Breaking News

BigTv News

ನಿಧಿ ಆಸೆ ತೋರಿಸಿ ₹ 5 ಲಕ್ಷ ವಂಚನೆ, ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲು

ಹಾವೇರಿ: ‘ಮನೆಯ ಪಾಯ ಅಗೆಯುವಾಗ 2 ಕೆ.ಜಿ. ಚಿನ್ನದ ನಿಧಿ ಸಿಕ್ಕಿದೆ. ಅದನ್ನು ₹ 5 ಲಕ್ಷಕ್ಕೆ ಕೊಡುತ್ತೇವೆ’ ಎಂದು ಹೇಳಿ ನಂಬಿಸಿ ₹ 5 ಲಕ್ಷ ನಗದು ಕಿತ್ತೊಯ್ಯಲಾಗಿದ್ದು, ಈ ಬಗ್ಗೆ ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಮೇ 6ರಂದು ನಡೆದ ಕೃತ್ಯದ ಬಗ್ಗೆ ಸಂತ್ರಸ್ತ ಶಶಿಕುಮಾರ ದೂರು ನೀಡಿದ್ದಾರೆ. ಆರೋಪಿ ಮಂಜಣ್ಣ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ವಿಜಯಪುರ ಜಿಲ್ಲೆಯ …

Read More »

ಚಿಕ್ಕಬಳ್ಳಾಪುರದಲ್ಲಿ ವಿದ್ಯುತ್ ಅವಘಡ: ಮನೆಗೆ ಬೆಂಕಿ ಲಕ್ಷಾಂತರ ನಷ್ಟ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಶಿಕ್ಷಕ ಮಧುಸೂದನ್ ರೆಡ್ಡಿ ಎಂಬುವವರ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ಈ ವೇಳೆ ಇಬ್ಬರು ಮಕ್ಕಳು ಅದೃಷ್ಟವಶಾತ್ ಮನೆಯಿಂದ ಹೊರ ಬಂದಿದ್ದಾರೆ. ಮನೆಯಲ್ಲಿದ್ದ ₹ 1 ಲಕ್ಷ ನಗದು, ಚಿನ್ನಾಭರಣ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

Read More »

ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿ ಸಾವು

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿ ಸಾವನ್ನಪ್ಪಿದ್ದಾನೆ. ಶೇಷಾದ್ರಿಪುರಂ ನಿವಾಸಿ ಮಂಜುನಾಥ್(36) ಮೃತಪಟ್ಟ ಆರೋಪಿ ಎಂದು ಹೇಳಲಾಗಿದೆ. ಮಹಾಲಕ್ಷ್ಮಿ ಲೇ ಔಟ್ ಪೊಲೀಸರ ವಶದಲ್ಲಿದ್ದ ಆರೋಪಿ ಮಂಜುನಾಥ್ ನನ್ನು ಏಪ್ರಿಲ್ 28ರಂದು ಪೊಲೀಸರು ಬಂಧಿಸಿದ್ದರು. ಮೇ 2ರಂದು ಹೊಟ್ಟೆನೋವು ಕಾರಣ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆರೋಪಿಗೆ ಪಿತ್ತ ಜನಕಾಂಗ ಮತ್ತು ಸಕ್ಕರೆ ಕಾಯಿಲೆ ಇತ್ತು. ಚಿಕಿತ್ಸೆ ಫಲಕಾರಿಯಾಗದೆ ಮೇ 3ರಂದು ಮಂಜುನಾಥ್ ಮೃತಪಟ್ಟಿದ್ದಾನೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

Read More »

ಮಾರಾಕಾಸ್ತ್ರಗಳಿಂದ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ವಾರಾಕಾಸ್ತ್ರಗಳಿಂದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿರಿಜಾ ನಾಲೆ ಸಮೀಪದಲ್ಲಿ ಶವ ಬುಧವಾರ ಪತ್ತೆಯಾಗಿದ್ದು, ಮೈಸೂರಿನ ಲೇ. ಅಹಮ್ಮದ್ ಅಬ್ಬಾಸ್ ಜಾವೀದ್ ಅವರ ಪುತ್ರ ಮೊಹಮದ್ ಸಾಹಿಲ್ ಆಲಂ ಅಲಿಯಾಸ್ ಜವಾದ್ ಆಲಂ(45) ಎಂದು ಗುರುತಿಸಲಾಗಿದೆ. ಈತ ಇಂಜಿನಿಯರಿಂಗ್ ವಾಡಿ ಬಳಿಕ ಹಲವು ಕ್ರೈಂ ಕತ್ಯಗಳಲ್ಲಿ ಭಾಗಿಯಾಗಿದ್ದು, ಮೈಸೂರಿನ ಮಂಡಿ, ವಿ.ವಿ.ಪುರಂ, ಎನ್‌ಆರ್, ದೇವರಾಜ ಸೇರಿದಂತೆ …

