ಸೋರಿಕೆಯ ಅಪಾಯವಿಲ್ಲ ಎಂದೂ ಅದು …

Read More »