ಉಡುಪಿ: ವಾಟ್ಸಪ್ನಲ್ಲಿ ಬಂದ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ ವ್ಯಕ್ತಿ ಬರೋಬ್ಬರಿ 4,86,13 ರೂ. ಕಳೆದುಕೊಂಡ ಘಟನೆ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ಹಮೀದ್ ಎಂಬವರು ಪಡುಬಿದ್ರಿ ಹೆಜಮಾಡಿ ಬ್ರಾಂಚ್ ನ ಕೆನರಾ ಬ್ಯಾಂಕ್ ಮತ್ತು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಬ್ರಾಂಚ್ ನಲ್ಲಿ ಖಾತೆ ಹೊಂದಿದ್ದರು. ಎ.12ರಂದು ಬೆಳಗ್ಗೆ 7ಕ್ಕೆ ಅವರ ಪರಿಚಯದ ಕುಮಾರ ಸ್ವಾಮಿ ಎಂಬವರ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ ಮೂಲಕ ಆರ್ಟಿಒ …
Read More »ಅಕ್ರಮ ಗಣಿಕಾರಿಕೆ: ಪ್ರಕರಣ ದಾಖಲು
ಕಾರ್ಕಳ: ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿನ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಮನೋಜ್ ಮತ್ತು ಶರಣ್ ಎಂಬವವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಲಾರಿ ಚಾಲಕರಿಬ್ಬರು ಸೇರಿಕೊಂಡು ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡಲು ಲೋಡ್ ಮಾಡುತ್ತಿದ್ದು ಅವರನ್ನು ಬಂಧಿಸಿ ಕಲ್ಲು ತೆಗೆಯಲು ಉಪಯೋಗಿಸಿದ ಸಲಕರಣೆಗಳನ್ನು, ಸೈಜ್ ಕಲ್ಲುಗಳನ್ನು ಲೋಡ್ ಮಾಡಿದ ಟಿಪ್ಪರ್ …
Read More »23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಶಿವನಗರದ ನಿವಾಸಿ ಎಂ. ಬಾಬು (52), ಎಂಬಾತನನ್ನು ಮಲ್ಪೆ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆ ಉಪ ನಿರೀಕ್ಷಕ ಅನಿಲ್ ಕುಮಾರ್ ಡಿ.ನೇತೃತ್ವದಲ್ಲಿ 5 ತಿಂಗಳುಗಳಿಂದ ಆರೋಪಿಯ ಬಂಧನಕ್ಕೆ ಪ್ರಯತ್ನ ನಡೆದಿತ್ತು. ಕೊನೆಗೂ ಖಚಿತ ಮಾಹಿತಿ ಮೇರೆಗೆ ಠಾಣೆಯ ಹೆಡ್ ಕಾನ್ಸ್ಟೆಬಲ್ಗಳಾದ ಸುರೇಶ್ ಕುಮಾರ್ ಮತ್ತು ವಿಶ್ವನಾಥ್ ಎಚ್. ಅವರು ಎ.12ರಂದು ಬೆಂಗಳೂರಿಗೆ …
Read More »ಕೆಆರ್ ಪುರದಲ್ಲಿ ಮಿನಿ ಟೆಂಪೋ ಅಪಘಾತ: ಸಾವಿರಾರು ಮೊಟ್ಟೆ ನಾಶ!
ಮೊಟ್ಟೆ ಸಾಗಿಸುತ್ತಿದ್ದ ಮಿನಿ ಟೆಂಪೋ ಅಪಘಾತಕ್ಕೀಡಾಗಿ ಸಾವಿರಾರು ಮೊಟ್ಟೆಗಳು ನಾಶವಾದ ಘಟನೆ ಕೆಆರ್ ಪುರದ ಟಿಸಿ ಪಾಳ್ಯ ಸಿಗ್ನಲ್ ಸಮೀಪ ಇಂದು ಬೆಳಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಮಿನಿ ಟೆಂಪೋಗೆ ಹಿಂದಿನಿಂದ ಬಂದ ಬೃಹತ್ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವಾಹನದಲ್ಲಿ ತುಂಬಿದ್ದ ಮೊಟ್ಟೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಸಂಪೂರ್ಣ ಹಾನಿಗೊಂಡಿವೆ. ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದ ಈ ಮೊಟ್ಟೆಗಳು …
Read More »ಜಡ್ಕಲ್: ಬೈಕ್ ತಡೆದು ಕೊ*ಲೆ ಬೆದರಿಕೆ
ಕೊಲ್ಲೂರು: ಮುದೂರು ಗ್ರಾಮದ ಬೆದ್ರಕಟ್ಟೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಮುದೂರು ನಿವಾಸಿ ಕೆ.ಟಿ. ಜೋಸೆಫ್ ಹಾಗೂ ಅವರ ಅಳಿಯ ಮನೋಜ್ ಪಿ.ವಿ. ಬೈಕ್ ನಲ್ಲಿ ಜಡ್ಕಲ್ ನ ಕಾನ್ಕಿಯಿಂದ ಮುದೂರು ಕಡೆ ತೆರಳುತ್ತಿದ್ದಾಗ ಆಪಾದಿತ ಅನಿಲ್ ಎಂಬಾತ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
Read More »ದೇವಾಲಯದಲ್ಲಿ ಚಿನ್ನಾಭರಣ ಕದ್ದವನ ಬಂಧನ