Read More »

ಮದ್ದುಗುಂಡಿನೊಂದಿಗೆ ಸಿಕ್ಕಿಬಿದ್ದ ಟಿಎಂಸಿ ಕೌನ್ಸಿಲರ್; ಹಲವು ತಿಂಗಳುಗಳ ಬಳಿಕ ಬಂಧನ

ಕೊಲ್ಕತ್ತಾದ ನೇತಾಜಿ ಸುಭಾಷ್‌ ಚಂದ್ರ ಭೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರವಾನಿಗೆ ರಹಿತ ಮದ್ದುಗುಂಡುಗಳೊಂದಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಲವು ತಿಂಗಳುಗಳ ಬಳಿಕ ದಕ್ಷಿಣ 24 ಪರಗಣ ಪುಜಾಲಿ ಪುರಸಭೆಯ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್‌ ನನ್ನು ಪೊಲೀಸರು ಬಂಧಿಸಿದ್ದಾರೆ. 14ನೇ ವಾರ್ಡ್ ಅನ್ನು ಪ್ರತಿನಿಧಿಸುತ್ತಿರುವ ಅಮೀರುಲ್ ಶೇಖ್ ಇಸ್ಲಾಮ್ ರನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2025ರ ಸೆಪ್ಟೆಂಬರ್ 21ರಂದು 6ಇ 5227 ವಿಮಾನ …

Read More »

ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಾಚರಣೆ: 50 ಕೆ.ಜಿ ಗಾಂಜಾ ವಶ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಆರು ದಿನಗಳಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ನಡೆಸಿದ ಕಾರ್ಯಾರಣೆಯಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 50 ಕೆ.ಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಬ್ಯಾಂಕಾಕ್‌ನಿಂದ ಗಂಜಾ ಕಳ್ಳ ಕಳ್ಳ ಸಾಗಣೆ ಹೆಚ್ಚಿದ್ದು, ಮೇ ತಿಂಗಳಲ್ಲಿ ನಿರಂತರವಾಗಿ ಬೀಗಿ ತಪಾಸಣೆಯಲ್ಲಿರುವ ಕಸ್ಟಮ್ಸ್ ಅಧಿಕಾರಿಗಳು ಕೇವಲ 6 ದಿನದಲ್ಲಿಯೇ 50 ಕೆ.ಜಿಗೂ ಅಧಿಕ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಮಾಣಿಕರೇ ಆರೋಪಿಗಳಾಗಿದ್ದಾರೆ. ಎಲ್ಲ …

Read More »

ಪತಿಯ ಕುಡಿತದ ಚಟಕ್ಕೆ ಮನನೊಂದು ಮನೆ ಬಿಟ್ಟು ಹೋದ ಪತ್ನಿ; ಹಿಂಬಾಲಿಸಿ ಬಂದು ನಡು ರಸ್ತೆಯಲ್ಲಿಯೇ ಚಾಕು ಇರಿಯಲು ಯತ್ನಿಸಿದ ಕಿರಾತಕ

ಬೆಂಗಳೂರು: ನಡು ರಸ್ತೆಯಲ್ಲಿಯೇ ಪತಿ ಮಹಾಶಯನೊಬ್ಬ ಪತ್ನಿಗೆ ಚಾಕು ಇರಿಯಲು ಯತ್ನಿಸಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ದಾಸನಪುರದಲ್ಲಿ ನಡೆದಿದೆ.ಸಂಜಯ್ ಎಂಬಾತ ಪತ್ನಿಯನ್ನು ಹಿಮ್ಬಾಲಿಸಿ ಬಂದು ಚಾಕು ಇರಿಯಲು ಯತ್ನಿಸಿದದನೆ. ಈ ವೇಳೆ ಸಾರ್ವಜನಿಕರು ಆಕೆಯನ್ನು ರಕ್ಷಣೆ ಮಾಡಿ, ಆರೋಪಿಗೆ ಧರ್ಮದೇಟು ನೀಡಿದ್ದಾರೆ.ಹಿಗ್ಗಾಮುಗ್ಗ ಥಳಿಸಿದ್ದಾರೆ. ಸಂಜಯ್ ಮೊದಲ ಪತ್ನಿ ಬಿಟ್ಟು ಎರಡನೇ ಮದುವೆಯಾಗಿದ್ದ. ಆದರೆ ಪತಿಯ ಕುಡಿತದ ಚಟದಿಂದಾಗಿ ಎರಡನೇ ಪತ್ನಿ ರೋಸಿ ಹೋಗಿದ್ದಳು. ಇದೇ ಕಾರಣಕ್ಕೆ ಪದೇ ಪದೇ ಇಬ್ಬರ …

