Breaking News

BigTv News

ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ಘಟಕಕ್ಕೆ ಬೆಂಕಿ: ಕಾರ್ಯಕ್ರಮ ಮುಂದೂಡಿಕೆ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಂಗಳವಾರ ಉದ್ಘಾಟನೆಗೊಳ್ಳಬೇಕಿದ್ದ ರಾಜಸ್ಥಾನದ ಪೆಟ್ರೋಲಿಯಂ ಉತ್ಪನ್ನಗಳ ಸಂಸ್ಕರಣಾ ಘಟಕವೊಂದರಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದೆ. ‘ಉದ್ಘಾಟನೆಗೆ ಒಂದು ದಿನ ಮುನ್ನ ಈ ಅವಘಡ ಸಂಭವಿಸಿರುವ ಕಾರಣ ಮಂಗಳವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ’ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. ಭಾರತದ ಮೊದಲು ಹಸಿರು ಸಂಯೋಜಿತ ಸಂಸ್ಕರಣಾ ಘಟಕ ಮತ್ತು …

Read More »

2ನೇ ಮದುವೆಗೆ ರೆಡಿಯಾಗಿದ್ದ ವೈದ್ಯನ ಹತ್ಯೆಗೈದು ಚಿನ್ನಾಭರಣ ಲೂಟಿ: ಸ್ನೇಹಿತ ಅರೆಸ್ಟ್

ಕಾರವಾರ: ಶಿರಸಿಯ ಕೆಎಚ್‌ಬಿ ಕಾಲೋನಿಯಲ್ಲಿ ಎರಡನೇ ಮದುವೆಗೆ ಸಿದ್ದನಾಗಿದ್ದ ವೈದ್ಯನನ್ನು ಹತ್ಯೆ ಮಾಡಿದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ(68) ಬಂಧಿತ ಆರೋಪಿ. ಡಾ. ರಮೇಶ್ ಕಲಗುಟಕರ(51) ಕೊಲೆಯಾದ ವೈದ್ಯ. ವೈದ್ಯ ರಮೇಶ್ ಅವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ರಮೇಶ್ ಸ್ನೇಹಿತನಾಗಿರುವ ಮಂಜುನಾಥ್ ಚಿನ್ನದ ಆಸೆಗೆ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. …

Read More »

ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91′ ವಿಮಾನ.!

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡದೊಂದು ವಿಮಾನ ದುರಂತ ತಪ್ಪಿದೆ. ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ದೋಷದಿಂದಾಗಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ನಾಲ್ಕು ಗಂಟೆಗಳ ಕಾಲ ಸಾವಿನ ದವಡೆಯಲ್ಲಿ ಸಿಲುಕಿ, ಅಕ್ಷರಶಃ ನರಕ ದರ್ಶನ ಮಾಡಿದ್ದಾರೆ. ಹೈದರಾಬಾದ್‌ನಿಂದ ಹೊರಟಿದ್ದ ಫ್ಲೈ 91 (Fly 91) ಏರ್‌ಲೈನ್ಸ್ ವಿಮಾನವು ಸಂಜೆ 4:30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ …

Read More »

ಒಣಹುಲ್ಲು ಸಾಗಿಸುತ್ತಿದ್ದ ಬೊಲೆರೋಗೆ ವಿದ್ಯುತ್ ತಂತಿ ತಗುಲಿ ಬೆಂಕಿ: ನಡುರಸ್ತೆಯಲ್ಲಿ ಧಗಧಗ

ಯಾದಗಿರಿ ಜಿಲ್ಲೆಯ ವಡಗೇರಾ ಬಳಿ, ಒಣ ಹುಲ್ಲು ಸಾಗಿಸುತ್ತಿದ್ದ ಬೊಲೆರೋ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ನಡುರಸ್ತೆಯಲ್ಲಿ ಬೆಂಕಿಗಾಹುತಿಯಾದ ಲಾರಿ ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕೂಡಲೇ ಬೊಲೆರೋ ವಾಹನದಲ್ಲಿದ್ದ ಚಾಲಕ ಸೇರಿ ಮೂವರು ವಾಹನದಿಂದ ಹೊರಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗ …

Read More »

ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಎರಡು ಮನೆಗಳು ಭಸ್ಮ!

ತುಮಕೂರಲ್ಲಿ ಭೀಕರ ದುರಂತ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಎರಡು ಮನೆಗಳು ಸುಟ್ಟು ಭಸ್ಮವಾಗಿದೆ. ತಿಪಟೂರು ತಾಲೂಕಿನ ನೋಣವಿನಕೆರೆಯ ಮಾಟನಹಳ್ಳಿ ಗ್ರಾಮದಲ್ಲಿ ಅವಘಡ ನಡೆದಿದೆ. ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಎರಡು ಮನೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ವೆಂಕಟರಮಣಗೌಡ ಮತ್ತು ಸಣ್ಣತಿಮ್ಮೇಗೌಡಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿದ್ದು,15 ಸಾವಿರ ಕೊಬ್ಬರಿ, ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ ಹಾಗೂ ಆಹಾರ ಧಾನ್ಯಗಳು ಬೆಂಕಿಗಾಹುತಿಯಾಗಿದೆ. ಇನ್ನು, ಅಗ್ನಿಶಾಮಕ ದಳದ ಸಿಬ್ಬಂದಿ ವಿಷಯ ತಿಳಿದು …

Read More »

