ಕನಕಪುರ: ತಾಲ್ಲೂಕಿನ ಗಡಿಭಾಗ ಭೀಮಗೊಂಡನಹಳ್ಳಿ ಬಳಿಯ ಮೊಬ್ಬಿನ ದೊಡ್ಡಿಯಲ್ಲಿ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಕೆರೆ ಮೇಗಳದೊಡ್ಡಿ ಗ್ರಾಮದ ಶಂಕರ್ ನಾಯಕ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ ಶಂಕರ ನಾಯಕ್ ಹಾಗೂ ಬೆಂಗಳೂರಿನಲ್ಲಿದ್ದ ಉಯ್ಯಂಬಳ್ಳಿ ಹೋಬಳಿ ಬೆಂಡಗೋಡು ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆಗಾಗ ಇಬ್ಬರೂ ಜಗಳವಾಡುತ್ತಿದ್ದರು. ಯುವತಿಯ ಹಿಂಸೆ ತಾಳದೆ ನನ್ನ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. …
Read More »ಸಾರ್ವಜನಿಕ ಸ್ಥಳದಲ್ಲಿ ಸೇಂದಿ ಮಾರಾಟ: ವ್ಯಕ್ತಿ ಬಂಧನ
ರಾಯಚೂರು: ಸಾರ್ವಜನಿಕ ಸ್ಥಳದಲ್ಲಿ ಮಾನವ ಸೇವನೆಗೆ ಯೋಗ್ಯವಲ್ಲದ, ವಿಷಪೂರಿತ ಸಿ.ಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ನೇತಾಜಿ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೋಳಮಾನದೊಡ್ಡಿ ರಸ್ತೆಯ ಕೃಷ್ಣ ದೇವರಾಯ ಕಾಲೊನಿಯಲ್ಲಿ ಖಚಿತ ಮಾಹಿತಿ ಲಭಿಸಿತು. ಕೃಷ್ಣ ದೇವರಾಯ ಪ್ರದೇಶದ ಏಗನೂರು ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಹರಿಜನವಾಡದ ತಾಯಪ್ಪ (52) ಸಿ.ಎಚ್ ಪೌಡರ್ ಮಿಶ್ರಿತ ಸೇಂದಿಯನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ …
Read More »ಮೈಸೂರಿನಲ್ಲಿ ಮನೆ ಕಳವು: 60 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು
ಮೈಸೂರು:ಸಿದ್ದಾರ್ಥನಗರ ನಿವಾಸಿ ಪಂಕಜ್ ಜೈನ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಪಂಕಜ್ ಜೈನ್ ಮೇ 2 ರಂದು ಕುಟುಂಬ ಸಹಿತ ರಾಜಸ್ತಾನಕ್ಕೆ ಕುಟುಂಬದವರ ವಿವಾಹಕ್ಕೆ ತೆರಳಿದ್ದರು. ಗುರುವಾರ ಮನೆಗೆ ಆಗಮಿಸಿದ ಸಂದರ್ಭ ಮನೆಯಲ್ಲಿ ಕಳವು ನಡೆದಿರುವುದು ಕಂಡು ಬಂತು. ಪಂಕಜ್ ಜೈನ್ ಅವರು ಮನೆಯ ಮುಂಬಾಗಿಲಿನ ಡೋರ್ಲಾಕ್ ತೆರೆದು ಮನೆಯೊಳಗೆ ಪ್ರವೇಶಿಸಿದಾಗ ಮೊದಲ ಮಹಡಿಗೆ ಹೋದಾಗ ರೂಮ್ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂತು. ನಮತರ ನಂತರ ಕಬೋರ್ಡ್ ನೋಡಿದಾಗ ಅಲ್ಲಿ …
Read More »ಕಿಬ್ಬನಹಳ್ಳಿ ಕ್ರಾಸ್ ಎಟಿಎಂನಲ್ಲಿ ₹6 ಲಕ್ಷ ಕಳ್ಳತನ
ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್ನಲ್ಲಿ ಬುಧವಾರ ಎಟಿಎಂನ ಸಿಸಿಟಿವಿ ಕ್ಯಾಮೆರಾಕ್ಕೆ ಬಿಳಿಬಣ್ಣದ ಲೇಪನ ಮಾಡಿ ಡಿಜಿಟಲ್ ಲಾಕರ್ ಒಡೆದು ₹6ಲಕ್ಷ ಕಳ್ಳತನ ಮಾಡಲಾಗಿದೆ. ಕಿಬ್ಬನಹಳ್ಳಿ ಕ್ರಾಸ್ನ ಮಾತಾ ರೆಸಿಡೆನ್ಸಿ ಆವರಣದ ಎಸ್ಬಿಐ ಬ್ಯಾಂಕ್ಗೆ ಸೇರಿದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರ ಗುಂಪು, ಎಟಿಎಂ ಯಂತ್ರವನ್ನು ಹಾನಿಗೊಳಿಸಿ ಅದರ ಡಿಜಿಟಲ್ ಲಾಕರ್ ಒಡೆದು ಹಾಕಿದ್ದು ಬಳಿಕ ಯಂತ್ರದಲ್ಲಿದ್ದ ₹6 ಲಕ್ಷ ನಗದು ದರೋಡೆ ಮಾಡಿದ್ದಾರೆ.ಎಟಿಎಂ ಕೇಂದ್ರಕ್ಕೆ ಭದ್ರತಾ ಸಿಬ್ಬಂದಿ ಇರಲಿಲ್ಲ.
Read More »ಆಸ್ಪತ್ರೆಯಲ್ಲಿ ರೋಗಿಯ 10 ಲಕ್ಷ ಮೌಲ್ಯದ ಚಿನ್ನ ಕದ್ದ ಮಹಿಳಾ ಸಿಬ್ಬಂದಿ
ಬೆಂಗಳೂರು: ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೇ 1ರಂದು ಆಸ್ಪತ್ರೆಗೆ ದಾಖಲಾಗಿದ್ದ ಸ್ವಪ್ನಾ ಎಂಬ ರೋಗಿಯ 9.68 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಸ್ವಪ್ನಾ ಪತಿ ಶ್ರೀನಿವಾಸ್ ಎಂಬುವರು ನೀಡಿದ ದೂರಿನ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಯಲಹಂಕ ನಿವಾಸಿ ಶ್ರೀನಿವಾಸ್, ಮೇ 1ರಂದು ಶಸ್ತ್ರಚಿಕಿತ್ಸೆಗಾಗಿ ತಮ್ಮ …
Read More »ಸುವೇಂದು ಅಧಿಕಾರಿ ಆಪ್ತನ ಹತ್ಯೆಗೆ ಬಿಹಾರಿ ಶೂಟರ್ಸ್ – 40 ಲಕ್ಷಕ್ಕೆ ಸುಪಾರಿ
ಪಶ್ಚಿಮ ಬಂಗಾಳ :ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ವಿಷಯವೊಂದು ತನಿಖೆಯಿಂದ ಬಯಲಾಗಿದೆ. ಈ ಕೊಲೆಗೆ ಬಿಹಾರದಿಂದ ಶಾರ್ಪ್ ಶೂಟರ್ಗಳನ್ನು ಕರೆಸಲಾಗಿದ್ದು, ಬರೋಬ್ಬರಿ 40 ಲಕ್ಷ ರೂಪಾಯಿಗಳಿಗೆ ‘ಕಾಂಟ್ರಾಕ್ಟ್’ ನೀಡಲಾಗಿತ್ತು ಎಂಬ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆಇತ್ತೀಚೆಗೆ ಶಂಕಿತ ಆರೋಪಿಗಳನ್ನು ಬಂಧಿಸಿದ ನಂತರ ಅವರ ಮೊಬೈಲ್ ಕರೆಗಳ ಮಾಹಿತಿ ಹಾಗೂ ಹಣದ ವರ್ಗಾವಣೆಯ ಕುರುಹುಗಳನ್ನು ಆಧರಿಸಿ …
Read More »ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಆನೇಕಲ್: 1 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ 250 ಕೆಜಿ ಗಾಂಜಾವನ್ನು ಜಪ್ತಿ ಮಾಡುವ ಮೂಲಕ ಜಿಗಣಿ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸಿದ್ದ ಬಿಹಾರ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ರಾಮಾಯಣ್ ಯಾದವ್(56) ಮತ್ತು ಸಬೀರ್(51) ಬಂಧಿತರು. ಕಿಡಿಗೇಡಿಗಳು ಯಾರಿಗೂ ತಿಳಿಯದಂತೆ ಒಡಿಶಾದಿಂದ ಪೌಲ್ಟ್ರಿ ಫೀಡ್ಸ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ವೇಳೆ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದಿಂದ ಬೇಗೂರು ಮುಖ್ಯರಸ್ತೆಯ ಕೊಪ್ಪ …