Read More »

ಚಿಪ್ಪು ಹಂದಿ ಚಿಪ್ಪು ಸಾಗಾಣೆ; ಮೂವರ ಬಂಧನ

ಮಡಿಕೇರಿ: ಮಂಗಳೂರಿನ ಕದ್ರಿ ಉದ್ಯಾನದ ಬಳಿ ಚಿಪ್ಪುಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸಿದ ಆರೋಪ‍ದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಎಚ್‌.ಆರ್.ಜಗದೀಶ್ (50), ಬಾಬು (48) ಹಾಗೂ ಕನಕಪುರದ ಸಿದ್ದುನಾಯಕ (38) ಬಂಧಿತರು. ಇವರಿಂದ ಚಿಪ್ಪುಹಂದಿಯ 5,200 ಕೆ.ಜಿ ತೂಕದ ಚಿಪ್ಪು ಹಾಗೂ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್.ಪಿ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಸಬ್‌ಇನ್‌ಸ್ಪೆಕ್ಟರ್ …

Read More »

ಲವ್‌ ಜಿಹಾದ್‌ ಆರೋಪ; ಮುಸ್ಲಿಂ ಯುವಕನಿಗೆ ಥಳಿಸಿದ ಹಿಂದೂ ಮುಖಂಡರು, 8 ಮಂದಿ ಪೊಲೀಸ್‌ ವಶಕ್ಕೆ

ಕೊಪ್ಪಳ: ಕೊಪ್ಪಳದಲ್ಲಿ ಲವ್ ಜಿಹಾದ್ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಹಿಂದೂ ಅಪ್ರಾಪ್ತೆಯೊಂದಿಗೆ ಓಡಾಡುತ್ತಿದ್ದ ಮುಸ್ಲಿಂ ಯುವಕನಿಗೆ ಹಿಂದೂಪರ ಮುಖಂಡರು ಥಳಿಸಿದ ಘಟನೆರ ನಡೆದಿದೆ. ಮುಸ್ಲಿಂ ಯುವಕ ಸಮೀರ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂದೂಪರ‌ ಮುಖಂಡರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಇಲಾಖೆ ನಡೆಗೆ ಹಿಂದೂಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀರ್ ಹಿಂದೂ ಅಪ್ರಾಪ್ತೆಯ ಜೊತೆ ಸಲ್ಲಾಪವಾಡಿದ ಆರೋಪವಿದ್ದು, …

Read More »

ಬಿಜೆಪಿ ಶಾಸಕಿ ರತ್ನ ದೇಬನಾಥ್ ನಿವಾಸದ ಬಳಿ ಬಾಂಬ್ ಸ್ಫೋಟ; ಐವರು ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮುಂದುವರೆದಿದೆ. ಬಿಜೆಪಿ ಸಿಎಂ ಅಭ್ಯರ್ಥಿ ಸುವೆಂದು ಅಧಿಕಾರಿ ಪಿಎ ಚಂದ್ರನಾಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಬೆನ್ನಲ್ಲೇ ಹಲವೆಡೆ ಹಿಂಸಾಚಾರ ತೀವ್ರಗೊಳ್ಳುತ್ತಿದೆ. ಬಿಜೆಪಿ ಶಾಸಕಿ ರತ್ನ ದೇಬನಾಥ್ ಅವರ ನಿವಾಸದ ಬಳಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಐವರು ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಾನಿಹಾಟಿ ಕ್ಷೇತ್ರದ ಬಿಜೆಪಿ ನೂತನ ಶಾಸಕಿಯಾಗಿರುವ ರತ್ನ ದೇಬನಾಥ್ ಅವರ ಮನೆ ಬಳಿ ಬಾಂಬ್ …

Read More »