ವಿಜಯಪುರದಲ್ಲಿ ಸೊಸೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಗಣೇಶ ನಗರದ ನಿವಾಸಿ ರಮೇಶ ಮೂರಮಟ್ಟಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. 2020ರ ಏಪ್ರಿಲ್ನಲ್ಲಿ ಆರೋಪಿ ಸೊಸೆ ಮೇಲೆ ಲೈಂಗಿಕ ಹಲ್ಲೆ ನಡೆಸಿ, ವಿಷಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದನು. ಈ ಸಂಬಂಧ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ …
Read More »ಉಗ್ರ ಸಂಘನೆಗಳೊಂದಿಗೆ ನಂಟು ಆರೋಪ: ಕಲಬುರಗಿಯಲ್ಲಿ ಶಂಕಿತ ವ್ಯಕ್ತಿ ವಶಕ್ಕೆ
ಕಲಬುರಗಿಯಲ್ಲಿ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ವುಲ್ ಮಲೀಕ್ ಎಂಬಾತನನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರಾಫ್ ಬಜಾರ್ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಈತ, ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಬೀದರ್ನಲ್ಲಿ ವಿಶಾಲ್ ಮೇತ್ರೆ ಹಾಗೂ ದಾವಣಗೆರೆಯಲ್ಲಿ ಸುಹೇಲ್ ಎಂಬಾತನನ್ನು ಉಗ್ರರ …
Read More »ಲೈಂಗಿಕ ಕಿರುಕುಳ ಆರೋಪ: ಚರ್ಚ್ ಧರ್ಮಗುರು ಬಂಧನ
ಮಂಗಳೂರು ನಗರದ ವೆಲೆನ್ಸಿಯಾದ ಚರ್ಚ್ವೊಂದರ ಧರ್ಮಗುರು ಸಿಪ್ರಿಯನ್ ಪಿಂಟೋ ಅವರನ್ನು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಧರ್ಮಗುರು ವಿರುದ್ಧ ಸಂತ್ರಸ್ತರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಪ್ರಿಯನ್ ಪಿಂಟೋ ಅವರನ್ನು ಸಂಬಂಧಿಕರೊಬ್ಬರ ಮನೆಯಿಂದ ಬಂಧಿಸಿದ್ದಾರೆ.
Read More »ಕೆಂಪೇಗೌಡ ಏರ್ಪೋರ್ಟ್ನಲ್ಲಿ ಭಿಕ್ಷೆ ಬೇಡುತ್ತಿದ್ದ ಇಬ್ಬರ ಬಂಧನ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಮೀಜಿ ಹಾಗೂ ವಿದ್ಯಾರ್ಥಿಗಳ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಭಾಟಿಯಾ (28) ಮತ್ತು ವೆಂಕಟ ದಿನೇಶ್ (27) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿಮಾನ ಟಿಕೆಟ್ಗೆ ಹಣವಿಲ್ಲ, ಪರ್ಸ್ ಕಳೆದುಹೋಗಿದೆ ಎಂದು ಸುಳ್ಳು ಹೇಳಿ ಪ್ರಯಾಣಿಕರಿಂದ ಹಣ ಪಡೆಯುತ್ತಿದ್ದರು. ಇವರ ಮಾತು ನಂಬಿದ ಟೆಕ್ಕಿಯೊಬ್ಬರು 37,300 ರೂ. ಫೋನ್ಪೇ ಮಾಡಿದ್ದರು. ಮತ್ತೊಂದೆಡೆ ಕಾವಿ ಧರಿಸಿ ಸಾಧುಗಳಂತೆ ನಟಿಸಿ ಹಣ ಸಂಗ್ರಹಿಸುತ್ತಿದ್ದರು. ವಿಚಾರಣೆ …
Read More »ಬಾಗಲಕೋಟೆಯಲ್ಲಿ ಭೀಕರ ಮರ್ಡರ್ : ನವರಾತ್ರಿ ದುರ್ಗಾ ಪೂಜೆ ವಿಚಾರಕ್ಕೆ ಕಿರಿಕ್, ಚಾಕು ಇರಿದು ಯುವಕನ ಬರ್ಬರ ಹತ್ಯೆ!
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ವಿನಾಯಕ ನಗರದಲ್ಲಿ ದುರ್ಗಾ ಪೂಜೆ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಿತಿನ್ ನಿಂಬಾಳ್ಕರ್ (25) ಕೊಲೆಯಾದ ಯುವಕ. ದಾಂಡಿಯ ನೃತ್ಯದ ಬಳಿಕ ನಡೆಯುತ್ತಿದ್ದ ಪೂಜೆ ವೇಳೆ ಮದ್ಯದ ಅಮಲಿನಲ್ಲಿ ಬಂದ ಶ್ರೀನಿವಾಸ ಕದರಿ, ನಿತಿನ್ ಜೊತೆ ಜಗಳವಾಡಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಮರಳಿ ಬಂದು ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ನಿತಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಂಜು ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮುಧೋಳ ಪೊಲೀಸ್ ಠಾಣಾ …
Read More »ಮೊಮ್ಮಗಳನ್ನು ನೋಡಲು ಬಂದ ಅಜ್ಜಿ ಮೇಲೆ ಹಲ್ಲೆ: ಮಗಳ ಇ-ಮೇಲ್ನಲ್ಲಿ ಪತ್ತೆಯಾಯ್ತು ಗಂಡನ ಕ್ರೌರ್ಯ
ಬೆಂಗಳೂರು: ಕೆಎಎಸ್ ಪಾಸ್ ಆಗಿದ್ದೇನೆಂದು ಸುಳ್ಳು ಹೇಳಿ ಶರಣ್ಯಳನ್ನು ಮದುವೆಯಾಗಿದ್ದ ಮಂಜುನಾಥ್, ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಮನನೊಂದು ಶರಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೊಮ್ಮಗಳನ್ನು ನೋಡಲು ಬಂದ ಶರಣ್ಯ ತಾಯಿ ಕವಿತಾ ಮೇಲೂ ಮಂಜುನಾಥ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಯಲಹಂಕ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶರಣ್ಯಳ ಇ-ಮೇಲ್ನಲ್ಲಿ ಪತಿಯ ಕಿರುಕುಳ ಹಾಗೂ ಬೆದರಿಕೆಯ ವಿವರಗಳು ಪತ್ತೆಯಾಗಿವೆ ಎನ್ನಲಾಗಿದೆ. ಮಗಳ ಸಾವಿನ ಮರುತನಿಖೆಗೆ ತಾಯಿ ಕವಿತಾ ಆಗ್ರಹಿಸಿದ್ದಾರೆ.