Read More »ಆನ್ಲೈನ್ ಗೇಮಿಂಗ್ ಕಂಪೆನಿಗಳಿಗೆ ಶಾಕ್: ಬೆಂಗಳೂರು ಸಹಿತ 16 ಕಡೆಗಳಲ್ಲಿ ಇಡಿ ದಾಳಿ
ಆನ್ಲೈನ್ ಗೇಮಿಂಗ್ ಕಂಪೆನಿಗಳಿಗೆ ಇಂದು ಜಾರಿ ನಿರ್ದೇಶನಾಲಯ ಬಿಗ್ ಶಾಕ್ ನೀಡಿದ್ದು, ಬೆಂಗಳೂರು ಸಹಿತ ದೇಶಾದ್ಯಂತ 16 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು ಮೂಲದ ಗೇಮ್ಸ್ಕ್ರಾಫ್ಟ್ ಕಂಪನಿಯು ರಮ್ಮಿ ಕಲ್ಚರ್ ಎಂಬ ಆಪ್ ಮೂಲಕ ಬಳಕೆದಾರರಿಗೆ ವಂಚನೆ ಮಾಡಿದೆ. ಆಟದ ಹೆಸರಿನಲ್ಲಿ ದೊಡ್ಡ ಮಟ್ಟದ ಹಣಕಾಸು ಅಕ್ರಮ ನಡೆಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ದೆಹಲಿಯಲ್ಲಿ ಎಫ್ಐಆರ್ ಗಳು ದಾಖಲಾಗಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಇಡಿ ತನಿಖೆ …
Read More »ನಿಯಂತ್ರಣ ತಪ್ಪಿ ಅರಣ್ಯದತ್ತ ನುಗ್ಗಿದ ಸಾರಿಗೆ ಬಸ್
ಹನೂರು: ತಾಲೂಕಿನ ರಾಮಾಪುರ ಸಮೀಪದ ನಾಲ್ರೋಡ್ ಬಳಿ ಬುಧವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕೆಎಸ್ಆರ್ಟಿಸಿ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದತ್ತ ನುಗ್ಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ 11 ಗಂಟೆಯಲ್ಲಿ ಹನೂರಿನಿಂದ ಜಲ್ಲಿಪಾಳ್ಯದ ಕಡೆಗೆ ಹೊರಟ ಸಾರಿಗೆ ಬಸ್ನಲ್ಲಿ 39 ಪ್ರಯಾಣಿಕರಿದ್ದರು. ಈ ವೇಳೆ ನಾಲ್ರೋಡ್ ಬಳಿ ಎದುರು ಬಂದ ವಾಹನಕ್ಕೆ ದಾರಿ ಬಿಡಲು ರಸ್ತೆ ಬದಿಗೆ ಸರಿಸಿದಾಗ ಬಸ್ ಚಾಲಕ ನಿಯಂತ್ರಣ ತಪ್ಪಿದೆ …
Read More »ಯುವಕನಿಗೆ ತಂಡದಿಂದ ಹಲ್ಲೆ: 30 ಮಂದಿಯ ವಿರುದ್ಧ ಎಫ್ಐಆರ್; ಮೂವರ ಬಂಧನ
ಕೊಪ್ಪಳ: ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆರೋಪದಲ್ಲಿ ಯುವಕನೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೆ ಸಂಬಂಧಿಸಿ ನಗರ ಠಾಣೆಯ ಪೊಲೀಸರು, 30ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಮೊಬೈಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಅಹ್ಮದ್ ಮೂಲಿಮನಿ (22) ಮೇ 6 ರಂದು ರಾತ್ರಿ 8:30ರ ಸುಮಾರಿಗೆ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಹೋಟೆಲ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