ಕನಕಪುರ: ನಗರದ ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅಂತರ ಜಿಲ್ಲಾ ಸರಗಳ್ಳನನ್ನು ಬಂಧಿಸಿರುವ ನಗರ ಠಾಣೆ ಪೋಲಿಸರು, ಬಂಧಿತನಿಂದ 1.18 ಲಕ್ಷ ರೂ. ಮೌಲ್ಯದ 8 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಸಗಲಾಪುರ ಗ್ರಾಮದ ನಿವಾಸಿ, ತಾಲೂಕಿನ ಎರಗನಹಳ್ಳಿಯಲ್ಲಿ ವಾಸವಿದ್ದ ಮಂಜ (38) ಬಂಧಿತ. 2023ರ ಆಗಸ್ಟ್ 13ರಂದು ರಾತ್ರಿ ದೇವಾಲಯದ ಬಾಗಿಲು ಮುರಿದು 4 ಗ್ರಾಂ ಚಿನ್ನದ ಗುಂಡು, 4 ಗ್ರಾಂನ ಚಿನ್ನದ ಲಕ್ಷ್ಮಿ ಕಾಸು …
Read More »ಬೆಂಗಳೂರಲ್ಲಿ ಮನೆಗೆ ನುಗ್ಗಿ ಆಭರಣ ದರೋಡೆ: ಆರೋಪಿ ಬಂಧನ
ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಚಿನ್ನದ ಆಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ತಿಲಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹35 ಲಕ್ಷ ಮೌಲ್ಯದ 240 ಗ್ರಾಂ ಚಿನ್ನದ ಆಭರಣ ಹಾಗೂ 89 ಗ್ರಾಂ ಬೆಳ್ಳಿಯ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಜಯನಗರ 4ನೇ ‘ಟಿ’ ಬ್ಲಾಕ್ ನಿವಾಸಿಯೊಬ್ಬರು ಮನೆಯ ಬಾಗಿಲಿಗೆ ಬೀಗ ಹಾಕಿ ಅಂಗಡಿಗೆ ತೆರಳಿದ್ದರು. ಸ್ವಲ್ಪ ಸಮಯದ ನಂತರ ಅವರ ತಂದೆ …
Read More »ಏಕಬಳಕೆ ಪ್ಲಾಸ್ಟಿಕ್ ಮಾರಾಟ:ವ್ಯಾಪಾರಿಗೆ 2 ಲಕ್ಷ ರೂ. ದಂಡ
ಬೆಂಗಳೂರು:ಘನತ್ಯಾಜ್ಯ ನಿರ್ವಹಣಾ ವಿಭಾಗದಿಂದ ಗೋವಿಂದರಾಜನಗರ ಕ್ಷೇತ್ರದ ವಾರ್ಡ್ ಸಂಖ್ಯೆ 126ರ ಮಾರುತಿ ಮಂದಿರ ಪ್ರದೇಶದಲ್ಲಿ ಅಕ್ರಮವಾಗಿ ಏಕಬಳಕೆ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗೆ 2 ಲಕ್ಷ ರೂ ದಂಡ ವಿಧಿಸಲಾಗಿದೆ. ಪರಿಶೀಲನೆಯ ವೇಳೆ ಬಾಲಾಜಿ ಪಾಲಿ ಪ್ಯಾಕ್ (ಪ್ಲಾಸ್ಟಿಕ್ ವ್ಯಾಪಾರಿ) ಅವರು ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಅಕ್ರಮ ಸಂಗ್ರಹಣೆ ಮತ್ತು ವ್ಯಾಪಾರ ನಡೆಸುತ್ತಿರುವುದು ಪತ್ತೆಯಾಗಿದೆ. ಪ್ಲಾಸ್ಟಿಕ್ ವ್ಯಾಪಾರವನ್ನು ನಾಗರಭಾವಿ ಮುಖ್ಯ ರಸ್ತೆಯಲ್ಲಿ ನಡೆಸಲಾಗುತ್ತಿದ್ದು, ಮೂಡಲಪಾಳ್ಯ, ಅನುಭವನಗರದ …
Read More »ಲಂಚಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಯ ಒತ್ತಡ: ಪೊಲೀಸ್ ಪೇದೆಯಿಂದ ದಯಾಮರಣಕ್ಕೆ ಆಗ್ರಹ!
ವಿಜಯಪುರ – ತನ್ನ ಹಿರಿಯ ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಪೊಲೀಸ್ ಪೇದೆಯೊಬ್ಬರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ಕೋರಿದ್ದಾರೆ. ಈ ಪತ್ರವು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಯುವ ಸಾಧ್ಯತೆಯಿದೆ. ಈ ಪತ್ರದಲ್ಲಿ ಪೇದೆಯು , “ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಿಂದ ತಿಕೋಟಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಲು, ಆದರ್ಶನಗರ …
Read More »ಗಾಂಜಾ ಮಾರುತ್ತಿದ್ದ ದಂಪತಿ ಬಂಧನ
ಶ್ರೀರಂಗಪಟ್ಟಣ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿಗಳನ್ನು ಖಚಿತ ಮಾಹಿತಿ ಮೇರೆಗೆ ಹಾಸನ ನಗರದ ಬಡಾವಣೆ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿ ಕರೆದೊಯ್ದಿದ್ದಾರೆ. ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಗ್ರಾಮಸ್ಥ ಶಿವಣ್ಣ ಅವರ ಪುತ್ರ ಸಂತೋಷ ಹಾಗೂ ಈತನ ಪತ್ನಿ ಸೌಮ್ಯಾ ಬಂಧಿತ ದಂಪತಿ.ಒಟ್ಟು 3ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಹಾಸನಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ ಸಂತೋಷ ಹಾಸನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