ಮಾದಕವಸ್ತು ಮಾರಾಟ: ಇಬ್ಬರ ಬಂಧನ

ಬೆಳಗಾವಿ: ತಾಲ್ಲೂಕಿನ ಸುಳಗಾದ ದೇಶಪಾಂಡೆ ಗಲ್ಲಿಯ ಮನೆಯಲ್ಲಿ ಶನಿವಾರ ತಲೆದಿಂಬಿನಲ್ಲಿ ಬಚ್ಚಿಟ್ಟು ಮಾದಕವಸ್ತು ಮಾರುತ್ತಿದ್ದ ಇಬ್ಬರನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಅದೇ ಗ್ರಾಮದ ನಾಗೇಶ ಮಧುಕರ ಭಗತ, ರಾಹುಲ ಜ್ಯೋತಿಬಾ ಜಾಧವ ಬಂಧಿತರು. ಅವರಿಂದ ₹2.60 ಲಕ್ಷ ಮೌಲ್ಯದ 12.92 ಗ್ರಾಂ (119 ಚೀಟಿ) ಹೆರಾಯಿನ್‌, 2 ಮೊಬೈಲ್‍ ವಶಕ್ಕೆ ಪಡೆಯಲಾಗಿದೆ. ಅವರಿಗೆ ಮಾದಕವಸ್ತು ತಂದುಕೊಡುತ್ತಿದ್ದ ಮುಂಬೈನ ನಿವಾಸಿ ಸಂತೋಷ ವಿರುದ್ಧವೂ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More »

ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ

ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ, ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಅಂಗಡಿಗೆ ತೆರಳಿ ಜಲ್ಮುರಿ ಖರೀದಿಸಿ ಸವಿದಿದ್ದಾರೆ, ಸ್ಥಳೀಯರಿಗೂ ನೀಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಪ್ರಧಾನಿ ಮೋದಿ, ಸ್ಥಳೀಯರ ಜೊತೆ ಸೇರಿ ‘ಜಲ್ಮುರಿ’ ಸವಿದು ಖುಷಿಪಟ್ಟ ವಿಡಿಯೋ ಭಾರಿ ವೈರಲ್ ಆಗಿದೆ. ಪುರುಲಿಯಾ, ಜಾರ್ಗ್ರಾಮ್, ಮೇದಿನಿಪುರ್ ಮತ್ತು ಬಿಷ್ಣುಪುರ್‌ನಲ್ಲಿ ಒಂದರ ಹಿಂದೆ ಒಂದರಂತೆ ನಾಲ್ಕು ರ‍್ಯಾಲಿಗಳನ್ನು ಮುಗಿಸಿದ ಪ್ರಧಾನಿ …

Read More »

ಅಂತಾರಾಜ್ಯ ಸೈಬರ್ ಗ್ಯಾಂಗ್ ನ ಐವರು ಅರೆಸ್ಟ್:ಚೀನಾ, ನೇಪಾಳ ಸಂಪರ್ಕ!

ನೇಪಾಳ ಮೂಲದ ಆಪರೇಟರ್‌ಗಳೊಂದಿಗೆ ಮತ್ತು ಚೀನಾದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಅಂತಾರಾಜ್ಯ ಸೈಬರ್ ವಂಚನೆ ಸಿಂಡಿಕೇಟ್ ಅನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆಹಚ್ಚಿದ್ದು, ಬರೇಲಿಯಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ನಕಲಿ ಖಾತೆಗಳು ಮತ್ತು ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ವಿವಿಧ ರಾಜ್ಯಗಳಲ್ಲಿ ಜನರನ್ನು ವಂಚಿಸುವಲ್ಲಿ ಭಾಗಿಯಾಗಿದ್ದ ಆರೋಪ ದಲ್ಲಿ ಶಕೀಬ್ ಅಲಿ, ರಾಜ್‌ಕುಮಾರ್, ಆಶಿಶ್ ಸಿಂಗ್, ಬಬ್ಲೂ ಅಲಿಯಾಸ್ ಮಾಧೋರಾಮ್ ಮತ್ತು ಸಚೇಂದ್ರ ಕುಮಾರ್ ಅವರನ್ನು …

Read More »

ಗಾಂಜಾ ಮಾರುತ್ತಿದ್ದ ಮೂವರ ಬಂಧನ

ಕೆಜಿಎಫ್​: ಮಾದಕ ವಸ್ತುಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೆಜಿಎಫ್​ ಪೊಲೀಸರು, ಪ್ರತ್ಯೇಕ ಕಡೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 410 ಗ್ರಾಂ ಗಾಂಜಾ ಹಾಗೂ 2 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ನಗರದ ಅಜಯ್​ಕುಮಾರ್​ (26), ಮೊಹಮ್ಮದ್​ ಯೂಸೂಫ್​ (22) ಯಕ್ಷಗೋರ್​ ಶರ್ಮ ಬಂಧಿತರು. ಸಂಜಯ್​ ಗಾಂಧಿ ನಗರದಿಂದ ಇ.ಟಿ ಬ್ಲಾಕ್​ ಕಡೆಗೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ …

Read More »

ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರಗೈದ ಆರೋಪದಲ್ಲಿ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ಬಂಧಿತ ಆರೋಪಿಗಳು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಆರೋಪಿಗಳು ಪುಸಲಾಯಿಸಿ ಎ.16ರಂದು ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿರುವ ಬಗ್ಗೆ ಸಂತ್ರಸ್ತೆ ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯ …

Read More »