Read More »ಒಬ್ಬನಿಗೆ ಬರ್ತ್ ಡೇ ಪಾರ್ಟಿ ಮಾಡುವಾಸೆ, ಮತ್ತೊಬ್ಬನಿಗೆ ಬೈಕ್ ಕೊಳ್ಳುವ ಆಸೆ: ಚಿನ್ನದ ಸರಕ್ಕಾಗಿ ಆಪ್ತ ಸ್ನೇಹಿತನನ್ನೇ ಕೊಂದ ಬಾಲಕರು
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಚಿನ್ನದ ಸರಕ್ಕಾಗಿ 17 ವರ್ಷದ ಪ್ರಜ್ಯೋತ್ ಕಾಂಬ್ಳೆ ಎಂಬ ಬಾಲಕನನ್ನು ಆತನ ಇಬ್ಬರು ಅಪ್ರಾಪ್ತ ಸ್ನೇಹಿತರೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಒಬ್ಬನಿಗೆ ಹುಟ್ಟುಹಬ್ಬ ಆಚರಿಸಲು, ಮತ್ತೊಬ್ಬನಿಗೆ ಬೈಕ್ ಖರೀದಿಸಲು ಹಣ ಬೇಕಾಗಿತ್ತು. ಸೆಪ್ಟೆಂಬರ್ 24ರಂದು ಪ್ರಜ್ಯೋತ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಾಕ್ಷ್ಯ ನಾಶಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿ, ಮೊಬೈಲ್ ಅನ್ನು ಬಸ್ಗೆ ಎಸೆದಿದ್ದಾರೆ. ಸುಮಾರು …
Read More »ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದ ಮಂಗಳೂರು ಕೋರ್ಟ್!
ಮಂಗಳೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿ ಶೇಖರ್ ಅಲಿಯಾಸ್ ಸೇಸಪ್ಪ (30) ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ವೃತ್ತ ನಿರೀಕ್ಷಕ ಉಮೇಶ್ ಯು. ಅವರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ …
Read More »ಬೆಂಗಳೂರಿನ ಸ್ಪಾ, ಸಲೂನ್ಗಳಲ್ಲಿ ನೈತಿಕ ಪೊಲೀಸ್ಗಿರಿ, ಬ್ಲಾಕ್ಮೇಲ್; ನಕಲಿ ವರದಿಗಾರರು ಸೇರಿ 6 ಮಂದಿ ಪೊಲೀಸರ ಬಲೆಗೆ!
ಬೆಂಗಳೂರು: ಸ್ಪಾ ಮತ್ತು ಸಲೂನ್ಗಳಿಗೆ ನುಗ್ಗಿ ನಕಲಿ ಮಾಧ್ಯಮ ಐಡಿ ಕಾರ್ಡ್ ತೋರಿಸಿ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಲಕ್ಷ್ಮಿ, ಮಮತಾ, ಪ್ರಿಯಾ, ಸಗಾಯ್ ಮೇರಿ, ಯೋಗಬಾಲು ಹಾಗೂ ಆಸೀಫ್ ಎಂದು ಗುರುತಿಸಲಾಗಿದೆ. ಸ್ಪಾ ಮಾಲೀಕರೊಬ್ಬರಿಗೆ ಬೆದರಿಕೆ ಹಾಕಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಮಾಲೀಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ …
Read More »ಸತ್ತ ಜಾನುವಾರುಗಳ ಪರಿಹಾರದ ಹಣ ನುಂಗಿದ ಪಾಪಿಗಳು : ರಾಬಕೋವಿ ಹಾಲು ಒಕ್ಕೂಟದ ಮತ್ತಷ್ಟು ಅಕ್ರಮ ಬಯಲು!
ಬಳ್ಳಾರಿ: ರಾಬಕೋವಿ ಹಾಲು ಒಕ್ಕೂಟದಲ್ಲಿ ಮೃತಪಟ್ಟ ಜಾನುವಾರುಗಳ ವಿಮಾ ಪರಿಹಾರದ ಹಣ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಒಕ್ಕೂಟದ ಅಕೌಂಟೆಂಟ್ ಉಮಾಮಹೇಶ್ವರಿ ಹಾಗೂ ನಿವೃತ್ತ ಮ್ಯಾನೇಜರ್ ವೆಂಕಟೇಶ್ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ರೈತರಿಗೆ ಸಲ್ಲಬೇಕಾದ ವಿಮಾ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಧನಂಜಯ್ ಹಾಮಲ್ ಅವರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





